ಇಬ್ರಾಹಿಂ ರೌಝಾ, ಬಿಜಾಪುರ
ಕ್ರಿ.ಶ.1580 ರಿಂದ ಕ್ರಿ.1627 ರ ಕಾಲದಲ್ಲಿ ಬಿಜಾಪುರ ಆದಿಲ್ ಶಾಹಿ ಮನೆತನದ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ಈ ಕಟ್ಟಡವು ಐಹೊಳೆ, ಪಟ್ಟದಕಲ್ಲು ವಾಸ್ತುಶೈಲಿಯನ್ನೂ ಕೂಡ ಹೊಂದಿದೆ. ಇಲ್ಲಿಗೆ ಬರುವ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ಪ್ರವೇಶ ಶುಲ್ಕ ನೀಡಬೇಕಾಗುತ್ತದೆ.ವಿದೇಶಿಗರು 100 ರೂ. ಪ್ರವೇಶ ಶುಲ್ಕ ನೀಡಬೇಕಾಗುತ್ತದೆ. ದಕ್ಷಿಣ ಏಷ್ಯಾ ಪ್ರಜೆಗಳಿಗೆ ೫ ರೂಪಾಯಿ ಶುಲ್ಕವಿದೆ.[೧][೨][೩]
Bijapur Fort | |
---|---|
Bijapur ಇದರ ಭಾಗ | |
Bijapur, India | |
ನಿರ್ದೇಶಾಂಕಗಳು | 16°49′39″N 75°42′31″E / 16.8276°N 75.7087°E |
ಶೈಲಿ | Fort |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | Government of Karnataka |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | Yes |
ಪರಿಸ್ಥಿತಿ | Ruins |
ಸ್ಥಳದ ಇತಿಹಾಸ | |
ಕಟ್ಟಿದ್ದು | 16th century |
ಕಟ್ಟಿದವರು | Yusuf Adil Shah in ೧೫೮೦ |
ಸಾಮಗ್ರಿಗಳು | Granites and lime mortar |
(SAARC (South Asian Association for Regional Cooperation) and BIMSTEC (Bangladesh India Myanmar Sri Lanka Thailand Economic Cooperation)) }}
ಉಲ್ಲೇಖಗಳು
ಬದಲಾಯಿಸಿ- ↑ "Heritage Areas". Bijapur. Office Of the Commissioner, Archaeology, Museums & Heritage, Mysore: Government of Karnataka. Retrieved 2009-11-28.
- ↑ "Welcome to Bijapur". Archived from the original on 2009-02-21. Retrieved 2009-11-29.
- ↑ {{Cite web|url=http://www.bijapurcity.gov.in/%7Ctitle=A[ಶಾಶ್ವತವಾಗಿ ಮಡಿದ ಕೊಂಡಿ] brief History|accessdate=200-11-28|publisher=Bijapur City Municipal Council