ಇರ್ಪು ಜಲಪಾತ
ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು.ಕೊಡಗಿನ ಹಲವಾರು ಜಲಪಾತಗಳಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ,ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ.ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ.ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ.ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. ಪುರಾಣದಲ್ಲಿ ಬರುವ ಹಾಗೆ ರಾಮಾಯಣದ ಯುಗದಲ್ಲಿ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ತಂಗಿದ್ದನು ಲಕ್ಷಣನು ರಾಮನಿಗೆ ನೀರು ತರಲು ಹೊರಟಾಗ ನೀರು ಎಲ್ಲೂ ಸಿಗದೆ ಬಾಣವನ್ನು ಕಾಡಿಗೆ ಬಿಟ್ಟನು.ಬಾಣ ಮುಟ್ಟಿದ ಜಾಗದಿಂದ ಜಲಪಾತವು ಸೃಷ್ಟಿಯಾಗುತ್ತದೆ.ಈ ಜಲಪಾತವೇ ಈಗಿನ ಇರ್ಪು ಜಲಪಾತ.ಜಲಪಾತವಿರುವ ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ತಾನವಿದೆ.ಪುರಾಣದ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವಯಂ ಶ್ರೀರಾಮನೇ ಸ್ಥಾಪಿಸಿದನೆಂಬ ನಂಬಿಕೆ ಇದೆ.ಶಿವರಾತ್ರಿಯ ಸಮಯದಲ್ಲಿ ಈ ದೇವಸ್ಥಾನವು ಬಹಳಷ್ಟು ಭಕ್ತಾದಿಗಳನ್ನು ಆಕರ್ಶಿಸುತ್ತದೆ.
ಇರ್ಪು ಜಲಪಾತ | |
---|---|
ಸ್ಥಳ | Kodagu District, Karnataka, India |
ನಿರ್ದೇಶಾಂಕಗಳ | 11°58′2.22″N 75°59′1.56″E / 11.9672833°N 75.9837667°E |
ಒಟ್ಟು ಉದ್ದ | 170 ft |
ಒಟ್ಟು ಪ್ರಪಾತಗಳು | 2 |
ಸೇರುವ ನದಿ | Lakshmana Tirtha River |
ಮಡಿಕೇರಿ ಇರ್ಪ್ಪು ಜಲಪಾತವು ಕೊಡಗಿನ ಒಂದು ಅಮೊಘವಾದ ಪ್ರವಾಸಿ ಸ್ಥಳವಾಗಿದೆ. ಈ ಜಲಪಾತವು ದಕ್ಶಿಣ ಕೊಡಗಿನ ಭ್ರಹ್ಮಗಿರಿ ಬೆಟ್ಟದ ಎಡ ಭಗದಿಂದ ಹರಿಯುತ್ತದೆ. ಲಕ್ಶ್ಮಣ ತೀರ್ಥ ಎಂಬ ಹೆಸರು ಇದೆ. ತ್ರೆಥಾಯುಗದಲ್ಲಿ ರಾಮ ಲಕ್ಶ್ಮನರು ಸೀತೆಯನ್ನು ಅರಸುತ ಈ ನದಿಯನ್ನು ದಾಟಿರುವ ಇತಿಹಾಸ ಇದೆ. ರಾಮನು ದಾಹಾದಿಂದ ಲಕ್ಶ್ಮಣನೈಗೆ ನೀರು ತರಲು ಹೇಳಿದಾಗ,ಲಕ್ಶ್ಮಣನು ಭ್ರಹ್ಮಗಿರಿ ಬೆಟ್ಟಕ್ಕೆ ಅಂಬು ಹೊಡೆದು ಬೆಟ್ಟದಿಂದ ನೀರನ್ನು ಚಿಮ್ಮಿಸಿದನು. ಇದರ ಪರಿಯಾಗಿ ಈ ನದಿಗೆ ಲಕ್ಶ್ಮಣ ತೀರ್ಥ ಎಂಬ ಹೆಸರು ಬಂದಿರುವ ಇತಿಹಾಸವಿದೆ. ಈ ನದಿ ಇರ್ಪ್ಪು ಜಲಪಾತ ಎಂಬ ಹೆಸರಿನಲ್ಲಿ ಹರಿಯುತದ್ದೆ. ಇದು ೬೦ಮೀಟರ್ ಎತ್ತರದಿಂದ ಹರಿಯುತ್ತದೆ. ಅಲ್ಲಿಂದ ಇದು ಹಸಿರು ತುಂಬಿದ ಬೆಟ್ಟಗಳ ನಡುವಿನಿಂದ ಹರಿಯುತ್ತದೆ.ಇದೊ೦ದು ಪುಣ್ಯ ಸ್ಥಳವಾಗಿದೆ. ಜನರು ಈ ನೀರನ್ನು ಪುಣ್ಯ ನೀರೆಂದು ನ೦ಬಿದ್ದಾರೆ,ಆದ್ದರಿ೦ದ ಹೆಚ್ಚಗಿ ಸಾವಿರಾರು ಜನರು ಶಿವರಾತ್ರಿಯ ದಿನದಂದು ಈ ಸ್ಥಳಕ್ಕೆ ಆಗಮಿಸುತ್ತಾರೆ. ಜಲಪಾತವು ಬಹಳ ಪ್ರವಾಸಿ ಸ್ಥಳಗಲಿಗೆ ಹತ್ತಿರವಾಗಿದೆ. ಗೋಣಿಕೊಪ್ಪದಿಂದ ೩೦ ಕಿ.ಮಿ,ಮಡಿಕೇರಿ ಇಂದ ೮೦ ಕಿ.ಮಿ ಮತ್ತು ನಗರ ಹೊಳೆಯಿಂದ ೨೫ ಕಿ.ಮಿ ದೂರದಲ್ಲಿದೆ. ಇದೊಂದು ಬಹು ಆಕರ್ಶಿಕವಾದ ಪ್ರವಾಸಿ ಸ್ಥಳವಾಗಿದೆ,ಮತ್ತು ಪಾವಿತ್ರವಾದ ಸ್ಥಳವಾಗಿದೆ.