ಇಂದ್ರಾ ನೂಯಿ

(ಇಂದಿರಾ ನೂಯಿ ಇಂದ ಪುನರ್ನಿರ್ದೇಶಿತ)

ಇಂದಿರಾ ನೂಯಿ ಅವರು ೨೮/೧೦/೧೯೫೫ರಂದು ತಮಿಳು ನಾಡಿನಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಇಂದಿರಾ ಕೃಷ್ಣಮೂರ್ತಿ. ಇವರು ಈಗ ನ್ಯೂ ಯಾರ್ಕಿನ ಪರ್ಚೆಸಿನಲ್ಲಿ ವಾಸಿಸುತ್ತಿದ್ದಾರೆ. ಇವರು "ಪೆಪ್ಸಿಕೊ" ಕಂಪೆನಿಯ ಪ್ರಸ್ತುತ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ.

ಇಂದ್ರಾ ನೂಯಿ
ಜನವರಿ 2010, ದಾವೋಸ್,
ಜನನ೨೮/೧೦/೧೯೫೫
ಮದ್ರಾಸ್, ತಮಿಳುನಾಡು,ಇಂಡಿಯಾ
ನಾಗರಿಕತೆಅಮೇರಿಕಾ[]
ಶಿಕ್ಷಣ ಸಂಸ್ಥೆಮದರಾಸ್ ಕ್ರಿಶ್ಚಿಯನ್ ಕಾಲೇಜು
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಕಲ್ಕತ್ತಾ
ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್
ವೃತ್ತಿ(ಗಳು)ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೆಪ್ಸಿಕೊ
ಉದ್ಯೋಗದಾತಪೆಪ್ಸಿಕೊ
ಪೂರ್ವವರ್ತಿಸ್ಟೀವೆನ್ ರೀಇನೆಮುಂಡ್
ಪ್ರಶಸ್ತಿಗಳುಪದ್ಮ ಭೂಷಣ
2007

ವಿದ್ಯಾಭ್ಯಾಸ

ಬದಲಾಯಿಸಿ

ಇವರು ಬೆಳದದ್ದು ಈಗಿನ ಚೆನ್ನೈ ಎನ್ನುವ ಮದರಾಸಿನಲ್ಲಿ. ಇವರು ತಮ್ಮ ಹೈಯರ್ ಸೆಕಂಡರಿಯನ್ನು "ಹೋಲಿ ಕ್ರಾಸ್ ಶಾಲೆ"ಯಲ್ಲಿ ಓದಿದರು. ಅದರ ನಂತರ ಇವರು ೧೯೭೪ರಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ರಲ್ಲಿ "ಮದರಾಸಿನ ಕ್ರಿಶ್ಛಿಯನ್ ವಿಶ್ವವಿದ್ಯಾಲಯ"ದಿಂದ ಪದವಿ ಪಡೆದರು. ನಂತರ ಎಂ.ಬಿ.ಎ ಪದವಿಯನ್ನು "ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಕಲ್ಕತ್ತಾ" ದಲ್ಲಿ ಮುಗಿಸಿದರು. ಇವರು ಆರಂಭದಲ್ಲಿ "ಜಾನ್ಸನ್ ಮತ್ತು ಜಾನ್ಸನ್" ಮತ್ತು ಜವಳಿ ಸಂಸ್ಥೆಯ "ಮೆಟ್ಟೂರ್ ಬರ್ದ್ಸೆಲ್" ನಲ್ಲಿ ಉತ್ಪನ್ನದ ನಿರ್ವಾಹಕರಾಗಿ ಕೆಲಸ ಮಾಡಲು ಆರಂಭಿಸಿದರು. ಇವರು 1971 ರಲ್ಲಿ "ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ"ಲ್ಲಿ ಸಾರ್ವಜನಿಕ ಮತ್ತು ಖಾಸಗಿ ನಿರ್ವಹಣೆಯಲ್ಲಿ ಪದವಿ ಪಡೆದರು. ಈ ಸಂದರ್ಭದಲ್ಲಿ ಇವರು ತನ್ನ ಬೇಸಿಗೆ ತರಬೇತಿಯನ್ನು ಬೂಜ್ ಅಲೆನ್ ಹ್ಯಾಮಿಲ್ಟನ್ ಅವರ ಕೆಳಗೆ ಯೇಲ್‍ನಲ್ಲಿ ಪೂರ್ಣಗೊಳಿಸಿದರು. 1980 ರಲ್ಲಿ ಪದವಿದಾರರಾದ ಇವರು "ಬಾಸ್ಟನ್ ಸ್ಕೂಲ್ನ"ಲ್ಲಿ ಸೇರಿ ನಂತರ "ಮೊಟೊರೊಲಾ" ಮತ್ತು "ಏಷಿಯಾ ಬ್ರೌನ್ ಬೊವೆರಿ"ಯಲ್ಲಿ ತಂತ್ರ ಸ್ಥಾನಗಳನ್ನು ವಹಿಸಿದರು.

ಪೆಪ್ಸಿಕೋದಲ್ಲಿ

ಬದಲಾಯಿಸಿ

ಇವರು ೧೯೯೪ರಲ್ಲಿ "ಪೆಪ್ಸಿಕೋ" ಸೇರಿದರು. ೨೦೦೧ರಲ್ಲಿ ಅಧ್ಯಕ್ಷ ಮತ್ತು ಸಿ.ಎಫ್.ಓ ಆಗಿ ಹೆಸರಿಸಲ್ಪಟ್ಟರು. ಇವರು ಒಂದು ದಶಕಕ್ಕೂ ಹೆಚ್ಚು ಕಾಲ ಕಂಪನಿಯ ಜಾಗತಿಕ ಕಾರ್ಯತಂತ್ರ ನಿರ್ದೇಶಿಸಿದ್ದಾರೆ.ಇವರು ಕಂಪನಿಯ ಪುನರ್ನಿಮಾಣಕ್ಕೆಗೆ ಕಾರಣವಾಗಿದ್ದಾರೆ. ೧೯೯೭ರಲ್ಲಿ ಇವರು ತನ್ನ ರೆಸ್ಟೋರೆಂಟ್ ಕಂಪನಿಯ ಪುನರ್ನಿರ್ಮಾಣವನ್ನು "ಯಮ್ ! ಬ್ರ್ಯಾಂಡ್" ಆಗಿ ಸೃಷ್ಟಿಸಿದರು. ಇವರು "ಟ್ರೋಪಿಕಾನ" ಸಂಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. "ಕ್ವೇಕರ್ ಓಟ್ಸ್" ಕಂಪನಿಯ ಜೊತೆ ವಿಲೀನದಲ್ಲಿ ಸಹ ಇವರು ಮುಖ್ಯ ಪಾತ್ರವನ್ನು ವಹಿಸಿದರು. ಇವರು ಪೆಪ್ಸಿಕೊ ಗೆ "ಗೆಟೊರೇಡ್" ಅನ್ನು ತಂದರು. ೨೦೦೬ರಲ್ಲಿ, ಇವರು ಪೆಪ್ಸಿಕೋವಿನ ಐದನೇ ಸಿ.ಈ.ಒ ಆದರು. ಇದು ಪೆಪ್ಸಿಕೋವಿನ ೪೪ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜರಿಗಿತು. ಇವರು ಯಾವಾಗಲೂ ಸರಿಯಾದ ದಾರಿಯಲ್ಲಿ ಕಂಪನಿಯನ್ನು ಮುನ್ನಡೆಸಿದ್ದಾರೆ.

"ಬಿಸಿನೆಸ್ ವೀಕ್" ಪತ್ರಿಕೆಯ ಪ್ರಕಾರ ೨೦೦೦ರಲ್ಲಿ ಇವರು ಸಿ.ಇ.ಒ ರಾಗಿ ಪ್ರಾರಂಭಿಸಿದಾಗಿನಿಂದಲೂ ಕಂಪನಿಯ ವಾರ್ಷಿಕ ಆದಾಯ ೭೨% ಹೆಚ್ಚಾಗಿದೆ, ನಿವ್ವಳ ಲಾಭ ದುಪ್ಪಟ್ಟು ಹಾಗು ಆದಾಯ $ ೫.೬ ಬಿಲಿಯನ್ ಆಗಿತ್ತು.

೨೦೧೧ರಲ್ಲಿ, "ಪೆಪ್ಸಿಕೋ" ಸಿ.ಇ.ಒ ಆಗಿದ್ದ ಇವರಿಗೆ $೧೭ ಮಿಲಿಯನ್ ಒಟ್ಟು ಪರಿಹಾರ ಗಳಿಸಿತು. ಇದರಲ್ಲಿ $೧.೬ ಮಿಲಿಯನ್ ಮೂಲ ವೇತನ,$೨.೫ ಮಿಲಿಯನ್ ನಗದು ಬೋನಸ್ ಮತ್ತು $೩ ಮಿಲಿಯನ್ ಮುಂದೂಡಲ್ಪಟ್ಟ ಪರಿಹಾರ ಆಗಿತ್ತು.

ಕೀರ್ತಿ, ಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಮನ್ನಣೆ-

ಬದಲಾಯಿಸಿ

೧. ೨೦೧೩ ಗೌರವ ಪದವಿ "ನಾರ್ತ್ ಕರೋಲಿನಾ ಸ್ಟೇಟ್ ವಿಶ್ವವಿದ್ಯಾಲಯ". ೨. ೨೦೧೧ ಕಾನೂನುಗಳ ಗೌರವಾರ್ಥ ಡಾಕ್ಟರ್ "ವೇಕ್ ಫಾರೆಸ್ಟ್ ಯೂನಿವರ್ಸಿಟಿ". ೩. ೨೦೧೧ "ವಾರ್ವಿಕ್ ಕಾನೂನುಗಳು ವಿಶ್ವವಿದ್ಯಾಲಯ"ದ ಗೌರವಾರ್ಥ ಡಾಕ್ಟರ್. ೪. ೨೦೧೧ "ಲಾ ಮಿಯಾಮಿ ವಿಶ್ವವಿದ್ಯಾಲಯ"ದ ಗೌರವ ಡಾಕ್ಟರೇಟ್. ೫. ೨೦೧೦ "ಹ್ಯೂಮನ್ ಲೆಟರ್ಸ್ ಪೆನ್ಸಿಲ್ವೇನಿಯಾ ರಾಜ್ಯ ವಿಶ್ವವಿದ್ಯಾಲಯ"ದ ಗೌರವ ಡಾಕ್ಟರೇಟ್. ೬.೨೦೦೯ ಗೌರವ ಪದವಿ "ಡ್ಯೂಕ್ ವಿಶ್ವವಿದ್ಯಾಲಯ". ೭. ೨೦೦೯ "ಹಾನರ್ ಬರ್ನಾರ್ಡ್ ಕಾಲೇಜ್ ಆಫ್ ಬರ್ನಾರ್ಡ್" ಪದಕ. ೮. ೨೦೦೮ ಗೌರವ ಪದವಿ "ನ್ಯೂಯಾರ್ಕ್ ಯೂನಿವರ್ಸಿಟಿ". ೯. ೨೦೦೭ ಭಾರತದ "ಪದ್ಮಭೂಷಣ" ಪ್ರಶಸ್ತಿ. ೧೦. ೨೦೦೪ ನಿಯಮಗಳು "ಬಾಬ್ಸ್ ನ್ ಕಾಲೇಜಿ"ನ ಗೌರವಾರ್ಥ ಡಾಕ್ಟರ್. ೧೧. ಜನವರಿ ೨೦೦೮ ರಲ್ಲಿ, ನೂಯಿ "ಯು.ಎಸ್ ಭಾರತ ಬಿಸಿನೆಸ್ ಕೌನ್ಸಿಲ್ಗೆ (USIBC)" ಅಧ್ಯಕ್ಷೆಯಾಗಿ ಆಯ್ಕೆಯಾದರು. ೧೨. "ಫೋರ್ಬ್ಸ್" ನಿಯತಕಾಲಿಕದ ಜಗತ್ತಿನ 100 ಹೆಚ್ಚಿನ ಪ್ರಭಾವಶಾಲಿ ಮಹಿಳೆಯರಲ್ಲಿ ೨೦೦೮ ಮತ್ತು ೨೦೦೯ರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಇವರಿಗೆ ನೀಡಲಾಯಿತು. ೧೩. "ಫಾರ್ಚೂನ್" ನಿಯತಕಾಲಿಕದ ೨೦೦೬,೨೦೦೭,೨೦೦೮,೨೦೦೯ಮತ್ತು ೨೦೧೦ ವ್ಯವಹಾರದಲ್ಲಿ ಹೆಚ್ಚಿನ ಪ್ರಭಾವಶಾಲಿ ಮಹಿಳೆಯರ ವಾರ್ಷಿಕ ಶ್ರೇಯಾಂಕ ಒಂದನೇ ನೂಯಿ ಹೆಸರಿಸಿದ್ದಾರೆ. ೧೪. ೨೦೦೮ ರಲ್ಲಿ, ನೂಯಿ ಅಮೇರಿಕಾದ "ನ್ಯೂಸ್ & ವರ್ಲ್ಡ್" ರಿಪೋರ್ಟ್ರಲ್ಲಿ ಅಮೆರಿಕಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟರು. ೧೫. ೨೦೦೮ ರಲ್ಲಿ ಅವರು "ಕಲೆ ಮತ್ತು ವಿಜ್ಞಾನ ಅಮೆರಿಕನ್ ಅಕಾಡೆಮಿ" ಫೆಲೋಶಿಪ್‍ಗೆ ಆಯ್ಕೆಯಾದರು.

ವೈಯಕ್ತಿಕ ಜೀವನ

ಬದಲಾಯಿಸಿ

ನೂಯಿ ರಾಜ್.ಕೆ ನೂಯಿಯನ್ನು ಮದುವೆಯಾದರು. ಅವರು ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ, ಪ್ರೀತಾ ನೂಯಿ ಹಾಗೂ ತಾರಾ ನೂಯಿ. ಕಾನ್ನೆಕ್ಟಿಕಟ್ ನ ಗ್ರೀನ್ವಿಚ್ ನಲ್ಲಿ ವಾಸಿಸುತ್ತಾರೆ. ಇವರ ಒಬ್ಬ ಮಗಳು "ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್"ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನೂಯಿ ಅವರ ಅಲ್ಮಾ ಮೇಟರ್ ನಲ್ಲಿ ಮ್ಯಾನೇಜ್ಮೆಂಟ್ ಸ್ಕೂಲ್ ಇದೆ. ಫೋರ್ಬ್ಸ್ 'ವಿಶ್ವದ ಪ್ರಬಲ ಅಮ್ಮಂದಿರು' ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದಿದ್ದಾರೆ. ಇವರು ತನ್ನ ಸಾಧನೆಗೆ ತನ್ನ ಪತಿಯೂ ಕಾರಣಾವಾಗಿದ್ದಾರೆಂದು ಹೇಳುತ್ತಾರೆ. ಇವರ ಪತಿ ಮನೆಯ ಅರ್ಧ ಕೆಲಸಗಳಲ್ಲಿ ಪಾಲುಗೊಳ್ಳುತ್ತಿದ್ದರೆಂದು ಹೇಳುತ್ತಾರೆ.

ಇವರ ಅಕ್ಕ ಚಂದ್ರಿಕಾ ಕೃಷ್ಣಮೂರ್ತಿ ಟಂಡನ್ ಪ್ರಸಿದ್ಧ ಗಾಯಕಿ. ತನ್ನ ಸಹೋದರಿಯೊಂದಿಗೆ ಬೆಳೆದ ಸಂದರ್ಭದಲ್ಲಿ ಇಂದ್ರಾ ನೂಯಿಯ ತಾಯಿ ಪ್ರತಿ ರಾತ್ರಿ ಭಾಷಣ ಮಾಡಲು ಪ್ರೋತ್ಸಾಹಿಸಿತ್ತಿದ್ದರಂತೆ. ಭಾಷಣದ ನಂತರ ವಿಜೇತರಿಗೆ ಚಾಕಲೇಟ್ ತುಂಡು ಕೊಡುತ್ತಿದ್ದರು. ಈ ಚಟುವಟಿಕೆ ತಮ್ಮ ಜೀವನದ ನಂತರ ಭಾಗಗಳಲ್ಲಿ ಹೆಚ್ಚಿನ ಎತ್ತರ ಏರಲು ಅವರಿಗೆ ಉಪಯೊಗವಾಯಿತು. ತಮ್ಮ ಪುಟ್ಟ ಹೃದಯದಲ್ಲಿ, ವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯನ್ನು ಇದು ಬೆಳೆಸಿತು. ಇಂದಿರಾ ನೂಯಿ ಮಹಾನ್ ಹಾಸ್ಯ ಪ್ರವೃತ್ತಿ ಹೊಂದಿದ್ದಾರೆ.

ಸದಸ್ಯತ್ವಗಳು ಮತ್ತು ಅಸೋಸಿಯೇಷನ್ಸ್

ಬದಲಾಯಿಸಿ

ಅವರು "ಐಸೆನ್ಹೋವರ್ ಫೆಲೋಶಿಪ್ ಟ್ರಸ್ಟಿಗಳ ಮಂಡಳಿಯ" ಸದಸ್ಯೆ, ಮತ್ತು "ಯುಎಸ್ ಭಾರತ ಬಿಸಿನೆಸ್ ಕೌನ್ಸಿಲ್" ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. "ಪರ್ಫಾರ್ಮಿಂಗ್ ಆರ್ಟ್ಸ್ ಲಿಂಕನ್ ಸೆಂಟರ್ ಫೌಂಡೇಶನ್ ಮಂಡಳಿಯ" ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂಯಿ "ವಿಶ್ವ ಜಸ್ಟೀಸ್ ಪ್ರಾಜೆಕ್ಟ್" ಗೌರವ ಸಹಕಾರ ಚೇರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂಯಿ "ಯೇಲ್ ಕಾರ್ಪೊರೇಷನ್ನ" ಉತ್ತರಾಧಿಕಾರಿಯಾಗಿದ್ದಾರೆ.

ಇಂದಿರಾ ನೂಯಿ ಅವರು ಮಾತುಗಳಲ್ಲಿ ಕೆಲವು

೧. "ನಾಯಕತ್ವ ವ್ಯಾಖ್ಯಾನಿಸಲು ಕಷ್ಟ,ಉತ್ತಮ ನಾಯಕತ್ವ ಇನ್ನೂ ಕಷ್ಟ. ನೀವು ಜನರನ್ನು ಭೂಮಿಯ ತುದಿಗಳಿಗೆ ಅನುಸರಿಸಲು ಪಡೆಯಲು ಸಾಧ್ಯವಿದ್ದರೆ,ನೀವು ಮಹಾನ್ ನಾಯಕ". ೨. "ನಾನು ಬಹಳ ಪ್ರಾಮಾಣಿಕ ಮಹಿಳೆ- ಪಾಶವೀಯ ಪ್ರಾಮಾಣಿಕತೆ. ನಾನು ಯಾವಾಗಲೂ ನನ್ನ ದೃಷ್ಟಿಯಿಂದ ಹಾಗೂ ಇತರರ ದೃಷ್ಟಿಯಿಂದಲೂ ನೋಡ್ತೀನಿ. ನಾನು ಯಾವಾಗ ದೂರ ನಡೆದು ಹೋಗ ಬೇಕೆಂದು ನಾನು ಅರಿಯುವೆನು."

ಇವರು ಬರೆದಿರುವ ಪುಸ್ತಕಗಳು-

೧. ರಿವರ್ಸ್ ಇನ್ನೋವೇಶನ್-

-> ಪ್ರಕಟಣೆ: 2012
-> ಲೇಖಕರು: ಇಂದ್ರಾ ನೂಯಿ, ಕ್ರಿಸ್ ಟ್ರಿಂಬಲ್, ವಿಜಯ್ ಗೊವಿಂದರಾಜ್.

ಉಲ್ಲೇಖ

ಬದಲಾಯಿಸಿ

೧. <"ರಿವರ್ಸ್ ಇನ್ನೋವೇಶನ್ "> ೨. <"ದಿ ನ್ಯೂ ಎಕನಾಮಿಕ್ ಟೈಮ್ಸ್" ಭೇಟಿ ಫೆಬ್ರುವರಿ ೭,೨೦೦೭>