ಉಗಿತಾಪನ-ಆವಿಗೆ ಉತ್ಪಾದಿಸುವ ಉಗಿಯನ್ನು ಬಳಸಿಕೊಳ್ಳುವ ತಾಪನ ವ್ಯವಸ್ಥೆ (ಸ್ಟೀಂ ಹೀಟಿಂಗ್). ಇದರಲ್ಲಿ ನಳಿಗೆಗಳ ಮೂಲಕ ಉಗಿ ಉಷ್ಣ ವಿನಿಮಯಿಗಳಿಗೆ (ರೇಡಿಯೇಟರುಗಳು, ಕನೆಕ್ಟರುಗಳು ಮುಂತಾದ ಸಾಧನಗಳು) ಸಾಗಿ ಉಷ್ಣವಿನಿಮಯಾ ನಂತರ ದೊರೆಯುವ ನೀರು ಆವಿಗೆಗೆ (ಬಾಯ್ಲರ್) ಮರಳುತ್ತದೆ. ಇಂಥ ವ್ಯವಸ್ಥೆಗಳ ಕ್ರಿಯೆಯಲ್ಲಿ ಸಂಮರ್ದ ಸಾಧಾರಣವಾಗಿ ಒಂದು ಚದರ ಅಂಗುಲ ವ್ಯಾಪ್ತಿಯಲ್ಲಿ (psig) 15 ಪೌಂಡುಗಳನ್ನು ಮೀರಬಾರದು. ಉಗಿತಾಪನದಲ್ಲಿ ಒಂದು ನಳಿಗೆ ವ್ಯವಸ್ಥೆ (ಒನ್ ಪೈಪ್ ಸಿಸ್ಟಂ), ಎರಡು ನಳಿಗೆ ವ್ಯವಸ್ಥೆ ಎಂಬ ಎರಡು ವರ್ಗಗಳಿವೆ.

"https://kn.wikipedia.org/w/index.php?title=ಉಗಿತಾಪನ&oldid=615326" ಇಂದ ಪಡೆಯಲ್ಪಟ್ಟಿದೆ