ಉಣ್ಣಕ್ಕಿ ಜಾತ್ರೆ' ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಬಣಕಲ್ ಹೋಬಳಿ ಬಾನಹಳ್ಳಿ ಊರಿನಲ್ಲಿ ನೆಲೆಸಿದೆ ಈ ಉಣ್ಣಕ್ಕಿ ಜಾತ್ರೆ. ಇಲ್ಲಿ ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ಪವಿತ್ರವಾದ ಹುತ್ತವಿದೆ.ಹಿಂದೆ ಗೋವು ಪಾಲಕರು ಅಂದರೆ ಶ್ರೀಕೃಷ್ಣನ ಭಕ್ತರು ಒಂದು ಚಿಕ್ಕ ಮಣ್ಣಿನ ಗುಡ್ಡೆಯನ್ನು ಕಟ್ಟಿದ್ದು, ಅದು ಬೆಳೆಯುತ್ತಾ ಹುತ್ತವಾಗಿ ಬೆಳೆದು ಇಂದು ಬೃಹದಾಕಾರವಾಗಿದೆ ಎಷ್ಟೇ ಮಳೆ ಬಂದರೂ ಸಹ ಇದರ ಒಂದಿಂಚೂ ಮಣ್ಣು ಸಹ ಏನೂ ಆಗದೆ ಇರುವುದಂತೂ ಸತ್ಯ.ಏಕೆಂದರೆ ಈ ಹುತ್ತಕ್ಕೆ ಮೇಲ್ಚಾವಣೆಯೇ ಇಲ್ಲ.ಇದು ಇದರ ವಿಶೇಷತೆ.ಎಂದಿನಂತೆ ವರ್ಷ-ವರ್ಷ ಬರುವ ಹುಣ್ಣಿಮೆಯ ಮುಂಚಿತವಾಗಿ ಭಾನುವಾರ ಅಥವಾ ಗುರುವಾರ ಈ ದಿನಗಳು ಉಣ್ಣಕ್ಕಿಯ ಶ್ರೇಷ್ಠ ದಿನಗಳು. ಪೂರ್ವಜರ ಕಾಲದಿಂದಲೂ ಈ ದಿನಗಳಲ್ಲಿ ಜಾತ್ರೆಯು ನಡೆಯುತ್ತಾ ಬಂದಿದೆ.ರಾತ್ರಿ 8 ರಿಂದ 9ರ ಒಳಗೆ ಮಹಾಮಂಗಳಾರತಿ ನಡೆಯುತ್ತದೆ.ಈ ವೇಳೆಗೆ ಉಣ್ಣಕ್ಕಿ ಹುತ್ತವು ಅಲುಗಾಡುವ ಮೂಲಕ ನೆರೆದಿರುವ ಭಕ್ತಾದಿಗಳಿಗೆ ಆಶಿರ್ವಾದಿಸುತ್ತದೆ.ಇದರಿಂದ ಭಕ್ತಾಧಿಗಳು ಪ್ರಸನ್ನರಾಗುತ್ತಾರೆ.ನಮ್ಮ ಜಿಲ್ಲೆಯಾದ್ಯಂತ, ರಾಜ್ಯದಾದ್ಯಂತ ಜನರು ಈ ಜಾತ್ರೆ ನೋಡಲು ಆಗಮಿಸುವರು.ಮಹಾಮಂಗಳಾರತಿ ಆದನಂತರ ಸುತ್ತಲೂ ಇರುವ ಕಲ್ಲುಗಳಲ್ಲಿ ಗೋವು ಪಾಲಕರು ನಿಂತಿರುತ್ತಾರೆ. ಆಗ ಹೋರಿಯನ್ನು ತಂದು ಮೂರು ಸುತ್ತು ಓಡಿಸುತ್ತಾರೆ.ಆ ಹೋರಿಯ ಮೇಲೆ ಭಕ್ತಾಧಿಗಳು ಪುರಿಯನ್ನು ಎರಚುತ್ತಾರೆ.ಎರಚಿದ ಪುರಿಯನ್ನು ಭಕ್ತಾದಿಗಳು ಪ್ರಸಾದವಾಗಿ ಸ್ವೀಕರಿಸುತ್ತಾರೆ.ಇಂದಿಗೂ ಜನರು ಹರಕೆಗಳನ್ನು ಇಟ್ಟುಕೊಳ್ಳುತ್ತಾರೆ.ಹಿಂದಿನಿಂದ ಇಲ್ಲಿ ಜಂಗಮರೇ ಅರ್ಚಕರಾಗಿರುತ್ತಾರೆ.ಬನ್ನಿ ನಮ್ಮೂರ ಉಣ್ಣಕ್ಕಿ ಜಾತ್ರೆ ನೋಡಲು.