ಇವಾನ್‌ ಪಾವ್ಲೊವ್‌

ಇವಾನ್ ಪವ್ಲೋವ್

ಜೀವನ ಬದಲಾಯಿಸಿ

ಇವಾನ್ ಪವ್ಲೋವ್, ಇವರು ರಷ್ಯಾದ ಖ್ಯಾತ ವೈದ್ಯ ವಿಜ್ಞಾನಿ. ಇವರು ೧೮೪೯ರಲ್ಲಿ ಮಧ್ಯ ರಷ್ಯಾದ ರೈಜಾನ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಪಾದ್ರಿಯಾಗಿದ್ದರು. ಹೀಗಾಗಿ ಧಾರ್ಮಿಕ ಶಾಲೆಯಲ್ಲಿ ಇವರ ಶಿಕ್ಷಣ ಪ್ರಾರಂಭವಾಯಿತು. ಉನ್ನತ ವ್ಯಾಸಂಗಕ್ಕಾಗಿ ಇವರು ಸೆಂಟ್ ಪೀಟರ್ ಬರ್ಗ್ ವಿಶ್ವವಿದ್ಯಾಲದಲ್ಲಿ ವೈದ್ಯಶಾಸ್ತ್ರ ವಿಭಾಗವನ್ನ ಸೇರಿಕೊಂಡರು.

ಸಾಧನೆ ಬದಲಾಯಿಸಿ

ಮುಂದೆ ಹೃದಯ ಕಾರ್ಯಗಳ ಮೇಲೆ ನರವ್ಯೂಹದ ಪ್ರಭಾವ ಕುರಿತು ಸಂಶೋಧನೆ ನಡೆಸಿದರು. ನಂತರ ಅದೇ ವಿಷಯದ ಮೇಲೆ ಪ್ರಭಂದ ಮಂಡಿಸಿ ವೈದ್ಯಶಾಸ್ತ್ರ ಪದವಿಯನ್ನು ಪಡೆದರು. ಇವರು ಜೀರ್ಣಾಂಗ ವ್ಯವಸ್ಥೆಯ ಕುರಿತು ಮಹತ್ವದ ಸಂಶೋಧನೆಯನ್ನ ಕೈಗೊಂಡರು. ಈ ಸಂಶೋಧನೆಗಾಗಿ ಅವರು ನಾಯಿಯ ಮೇಲೆ ಶಸ್ತ್ರಕ್ರಿಯೆ ನಡೆಸಿ, ಶಸ್ತ್ರಕ್ರೀಯಾ ವಿಧಾನವನ್ನ ಅಭಿವೃದ್ಧಿ ಪಡಿಸಿದರು.[೧] ಇವಾನ್ ಪವ್ಲೋವ್, ರಷ್ಯಾದ ಮಿಲಿಟರಿ ಮೆಡಿಕಲ್ ಅಕಾಡಮಿಯ ವಿಜ್ಞಾನ ಪ್ರಾಧ್ಯಾಪಕರಾಗಿ, ನಂತರ ಶರೀರ ಕ್ರಿಯಾಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗು ಪ್ರಾಯೋಗಿಕ ವೈದ್ಯ ಕೇಂದ್ರದಲ್ಲಿ ಶರೀರ ಕ್ರಿಯಾಶಾಸ್ತ್ರದ ನಿರ್ದೇಶಕರಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿದರು. ಇವರು ೧೯೩೬ ರಲ್ಲಿ ವಿಧಿವಶರಾದರು.[೨]

ಉಲ್ಲೇಖಗಳು ಬದಲಾಯಿಸಿ