ತೋಪಡ

(ಉಜ್ಜುಗೊರಡು ಇಂದ ಪುನರ್ನಿರ್ದೇಶಿತ)

ತೋಪಡ ಎಂದರೆ ಕತ್ತರಿಸುವ ಅಲಗನ್ನು ಕಟ್ಟಿಗೆಯ ಮೇಲ್ಮೈ ಮೇಲೆ ನಡೆಸಲು ಬಾಹುಬಲವನ್ನು ಬಳಸಿ ಕಟ್ಟಿಗೆಗೆ ಆಕಾರ ಕೊಡುವ ಉಪಕರಣ. ಸಾಮಾನ್ಯವಾಗಿ ಎಲ್ಲ ತೋಪಡಗಳನ್ನು ಮರದ ದಿಮ್ಮಿಯ ಒರಟಾದ ತುಂಡನ್ನು ಮಟ್ಟವಾಗಿಸಲು, ದಪ್ಪವನ್ನು ಕಡಿಮೆಮಾಡಲು, ಮತ್ತು ಅದಕ್ಕೆ ನಯವಾದ ಮೇಲ್ಮೈಯನ್ನು ನೀಡಲು ಬಳಸಲಾಗುತ್ತದೆ. ಸಮಗ್ರದ ಪೂರ್ಣತೆಗೆ ಅದೇ ನಯವಾದ ಮೇಲ್ಮೈ ಬೇಕಾದಾಗ, ಸಾಮಾನ್ಯವಾಗಿ ಆಕಾರಕೊಡಲು ಬಹಳ ದೊಡ್ಡದಾದ ಕಾರ್ಯವಸ್ತುಗಳ ಮೇಲೆ ಸಮತಲ, ಲಂಬ, ಅಥವಾ ಓರೆಯಾದ ಚಪ್ಪಟೆ ಮೇಲ್ಮೈಗಳನ್ನು ಸೃಷ್ಟಿಸಲೂ ನಯಗೊಳಿಸುವಿಕೆಯನ್ನು ಬಳಸಲಾಗುತ್ತದೆ. ತೋಪಡಗಳು ಸಾಮಾನ್ಯವಾಗಿ ದೃಢವಾದ ಕಾಯಕ್ಕೆ ಲಗತ್ತಾಗಿರುವ ಚೂಪಾಗಿಸಿದ ಲೋಹದ ಫಲಕದಂತಹ ಕತ್ತರಿಸುವ ಅಂಚಿನ ಸಂಯೋಜನೆಯಾಗಿರುತ್ತವೆ. ಕಟ್ಟಿಗೆಯ ಮೇಲ್ಮೈ ಮೇಲೆ ಇದನ್ನು ಚಲಿಸಿದಾಗ, ಕಾಯವು ಕಟ್ಟಿಗೆಯಲ್ಲಿನ ಎದ್ದ ಸ್ಥಳಗಳ ಮೇಲೆ ಚಲಿಸುವ ಸ್ವಭಾವದಿಂದ ತುಲನಾತ್ಮಕವಾಗಿ ಏಕಪ್ರಕಾರದ ಹೆರೆಪಟ್ಟೆಗಳನ್ನು ತೆಗೆಯುತ್ತವೆ. ಕತ್ತರಿಸುವ ಅಂಚಿಗೆ ತುಲನಾತ್ಮಕವಾಗಿ ಸ್ಥಿರ ಕೋನವನ್ನು ಒದಗಿಸುವುದರಿಂದ ಹೆರೆಯಲಾಗುತ್ತಿರುವ ಮೇಲ್ಮೈಯನ್ನು ಬಹಳ ನಯವಾಗಿ ಮಾಡುತ್ತದೆ.

"https://kn.wikipedia.org/w/index.php?title=ತೋಪಡ&oldid=888879" ಇಂದ ಪಡೆಯಲ್ಪಟ್ಟಿದೆ