ಈಜಿಪ್ಟಿನ ಪುರಾತತ್ವ

ಪ್ರಾಚೀನ ಈಜಿಪ್ಟಿನಲ್ಲಿ ಸಮಕಾಲೀನ ನಾಗರಿಕತೆಗಳಲ್ಲೆಲ್ಲ ಔನ್ನತ್ಯ ಸ್ಥಾಪಿಸಿಕೊಂಡು ಸಾವಿರಾರು ವರ್ಷಗಳ ಕಾಲ ಅವಿರತವಾಗಿ ಬಂದ ನಾಗರಿಕತೆ ಇತ್ತು. ಆ ಕಾಲದ ಅವಶೇಷಗಳಾದ ಪಿರಮಿಡ್ಡುಗಳು, ಗೋರಿಗಳು, ದೇವಾಲಯಗಳು ಮತ್ತು ಶಿಲ್ಪಗಳು ಲೋಕಪ್ರಸಿದ್ಧ. ಅಲ್ಲದೆ, ಪುರಾತನ ಕಾಲದ ಎಲ್ಲ ತರಹದ ವಸ್ತುಗಳನ್ನೂ ಹೆಚ್ಚು ಕೆಡದಂತೆ ರಕ್ಷಿಸುವ ಒಣಹವೆ ಇಲ್ಲಿರುವುದರಿಂದ, ಪ್ರಾಚೀನ ಸಂಸ್ಕøತಿಗಳ ಅಭ್ಯಾಸಿಗೆ ಬೇರೆ ಯಾವುದೇ ದೇಶದಲ್ಲೂ ಸಿಗದಷ್ಟು ಸಾಮಾಗ್ರಿಗಳು ಇಲ್ಲಿ ಸಿಗುತ್ತವೆ. 1938ರಲ್ಲಿ ಸಕಾರ ಎಂಬಲ್ಲಿ ಕಂಡುಬಂದ ಸುಮಾರು ಕ್ರಿ. ಪೂ. 3000ದ ಗೋರಿಯೊಂದರಲ್ಲಿ ಮೃತನಿಗಾಗಿ ಅಂದು ಇಟ್ಟಿದ್ದ ಮೀನು, ಮಾಂಸ, ಹಣ್ಣು, ರೊಟ್ಟಿ, ಮುಂತಾದುವೆಲ್ಲ ಇನ್ನೂ ಉಳಿದಿದ್ದುವು. ಸುಮಾರು 5,000 ವರ್ಷಗಳ ಹಿಂದೆ ಆ ಗೋರಿಗೆ ಹೆಣ ಸಾಗಿಸಿ ಇರಿಸಿದ ಜನರ ಹೆಜ್ಜೆ ಗುರುತುಗಳೂ ನೆಲದ ಮೇಲೆ ಹಾಗೆಯೇ ಇದ್ದುವು. ಇಂಥ ವೈಶಿಷ್ಟ್ಯವಿದ್ದುದರಿಂದ ಈಜಿಪ್ಟ್ ಪುರಾತತ್ವಜ್ಞರನ್ನು ಬಹು ಸಂಖ್ಯೆಯಲ್ಲಿ ಆಕರ್ಷಿಸಿತು. ಇವರ ದುಡಿಮೆಯಿಂದ, ಕ್ರಿ. ಪೂ. ಸುಮಾರು 3500ರಿಂದ ಕ್ರಿಸ್ತಶಕದ ಆರಂಭದ ಕಾಲದವರೆಗೆ ಈಜಿಪ್ಟಿನ ರಾಜಕೀಯ, ಸಾಮಾಜಿಕ, ಆರ್ಥಿಕ ಚರಿತ್ರೆ, ಧರ್ಮ, ಕಲೆ, ಭಾಷೆ, ಸಾಹಿತ್ಯ ಇವುಗಳ ಬಗ್ಗೆ ಸಂಗ್ರಹವಾಗಿರುವಷ್ಟು ವಿಷಯಗಳು ಬೇರೆ ಎಷ್ಟೋ ದೇಶಗಳಲ್ಲಿ ಇತ್ತೀಚಿನ ಕಾಲದವರೆಗೂ ದೊರೆಯುವುದಿಲ್ಲ. ಈ ಸಾಧನೆಗಾಗಿ ಅಲ್ಲಿನ ಪುರಾತತ್ವಜ್ಞರು ಬೆಳೆಸಿಕೊಂಡು ಬಂದ ವೈe್ಞÁನಿಕ ದೃಷ್ಟಿ ಮತ್ತು ರೀತಿನೀತಿಗಳು ಇಂದು ಪ್ರಪಂಚದ ಎಲ್ಲ ಭಾಗಗಳಲ್ಲೂ ಅನುಸರಿಸುತ್ತಿರುವ ಪುರಾತತ್ವಶಾಸ್ತ್ರಕ್ಕೆ ಬುನಾದಿಯಾಗಿವೆ. ಆಧುನಿಕ ಪುರಾತತ್ವಶಾಸ್ತ್ರ, ಅದರಲ್ಲೂ ಉತ್ಖನನ ಶಾಸ್ತ್ರ ಬೆಳೆದದ್ದು ಬಹಳಮಟ್ಟಿಗೆ ಈಜಿಪ್ಟಿನಲ್ಲೇ.

ಇತಿಹಾಸ

ಬದಲಾಯಿಸಿ

18ನೆಯ ಶತಮಾನದ ಕೊನೆಯಲ್ಲಿ ನೆಪೋಲಿಯನ್ ಈಜಿಪ್ಟಿನ ಮೇಲೆ ನಡೆಸಿದ ದಂಡಯಾತ್ರೆಯ ಕಾಲದಲ್ಲಿ, ಅಲ್ಲಿನ ಪ್ರಾಚೀನ ವೈಭವದ ಅವಶೇಷಗಳು ಯೂರೋಪ್ ನ ವಿದ್ವಾಂಸರ ಕಣ್ಸೆಳೆದುವು. ಆಗ ಸಂಗ್ರಹಿಸಿದ್ದ ಹೀರೋಗ್ಲಿಫ್ ಲಿಪಿಯ ರೋಸೆóಟ ಶಿಲಾಶಾಸನವನ್ನು 1821ರಲ್ಲಿ ಬ್ರಿಟನ್ನಿನ ಥಾಮಸ್ ಯಂಗ್ ಮತ್ತು ಫ್ರಾನ್ಸಿನ ಜೆ. ಎಫ್. ವ್ಯಾಪಾಲ್ಯೋ ಮೊದಲು ಓದಿದರು. ಆಗ ಈಜಿಪ್ಟಿನ ಹಲವಾರು ಶಾಸನಗಳ ಸಂಗ್ರಹ, ಅರ್ಥವಿವರಣೆ ಹಾಗೂ ಚಾರಿತ್ರಿಕ ಸಂಶೋಧನೆಯ ಹೊಸ ಬಾಗಿಲೇ ತೆರೆಯಿತು. 1850ರಿಂದ ಈಚೆಗೆ ಎ. ಎಚ್. ರ್ಹಿಂಡ್ ಮತ್ತು ಅಗಸ್ಟೆ ಮೇರಿಯಟ್‍ರಿಂದ ಆರಂಭವಾದ ಉತ್ಖನನಗಳನ್ನು ಎಡ್ವರ್ಡ್ ನೆವಿಲ್ಲೆ ಮತ್ತು ಸರ್ ಫ್ಲಿಂಡರ್ಸ್ ಪೆಟ್ರೀ ವೈe್ಞÁನಿಕವಾಗಿ ಮುಂದುವರಿಸಿದರು. ಬ್ರಿಟನ್, ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ ಮುಂತಾದ ದೇಶಗಳ ವಿದ್ವಾಂಸರು ಹಲವು ಸಂಶೋಧನ ಸಂಸ್ಥೆಗಳ ಸಹಾಯದಿಂದ ಈಜಿಪ್ಟಿನ ಪುರಾತತ್ವ ಸಂಶೋಧನೆಗಾಗಿ ಶ್ರಮಿಸಿದ್ದಾರೆ. ಯೂರೋಪ್ ಮತ್ತು ಅಮೆರಿಕದ ಎಷ್ಟೋ ವಿಶ್ವವಿದ್ಯಾನಿಲಯಗಳಲ್ಲಿ ಈಜಿಪ್ಟ್ ನಾಗರಿಕತೆಯ ಅಭ್ಯಾಸಕ್ಕೆ ಮೀಸಲಾದ ವಿಭಾಗಗಳು ಈಗಲೂ ಇವೆ.ಈಜಿಪ್ಟಿನಲ್ಲಿ ಇದುವರೆಗೆ ದೊರಕಿರುವ ಹೆಚ್ಚಿನ ಪ್ರಾಚೀನ ಅವಶೇಷಗಳು ಕೈರೋದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿವೆ. ಪ್ಯಾರಿಸ್, ಟ್ಯೂರಿನ್ ವಸ್ತುಸಂಗ್ರಹಾಲಯಗಳಲ್ಲೂ ಬ್ರಿಟನ್ನಿನ ಬ್ರಿಟಿಷ್ ಮತ್ತು ಆಶ್ಮೋಲಿಯನ್ ಮ್ಯೂಸಿಯಂ, ನ್ಯೂಯಾರ್ಕಿನ ಮೆಟ್ರೊಪಾಲಿಟನ್ ಮ್ಯೂಸಿಯಂ, ಬಾಸ್ಟನ್ನಿನ ಮ್ಯೂಸಿಯಂ ಆಫ್ ಫೈನ್ ಆಟ್ರ್ಸ್‍ಗಳಲ್ಲೂ ಗಮನಾರ್ಹ ಸಂಗ್ರಹಗಳಿವೆ. ಇತ್ತೀಚೆಗೆ ಭಾರತ ಸರ್ಕಾರದ ಕೇಂದ್ರ ಪುರಾತತ್ವ ಇಲಾಖೆಯವರು ಈಜಿಪ್ಟಿನ ನ್ಯೂಬೀಯ ಪ್ರದೇಶದಲ್ಲಿ ಉತ್ಖನನಗಳನ್ನು ನಡೆಸಿ, ಅಲ್ಲಿನ ಕೆಲವು ಅವಶೇಷಗಳನ್ನು ದೆಹಲಿಗೆ ತಂದಿದ್ದಾರೆ. ಹೈದರಾಬಾದಿನ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಈಜಿಪ್ಟಿನಲ್ಲಿ ದೊರಕಿದ ಒಂದು ಪುರಾತನ ಮಮ್ಮೀಯನ್ನು (ರಾಸಾಯನಿಕಗಳಿಂದ ಸಂರಕ್ಷಿಸಿದ ಮೃತದೇಹ) ಪ್ರದರ್ಶಿಸಲಾಗಿದೆ.[]

ಶಿಲಾಯುಗ

ಬದಲಾಯಿಸಿ

ಈಜಿಪ್ಟಿನ ಮರಳುಗಾಡು ಪ್ರದೇಶದಲ್ಲಿ ನೈಲ್ ನದಿಯತ್ತ ಹರಿಯುವ ಹಲವು ತೊರೆಗಳ ಪಕ್ಕದಲ್ಲಿ ಪ್ರಾಚೀನ ಶಿಲಾಯುಗದ ಆಯುಧಗಳು ದೊರಕಿವೆ. ಇವುಗಳಲ್ಲಿ ಹೆಚ್ಚಿನವು ಅಷೂಲಿಯನ್ ಸಂಪ್ರದಾಯಕ್ಕೆ ಸೇರಿದವು. ಇವು ಯೂರೋಪ್ ಮತ್ತಿತರೆಡೆಯ ಪ್ರಾಚೀನ ಶಿಲಾಯುಗದ ಕಾಲಕ್ಕೆ ಸೇರಿದವೋ ಅಲ್ಲವೋ ಎಂಬುದನ್ನು ನಿಷ್ಕರ್ಷಿಸುವುದು ಕಷ್ಟ. ನ್ಯೂಬೀಯ, ಮೆರಿಮ್ಡೆ, ಫಯೂಮ್ ಮುಂತಾದೆಡೆಗಳಲ್ಲಿ ನವಶಿಲಾಯುಗದ ಕುರುಹುಗಳು ದೊರಕಿವೆ. ಈ ಕಾಲದ ಜನ ಫ್ಲಿಂಟ್ ಮತ್ತು ಚರ್ಟ್ ಕಲ್ಲುಗಳ ಆಯುಧ ತಯಾರಿಕೆಯಲ್ಲಿ ಚತುರರು. ವ್ಯವಸಾಯ, ಪಶುಪಾಲನೆ ಈ ಜನರ ಮುಖ್ಯ ಕಸಬು. ಕೈಯಲ್ಲಿ ತಯಾರಿಸಿದ ಕೆಂಪು-ಕಪ್ಪು ಬಣ್ಣದ ಮಡಕೆಗಳು ಅಥವಾ ಕೆಂಪು ಮತ್ತು ಕಪ್ಪು ಬಣ್ಣದ ಹೊಳಪಿನ ಮಡಕೆಗಳು ಈ ಕಾಲದಲ್ಲಿ ಉಪಯೋಗದಲ್ಲಿದ್ದುವು. ಕಂದು ಬಣ್ಣದ ಮೇಲೆ ಕೆಂಪು ಬಣ್ಣದ ಹಡಗಿನ, ಜನರ ಮತ್ತು ಪ್ರಾಣಿಗಳ ಚಿತ್ರ ಬಿಡಿಸಿದ ಮಡಕೆಗಳು ಈ ಸಂಸ್ಕøತಿಯ ಕೊನೆಗಾಲದಲ್ಲಿ ಬಳಕೆಗೆ ಬಂದುವು. ಮೃತರನ್ನು ಚಾಪೆಗಳಲ್ಲಿ ಸುತ್ತಿ ಹೂಳುವ ಪದ್ಧತಿ ರೂಢಿಯಲ್ಲಿತ್ತು. ಇಲ್ಲಿನ ನವಶಿಲಾಯುಗದ ಸಂಸ್ಕøತಿಗಳು ಇತರ ದೇಶದ ಸಮಕಾಲೀನ ಸಂಸ್ಕøತಿಗಳಿಗಿಂತ ವಿಭಿನ್ನ ರೀತಿಯವು. ವಿಶಿಷ್ಟ ಈಜಿಪ್ಟ್ ಸಂಸ್ಕøತಿಯ ಬೆಳೆವಣಿಗೆಗೆ ಇವು ದಾರಿಮಾಡಿದುವು.[]

ತಾಮ್ರ-ಶಿಲಾಯುಗ

ಬದಲಾಯಿಸಿ

ಕ್ರಿ. ಪೂ. ಸುಮಾರು 4000ದ ಹೊತ್ತಿಗಾಗಲೇ ಈಜಿಪ್ಟಿನಲ್ಲಿ ತಾಮ್ರದ ಉಪಯೋಗ ಪಸರಿಸಿತ್ತು. ಆದರೂ ಅನಂತರ ಬಹುಕಾಲದವರೆಗೂ ಶಿಲಾಯುಧಗಳೂ ಬಳಕೆಯಲ್ಲಿದ್ದುವು. ಲೋಹದ ಉಪಯೋಗ ಪ್ರಾರಂಭವಾದಂದಿನಿಂದ ಈಜಿಪ್ಟ್ ಸಂಸ್ಕøತಿಯಲ್ಲಿ ಅಸಾಧಾರಣ ಪ್ರಗತಿ ಕಂಡು ಬಂತು. ಮುಂದೆ ಬಹುಕಾಲದವರೆಗೆ ಈಜಿಪ್ಟಿನಲ್ಲಿ ಪ್ರಚಲಿತವಾಗಿದ್ದ ರಾಜಕೀಯ ವ್ಯವಸ್ಥೆ, ಸಾಮಾಜಿಕ ಕಟ್ಟಳೆ, ಧರ್ಮ, ಕಲೆ, ಮುಂತಾದ ಎಲ್ಲದರ ಮೂಲವನ್ನೂ ಈ ಕಾಲದಲ್ಲೇ ಗುರುತಿಸಬಹುದು. ಈ ಕಾಲದಲ್ಲಾಗಲೇ ಒಂದು ರೀತಿಯ ಪಂಚಾಂಗ ಪದ್ಧತಿಯೂ ಬರೆವಣಿಗೆಯೂ ರೂಢಿಗೆ ಬಂದಿದ್ದುವು. ಮುಂದಿನ ಈಜಿಪ್ಟಿನ ಪ್ರಬುದ್ಧ ಸಂಸ್ಕøತಿಗೆ ಬೇಕಾದ ಈ ಮೂಲ ಸಾಮಗ್ರಿಗಳನ್ನು ರೂಪಿಸುವುದರಲ್ಲಿ, ಈ ಕಾಲದಲ್ಲಿ ಸಿರಿಯ ಮತ್ತು ಲಿಬಿಯ ಪ್ರದೇಶದಿಂದ ವಲಸೆಬಂದ ಜನರ ಕೊಡುಗೆಯೂ ಸಾಕಷ್ಟಿತ್ತು. ನಕದ, ಬಲ್ಲಾಸ್, ಫಯೂಮ್ ಮುಂತಾದೆಡೆಗಳಲ್ಲಿನ ಉತ್ಖನನಗಳಿಂದ ಈ ಕಾಲದ ಬಗ್ಗೆ ಮಾಹಿತಿ ದೊರಕಿದೆ.

ಚಾರಿತ್ರಿಕ ಯುಗ

ಬದಲಾಯಿಸಿ

ಪುರಾತನ ಈಜಿಪ್ಟ್: ಈಜಿಪ್ಟಿನ ಚಾರಿತ್ರಿಕಯುಗದ ಆರಂಭಕಾಲಕ್ಕೂ (ಕ್ರಿ. ಪೂ. ಸುಮಾರು 3200) ಅದಕ್ಕೆ ಹಿಂದಿನ ತಾಮ್ರ ಶಿಲಾಯುಗಕ್ಕೂ ಜನಜೀವನ ವಿಧಾನದಲ್ಲಿ ಗಮನೀಯ ವ್ಯತ್ಯಾಸವೇನೂ ಇಲ್ಲ. ಆದರೆ ಈ ಕಾಲದಲ್ಲಿ ಉತ್ತರ ದಕ್ಷಿಣ ಈಜಿಪ್ಟ್ ಏಕಾಡಳಿತಕ್ಕೆ ಒಳಪಟ್ಟಿದ್ದರಿಂದ ಉಂಟಾದ ಹೊಸ ರಾಜಕೀಯ ವಾತಾವರಣದಿಂದ ಸಾಂಸ್ಕøತಿಕ ಬೆಳೆವಣಿಗೆಗೆ ಅವಕಾಶವಾಯಿತು. ಎರಡನೆಯ ಮತ್ತು ಮೂರನೆಯ ರಾಜವಂಶದವರ, ಅದರಲ್ಲೂ ಖಸೆಶೆಮುಯಿ ಮತ್ತು ಜೆóೂೀಸರ್ ದೊರೆಗಳ ಕಾಲದಲ್ಲಿ ಈಜಿಪ್ಟಿನ ಅತ್ಯಂತ ಪ್ರಾಚೀನ ಪಿರಮಿಡ್ಡಾದ ಜೆóೂೀಸರನ ಪಿರಮಿಡ್ಡು (ಕ್ರಿ.ಪೂ. ಸುಮಾರು 3000) ಮತ್ತು ಅದರ ಬಳಿಯ ಪೈತೃಕ ದೇವಾಲಯ ಈ ವಿಕಾಸದ ದ್ಯೋತಕಗಳಾಗಿವೆ. ಪಿರಮಿಡ್ಡನ್ನು ನ್ಯೂನತೆಯಿಲ್ಲದೆ ಕಟ್ಟಲು ಬೇಕಾದ ಬೌದ್ಧಿಕ ತಾಂತ್ರಿಕ ಸಲಕರಣೆ ಆ ಕಾಲದಲ್ಲೇ ಸಾಧಿಸಿದ್ದದ್ದು ಆಶ್ಚರ್ಯಕರವಾದರೂ ಸಿದ್ಧವಾದ ವಿಷಯ. ಮುಂದೆ ಕೇವಲ 200ವರ್ಷಗಳಲ್ಲಿ ಈ ಮಾದರಿಯ ಇನ್ನೂ ಕೆಲವು ಪಿರಮಿಡ್ಡುಗಳೂ ದೇವಾಲಯಗಳೂ ನಿರ್ಮಿತವಾದುವು. ಐದನೆಯ ರಾಜವಂಶದವರ ಕಾಲದಲ್ಲಿ ಬೆಳೆಸಿದ ಧಾರ್ಮಿಕ ನಡೆವಳಿಕೆಗಳೂ ವಾಸ್ತು, ಚಿತ್ರಕಲೆ ಮುಂತಾದುವೂ ಮುಂದೆ ಸುಮಾರು 3,000 ವರ್ಷಗಳವರೆಗೆ ಹೆಚ್ಚು ಬದಲಾವಣೆಯಿಲ್ಲದೆ ಅವಿಚ್ಛಿನ್ನವಾಗಿ ಮುಂದುವರಿದುವು. ಐದನೆಯ ರಾಜವಂಶದ ಒಬ್ಬ ದೊರೆ 2,500 ವರ್ಷಗಳ ಅನಂತರ ಆ ದೇಶವನ್ನು ಸಂದರ್ಶಿಸಿದ್ದರೂ ಅದು ಹೆಚ್ಚು ಕಡಿಮೆ ತನ್ನ ಕಾಲವೆಂದೇ ಭ್ರಮಿಸಿಕೊಳ್ಳುವಷ್ಟು ಮಟ್ಟಿಗೆ ಸಾಮ್ಯ ಕಂಡುಬರುತ್ತಿತ್ತು. ಆದರೆ ವಾಸ್ತುಶಿಲ್ಪ, ಚಿತ್ರಕಲೆ ಮತ್ತು ಬರೆವಣಿಗೆಗಳಲ್ಲಿ ಮಾತ್ರ ಅವಿರತ ಅಧ್ಯಯನದಿಂದಾಗಿ ಅವುಗಳಲ್ಲಿ ಕಾಲಕಾಲಕ್ಕೆ ಕಂಡುಬರುವ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. ಆದ್ದರಿಂದ ವಿದ್ವಾಂಸರಿಗೆ ಇತರ ಯಾವ ಆಧಾರಗಳಿಲ್ಲದಿದ್ದರೂ ಇವುಗಳ ಕಾಲ ನಿಷ್ಕರ್ಷೆ ಕಷ್ಟದ ಕೆಲಸವೇನೂ ಆಗಿಲ್ಲ.ಚಾರಿತ್ರಿಕ ಯುಗದ ಆದಿಕಾಲದ ಬಗ್ಗೆ ಸಕಾರ, ಹೆಲ್ವಾನ್, ಅಬಿಡಾಸ್ ಮತ್ತು ಹೀರಕನ್ಪೊಲಿಸ್‍ನಲ್ಲಿನ ಉತ್ಖನನಗಳೂ ನಾಲ್ಕನೆಯ ರಾಜವಂಶದವರ ಕಾಲದ ಬಗ್ಗೆ ಗಿeóÉಯಲ್ಲಿನ ಉತ್ಖನನ, ಮುಂದಿನ ಕಾಲದ ಬಗ್ಗೆ ದಹ್ಯೂರ್, ಅಬುಸಿರ್, ಸಕ್ಕರಾ ಮುಂತಾದೆಡೆಯ ಉತ್ಖನನಗಳು ಮಾಹಿತಿ ಒದಗಿಸಿವೆ. ದೆಂದೆರಾ, ನತ-ಎದ್-ದೆರ್, ದೀರ್-ಎಲ್-ಬಹ್ರಿ, ದಹ್ಯೂರ್; ಲಿಸ್ಟ್, ಲಹೂನ್‍ಗಳಲ್ಲಿನ ಉತ್ಖನನಗಳು ಪುರಾತನ ಈಜಿಪ್ಟಿನ ಮಧ್ಯಕಾಲದ ಬಗ್ಗೆ ಬೆಳಕು ಚೆಲ್ಲಿವೆ. ಪುರಾತನ ಈಜಿಪ್ಟಿನ ಕೊನೆಯ ವಿಭಾಗದ ಅಧ್ಯಯನಕ್ಕೆ ಧೀರ್-ಎಲ್-ಬಹ್ರಿ, ಥೀಬ್ಸ್, ಅಮರ್ನ, ದೀರ್-ಎಲ್-ಮೆದಿನೇ, ಸಕ್ಕರಾ, ಕಾರ್ನಾಕ್, ಲಕ್ಸರ್ ಮುಂತಾದೆಡೆಯ ಉತ್ಖನನಗಳು ಸಾಮಗ್ರಿ ಒದಗಿಸುತ್ತವೆ. ಇವಲ್ಲದೆ ಗಿಜೆó, ಅಬು ಸಿಂಬೆಲ್, ದೀರ್-ಎಲ್-ಬಹ್ರಿ, ಥೀಬ್ಸ್, ಆಮರ್ನ, ದೀರ್-ಎಲ್-ಮೆದಿನೇ, ಸಕ್ಕರಾ, ಕಾರ್ನಾಕ್, ಲಕ್ಸರ್ ಮುಂತಾದೆಡೆಗಳಲ್ಲಿನ ವಾಸ್ತುಶಿಲ್ಪ ಅವಶೇಷಗಳೂ ಹಲವಾರು ದೇವಾಲಯಗಳಲ್ಲೂ ಗೋರಿಗಳಲ್ಲೂ ಇರುವ ವರ್ಣಚಿತ್ರಗಳೂ ಅಲ್ಲಲ್ಲೇ ಕಂಡುಬಂದಿರುವ ನೂರಾರು ಶಾಸನಗಳೂ ಪ್ರಾಚೀನ ಈಜಿಪ್ಟ್ ಬಗ್ಗೆ ಅಧ್ಯಯನ ಸಾಧನಗಳಾಗಿವೆ. ಇವಲ್ಲದೆ ಈ ಕಾಲಕ್ಕೆ ಸಂಬಂಧಪಟ್ಟ ಕೆಲವು ಪಪೈರಸ್ ಹಸ್ತ ಪ್ರತಿಗಳೂ ದೊರಕಿವೆ.

ಗ್ರೀಕ್-ರೋಮನ್ನರ ಕಾಲ

ಬದಲಾಯಿಸಿ

ಅಲೆಕ್ಸಾಂಡರ್ ಈಜಿಪ್ಟನ್ನು ಆಕ್ರಮಿಸಿದ (ಕ್ರಿ.ಪೂ. 332) ಅನಂತರ ಗ್ರೀಕ್ ವಂಶೀಯರಾದ ಟಾಲಮಿ ಅರಸರು ಇಲ್ಲಿ ರಾಜ್ಯವಾಳಿದರು. ಇವರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಹಲವಾರು ಪ್ರಾಚೀನ ಈಜಿಪ್ಟಿನ ಶೈಲಿಯ ಕಟ್ಟಡಗಳು ಹಾಥೋರ್, ಕೋಮ್ ಒಮ್ಬೋ, ಫಿಲೇ ಎಡ್ಫು ಮುಂತಾದೆಡೆಗಳಲ್ಲಿ ಕಂಡುಬಂದಿವೆ. ಅಲೆಕ್ಸಾಂಡ್ರಿಯದಲ್ಲೂ ಫಯೂಮ್ ಓಯಸಿಸ್ಸಿನ ತೀರ ಪ್ರದೇಶದಲ್ಲೂ ಗ್ರೀಕ್ ಶೈಲಿಯ ಕಟ್ಟಡಗಳೂ ಪಟ್ಟಣಗಳ ಅವಶೇಷಗಳೂ ಬೆಳಕಿಗೆ ಬಂದಿವೆ. ಈಜಿಪ್ಟಿನಲ್ಲಿ ನಾಣ್ಯಗಳು ಈ ಕಾಲದಲ್ಲಿ ಮೊದಲ ಬಾರಿಗೆ ಪ್ರಚಲಿತವಾದುವು.ಕ್ರಿ.ಪೂ. 30ರಲ್ಲಿ ಈಜಿಪ್ಟ್ ರೋಮ್ ಸಾಮ್ರಾಜ್ಯದ ಒಂದು ಪ್ರಾಂತ್ಯವಾಯಿತು. ಈ ಕಾಲದಲ್ಲಿ ಈಜಿಪ್ಟಿನ ಸಂಸ್ಕøತಿಯಲ್ಲಿ ಬಹು ಬದಲಾವಣೆಗಾಗಿ, ರೋಮ್ ಸಂಸ್ಕøತಿ ಕ್ರಮಕ್ರಮವಾಗಿ ಪುರಾತನ ನಾಗರಿಕತೆಯನ್ನು ಮೂಲೆಗೊತ್ತಿತೆಂದೇ ಹೇಳಬಹುದು. ರೋಮ್ ಚಕ್ರಾಧಿಪತ್ಯದ ಕಾಲದಲ್ಲೇ ಕ್ರೈಸ್ತಧರ್ಮವೂ ಇಲ್ಲಿ ಹರಡಿತು. ರೋಮನ್ನರ ಕಾಲದ ದೇವಾಲಯಗಳು ಫಿಲೇ ಧಕ್ಯಾ ಓಯಸಿಸ್, ದಕ್ಕ, ಎಲ್-ಶೀಕ್-ಇಬದ ಮುಂತಾದೆಡೆಗಳಲ್ಲಿವೆ. ಆ ಕಾಲದ ನಗರದ ಅವಶೇಷಗಳನ್ನೂ ಸಮಾಧಿಗಳನ್ನೂ ಶ್ಮಶಾನಗಳನ್ನೂ ಎಡ್ಫು ಎಲ್-ಬಹನ್ಯಾ ಮತ್ತು ಅಲೆಕ್ಸಾಂಡ್ರಿಯಗಳಲ್ಲಿ ಗುರುತಿಸಲಾಗಿದೆ. ವಾದಿನಮ್ರನ್, ಆಸ್ವಾನ್ ಮತ್ತು ಸೋಹಾಗ್‍ಗಳಲ್ಲಿ ಕ್ರೈಸ್ತರ ಪುರಾತನ ಚರ್ಚುಗಳಿವೆ.ಅರಬ್ಬರು ಮತ್ತು ಅನಂತರ: ಕ್ರಿ.ಶ. 640-41ರಲ್ಲಿ ಈಜಿಪ್ಟ್ ಅರಬ್ಬರ ಕೈವಶವಾಯಿತು. ಅಂದಿನಿಂದ ಅರಬ್ ಸಂಸ್ಕøತಿ ಮತ್ತು ಇಸ್ಲಾಮ್ ಧರ್ಮ ಈಜಿಪ್ಟಿನಲ್ಲಿ ಹರಡಿತು. ಈ ಕಾಲದ ಹಲವಾರು ಕಟ್ಟಡಗಳು ಕೈರೊ ಮತ್ತು ಅಲೆಕ್ಸಾಂಡ್ರಿಯಗಳಲ್ಲಿವೆ.

ಉಲ್ಲೇಖಗಳು

ಬದಲಾಯಿಸಿ