ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ

'ಟೈಮ್ಸ್ ಆಫ್ ಇಂಡಿಯ[೧] ದಿನಪತ್ರಿಕೆಯ ಪ್ರಖ್ಯಾತ ವಾರಪತ್ರಿಕೆಯಾಗಿ ಹಲವು ವರ್ಷ ಮಂಚೂಣಿಯಲ್ಲಿತ್ತು. ಆ ಪತ್ರಿಕೆಯಲ್ಲಿ ಸುಪ್ರಸಿದ್ಧ ಸಂಪಾದಕರಾಗಿದ್ದ, 'ಎಮ್. ವಿ. ಕಾಮತ್', 'ಖುಷ್ವಂತ್ ಸಿಂಗ್' ಮುಂತಾದವರು, ಆ ಪತ್ರಿಕೆಯ ಗರಿಮೆಯನ್ನು ಮುಗಿಲಿಗೇರಿಸಿದ್ದರು. ಮತ್ತೊಬ್ಬ ವಿಶ್ವ ವಿಖ್ಯಾತ ವ್ಯಂಗ್ಯಚಿತ್ರಕಾರ, 'ಆರ್.ಕೆ.ಲಕ್ಷ್ಮಣ್' ತಮ್ಮ ನಾಜೂಕಾದ ವ್ಯಂಗ್ಯೋಕ್ತಿಯ ಚಿತ್ರಗಳ ಕೊಡುಗೆಯನ್ನು ಕೊಡುತ್ತಿದ್ದದ್ದು ಮತ್ತೊಂದು ವಿಶೇಷ.

ಚಿತ್ರ:Illustrated weekly.jpg
'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'

'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರ ಪತ್ರಿಕೆ, ಮುಚ್ಚಲ್ಪಟ್ಟಿತು ಬದಲಾಯಿಸಿ

'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರ ಪತ್ರಿಕೆ, ನಿಧಾನವಾಗಿ ಜನಪ್ರಿಯತೆಯನ್ನು ಕಳೆದುಕೊಂಡಿತು. ಕಾಲಾನುಕ್ರಮದಲ್ಲಿ, 'ಇಂಡಿಯ ಟುಡೆ', 'ವೀಕ್', ಮುಂತಾದ ಹಲವು ಪತ್ರಿಕೆಗಳು ತಮ್ಮ ವೈವಿಧ್ಯಮಯ ಲೇಖನಗಳಿಂದ, ಹಾಗೂ ಆಕರ್ಷಕ ಚಿತ್ರಪುಟಗಳಿಂದ ಮಾರುಕಟ್ಟೆಯಲ್ಲಿ ಎಳೆಯರನ್ನು ಆಕರ್ಶಿಸಿದವು. ನಿಧಾನವಾಗಿ 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಯ 'ಲೇ ಔಟ್', 'ಔಟ್ ಡೇಟ್' ಆದಂತೆ ಭಾಸವಾಗಿ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಅಳಿವಿಗೆ ಕಾರಣವಾಯಿತು. ಆ ಭಾವನೆಯನ್ನು ಬದಲಾಯಿಸಲು ಹಾಗೂ ಹೊಸ ಮುಖವಾಡವನ್ನು ತಗಲಿಸುವ ಪ್ರಯತ್ನವೂ ನಡೆಯಲಿಲ್ಲ.

ಉಲ್ಲೇಖಗಳು ಬದಲಾಯಿಸಿ

  1. http://timesofindia.indiatimes.com/city/mumbai