ಇಟಾಲಿಯನ್ ಛಂದಸ್ಸು

ಪ್ರಾಚೀನ ರೋಮನರು ಗೆದ್ದು ತಮ್ಮ ಚಕ್ರಾಧಿಪತ್ಯದೊಳಗೆ ಅಳವಡಿಸಿಕೊಂಡ ಪ್ರಾಂತ್ಯದಲ್ಲಿ ಜನರ ಆಡುನುಡಿಯೊಡನೆ ಲ್ಯಾಟಿನ್ ಪದಗಳೂ ಪದಪ್ರಯೋಗಗಳೂ ಬರೆಯುತ್ತ ಹೋಗಿ ಕ್ರಮೇಣ ಹೊಸ ಪ್ರಾಂತ್ಯ ಭಾಷೆಗಳು ಉತ್ಪತ್ತಿಯಾದ್ದವು. ಅವೇ ಮುಂದೆ ಪುಷ್ಟಿಗೊಂಡು ಸಾಹಿತ್ಯ ಮಾಧ್ಯಮವಾದ್ದವು. ಅವೆಲ್ಲ ಲ್ಯಾಟಿನ್ ಪ್ರಭಾವಕ್ಕೆ ಒಳಗಾದ ಲ್ಯಾಟಿನ್ ಮಿಶ್ರಿತ ದೇಶಭಾಷೆಗಳು. ಹೀಗೆ ಎದ್ದುಬಂದ ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಇತ್ಯಾದಿ ಭಾಷೆಗಳಲ್ಲಿ ಲ್ಯಾಟಿನ್ನಿಗೆ ಅತಿ ಹತ್ತಿರವಾದದ್ದು ಇಟಾಲಿಯನ್. ವ್ಯಾಕರಣ ನಿಯಮದಲ್ಲಿ ಇಟಾಲಿಯನ್ ಲ್ಯಾಟಿನ್ನಿನಿಂದ ಸ್ಪಷ್ಟವಾಗಿ ಬೇರೆ; ಛಂದೋ ಮರ್ಯಾದೆಯಲ್ಲಾದರೂ ಒಂದೆರಡು ದೊಡ್ಡ ವ್ಯತ್ಯಾಸವನ್ನು ಬಿಟ್ಟರೆ ಒಟ್ಟಿನ ರಚನಾಧೋರಣೆ ಸರಿಸುಮಾರಾಗಿ ಲ್ಯಾಟಿನ್ ಕ್ರಮದ ಅನುಸರಣೆ. ರೋಮನರ ಪುರಾಣಕವಿ ವರ್ಜಿಲ್ ಪುರಾತನ ಗ್ರೀಕರ ಕಾವ್ಯಪದ್ಧತಿಯನ್ನೂ ಛಂದೋರೀತಿಯನ್ನೂ ತನ್ನ ದೇಶಭಾಷೆಯಾದ ಲ್ಯಾಟಿನ್ನಿನ ಮೇಲೆ ಸಾಹಿತ್ಯ ಸರ್ವಾಧಿಕಾರಿಯಂತೆ ಹೊರಿಸಿ, ಅತ್ಯುತ್ತಮ ಕಾವ್ಯಕ್ಕೆ ಅದು ಯೋಗ್ಯವಾಗುವಂತೆ ಮಾಡಿ, ಕೃತಕೃತ್ಯನಾದ. ಹಾಗೆಯೇ 13ನೆಯ ಶತಮಾನದ ಡಾಂಟೆ ತನ್ನ ದೇಶಭಾಷೆಯಾದ ಇಟಾಲಿಯನ್ನಿಗೆ ಲ್ಯಾಟಿನ್ ಕಾವ್ಯಪದ್ಧತಿಯನ್ನೂ ಛಂದೋರೀತಿಯನ್ನೂ ಕಲಾರಮ್ಯವಾಗಿ ಹೊಂದಿಸಿದ್ದ.[]

ಇಟಾಲಿಯನ್ ಜಾಯಮಾನ

ಬದಲಾಯಿಸಿ

ಆದರೆ ಇಟಾಲಿಯನ್ ಜಾಯಮಾನಕ್ಕೆ ಯಾವ ಲಕ್ಷಣ ಸುಂದರವೂ ಸತ್ತ್ವಯುಕ್ತವೂ ಆಗಿದ್ದುವೂ ಅವನ್ನು ಡಾಂಟೆ ಕೈಬಿಡಲಿಲ್ಲ; ಉದಾಹರಣೆ : ಪ್ರಾಸ, ಪಂಕ್ತಿಪುಂಜ (ಸ್ಟ್ಯಾಂಜó). ಪದ್ಯಪಂಕ್ತಿಯನ್ನು ಲಯಬದ್ಧವಾಗಿಸುವ ಮಾತ್ರೆ ಮತ್ತು ಅವಧಾರಣೆಗಳಲ್ಲಿ (ಆಕ್ಸೆಂಟ್) ಇಟಾಲಿಯನ್ ಮಾತ್ರಾ ನಿಯಮವನ್ನು ಆಧಾರ ಮಾಡಿಕೊಳ್ಳಲಾಗಿದೆ. ಆದರೆ ಲ್ಯಾಟಿನ್ನಿನ ದೀರ್ಘ ಹ್ರಸ್ವ ಕ್ರಮವನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿಕೊಂಡಿದೆ. ಒಂದು ಸಾಲಿನಲ್ಲಿ ಇಷ್ಟೇ ದೀರ್ಘ ಉಚ್ಛಾರಾಂಶ ಇಂಥದೇ ಸರಣಿಯಲ್ಲಿ ಬರಬೇಕು ಎಂಬ ಸೂತ್ರ ಲ್ಯಾಟಿನ್ನಿನಲ್ಲಿ ಕಡ್ಡಾಯ. ಇಟಾಲಿಯನ್ನಿನಲ್ಲಿ ಕವಿಗೆ ಸ್ವಾತಂತ್ರ್ಯ ಹೆಚ್ಚಿ ಗಣಗಳನ್ನು ಆತ ಅಗತ್ಯ ಬಿದ್ದಂತೆ ಬದಲಿಸಬಹುದು, ಮುಖ್ಯ ಧಾಟಿಗೆ ಭಂಗ ತರದಂತೆ. ಅದೂ ಅಲ್ಲದೆ ಹ್ರಸ್ವ ಉಚ್ಛಾರಾಂಶ ಎರಡೊ ಮೂರೊ ನಾಲ್ಕೊ ಅಧಿಕವಾಗಿ ಬಂದರೂ ಬರಬಹುದು; ಛಂದೋಗಣತಿಯಂತೆ ಆ ಆಧಿಕ್ಯದಿಂದ ಸಾಲಿಗೆ ದೋಷ ತಟ್ಟುವುದಿಲ್ಲ. ಹನ್ನೆರಡು ಉಚ್ಛಾರಾಂಶಗಳ ಹೆಕ್ಸಾಮೀಟರ್ ಗ್ರೀಕಿಗೂ ಲ್ಯಾಟಿನ್ನಿಗೂ ಚೆನ್ನಾಗಿ ಹೊಂದಿಕೊಂಡ ಪದ್ಯಪಂಕ್ತಿ; ಒಂದೊ ಎರಡೊ ಉಚ್ಛಾರಾಂಶ ಆಗೊಮ್ಮೆ ಈಗೊಮ್ಮೆ ಅವಶ್ಯವಾಗಿ ಬಂದರೂ ಪಂಕ್ತಿ ಹೆಕ್ಸಾಮೀಟರೇ. ಡಾಂಟೆ ತನ್ನ ಪುರಾಣ ಕಾವ್ಯಕ್ಕೆ ಹನ್ನೊಂದು ಉಚ್ಛಾರಾಂಶಗಳ ಸಾಲನ್ನು ರೂಢಿಸಿಕೊಂಡ; ಅದೇ ಹೆನ್‍ಡೆಕಸಿಲಬಲ್. ಆಗಾಗ ಹೆಚ್ಚುವರಿ ಉಚ್ಛಾರಾಂಶ ಇಟಾಲಿಯನ್ ನುಡಿಗಟ್ಟಿಗೂ ಡಾಂಟೆಯ ಪ್ರತಿಭೆಗೂ ಅನಿವಾರ್ಯವಾಯ್ತು. ಆದರೂ ಹೆನ್‍ಡೆಕಸಿಲಬಲ್ ಲಯಕ್ಕೂ ಓಟಕ್ಕೂ ಎಲ್ಲೂ ಚ್ಯುತಿಯಲ್ಲ. ಅವಧಾರಣೆ ಗೌಣಸಾಧನವಾದರೂ ಅದರ ಬಳಕೆ ಕಿವಿಗೆ ಇಂಪಾಗುವಂತೆ ಇಟಾಲಿಯನ್ ಕವಿವರ್ಗ ಮಾಡಬಲ್ಲುದು. ಲಯತ ಮೊತ್ತಕ್ಕೆ ಎಣಿಕೆಯಲ್ಲಿ ಹೆಚ್ಚೆಂದು ತೋರುವ ಉಚ್ಛಾರಾಂಶಗಳು ಸಾಮಾನ್ಯವಾಗಿ ಇ (i) ಎ (e) ಅ (ಚಿ) ಇತ್ಯಾದಿ ಹ್ರಸ್ವಸ್ವರ, ಅಥವಾ ಲ (ಟe) ಎಡ್ (eಜ) ಚಿ (ಛಿhi) ಇತ್ಯಾದಿ ಚಿಕ್ಕ ಸಂಯೋಜಕಗಳು; ಅವು ಮುಂದೆ ಬರುವ ದೊಡ್ಡ ಪದದೊಂದಿಗೆ ಕೂಡಿಕೊಂಡು ಅಧ್ಯಾಹಾರವಾಗುತ್ತವೆ. ಉದಾಹರಣೆ. ಲುಸೊ (ಟuso) . ಎ ಕ್ವಾನ್ತ್ ಇಒ ಲಬ್ಬಿಯ ಇನ್ ಗ್ರಾಡೊ ಮೆಂಟ್ೃ ಇಒ ವಿವೊ ( ಇ quಚಿಟಿಣ io ಟಚಿbbiಚಿ iಟಿ gಡಿಚಿಜo meಟಿಣಡಿe io vivo) ಎಡ್ ಇಒ ಅ ಲುಇ; ಲಿ ಡೋಲ್ಸಿ ಡೆಟಿ ವೋಸ್ತ್ರಿ ( ಇಜ io ಚಿ ಟui; ಟi ಜoಟಛಿi ಜeಣಣi vosಣಡಿi )[]

ಇಟಾಲಿಯನ್ ಪದ್ಯ

ಬದಲಾಯಿಸಿ

ಸ್ವರಾಧಿಕ್ಯದಿಂದಲೂ ಸ್ವರಪುನರುಕ್ತಿಯಿಂದಲೂ (ಅಸೊನೆನ್ಸ್) ಇಟಾಲಿಯನ್ ಪದ್ಯ ಕೋಮಲವಾಗುತ್ತದೆ, ಕಿವಿಗೆ ಮಧುರವಾಗುತ್ತದೆ.ಅಂತ್ಯಪ್ರಾಸ ಇಟಾಲಿಯನ್ ಪದ್ಯದ ಹೆಗ್ಗುರುತು, ಪದ್ಯದ ಪಾದ ಕೊನೆ ಮುಟ್ಟಿತೆಂದು ತಿಳಿಸುವುದಕ್ಕೆ ಅದರಿಂದ ಬಹು ಸಹಾಯ ಎಂಬುದನ್ನು ಹೇಳಬೇಕಾಗಿಲ್ಲ. ಒಂದು ಪಾದದ ಕೊನೆಯೂ ಮುಂದಣ ಪಾದದ ಆದಿಯೂ ವಿರಾಮ ಬಯಸದೆ ಜೊತೆಗೊಂಡು ನಡೆಯಬೇಕಾದ ಸಂದರ್ಭದಲ್ಲಿ ಅಂತ್ಯಪ್ರಾಸ ಗಡಿಕಲ್ಲಾಗಿ ನಿಲ್ಲದೆ, ಪಾದದ ಓಟದೊಳಗೆ ಸೇರಿಕೊಂಡು, ಪದ್ಯದ ಮುನ್ನಡೆಗೆ ಸಹಾಯ ಮಾಡುತ್ತದೆ. ಅಂದರೆ ಪ್ರಾಸ ಪಾದದ ಅಂಚೂ ಆಗುತ್ತದೆ, ಒಡಲೂ ಆಗುತ್ತದೆ. ಇಂಥ ಮುಂದೋಟ (ಎಂಜಂಬ್ಮೆಂಟ್, ಓವರ್ ಫ್ಲೊ) ಇಟಾಲಿಯನ್‍ನಲ್ಲಿ ಬಲು ಹೆಚ್ಚು; ಭಾಷೆ ಅದಕ್ಕೆ ಇಂಬಾಗಿದೆ, ಅಚ್ಚುಕಟ್ಟಾಗಿ. ಕವಿ ಎಷ್ಟರಮಟ್ಟಿಗೆ ಮುಂದೋಟ ಸಾಧಿಸಬಹುದೆಂದರೆ, ಒಂದು ಪಾದಾಂತ್ಯದಲ್ಲಿ ವಿಶೇಷಣವನ್ನಿಟ್ಟು ಮುಂದಿನ ಪಾದದ ಆದಿಯಲ್ಲಿ ನಾಮಪದವನ್ನು ಇಡಬಹುದು; ಹಾಗೆಯೇ ಸಂಖ್ಯಾವಾಚಕ ನಿರ್ದೇಶನವಾಚಕ ಸಂಯೋಜಕ ಮುಂತಾದುವನ್ನು ಅವುಗಳಿಗೆ ಅಂಟಿಕೊಳ್ಳುವ ಮೂಲ ಪದಗಳಿಂದ ಪ್ರತ್ಯೇಕಿಸಬಹುದು. ಅವಧಾರಣೆ ಮುಖ್ಯವಾಗಿರುವ ಭಾಷೆಗಳಲ್ಲಿ ಏರಿಕೆ ಲಯ (ಅಸೆಂಡಿಂಗ್ ರಿದಮ್) ಇಳಿತ ಲಯಗಳನ್ನು (ಡಿಸೆಂಡಿಂಗ್ ರಿದಮ್) ಸ್ಪಷ್ಟವಾಗಿ ಬೇರ್ಪಡಿಸುವುದು ಸಾಧ್ಯ. ಈ ಎರಡು ಸಾಲನ್ನು ಲಕ್ಷಿಸಿ : ಅಂಡ್ ಫೈಪ್ ಅಂಡ್ ಡ್ರಮ್ ಅಂಡ್ ಸಿಗ್ನಲ್ ಫ್ಲೇರ್ಸ್ ಅ-ಬ್ರಾಂಡಿಷ್ ಥೌಸಂಡ್ ಅಂಡ್ ಮೋರ್, ಥ್ರಾಂಗಿಗ್ ದಿ ಬಾರ್ಬಿಕನ್ ಇವು ಇಟಾಲಿಯನ್ ಸಾಲುಗಳ ತರ್ಜುಮೆ, ಮೂಲದಲ್ಲಿ ಎರಡು ಸಾಲಿನ ಲಯವೂ ಹತ್ತಿರ ಹತ್ತಿರ; ಏತಕ್ಕೆಂದರೆ ಛಂದೋಗಣತಿಗೆ ಅವಧಾರಣೆಯ ಘಾತ ಪ್ರಧಾನ, ಉಚ್ಛಾರಾಂಶಗಳ ಸಂಖ್ಯೆ ಪ್ರಧಾನ.

ಇಟಾಲಿಯನ್ ಪಂಕ್ತಿಪುಂಜ

ಬದಲಾಯಿಸಿ

ಇಟಲಿಯ ಛಂದಸ್ಸಿನ ಇನ್ನೊಂದು ವಿಶೇಷ ಲಕ್ಷಣ ಅದರ ಪಂಕ್ತಿ ಪುಂಜಗಳ ವೈವಿಧ್ಯ, ಕ್ರಮ, ಸೊಗಸು. ಯೂರೋಪಿನ ಇತರ ಭಾಷೆಗಳೆಲ್ಲ ಇಟಾಲಿಯನ್ ಪಂಕ್ತಿಪುಂಜಗಳನ್ನು ಎರವಲು ಪಡೆದು ತಮ್ಮ ತಮ್ಮದನ್ನಾಗಿಸಿಕೊಂಡಿವೆ. ಡಾಂಟೆಯ ತ್ರಿಪದಿಗೆ ಟಜರ್ó ರೀಮಾ (ಖಿeಡಿzಚಿ ಖimಚಿ) ಎಂದು ಹೆಸರು. ಒಂದು ತ್ರಿಪದಿಯ ಪ್ರಾಸ ಎ ಬಿ ಎ ಆದರೆ ಮುಂದಣ ತ್ರಿಪದಿಯ ಪ್ರಾಸ ಬಿ ಸಿ ಬಿ. ಅದರ ಮುಂದಣದು ಸಿ ಡಿ ಸಿ; ಹಾಗೆಯೇ ಮುಂದುವರಿಕೆ. ಚೌಪದಿಗೆ ಎರಡು ವಿಧ : ಎ ಬಿ ಎ ಬಿ, ಎ ಬಿ ಬಿ ಎ. ಪಂಚಪದಿಗಿಂತಲೂ ಷಟ್ಟದಿಯ ಬಳಕೆ ಹೆಚ್ಚು. ಅದಕ್ಕಿಂತಲೂ ಹೆಚ್ಚು ಬಳಕೆ ಸಪ್ತಪದಿಗೆ, ಅಷ್ಟಪದಿಗೆ. ಮೂರೂ ಪ್ರಾಸ ಅವುಗಳಲ್ಲಿ ಬೇರೆ ಬೇರೆ ಕ್ರಮದಲ್ಲಿ. ಅಟ್ಟಾವರೀಮಾ ಎಂಬ ಅಷ್ಟಪದಿಗೆ ಬಹು ಪ್ರಸಿದ್ಧಿ. ಈ ಪ್ರಕಾರಗಳಿಗಿಂತ ಮಿಗಿಲಾಗಿ ಇಡೀ ಯೂರೋಪನ್ನೇ ಆವರಿಸಿಕೊಂಡ ಪಂಕ್ತಿಪುಂಜ ಪೆಟ್ರಾರ್ಕ್ ಕಂಡುಹಿಡಿದ ಹದಿನಾಲ್ಕು ಪಂಕ್ತಿಗಳ ಸಾನೆಟ್. ಅದಕ್ಕೆ ಎರಡು ಅಂಗ : ಮೊದಲಣ ಎಂಟು ಪಂಕ್ತಿಗಳ ಆಕ್ಟೇವ್, ಆಮೇಲಣ ಆರು ಪಂಕ್ತಿಗಳ ಸೆಸ್ಪೆಟ್. ಆಕ್ಟೇವಿನ ಪ್ರಾಸ ಎ ಬಿ ಬಿ ಎ, ಎ ಬಿ ಬಿ ಎ; ಸೆಸ್ಪೆಟ್ಟಿನ ಪ್ರಾಸ ಸಿ ಡಿ ಇ ಯನ್ನು ಎರಡು ಮೂರು ಬಗೆಯಲ್ಲಿ ಇರಿಸುತ್ತದೆ. ಸಾಂಪ್ರದಾಯಿಕತೆ ಇಟಲಿಯಲ್ಲಿ ಹೆಚ್ಚು. ಆದ್ದರಿಂದ ಪ್ರಾಸ ಬಿಡುವಿಕೆ, ಉದ್ದ ಮೊಟಕು ಸಾಲುಗಳ ಕೂಟ, ಮುಂತಾದ ಆಧುನಿಕ ವ್ಯಾಪಾರ ಇಟಲಿಯ ಸಾಹಿತ್ಯದಲ್ಲಿ ವಿರಳ.

ಉಲ್ಲೇಖಗಳು

ಬದಲಾಯಿಸಿ