ಈಟಾರ್ಡನ ಕ್ರಿಯೆಯು ಮೀಥೈಲ್ ಗ್ರೂಪುಗಳಿರುವ ಬೆಂಜೀನ್ ವರ್ಗದ ಕೆಲವು ಹೈಡ್ರೋಕಾರ್ಬನ್ನುಗಳನ್ನು ಆಲ್ಡಿಹೈಡುಗಳಾಗಿ ಪರಿವರ್ತಿಸಲು ಈಟಾರ್ಡ್ ಎಂಬುವನು ನಿರೂಪಿಸಿದ ಕ್ರಿಯಾವಿಧಾನ.[][][] ಟಾಲೀನನ್ನು (C6H5.CH3) ಕ್ರೋಮೈಲ್ ಕ್ಲೋರೈಡಿನಿಂದ (CrO2Cl2) ಉತ್ಕರ್ಷಿಸಿ ಬೆಂಜ಼ಾಲ್ಡಿಹೈಡ್ (C6H5.CHO) ಮಾಡುವುದು ಇದಕ್ಕೆ ಉದಾಹರಣೆ. ಮೊದಲು ಟಾಲೀನನ್ನು ಇಂಗಾಲದ ಡೈಸಲ್ಫೈಡಿನಲ್ಲಿ ವಿಲೀನ ಮಾಡಬೇಕು. ಉಷ್ಣತೆ ೨೫o-೪೫o ಸೆ. ಮಿತಿಯನ್ನು ಮೀರಬಾರದು. ಆಗ ಕ್ರೋಮೈಲ್ ಕ್ಲೋರೈಡಿನೊಂದಿಗೆ ಟಾಲೀನು ಕೂಡಿ ಮಧ್ಯವರ್ತಿ ಸಂಯುಕ್ತವೊಂದು ಬೇರ್ಪಡುವುದು. ಇದಕ್ಕೆ ಸ್ಫೋಟಕ ಗುಣವಿರುವುದರಿಂದ ಈ ಕ್ರಿಯೆ ನಡೆಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅನಂತರ ತಣ್ಣೀರನ್ನು ಸೇರಿಸಿದರೆ ಬೆಂಜಾಲ್ಡಿಹೈಡ್ ಉಂಟಾಗುವುದು. ಈ ಕ್ರಿಯೆಗಳನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ.

ಈಟಾರ್ಡನ ಕ್ರಿಯೆ

ಟಾಲೀನಿನ ಬದಲು ಈಥೈಲ್ ಬೆಂಜೀನನ್ನು (C6H5CH2CH3) ಈಟಾರ್ಡನ ಕ್ರಿಯೆಗೆ ಒಳಪಡಿಸಿದರೆ ಫೀನೈಲ್ ಅಸಿಟಾಲ್ಡಿಹೈಡ್ (C6H5.CH2CHO) ಮತ್ತು ಅಸಿಟೊಫೀನೋನುಗಳ (C6H5. C(O).CH3) ಮಿಶ್ರಣ ದೊರೆಯುವುದು.

ಆದರೆ ಆಲ್ಕೈಲ್ ಪಾರ್ಶ್ವಸರಣಿ ಇನ್ನೂ ನೀಳವಾಗಿದ್ದರೆ ಉತ್ಪನ್ನವಸ್ತು ಕೇವಲ ಕೀಟೋನ್ ಆಗಿರುವುದು. ಆರೋಮ್ಯಾಟಿಕ್ ಆಲ್ಡಿಹೈಡುಗಳು ಉಪಯುಕ್ತ ವಸ್ತುಗಳು. ಆದ್ದರಿಂದ ಅದನ್ನು ತಯಾರಿಸಲು ನೆರವಾಗುವ ಈ ಕ್ರಿಯೆಗೆ ಪ್ರಾಶಸ್ತ್ಯ ಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. Étard, A. (1880). "Sur la synthèse desaldéhydes aromatiques; essence de cumin" [On the synthesis of aromatic aldehydes ; essence of cumin]. Comptes Rendus Hebdomadaires des Séances de l'Académie des Sciences (in French). 90: 534. Archived from the original on 1 March 2012.{{cite journal}}: CS1 maint: unrecognized language (link)
  2. Étard, A. (1881). "Recherches sur le rôle oxydant de l'acide chlorochromique". Annales de Chimie et de Physique (in French). 22: 218–286. Archived from the original on 1 March 2012.{{cite journal}}: CS1 maint: unrecognized language (link)
  3. Hartford, W. H. & Darrin, M. (1958). "The Chemistry Of Chromyl Compounds". Chemical Reviews. 58: 1–61. doi:10.1021/cr50019a001.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: