ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮವು ಒಂದು ಚಾಳುಕ್ಯರ ಕಾಲದ ಐತಿಹಾಸಿಕ ತಾಣವಾಗಿದ್ದು. ಐತಿಹಾಸಿಕ ಪರಂಪರೆಯ ಉಳಿಯುವಿಕೆಗಾಗಿ ಇಟಗಿ ಉತ್ಸವವನ್ನು ಮಹೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ನಾಗರಿಕ ವೇದಿಕೆಯ ಆಶ್ರಯ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಸುಮಾರು ೧೩ ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು ೧೪ನೇ ವರ್ಷದ ಉತ್ಸವದ ಸಿದ್ದತೆಯಲ್ಲಿ ತೊಡಗಿದೆ. []

ದೇವಾಲಯಗಳ ವಿಶೇಷತೆ

ಬದಲಾಯಿಸಿ

ಭಾರತದ ಇತಿಹಾಸದಲ್ಲಿ ಇಟಗಿ ದೇವಾಲಯಗಳು ವಿಶಿಷ್ಟ ಗುರುತನ್ನು ಹೊಂದಿವೆ. ಈ ದೇವಾಲಯಗಳು ಸಂಕೀರ್ಣ ಮತ್ತು ಸೂಕ್ಷ್ಮವಾದ ಕೆತ್ತನೆಗಳಿಗೆ ಹೆಸರುವಾಸಿ ಆಗಿವೆ.ಈ ದೇವಾಲಯಗಳು ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣವಾದ ಮೇರು ಕೃತಿಗಳೆಂದು ನಂಬಲಾಗಿದೆ.ಈ ದೇವಸ್ಥಾನಗಳಲ್ಲಿ ಮಹಾದೇವ (ಶಿವ)ದೇವಾಲಯ ತುಂಬಾ ವಿಶೇಷವಾದದ್ದು.ಮಹಾದೇವದೇವಾಲಯವನ್ನು ಕ್ರಿ.ಶ ೧೧೨೧ ರಲ್ಲಿ ಚಾಲುಕ್ಯರ ಚಕ್ರವರ್ತಿ ವಿಕ್ರಮಾದಿತ್ಯನ ಕಮಾಂಡರ್ ಮಹಾ ದೇವ ದಂಡನಾಯಕ ನಿಂದ ನಿರ್ಮಿಸಲಾಯಿತು.


ಉತ್ಸವದ ವಿಶೇಷತೆ

ಬದಲಾಯಿಸಿ

ಇಟಗಿ ಉತ್ಸವವು ನಾಡಿನ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಕವಿಗೋಷ್ಠಿ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ,ಕಲಾವಿದರಿಗೆ ಗೌರವ ಅರ್ಪಣೆ,ಹಾಗೂ ರಾಜ್ಯದ ನಾನಾ ಜಿಲ್ಲೆಯ ಸಾಂಸ್ಕೃತಿಕ ಕಲಾ ತಂಡಗಳಿಗೆ ಮಹಾದೇವ ದಂಡ ನಾಯಕ ವೇದಿಕೆಯಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುತ್ತದೆ.

೧೪ನೇ ಉತ್ಸವ

ಬದಲಾಯಿಸಿ

೧೪ ನೇ ಇಟಗಿ ಉತ್ಸವವು ೨೦೧೭ ಡಿಸೆಂಬರ್ ೧೫,೧೬,೧೭ ರಂದು ಜರುಗಲಿದೆ.ಉತ್ಸವದ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀ ಅಲ್ಲಾವುದ್ದೀನ ಯಮ್ಮಿ ವಹಿಸಲಿದ್ದಾರೆ.

 
ಇಟಗಿ ಉತ್ಸವ

ಉಲ್ಲೇಖಗಳು

ಬದಲಾಯಿಸಿ
  1. "Emperor of Temples' crying for attention". www.thehindu.com. Retrieved 4 December 2017.
 
ಮಹಾದೇವ ದೇವಸ್ಥಾನ