ಇಲಿಕಿವಿ ಸೊಪ್ಪು
ಐಪೋಮಿಯಾ ರೆನಿಫೊರ್ಮಿಸ್ (Ipomea reniformis)ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಇಲಿಕಿವಿಯು 'ಕನ್ವೋಲ್ವುಲೇಸಿ' ಎಂಬ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ.
ಇತರ ಭಾಷೆಗಳಲ್ಲಿ ಇರುವ ಹೆಸರು
ಬದಲಾಯಿಸಿ- ಕನ್ನಡ : ಇಲಿ ಕಿವಿ ಸೊಪ್ಪು
- ಹಿಂದಿ : ಚುಹಕಾನ್
- ತಮಿಳು : ಎಲಿಕಟು ಕೀರಯಿ
- ತುಳು: ಎಲಿ ಕೆಬಿ
- ಕೊಂಕಣಿ : ವಿಂದ್ರ ಕಾನು
- ಸಂಸ್ಕ್ರತ : ಮೂಷಕಪರ್ಣಿ
ಲಕ್ಷಣ
ಬದಲಾಯಿಸಿಈ ಗಿಡ ಅರ್ಧ ಅಡಿ ಎತ್ತರ ಬೆಳೆಯುತ್ತದೆ. ಎಲೆ ದಪ್ಪವಾಗಿದ್ದು ಇಲಿಯ ಕಿವಿ ಆಕಾರವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ. ಗದ್ದೆ ಬದಿ ತೋಟ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಈ ಸಸ್ಯ ಮುಂಗಾರು ಮಳೆ ಪ್ರಾರಂಭದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೇವಾಂಶವಿರುವ ಪ್ರದೇಶಗಳಲ್ಲಿ ಯಾವಾಗಲೂ ಇರುತ್ತದೆ.[೧]
ಔಷಧೀಯ ಉಪಯೋಗಗಳು
ಬದಲಾಯಿಸಿ- ಕಿವಿನೋವು : ಎಲೆಯನ್ನು ಹಿಚುಕಿ, ಅದರ ರಸವನ್ನು ಕಿವಿಗೆ ಹಾಕುವುದು.
- ಸ್ವರ ಭಂಗ : ಎಲೆಯ ರಸಕ್ಕೆ ಎರಡು ಮೂರು ಚಿಟಿಕೆ ಬಜೆಯ ಹುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು.
- ಪಿತ್ತ ಜ್ವರ : ಇಲಿಕಿವಿಯ ಕಷಾಯದ ಸೇವನೆ.
- ಕಣ್ಣುರಿ,ನಿದ್ರಾಹೀನತೆ : ಉಷ್ಣತೆಯಿಂದ ಕಣ್ಣುರಿ ಲಕ್ಷಣವಿದ್ದರೆ, ನಿದ್ರೆ ಬಾರದಿದ್ದರೆ ಇದರ ರಸಕ್ಕೆ ಸಕ್ಕರೆ ಸೇವಿಸಿ ಕುಡಿಯಬೇಕು.
- ಹಾವು ಕಡಿತ : ಹಾವು ಕಡಿತದ ಸಂದರ್ಭದಲ್ಲಿ ಎಲೆಯ ರಸವನ್ನು ಕುಡಿಯಲು ನೀಡಬಹುದು. ಮತ್ತು ಜಜ್ಜಿದ ಎಲೆಯನ್ನು ಕಡಿತದ ಭಾಗಕ್ಕೆ ಹಚ್ಚಲು ಬಳಸಬಹುದು.[೨]
ಇಲಿಕಿವಿ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ಮಕ್ಕಳ ಹೊಟ್ಟೆಹುಳು ನಿವಾರಣೆಯಾಗುತ್ತದೆ. ತಲೆಗೆ ಎಣ್ಣೆ ಬಿಸಿಮಾಡುವಾಗಲೂ ಇದರ ರಸವನ್ನು ಹಾಕಬಹುದು.
ಉಲ್ಲೇಖಗಳು
ಬದಲಾಯಿಸಿ- ↑ ಜೀವ ಸಂಜೀವಿನಿ(ಕರಾವಳಿ ತೀರದ ಔಷಧೀಯ ಸಸ್ಯಗಳು),ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂಡ್ಕೂರು ಘಟಕ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರು,ಲಯನ್ಸ್ ಕ್ಲಬ್ ಮುಂಡ್ಕೂರು,ಮೂರನೆ ಮುದ್ರಣ-೨೦೦೦,ಪುಟ-೮
- ↑ https://easyayurveda.com