ಇಸ್ಕಾನ್
ಇಸ್ಕಾನ್ ಒಂದು ಹಿಂದೂ ಗೌಡೀಯ ವೈಷ್ಣವ ಧಾರ್ಮಿಕ ಸಂಸ್ಥೆ. ಅದನ್ನು ೧೯೬೬ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ಸ್ಥಾಪಿಸಲಾಯಿತು. ಅದರ ಮೂಲ ನಂಬಿಕೆಗಳು ಆದ್ಯತೆಯ ಸಾಂಪ್ರದಾಯಿಕ ಭಾರತೀಯ ಧರ್ಮಗ್ರಂಥಗಳ ಮೇಲೆ ಆಧಾರಿತವಾಗಿವೆ, ವಿಶೇಷವಾಗಿ ಭಗವದ್ಗೀತೆ ಹಾಗು ಭಾಗವತ ಪುರಾಣ.