ಇಗ್ಗುತಪ್ಪ ದೇವಾಲಯ
You must add a |reason=
parameter to this Cleanup template - replace it with {{Cleanup|reason=<Fill reason here>}}
, or remove the Cleanup template.
ಶ್ರೀ ಇಗ್ಗುತಪ್ಪ ದೇವಾಲಯ : ಸ್ಥಳ : ಅಮ್ಮಂಗೇರಿ, ಕಕ್ಕಬ್ಬೆ , ಕೊಡಗು. ಎವ್ವಮಕ್ಕ ದೇಬೂವರು ಅಂದರೆ ಏಳು ಜನ ದೇವಮಕ್ಕಳು, ಅವರಲ್ಲಿ ಶ್ರೀ ಇಗುತಪ್ಪನು ನಾಲ್ಕ್ನೆ'ನೆಯವನು. ಈ ಏಳು ದೇವಮಕ್ಕಳಲ್ಲಿ ಹಿರಿಯ ಮೂವರು ಮಲೆಯಾಳದಲ್ಲಿ ನಿಂತಾಗ ಕಿರಿಯವರು ನಾಲ್ಕು ಜನರು ಕೊಡಗಿಗೆ ಕ್ರಿ.ಶ. ೧೧೫೩ ರಲ್ಲಿ ಕಾಲಿಟ್ಟ ರು. ಇವರ ಪೈಕಿ ಹಿರಿಯವನಾದ ನೆಲಜಿ ಗ್ರಾಮದಲ್ಲು ಪೇರೂರು ಗ್ರಾಮದಲ್ಲು ಆಗಿ ಮೂರು ದೇವಸ್ಥಾನಗಳಾಗಿ , ಕಾಲದಲ್ಲಿ ಹಬ್ಬ ಆರಾಧನೆಯಂದು ೫ ಸಲ ಮೇಲಿನ ಎಲ್ಲಾ ಗ್ರಾಮಸ್ಥರು ಅವರವರ ದೇವಸ್ಥಾನದಲ್ಲಿ ಸೇರಿದ ದಿನವೇ ಮಲ್ಮಸ್ಥಾನದಲ್ಲು ಸೇರಿ ಉತ್ಸವ ನಡೆಯಿಸುವರು. ಮಲ್ಮದಲ್ಲಿ ಮೂರು ದೇವಸ್ಥಾನದಿನ್ದಲು ತಕ್ಕ ಮುಖ್ಯಸ್ಥರು ಬಕ್ಥರು ಸೇರಿ ನಡೆಯಿಸುವ ಹಬ್ಬ ಆರಾಧನೆ ಗಳೆಲ್ಲಾ ಈಶ್ವರಾರ್ಪಿತವು ಎಂದು ಎಲ್ಲರಿಗು ತಿಳಿಯತಕ್ಕದಾಗಿ ಬಾವನೆ ಮೂಡಿಸಿದನು.
ದೇವರ ಭೂಮಿ ಮತ್ತು ದೇವರ ಕಾಡು ಕುರಿತು---- ದೇವರ ಭೂಮಿ ಮತ್ತು ಕಾಡನ್ನು ಕ್ರಿ.ಶ. ೧೯೬೯ ದಿಂದ ಈಚೆಗೆ ಅಕ್ರಮಣ ಮಾಡಿದವರನ್ನು ತಡೆಗಟ್ಟಲು ದೇವಸ್ಥಾನದಲ್ಲಿ ಆಗ ಇದ್ದ ಮುಜ್ರಾಯಿ ಇಲಾಖೆಯ ಪದಾಧಿಕಾರಿಗಳು ಯಾವ ವರ್ತಮಾನವನ್ನೂ ಇಲಾಖೆಯ ಪ್ರೆಸಿಡೆಂಟರಿಗೆ ತಿಳಿಸುತ್ತಿರಲಿಲ್ಲವೆಂದು ತಿಳಿಯುವುದಾಗಿದೆ. ಹಾಗೆ ಇದ್ದಾಗ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಹೆಸರಿನಲ್ಲಿ ಹಳೆ ಕಾಲದ ನಿಘಂಟಿನ ಪ್ರಕಾರ ಅಂದಾಜು ೮೧೦ಬಟ್ಟಿ ಭೂಮಿ ಮತ್ತು ಹಳೇ ಕಾಲದ ಪಾರುಪತ್ತೆಗಾರರ ಹೇಳಿಕೆಯಂತೆ ಅಂದಾಜು ೧೪೦ ಏಕ್ರೆ ಜಾಗ ಇತ್ತು. ದೇವರ ಭೂಮಿ ವಾರ ಮಾಡುವ ಮಾರಾಯರು ವರ್ಷಾವಧಿ ಬೇಸಿಗೆಯ ಕೆಲಸದ ನಂತರ ದೇವರಿಗೆ ಸರಿಯಾಗಿ ಸಲ್ಲಿಸುತ್ತಿದ್ದ ೬.೧/೪ ಬಟ್ಟಿ ಅಕ್ಕಿಯಲ್ಲಿ ಒಬ್ಬರು ಇಬ್ಬರು ಮಾತ್ರ ಈಗ ದೇವಸ್ಥಾನಕ್ಕೆ ಅಕ್ಕಿ ಸಲ್ಲಿಸುತ್ತಿದ್ದಾರೆ. ಅಂದರೆ ದೇವರ ಭೂಮಿಯನ್ನು ಖಾಯಂ ಆಗಿ ವಾರ ಮಾಡುವ ಮಾರಾಯರೆಲ್ಲರೂ ದೇವಸ್ಥಾನಕ್ಕೆ ಫೆಬ್ರವರಿ ತಿಂಗಳ ಕೊನೆಯಲ್ಲಿ ೬.೧/೪ ಬಟ್ಟಿ ಅಕ್ಕಿಯನ್ನು ಸಲ್ಲಿಸಲು ಭಾದ್ಯಸ್ತರಾಗಿದ್ದರಿಂದ ಮಾರಾಯರೆಲ್ಲರೂ ದೇವಸ್ಥಾನದಲ್ಲಿ ಹಬ್ಬದ ದಿನ ಮಾಡುವ ಕೆಲಸಕ್ಕೂ ಸಂಬಳ ಇದ್ದಿಲ್ಲ ; ಬೇರೆ ದಿನದಲ್ಲಿ ಮಾಡುವ ಯಾವ ಕೆಲಸಕ್ಕೂ ಸಂಬಳ ಇದ್ದಿಲ್ಲ. ಹಳೇ ಸಾಂಪ್ರದಾಯಿಕತೆ ಮರೆತು ಈಗ ಬಿಡುದಿನದ ತುಲಾಭಾರದ ದಿನ ಮತ್ತು ತೊಲೆಯಾರು ೧೦ರ ಆರಾಧನೆ ದಿನ ಅವರು ಸಂಬಳ ಹೊಂದುವುದು ಸರಿಯಲ್ಲ. ದೇವರ ಭೂಮಿ ಮತ್ತು ಕಾಡು ಜಾಗಗಳನ್ನೆಲ್ಲಾ ಕರ್ನಾಟಕ ಸರ್ಕಾರದ ೧೯೭೪ರ ಭೂ ಸುಧಾರಣೆ ಕಾಯಿದೆ ಪ್ರಕಾರ ದೇವಸ್ಥಾನದ ಕೆಲಸಕ್ಕೆ ನಿಂತವರೂ ದೇವರ ಭೂಮಿ ವಾರ ಮಾಡುತ್ತಾ ಬಂದ ಮಾರಾಯರೂ ಡಿಕ್ಲೇರೇಷನ್ ಮಾಡಿ ಭೂಮಿ ಮತ್ತು ಕಾಡನ್ನು ಸ್ವಾಧೀನ ಪಡಿಸಿ ಕೊಂಡರು. ದೇವಸ್ಥಾನದ ಸಮೀಪದಲ್ಲಿರುವ ಕೊಡಗಿನವನೊಬ್ಬನೂ ಕೂಡ ದೇವರ ಭೂಮಿಗೆ ಡಿಕ್ಲೇರೇಷನ್ ಸಲ್ಲಿಸಿ ದೇವರ ಭೂಮಿಯನ್ನು ತನ್ನ ಸ್ವಾಧೀನ ಪಡಿಸಿದನು. ದೇವರ ಭೂಮಿಗೆ ಒತ್ತಾಗಿ ಇರುವ ಇನ್ನೂ ಎರಡು ಮನೆಯ ಕೊಡಗರು ದೇವರ ಕಾಡು ಜಾಗ ಆಕ್ರಮಿಸಿಕೊಂಡಿರುವರು. ಅಂದಿನ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳೂ, ಅರಣ್ಯ ಮಂತ್ರಿಗಳೂ, ಮತ್ತು ಕೊಡಗಿನ ಪರವಾಗಿರುವ ಉಸ್ತುವಾರಿ ಸಚಿವರೂ ಆನಂತರ ಕಾಲದಲ್ಲಿ ದೇವಸ್ಥಾನಕ್ಕೆ ಭೇಟಿಕೊಟ್ಟು, ವಿಚಾರಣೆ ಆದಾಗ ದೇವರ ಭೂಮಿ ದೇವರ ಕಾಡು ಮತ್ತು ಆಯಾಯ ದೇವಸ್ಥಾನದ ಪವಿತ್ರತೆಯನ್ನೆಲ್ಲಾ ಆಯಾಯ ದೇವಸ್ಥಾನದ ಸುತ್ತ ಮುತ್ತಲಿನ ನಾಡಿನ ಜನರೂ ಮತ್ತು ತಕ್ಕ ಮುಖ್ಯಸ್ಥರೂ ಸೇರಿ ತಡೆಗಟ್ಟಿ ರಕ್ಷಣೆ ಪಡಿಸಿಕೊಳ್ಳಬೇಕೆಂಬ ತೀರ್ಮಾನವನ್ನು ಕ್ರಿ.ಶ. ೧೯೮೫ರಲ್ಲಿ ಶಕ್ತಿ ಮತ್ತು ದೈನಿಕ ಪತ್ರಿಕೆಗಳಲ್ಲಿ ವಿಸ್ತಾರವಾಗಿ ಬರೆದು ಪ್ರಕಟಿಸಿ ತಿಳಿಸಿದ್ದರು. ದೇವರ ಭೂಮಿ ವಾರ ಮಾಡುವ ಕೆಲವು ಜನರು ಮಾತ್ರ ಅನಂತರದ ಕಾಲದಲ್ಲಿ ದೇವಸ್ಥಾನಕ್ಕೆ ವರ್ಷಾವಧಿ ಅಕ್ಕಿ ಕೊಡುತ್ತಾರೆಂದು ಕೆಲವರು ಕಮ್ಮಿಯಾಗಿ ಅಕ್ಕಿ ಸಲ್ಲಿಸುತ್ತಾರೆಂದೂ ತಿಳಿದು ಬಂತು.
ಇಗ್ಗುತಪ್ಪ ದೇವಸ್ಥಾನದಲ್ಲಿ ಭಕ್ತ ಜನಸಂಘ ಶ್ರೀ ಇಗ್ಗುತಪ್ಪ ದೇವರು ಇಲ್ಲಿಗೆ ಕ್ರಿ.ಶ. ೧೧೫೩ರಲ್ಲಿ ಬಂದಿದ್ದರೂ ಭಕ್ತ ಜನಸಂಘ ಕ್ರಿ.ಶ. ೧೯೧೫ರಲ್ಲಿ ಅಂದಾಜು ೭೬೨ ವರ್ಷದ ನಂತರ ಸ್ಥಾಪನೆ ಆಗಿದೆ.ಪೂರ್ವಕಾಲದಲ್ಲಿ ಈ ಜಿಲ್ಲೆಗೆ ದಂಗೆ ಧಾಳಿಯಿದ್ದಾಗ ದಂಗೆ ಕೋರನೊಬ್ಬನು ಪಾಡಿ ದೇವಸ್ಥಾನದ ಮೇಲೆ ಧಾಳಿ ಮಾಡಿದಾಗ ಪರದಂಡ ಸೋಮಣ್ಣ ನೆಂಬುವವರಲ್ಲಿ ದೇವರ ಭಂಡಾರವನ್ನು ಮನೆಯಲ್ಲಿಟ್ಟ ವಿವಿರ ತಿಳಿದು ಪರದಂಡ ಮನೆಗೆ ಬಂದು ಹೆದರಿಸಿದಾಗ ಭಂಡಾರ ತೋರಿಸದಿದ್ದ ಕಾರಣ ಸೋಮಣ್ಣನ ಕೈ ಬೆರಳಿಗೆ ಎಣ್ಣೆ ಬತ್ತಿ ಸುತ್ತಿ ಬೆಂಕಿ ಇಟ್ಟು ಸುಟ್ಟು ಮನೆಯವರನ್ನು ಉಪದ್ರಿಸಿ ದೇವರ ಭಂಡಾರವನ್ನು ಎತ್ತಿಕೊಂಡು ಹೋದನೆಂಬ ವಾರ್ತೆ ಇದೆ ದೇವರ ಭಂಡಾರ ಇದ್ದಲ್ಲಿ ಪವಿತ್ರತೆ ಇಲ್ಲಿದಿದ್ದರೆ ಈ ರೀತಿಯ ದುರಂತಕ್ಕೆ ಕಾರಣ ವಾಗುವುದು ಎಂದು ತಿಳಿದಿದೆ .ಈಗಲೂ ಈ ಮನೆಯಲ್ಲಿರ ಬೇಕಾದ ರೀತಿಯ ಪವಿತ್ರತೆಗೆ ಹೆಂಗಸರು ಗಮನ ಕೊಡದ ಕಾರಣ ಯಾರೂ ಹೆಸರು ವಾಸಿಗಳಾಗಿಯೂ ಪದವೀಧರರಾಗಿಯೂ ಮುಂದಕ್ಕೆ ಬರಲು ಆಸ್ಪದ ಇಲ್ಲದಂತಾಗಿದೆ. ಪರದಂಡ ಜನಸಂಖ್ಯೆ, ಪದವೀಧರ,ಕೀರ್ತಿ ಎಂಬದಕ್ಕೆಲ್ಲಾ ಶ್ರೀ ಇಗ್ಗುತಪ್ಪನು ಮಿತಿಯಿಡುತ್ತಾ ನಡೆಯುತ್ತಾನೆ ಅದು ಅವನ ಮಹಿಮೆ. ತನ್ನ ದೇವ ತಕ್ಕರು ಆದ ಪರದಂಡ ಮನೆಯವರ ಕೀರ್ತಿಯನ್ನು ಉಳಿಸಬೇಕೆಂದು ದೇವರು ಸಹ ಬಯಸಿ ಕ್ರಿ.ಶ.೧೭೧೮ ರಲ್ಲಿ ದೊಡ್ಡ ವೀರಪ್ಪ ರಾಜನಿಂದ ಪರದಂಡ ಪೊನ್ನಪ್ಪನನ್ನು ರಾಜನ ದಿವಾನನ್ನನ್ನಾಗಿಯು ಎಂಟು ದೇಶ ತಕ್ಕರ ಪೈಕಿ ಪ್ರಾಮುಖ್ಯತೆಯುಳ್ಳ ದೇಶ ತಕ್ಕರನಾಗಿಯು ಮಾಡಿದನು.ಪೊನ್ನಪ್ಪನ ಮನೆಯವರಿಂದ ಮನೆಯಲ್ಲಿ ಪೂರ್ವ ಕಾಲದಲ್ಲೆ ಸ್ಥಾಪನೆ ಯಾಗಿರುವ ಮನೆ ದೇವರ ಕಾರ್ಯದಲ್ಲಿ ಸಂಪ್ರದಾಯಿಕತೆಗಾಗಿ ಪೊನ್ನಪ್ಪನು ಯಾವ ನಿಗವೂ ಇಲ್ಲದೆ ಮತ್ತು ಶ್ರೀ ಇಗ್ಗುತಪ್ಪನ ಭಂಡಾರ ಇಟ್ಟಿರುವ ಮನೆಯಲ್ಲಿ ಪವಿತ್ರತೆಯಲ್ಲಿಡದೆ ದೇವರು ಸಿಟ್ಟಾಗಲು ಆಸ್ಪದವಾಗಿ ಅಂದಾಜು ಕ್ರಿ.ಶ. ೧೭೩೬೦ರಲ್ಲಿ ದೊಡ್ಡ ವೀರಪ್ಪನ ಮೊಮ್ಮಗ ಚಿಕ್ಕ ವೀರಪ್ಪನಿಂದ ಇಡೀ ಪರದಂಡ ಮನೆಯವರನ್ನೇ ಕೊಲ್ಲಿಸಿ ಮನೆ ಸುಟ್ಟು ಕ್ಲುತ್ತಿ ನಾಶ ಪಡಿಸಿದ್ದರು. ತನ್ನ ಎರಡು ಮಕ್ಕಳ ಸಂಗಡ ತೆನ್ನಿರ ಮನೆಗೆ ಹೆರಿಗೆಗೆ ಹೋಗಿದ್ದ ಹೆಂಗಸೊಬ್ಬಳ ಒಳ ಗುಟ್ಟು ಪರದಂಡ ಮನೆ ಜನರನ್ನು ಪುನಹ ದೇವತಕ್ಕರಾಗಿ ದೇವಸ್ಥಾನಕ್ಕೆ ಬರಮಾಡಿಸುವ ಮತ್ತು ರಕ್ಷಿಸುವ ಬಗ್ಗೆ ದೇವತಂತ್ರವನ್ನು ಯಾರಿಗೂ ತಿಳಿಯದಿದ್ದದನ್ನು ಆಲೋಚಿಸಿದರೆ ದಿಗ್ಬ್ರಾಂತಿಯಾಗಿ ಶ್ರೀ ಇಗ್ಗುತಪ್ಪನ ಮಹಿಮೆಯು ತಿಳಿಯಲ್ಪಡುತ್ತದೆ.