ಇಎ ಕ್ರೀಡೆ ಎ೦ಬುದು ಎಲೆಕ್ಟ್ರಾನಿಕ್ ಆರ್ಟ್ಸ್ನ ಒಂದು ಬ್ರ್ಯಾಂಡ್. ಈ ಬ್ರ್ಯಾ೦ಡ್ ಕ್ರೀಡಾ ವೀಡಿಯೊ ಆಟಗಳನ್ನು ಸೃಷ್ಟಿಸುವ ಮತ್ತು ಅವನ್ನು ಬೆಳವಣಿಗೆ ಮಾಡುವ ಒಂದು ಬ್ರ್ಯಾಂಡ್. ಹಿಂದೆ ಇವರು ಚಿತ್ರಗಳನ್ನು ಅಥವಾ ನಿಜವಾದ ವಿಮರ್ಶಕರನ್ನು ಉದಾ: ಜಾನ್ ಮ್ಯಾಡೆನ್ ರ೦ತವರ ಒಡಂಬಡಿಕೆ ಎಂದು "ಇಎ ಕ್ರೀಡೆ ನೆಟ್ವರ್ಕ್" (ಇಎ ಎಸ್ ಎನ್) ಕರೆದುಕೊಳ್ಳುವ ಮೂಲಕ ನೈಜ ಕ್ರೀಡಾ ನೆಟ್ವರ್ಕ್ಗಳನ್ನು ಅನುಕರಿಸಲು ಪ್ರಯತ್ನಿಸಿದರು, ಇದರಲ್ಲಿ ಎಲೆಕ್ಟ್ರಾನಿಕ್ ಆರ್ಟ್ಸ್ನ ವ್ಯಾಪಾರದ ತಂತ್ರವು ಅಡಗಿತ್ತು. ಇದು ಶೀಘ್ರದಲ್ಲೇ ಒಂದು ಸ್ವಂತ ಉಪ-ನಾಮವಾಗುವ೦ತೆ ಬೆಳೆಯಿತು, ಇದು ಎನ್ಬಿಎ ಲೈವ್, ಫಿಫಾ, ಎನ್ಎಚ್ಎಲ್, ಮ್ಯಾಡೆನ್ ಎನ್ಫಎಫೆಲ್, ಮತ್ತು ಎನ್ ಎ ಎಸ್ ಸಿ ಎ ಅರ್ ಎಂಬ ಆಟದ ಸರಣಿಗಳನ್ನು ಬಿಡುಗಡೆಮಾಡಿತು. ಇದರ ಫಿಫಾ ಸರಣಿ ಇಎ ಕ್ರೀಡೆ ಸರಣಿಯಲ್ಲೆ ಅತ್ಯುತ್ತಮ ೧೦೦ ಮಿಲಿಯನ್ ಆಟದ ಘತಕಗಳನ್ನು ಮಾರಾಟಮಾಡಿತು. ಈ ಬ್ರಾಂಡ್ ಅತ್ಯಂತ ಹೆಚ್ಚು ಆಟಗಳನ್ನು ಇಎ ಕೆನಡಾದಲ್ಲಿ ತಯಾರಿಸುತ್ತದೆ. ಎಲೆಕ್ಟ್ರಾನಿಕ್ ಆರ್ಟ್ಸ್ನ ಸ್ಟುಡಿಯೊ ಬರ್ನಬಿ, ಬ್ರಿಟಿಷ್ ಕೊಲಂಬಿಯಾದಲ್ಲಿದೆ, ಅದಲ್ಲದೆ ಇಎ ಬ್ಲಾಕ್ಬಾಕ್ಸ್, ವ್ಯಾಂಕವರ್, ಬ್ರಿಟಿಷ್ ಕೊಲಂಬಿಯಾ ಮತ್ತು ಇಎ ಟಿಬ್ಯುರಾನ್, ಮೈಟ್ ಲ್ಯಾಂಡ್, ಫ್ಲೋರಿಡಾ ಗಳಲ್ಲಿದೆ. ಇಎ ಕ್ರೀಡೆ ಮುಖ್ಯವಾಗಿ 2K ಕ್ರೀಡೆ ಜೊತೆ ಸ್ಪರ್ಧಿಸುತ್ತದೆ. ಎಲೆಕ್ಟ್ರಾನಿಕ್ ಆರ್ಟ್ಸ್, ಇಂಕ್, ಇಎ ಗೇಮ್ಸ್ ಎಂದು ಕೂಡ ಕರೆಯಲಾಗುತ್ತದೆ, ಯುನೈಟೆಡ್ ಸ್ಟೇಟ್ಸ್ರೆನ, ಕ್ಯಾಲಿಫೋರ್ನಿಯಾದ, ಡ್ವುಡ್ ಸಿಟಿಯಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊ೦ದಿರುತ್ತದೆ. ಈ ಕ೦ಪನಿ ವಿಡಿಯೋ ಆಟಗಳನ್ನು ತಯಾರಿಸುವ, ಪ್ರಕಾಶನ ಮಾಡುವ, ವ್ಯಾಪಾರಾಮಾಡುವ ಮತ್ತು ವಿತರಣೆ ಮಾಡುವ ಒಂದು ಅಮೆರಿಕನ್ ಡೆವಲಪರ್ ಕ೦ಪನಿಯಾಗಿದೆ. ಟ್ರಿಪ್ ಹಾಕಿನ್ಸ್ರವರು ಮೇ ೨೮, ೧೯೮೨ ರಲ್ಲಿ ಈ ಕ೦ಪನಿಯನ್ನು ಸಂಘಟಿತವಾಗಿ ಸ್ಥಾಪಿಸಿದರು, ಕಂಪನಿಯು ಆರಂಭಿಕವಾಗಿ ಹೋಮ್ ಕಂಪ್ಯೂಟರ್ ಆಟಗಳ ಉದ್ಯಮದ ಪ್ರವರ್ತಕ ಮತ್ತು ಆ ಆಟಗಳ ವಿನ್ಯಾಸಕರನ್ನು ಮತ್ತು ಪ್ರೋಗ್ರಾಮರ್ಗಳನ್ನು ಪ್ರಚಾರಮಾಡುವಲ್ಲಿ ಪ್ರಖ್ಯಾತವಾಯಿತು. ೨೦೧೧ ರಲ್ಲಿ ಎಲೆಕ್ಟ್ರಾನಿಕ್ ಆರ್ಟ್ಸ್ ನಿಂಟೆಂಡೊ ಮತ್ತು ಆಕ್ಟಿವಿಸನ್ ಬ್ಳಿಜಾರ್ಡ್ ಕ೦ಪನಿಗಳ ನಂತರ ಆದಾಯ ಗಳಿಯಲ್ಲಿ ವಿಶ್ವದ ಮೂರನೇ ದೊಡ್ಡ ಗೇಮಿಂಗ್ ಕಂಪನಿಯಾಗಿತ್ತು. ಪ್ರಸ್ತುತವಾಗಿ ಇಎ ಮಾಡೆನ್ ಎನ್ಎಫ್ಎಲ್, ಫೀಫಾ, ಎನ್ಎಚ್ಎಲ್, ಎನ್ಸಿಎಎ ಫುಟ್ಬಾಲ್, ಎನ್ಬಿಎ ಲೈವ್ ಎ೦ಬ ಹಲವಾರು ಲೇಬಲ್ ಗಳ ಅಡಿಯಲ್ಲಿ ತನ್ನ ಆಟಗಳನ್ನು ಪ್ರಕಟಿಸುತ್ತದೆ. ಇತರ ಇಎ ಲೇಬಲ್ಗಳನ್ನು ಫ್ರಾಂಚೈಸಿಗಳ ಮೂಲಕ ಸ್ಥಾಪಿಸಲಾಯಿತು, ಅವುಗಳಲ್ಲಿ ನೀಡ್ ಫಾರ್ ಸ್ಪೀಡ್, ದಿ ಸಿಮ್ಸ್ , ಹಾಗೂ ಡೆಡ್ ಸ್ಪೇಸ್ , ಮಾಸ್ ಎಫೆಕ್ಟ್ , ಡ್ರ್ಯಾಗನ್ ಎಜ್ ಮತ್ತು ಹೊಸ ಫ್ರಾಂಚೈಸಿಗಳ ಮೂಲಕವು ತನ್ನ ಲೇಬಲ್ಗಳನ್ನು ಸ್ಥಾಪಿಸಿ ತಯಾರಿಸಲಾಯಿತು. ಇಎನ ಪ್ರಮುಖ ಗೇಮಿಂಗ್ ಸ್ಟುಡಿಯೋಗಳು, ಒರ್ಲೇಂಡ್ಇಎ ಟಿಬ್ಯುರಾನ್, ಬರ್ನಾಬೇ ಇಎ, ಕೆನಡಾ, ಮಾಂಟ್ರಿಯಲ್ ಮತ್ತು ಎಡ್ಮಂಟನ್ಬವೋವೇರ್, ಮತ್ತು ಸ್ವಿಡನ್ಡೈಸ್ ಗಳಿ೦ದ ಕಾರ್ಯನಿರ್ವಹಿಸುತ್ತದೆ . ಇಎ ಗೇಮ್ಸ್ ಪ್ರಮುಖವಾಗಿ ಹದಿ ಹರೆಯದವರನ್ನು ಗಮನದಲ್ಲಿಟ್ಟುಕೊ೦ಡು ತನ್ನ ಆಟಗಳನ್ನು ತಯಾರಿಸುತ್ತದೆ. ಜಗತ್ತಿನ ಪ್ರಮುಖ ಆಟಗಳನ್ನೆಲ್ಲ ಈ ಕ೦ಪನಿ ತನ್ನ ವೀಡಿಯೊ ಆಟಗಳ ಮೂಲಖ ಎಲ್ಲರನ್ನು ಆಕರ್ಷಿಸುತ್ತದೆ. ತನ್ನ ವೀಡಿಯೊ ಆಟಗಳಲ್ಲಿ ಉಪಯೋಗಿಸುವ ಗ್ರಾಫಿಕ್ಸ್ ಗಳು ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ. ಈ ಗ್ರಾಫಿಕ್ಸ್ ಗಳಿ೦ದಲೆ ಅನೇಕ ವೀಡಿಯೋ ಆಟಗಳ ಪ್ರಿಯರು ಇಎ ಗೇಮ್ಸ್ ನ ಆಟಗಳನ್ನು ಬಯಸುತ್ತಾರೆ.