ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆ

ಒಂದು ದೇಶದ ಶಿಕ್ಷಣ ಪದ್ಧತಿಯ ಬೆಳವಣಿಗೆ, ರೂಪಲಕ್ಷಣಗಳ ಮೇಲೆ ಆ ದೇಶದ ರಾಜಕೀಯ, ಬೌದ್ಧಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ತಮ್ಮ ಪ್ರಭಾವ ಬೀರುತ್ತವೆಯೆಂಬ ಸಾಮಾನ್ಯ ತತ್ತ್ವದ ಪ್ರತಿಪಾದನೆಗೆ ಇಂಗ್ಲೆಂಡ್ ಒಂದು ಉತ್ತಮ ಉದಾಹರಣೆ. ಇಂಗ್ಲೆಂಡಿನ ಶಿಕ್ಷಣದ ಬೆಳವಣಿಗೆಯಲ್ಲಿ ಅಲ್ಲಿಯ ವಿದ್ಯಾಸಂಸ್ಥೆಗಳು ಅನೇಕ ಬಗೆಯ ಪ್ರಯೋಗಗಳಿಗೆ ಒಳಗಾಗಿ ರೂಪುಗೊಂಡಿವೆ. ಆಯಾಕಾಲಕ್ಕೆ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು, ಸಮಯ ಸನ್ನಿವೇಶಗಳಿಗೆ ಹೊಂದಿಕೊಂಡು ಈ ವಿದ್ಯಾಸಂಸ್ಥೆಗಳು ದೇಶಕ್ಕೆ ಮಹತ್ತರ ಸೇವೆ ಮಾಡಿವೆ. ಇತ್ತೀಚಿನವರೆಗೂ ಯಾವ ಗೊತ್ತಾದ ಗುರಿಯುಳ್ಳ ನಿಯಮ, ತತ್ತ್ವಗಳಿಗನುಸಾರವಾಗಿಯೂ ಈ ಸಂಸ್ಥೆಗಳು ಬೆಳೆಯಲಿಲ್ಲ. ಅಂತೆಯೇ ಪ್ರತಿಯೊಂದು ಶಾಲೆಯೂ ತನ್ನದೇ ಆದ ವೈಶಿಷ್ಟ್ಯವನ್ನೂ ವ್ಯಕ್ತಿತ್ವವನ್ನೂ ಪರಂಪರೆಯನ್ನೂ ಪಡೆದುಕೊಂಡಿದ್ದುದರಿಂದ ವಿದ್ಯಾ ಕ್ಷೇತ್ರದಲ್ಲಿ ಪ್ರತಿ ಶಾಲೆಯೂ ಒಂದೊಂದು ಘಟಕವಾಗಿ ಉಳಿಯಿತು. ಇಂದಿಗೂ ಅನೇಕ ಶಾಲೆಗಳು ತಮ್ಮ ನೈಜ ಸ್ವರೂಪ ಲಕ್ಷಣಗಳನ್ನು ಉಳಿಸಿಕೊಂಡು ಬಂದಿವೆ.[]

ಇತಿಹಾಸ

ಬದಲಾಯಿಸಿ

ಮಧ್ಯಯುಗದಲ್ಲಿ ಯೂರೋಪಿನ ಮಿಕ್ಕ ರಾಷ್ಟ್ರಗಳಂತೆ ಇಂಗ್ಲೆಂಡಿನಲ್ಲೂ ಧಾರ್ಮಿಕ ಪ್ರಭಾವ ಹೆಚ್ಚಾಗಿತ್ತು. ಕ್ರೈಸ್ತಮತಪ್ರಚಾರಕ್ಕೆ ಬಹಳ ಆಸರೆಯೂ ತೀವ್ರವಾದ ಆಸಕ್ತಿಯೂ ಇದ್ದುವು. ಇಂಗ್ಲೆಂಡಿನ ಶಿಕ್ಷಣಪದ್ಧತಿಯ ಬೆಳವಣಿಗೆಯಲ್ಲಿ ಕ್ರೈಸ್ತಧರ್ಮದ ಪಾತ್ರ ಬಹಳ ಮುಖ್ಯವಾದದ್ದು. ಇಂದಿಗೂ ಇಂಗ್ಲೆಂಡಿನ ಶಿಕ್ಷಣದ ಪದ್ಧತಿಯಲ್ಲಿ ಮತಬೋಧನೆಗೆ ಮಹತ್ತ್ವದ ಪಾತ್ರವಿದೆ.ಚರ್ಚಿನಂತೆಯೇ ಪ್ರಬಲ ಪ್ರಭಾವ ಬೀರಿದ ಮತ್ತೊಂದು ಶಕ್ತಿಯೆಂದರೆ ಜನರಲ್ಲಿ ರಕ್ತಗತವಾದ ಪ್ರಜಾಪ್ರಭುತ್ವ ತತ್ತ್ವ; ಸಂಸದೀಯ ಪದ್ಧತಿಗಳ ವಿಶ್ವಾಸ. ಆದ್ದರಿಂದಲೇ ಪ್ರತಿಯೊಂದು ಸಂಸ್ಥೆಯೂ ಸ್ಥಳೀಯಸಂಘವೂ ವ್ಯಕ್ತಿಯೂ ಹೊಂದಿರುವ ಸ್ವಾತಂತ್ರ್ಯಕ್ಕೆ ಕೇಂದ್ರ ಸರ್ಕಾರದಿಂದಾಗಲಿ, ಇತರ ಪ್ರಬಲಶಕ್ತಿಗಳಿಂದಾಗಲಿ ಧಕ್ಕೆ ಉಂಟಾಗಿಲ್ಲ.ಇಂಗ್ಲಿಷರ ಮತ್ತೊಂದು ಗಮನೀಯ ಗುಣವೆಂದರೆ ಅವರ ಸಂಪ್ರದಾಯ ಬದ್ಧತೆ, ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುವ ಜಾಡು ಅವರದಲ್ಲ. ಕಾಲಕ್ಕನುಗುಣವಾಗಿ ಬದಲಾವಣಿಗಳ ಅಗತ್ಯ ಬಿದ್ದಾಗ, ಕೂಲಂಕಷವಾಗಿ ಯೋಚಿಸಿ, ಚರ್ಚಿಸಿ, ಎಷ್ಟರಮಟ್ಟಿನ ಬದಲಾವಣೆಗಳು ಅತ್ಯಾವಶ್ಯಕವೋ ಅಷ್ಟನ್ನು ಮಾತ್ರ ಅವರು ಜಾರಿಗೆ ತಂದುಕೊಂಡಿದ್ದಾರೆ. ಇದರಿಂದ ಅನೇಕ ಶತಮಾನಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಗಳು ಇಂದಿಗೂ ಅನೇಕ ಶಾಲೆಗಳಲ್ಲಿವೆ. ಅನೇಕ ಶಾಲಾಪದ್ಧತಿಗಳಲ್ಲಿ, ಪಠ್ಯಕ್ರಮದಲ್ಲಿ, ಬೋಧನೆಯ ರೀತಿಯಲ್ಲಿ ಬಹಳ ಕಾಲದಿಂದಲೂ ಬಂದ ರೂಢಿಗಳು ಸಂಪ್ರದಾಯಗಳು ಇಂದಿಗೂ ಇವೆ. ಆದರೆ ಸಮಯೋಚಿತ ರೀತಿಯಲ್ಲಿ ವ್ಯತ್ಯಾಸಗಳನ್ನು ಮಾಡಿಕೊಳ್ಳುವ ಜಾಣ್ಮೆಯೂ ಇಂಗ್ಲಿಷರಲ್ಲಿ ಹೇರಳವಾಗಿವೆ.

ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ

ಬದಲಾಯಿಸಿ

ಇಂಗ್ಲೆಂಡಿನಲ್ಲಿ ರೋಮನ್ ಸಾಮ್ರಾಜ್ಯ ಸ್ಥಾಪನೆಯಾದಾಗ ಗ್ರೀಕ್ ಮತ್ತು ರೋಮನ್ ವಿದ್ಯಾಭ್ಯಾಸ ಕ್ರಮವನ್ನನುಸರಿಸಿ ಅನೇಕ ಶಾಲೆಗಳು ಪ್ರಾರಂಭವಾದುವು. ಆದರೆ ಕ್ರಿ.ಶ. 5ನೆಯ ಶತಮಾನದಿಂದೀಚೆಗೆ ಕ್ರೈಸ್ತಧರ್ಮದ ಪ್ರಭಾವ ಹೆಚ್ಚಿತು. ಹಳೆಯ ಶಾಲೆಗಳ ಬದಲು ಅನೇಕ ಚರ್ಚ್‍ಶಾಲೆಗಳು ಸ್ಥಾಪಿತವಾದುವು. ಕ್ಯಾಂಟರ್‍ಬರಿ, ಯಾರ್ಕ್ ಮೊದಲಾದ ಕಡೆಗಳಲ್ಲಿ ಕ್ರೈಸ್ತ ಚರ್ಚಿನ ಮತ್ತು ಮಠದ ಶಾಲೆಗಳು ಪ್ರಚಾರಕ್ಕೆ ಬಂದುವು. ಡೇನರ ಮತ್ತು ನಾರ್ಮನ್ನರ ದಂಡಯಾತ್ರೆಗಳಿಂದ ಸ್ವಲ್ಪ ತೊಂದರೆಗೀಡಾದರೂ ಈ ಮತೀಯ ಶಾಲೆಗಳು ಬಲಿಷ್ಠವಾದುವು. ಪ್ರಾಥಮಿಕ ಶಾಲೆಗಳೇ ಅಲ್ಲದೆ ಗ್ರಾಮರ್ ಶಾಲೆಗಳೆಂದು ಪ್ರಸಿದ್ಧವಾಗಿರುವ ಸೆಕಂಡರಿ ಶಾಲೆಗಳೂ ಪ್ರಾರಂಭವಾದುವು. ಮತಬೋಧನೆಗೂ ಪ್ರಚಾರಕ್ಕೂ ಇವೂ ಒದಗಿಬಂದುವು. ಕ್ರಿ.ಶ. ಸುಮಾರು 450-1450ರ ವರೆಗೆ ಒಂದು ಸಾವಿರ ವರ್ಷಗಳಷ್ಟು ಕಾಲ ರೋಮನ್ ಕೆಥೊಲಿಕ್ ಮತವೇ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.[]

ಕ್ರಾಂತಿಕಾರಕ ಬದಲಾವಣೆ

ಬದಲಾಯಿಸಿ

1450-1760ರ ಕಾಲ ಯೂರೋಪಿನಲ್ಲಿ e್ಞÁನ ಪುನರುಜ್ಜೀವನ ಕಾಲವೆನಿಸಿಕೊಂಡಿದೆ. ಈ ಕಾಲದಲ್ಲಿ ಅನೇಕ ಮಹತ್ತರ ಘಟನೆಗಳು ನಡೆದು ಕ್ರಾಂತಿಕಾರಕ ಬದಲಾವಣೆಗಳಾದುವು. ಉದ್ಯಮಗಳ ಬೆಳವಣಿಗೆ, ಧರ್ಮ ಸುಧಾರಣೆ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಸಾಹಿತ್ಯಗಳ ಪುನರುಜ್ಜೀವನ, ಮುದ್ರಣಕಲೆಯ ಪ್ರಾರಂಭ, ವಿe್ಞÁನದ ಉದಯ-ಇವುಗಳಿಂದಾಗಿ ಇಂಗ್ಲೆಂಡಿನಲ್ಲಿ ರೋಮನ್ ಕೆಥೊಲಿಕ್ ಮತದ ಪ್ರಾಬಲ್ಯ ಕುಂದಿತು. ಹಳೆಯ ಕ್ರೈಸ್ತ ಮಠಗಳನ್ನು ಮುಚ್ಚಿ ಸುಮಾರು 8,000 ಕ್ರೈಸ್ತ ಪಾದ್ರಿಗಳನ್ನು ಓಡಿಸಲಾಯಿತು. ಇಂಗ್ಲೆಂಡಿನ ಚರ್ಚು ಪೋಪ್ ಅಧಿಕಾರದಿಂದ ಸ್ವತಂತ್ರವಾಯಿತು. (ನೋಡಿ- ಇಂಗ್ಲೆಂಡಿನ-ಚರ್ಚು)ಈ ಘಟನೆಗಳಿಂದಾಗಿ ಚರ್ಚಿನವರು ನಡೆಸುತ್ತಿದ್ದ ಶಾಲೆಗಳೆಲ್ಲವೂ ಮುಚ್ಚಿಹೋಗಿ ವಿದ್ಯಾಪ್ರಚಾರಕ್ಕೆ ಬಹಳಮಟ್ಟಿಗೆ ಆಘಾತ ಒದಗಿತು. ಪ್ರಾಂಟೆಸ್ಟಂಟ್ ಮತೀಯರು ಕಾಲಕ್ರಮೇಣ ತಮ್ಮವೇ ಆದ ಅನೇಕ ಶಾಲೆಗಳನ್ನು ಸ್ಥಾಪಿಸಿದರು. ಇದರಿಂದ ಶಿಕ್ಷಣ ಪದ್ಧತಿಯಲ್ಲಿ ಧರ್ಮಕ್ಕೆ ಇದ್ದ ಪ್ರಾಬಲ್ಯವೇನೂ ಕಡಿಮೆಯಾಗಲಿಲ್ಲ. ಕೈಗಾರಿಕಾ ಕ್ರಾಂತಿಯನ್ನು ಮೊದಲು ಕಂಡ ದೇಶವೇ ಇಂಗ್ಲೆಂಡು. (ನೋಡಿ- ಇಂಗ್ಲೆಂಡಿನ-ಆರ್ಥಿಕ-ಬೆಳವಣಿಗೆ)ಸ್ಥೂಲವಾಗಿ 1760ರಿಂದ 1870ರ ತನಕ ನಡೆದ ಈ ಕ್ರಾಂತಿಯೂ ಸಮಾಜದಲ್ಲಿ ಬಹಳ ಮುಖ್ಯವಾದ ಬದಲಾವಣೆ ಮಾಡಿತು. ಗಿರಣಿಗಳ ಸ್ಥಾಪನೆ, ವಿe್ಞÁನದ ಮುನ್ನಡೆ, ಕೂಲಿಗಳ ವಿಷಯದಲ್ಲಿ ತೋರಿಬಂದ ಮಾನವೀಯ ಭಾವನೆ, ನಿರ್ಗತಿಕರ ಕಾಯಿದೆ (1601) ಮತ್ತು ಸುಧಾರಣಾ ಕಾಯಿದೆಗಳ ಜಾರಿ-ಇವುಗಳಿಂದ ವಿದ್ಯಾಭ್ಯಾಸಕ್ಕೆ ಮನ್ನಣೆ ಬಂತು. ಕೇಂದ್ರ ಸರ್ಕಾರ ವಿದ್ಯಾಭ್ಯಾಸದಲ್ಲಿ ನೇರ ಪಾತ್ರ ವಹಿಸುವಂತೆ ಆಯಿತು.1833ರಲ್ಲಿ ಮೊಟ್ಟಮೊದಲ ಬಾರಿಗೆ ಕೇಂದ್ರ ಸರ್ಕಾರ, ಶಾಲೆಗಳ ಕಟ್ಟಡಗಳ ದುರಸ್ತಿಗೆ ಮತ್ತು ನಿರ್ಮಾಣಕ್ಕೆ 20,000 ಪೌಂಡುಗಳ ಧನಸಹಾಯ ನಿಗದಿ ಮಾಡಿತು. ಜನರ ವಿದ್ಯಾಭ್ಯಾಸಕ್ಕಾಗಿ ಸಾರ್ವಜನಿಕ ಹಣ ವಿನಿಯೋಗಿಸುವ ತತ್ತ್ವವನ್ನು ಅಂಗೀಕರಿಸಿದಂತಾಗಿ, ಶಿಕ್ಷಣದಲ್ಲಿ ಸರ್ಕಾರ ಕ್ರಿಯಾತ್ಮಕ ಪಾತ್ರ ವಹಿಸಲಾರಂಭಿಸಿತು. 1870ರಲ್ಲಿ ಮೊದಲನೆಯ ಬಾರಿಗೆ ಶಿಕ್ಷಣ ಕಾಯಿದೆಯೊಂದು ಜಾರಿಗೆ ಬಂತು. ಹಾಗೆಯೆ 1902ರಲ್ಲೂ 1918ರಲ್ಲೂ ಕಾಯಿದೆಗಳು ಬಂದು ದೇಶದ ವಿದ್ಯಾಭ್ಯಾಸ ಕ್ರಮದಲ್ಲಿ ಮಹತ್ತರ ಬದಲಾವಣೆಗಳಾದುವು. ಇತ್ತೀಚೆಗೆ ಅಂಗೀಕೃತವಾದ 1944ರ ಕಾಯಿದೆಯೇ ಇಂಗಿಷ್ ವಿದ್ಯಾಭ್ಯಾಸದ ಚರಿತ್ರೆಯಲ್ಲಿ ಅತ್ಯಂತ ಗಣನೀಯವಾದದ್ದು.

ಪ್ರಾಥಮಿಕ ಶಿಕ್ಷಣ

ಬದಲಾಯಿಸಿ

ಇಂಗ್ಲೆಂಡಿನಲ್ಲಿ ಬಹಳ ಕಾಲದಿಂದಲೂ ಪ್ರಚಲಿತವಾದ ಶಾಲೆಗಳಲ್ಲಿ ಬಹು ಸಂಖ್ಯೆಯವು ಪ್ರಾಥಮಿಕ ವರ್ಗಕ್ಕೆ ಸೇರುವಂಥವು; ಚರ್ಚಿನವರ ನೆರವಿನಿಂದ ನಡೆಯುತ್ತಿದ್ದಂತವು. ಈ ಶಾಲೆಗಳಲ್ಲಿ ಮುಖ್ಯವಾದ ಬಗೆಗಳೆಂದರೆ ; 1. ಅಜ್ಜಿಯ ಮಠ (ದಿ ಡೇಮ್ ಸ್ಕೂಲ್) : ಕೆಲವು ಅಕ್ಷರಸ್ಥ ಮಹಿಳೆಯರು ಅಲ್ಪ ಹಣಪಡೆದು ಕೆಲವು ಮಕ್ಕಳಿಗೆ ತಮ್ಮ ತಮ್ಮ ಮನೆಯಲ್ಲಿ ಬೋಧನೆ ನೀಡುತ್ತಿದ್ದರು. ಇಂಥ ಶಾಲೆಗಳಿಂದ ಉತ್ತಮ ವಿದ್ಯಾಭ್ಯಾಸ ಸಿಕ್ಕದೆ ಹೋದರೂ ಇಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸದ ಅಂಕುರವಾಗುತ್ತಿತ್ತು. 2. ಹಗಲು ಶಾಲೆ (ದಿ ಕಾಮನ್ ಡೇ ಸ್ಕೂಲ್ ಅಥವಾ ಪ್ರೈವೇಟ್ ಡೇ ಸ್ಕೂಲ್) : ಅಜ್ಜಿಯ ಮಠಗಳಂತೆಯೇ ಇದ್ದ ಇವುಗಳನ್ನು ಕ್ರೈಸ್ತ ಮಠಕ್ಕೆ ಸೇರಿದ ಕೆಲವು ಗಂಡಸರು ನಡೆಸುತ್ತಿದ್ದರು. 3. ಉಚಿತ ವಿದ್ಯಾಶಾಲೆ (ಚಾರಿಟಿ ಸ್ಕೂಲ್) : ಕ್ರೈಸ್ತಧರ್ಮದ ತಿಳಿವಳಿಕೆಯನ್ನು ಪ್ರಚಾರ ಮಾಡಲು ಒಂದು ಸಂಘ 1699ರಲ್ಲಿ ಸ್ಥಾಪಿತವಾಯಿತು. ವಿದ್ಯಾರ್ಥಿಗಳಿಗೆ ಕ್ರೈಸ್ತಧರ್ಮದ ಮುಖ್ಯ ತತ್ತ್ವಗಳನ್ನು ಬೋಧಿಸಲು ಈ ಸಂಘ ಅನೇಕ ಶಾಲೆಗಳನ್ನು ಪ್ರಾರಂಭಿಸಿತು. ಉಚಿತವಾಗಿ ಎಲ್ಲರಿಗೂ ವಿದ್ಯೆ ಕಲಿಸಬೇಕು ಎಂಬ ತತ್ತ್ವವನ್ನು ಮೊದಲು ಜಾರಿಗೆ ತಂದ ಕೀರ್ತಿ ಈ ಶಾಲೆಗೆ ಸಲ್ಲಬೇಕು. 4. ಔದ್ಯೋಗಿಕ ಶಾಲೆ (ಇಂಡಸ್ಟ್ರಿಯಲ್ ಸ್ಕೂಲ್) : ಕೈಗಾರಿಕಾ ಕ್ರಾಂತಿಯ ಆರಂಭದಿಂದಾಗಿ ಕುಶಲ ಕೆಲಸಗಾರರ ಅಗತ್ಯ ಕಂಡುಬಂತು. ಅದಕ್ಕಾಗಿ ನೂಲುವುದು, ನೇಯುವುದು, ಹೊಲಿಗೆ, ಪಾದರಕ್ಷೆಗಳ ತಯಾರಿ ಇತ್ಯಾದಿಗಳಲ್ಲಿ ತರಬೇತು ನೀಡಲು ಅಲ್ಲಲ್ಲಿ ಈ ಶಾಲೆಗಳ ಆರಂಭವಾಯಿತು. ಆದರೆ ಈ ಶಾಲೆಗಳಿಗೆ ಕಾರ್ಖಾನೆಗಳ ಮಾಲೀಕರಿಂದಾಗಲಿ, ತಂದೆ ತಾಯಿಯರಿಂದಾಗಲಿ, ಹೆಚ್ಚು ಪ್ರೋತ್ಸಾಹ ದೊರೆಯಲಿಲ್ಲ. ಮಕ್ಕಳು ಗಿರಣಿಗಳಲ್ಲಿ ಕೂಲಿ ಮಾಡುವುದೇ ಈ ಇಬ್ಬರಿಗೂ ಹೆಚ್ಚು ಅನುಕೂಲವಾಗಿತ್ತು. ಆದ್ದರಿಂದ ದೇಶದ 5-14 ವರ್ಷ ವಯಸ್ಸಿನ 1,88,794 ಮಕ್ಕಳಲ್ಲಿ ಕೇವಲ 20,336 ಮಂದಿ ಮಾತ್ರ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು. 5. ಭಾನುವಾರದ ಶಾಲೆ (ದಿ ಸಂಡೇ ಸ್ಕೂಲ್) : ಚಿಕ್ಕ ವಯಸ್ಸಿನಲ್ಲೇ ಗಿರಣಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸ್ವಲ್ಪವೂ ಅಕ್ಷರಜ್ಞಾನವಿಲ್ಲದ ಅಸಂಖ್ಯಾತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಆರಂಭಿಸಲಾಯಿತು. ಈ ಹುಡುಗರಿಗೆ ಓದಿನ ಜೊತೆಗೆ ಧಾರ್ಮಿಕ ರೀತಿನೀತಿಗಳನ್ನು ಬೋಧಿಸಲಾಗುತ್ತಿತ್ತು. 1787ರ ಹೊತ್ತಿಗೆ ಈ ಶಾಲೆಗಳಲ್ಲಿ ಸುಮಾರು 2,50,000 ವಿದ್ಯಾರ್ಥಿಗಳಿದ್ದರು. 1801ರಲ್ಲಿ ಲಂಡನ್ ಒಂದರಲ್ಲೇ 1,56,490 ವಿದ್ಯಾರ್ಥಿಗಳಿದ್ದರು. ಮಕ್ಕಳು ಈ ಶಾಲೆಗಳಿಗೆ ಹೋಗಿ ಅಭ್ಯಾಸಮಾಡಲು ಕಾರ್ಖಾನೆಗಳ ಮಾಲೀಕರೂ ಬಡ ತಂದೆತಾಯಂದಿರೂ ಪ್ರೋತ್ಸಾಹ ನೀಡುತ್ತಿದ್ದರು. ಇದರಿಂದ ಹುಡುಗರ ಕೂಲಿಗೆಲಸಕ್ಕೆ ತೊಂದರೆಯಿರಲಿಲ್ಲ ; ಅವರಿಗೂ ಅಲ್ಪಸ್ವಲ್ಪ ವಿದ್ಯೆ ಬಂದಂತೆ ಆಗುತ್ತಿತ್ತು. ಈ ಭಾನುವಾರದ ಶಾಲೆಗಳು ಎಷ್ಟೇ ಕೆಳಮಟ್ಟದ ಶಿಕ್ಷಣವನ್ನು ನೀಡುತ್ತಿದ್ದರೂ ಸಾರ್ವಜನಿಕ ವಿದ್ಯಾಭ್ಯಾಸಕ್ಕೆ ಇವುಗಳ ಸೇವೆ ಅಮೂಲ್ಯವಾದದ್ದು. ಹೆಚ್ಚಿನ ಸಂಖ್ಯೆಯ ಜನರಿಗೆ ವಿದ್ಯೆ ದೊರಕಿ ಅವರು ಉತ್ತಮ ಮಾನವರೂ ಪೌರರೂ ಆಗಲು ಇವುಗಳಿಂದ ಸಹಾಯವಾಯಿತು. ಹಾಗೂ ಈ ಶಾಲೆಗಳಲ್ಲಿ ಎಲ್ಲ ವಯಸ್ಸಿನ, ಎಲ್ಲ ವರ್ಗದವರ, ಎಲ್ಲ ಶ್ರೇಣಿಗಳ ಜನ ಕಲೆತು ಕಲಿಯುತ್ತಿದ್ದುದರಿಂದ ಜನಸಾಮಾನ್ಯರಲ್ಲಿ ಪರಸ್ಪರ ಅಭಿಮಾನ ಸಹಕಾರಗಳು ಮೂಡಲು ಸಹಾಯವಾಯಿತು. ಉಚಿತ ವಿದ್ಯಾಶಾಲೆಗಳಂತೆಯೇ ಈ ಶಾಲೆಗಳೂ ಉಚಿತ ಸಾರ್ವಜನಿಕ ಶಿಕ್ಷಣಕ್ಕೆ ಪ್ರಾಮುಖ್ಯ ನೀಡುತ್ತಿದ್ದವು. 6 ಸಂಚಾರಿ ಶಾಲೆ (ಸಕ್ರ್ಯುಲೇಟಿಂಗ್ ಸ್ಕೂಲ್): 1737ರಲ್ಲಿ ವೇಲ್ಸಿನಲ್ಲಿ ಪಾದ್ರಿ ಜೋನ್ಸ್ ಎಂಬಾತ ಬೈಬಲ್ ಬೋಧನೆ ಪ್ರಚಾರಗಳಿಗಾಗಿ ಊರೂರು ಸಂಚರಿಸುವ ಉಪಾಧ್ಯಾಯರನ್ನು ನೇಮಿಸಿದ. ಪ್ರತಿಯೊಂದು ಊರಿನಲ್ಲೂ ಹಲವು ದಿನಗಳ ಕಾಲ, ದೊಡ್ಡವರಿಗೂ ಸಣ್ಣವರಿಗೂ ಬೆಳಗ್ಗೆ-ಸಂಜೆ ಬೈಬಲ್ ಬೋಧಿಸುವುದೇ ಈ ಶಿಕ್ಷಕರ ಕೆಲಸ. 1761ರ ಹೊತ್ತಿಗೆ (ಜೋನ್ಸನ ಮರಣಕಾಲಕ್ಕೆ) ಇಂಥ ಶಾಲೆಗಳು 3,495 ಇದ್ದವು. 1777ರಲ್ಲಿ 6,465 ಆದುವು. ಆದರೆ ಭಾನುವಾರದ ಶಾಲೆಗಳು ಪ್ರವರ್ಧಮಾನಕ್ಕೆ ಬಂದಂತೆಲ್ಲ ಈ ಶಾಲೆಗಳು ನಶಿಸುತ್ತ ಬಂದು 18ನೆಯ ಶತಮಾನದ ಕೊನೆಯ ಕಾಲಕ್ಕೆ ಮಾಯವಾದುವು.[]

ಪ್ರಾಥಮಿಕ ಶಾಲೆಯ ಸಮಸ್ಯೆಗಳು

ಬದಲಾಯಿಸಿ

ಇಂಗ್ಲೆಂಡಿನಲ್ಲಿ ಈ ರೀತಿ ಅನೇಕ ಬಗೆಯ ಪ್ರಾಥಮಿಕ ಶಾಲೆಗಳಿದ್ದರೂ ವಿದ್ಯಾಭ್ಯಾಸದ ಮಟ್ಟ ಬಹುಮಟ್ಟಿಗೆ ಕೆಳದರ್ಜೆಯಲ್ಲಿತ್ತೆಂದೇ ಹೇಳಬೇಕು. ಉಪಾಧ್ಯಾಯರ ಸಂಖ್ಯೆ ಸಾಕಷ್ಟು ಇಲ್ಲದ್ದೂ ಸಮಾಜದಲ್ಲಿ ಅವರಿಗಿದ್ದ ಅತ್ಯಂತ ಶೋಚನೀಯ ಸ್ಥಾನವೂ ಅವರ ಯೋಗ್ಯತೆ ಹಾಗೂ ಸಾಮಥ್ರ್ಯಗಳು ಕಡಿಮೆ ಮಟ್ಟದಲ್ಲಿದದ್ದೂ ಈ ಸ್ಥಿತಿಗೆ ಕಾರಣ. ಆಗ ಚರ್ಚಿನ ಆಳುಗಳೂ ಗಂಟೆ ಬಾರಿಸುವವರೂ ಮುದುಕರೂ ಕುಂಟರೂ ಕೂಲಿಗಳು ತಮ್ಮ ಇತರ ಹವ್ಯಾಸಗಳೊಂದಿಗೆ ಶಿಕ್ಷಕರ ಕಾರ್ಯವನ್ನೂ ನಿರ್ವಹಿಸುತ್ತಿದ್ದರು.ಬೋಧಕರ ಅಸಮರ್ಪಕತೆಯೊಂದಿಗೆ ಪಠ್ಯಪುಸ್ತಕಗಳಲ್ಲಿ ಅಸಾಧಾರಣ ಲೋಪದೋಷಗಳಿದ್ದುವು. ಹೇಳಿಕೊಡುತ್ತಿದ್ದ ವಿಷಯಗಳೆಂದರೆ ಸ್ವಲ್ಪ ಓದು, ಬರೆಹ, ಹಾರ್ನ್ ಬುಕ್ ಎಂಬ ಅಕ್ಷರಮಾಲೆಯ ಬೋರ್ಡುಗಳು ಮತ್ತು ಕ್ಯಾಟಕಿಸಂ ಎಂಬ ಧಾರ್ಮಿಕ ಪ್ರಶ್ನೋತ್ತರ ಮಾಲೆ. 1596ರಲ್ಲಿ 17ನೆಯ ಶತಮಾನದ ಮಧ್ಯಭಾಗದಲ್ಲಿ ಬಾಲಬೋಧೆಯನ್ನು ಮೊಟ್ಟಮೊದಲು ಉಪಯೋಗಿಸಲು ಪ್ರಾರಂಭವಾಯಿತು. ಇದರಲ್ಲಿ ಕ್ರೈಸ್ತಧರ್ಮದ ಮುಖ್ಯ ತತ್ತ್ವಗಳೂ ಕೆಲವು ನೀತಿ ವಾಕ್ಯಗಳೂ ಭಜನೆಗಳೂ ಸೇರಿದ್ದವು. ಸಚಿತ್ರ ಬಾಲಬೋಧೆಗಳು ಕಾಲಕ್ರಮೇಣ ಬಂದುವು. 1596ರಲ್ಲಿ ದಿ ಇಂಗ್ಲಿಷ್ ಸ್ಕೂಲ್ ಮಾಸ್ಟರ್ ಎಂಬ ಕಾಗುಣಿತ ಪುಸ್ತಕದ ಉಪಯೋಗ ಪ್ರಾರಂಭವಾಯಿತು. ಗಣಿತ ಮತ್ತು ಬರಹಗಳು ಪ್ರಾಶಸ್ತ್ಯಕ್ಕೆ ಬಂದದ್ದೂ ನಿಧಾನವಾಗಿಯೇ. ಓದುವುದು, ಕಾಗುಣಿತ ಮತ್ತು ಧರ್ಮ ಬೋಧೆಯನ್ನು ಉಳಿದು ಮಿಕ್ಕ ಬೋಧನೆಗಳಿಗೆ ವಿಶೇಷ ಹಣ ಕೊಡಬೇಕಿತ್ತು. ಇಂಗ್ಲೆಂಡಿನ ಪ್ರಾಥಮಿಕ ಶಾಲೆಗಳಲ್ಲಿ ವಿe್ಞÁನದ ಬೋಧನೆ ಬಂದದ್ದು 19ನೆಯ ಶತಮಾನದಲ್ಲಿ.

ಮಾನಿಟೋರಿಯಲ್ ಪದ್ಧತಿ

ಬದಲಾಯಿಸಿ

19ನೆಯ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಲಿಸಲು ಮಾನಿಟೋರಿಯಲ್ ಪದ್ಧತಿಯನ್ನು ಪ್ರಾರಂಭಿಸಿದರು. ಆಂಡ್ರೂ ಬೆಲ್ ಮತ್ತು ಜೋಸೆಫ್ ಲಾಂಕಾಸ್ಟರ್ ಎಂಬುವರು (ಭಾರತದಲ್ಲಿ ಈ ಪದ್ಧತಿಯ ಸಫಲತೆಯನ್ನು ಕಂಡು ಸ್ಫೂರ್ತಿಗೊಂಡು) ಇಂಗ್ಲೆಂಡಿನ ಪ್ರಾಥಮಿಕ ಶಾಲೆಗಳಲ್ಲಿ ಮಾನಿಟರ್‍ಗಳನ್ನು ನೇಮಿಸಿ, ಒಮ್ಮೆಯೇ ಅನೇಕ ಬಾಲಕರಿಗೆ ಬೋಧಿಸಲು ಸಹಾಯವಾಗುವ ಏರ್ಪಾಡು ಮಾಡಿದರು. 1833ರಲ್ಲಿ ಸರ್ಕಾರ ಈ ಶಾಲೆಗಳ ಪರಿಸ್ಥಿತಿಯನ್ನು ವಿಚಾರಿಸಲು ಒಂದು ಸಮಿತಿ ನೇಮಿಸಿತು. ಈ ವಿಚಾರಣೆಯ ಪ್ರಕಾರ, ಪ್ರತಿ ಹತ್ತು ಶಾಲಾವಯಸ್ಕ ಮಕ್ಕಳಲ್ಲಿ ನಾಲ್ಕು ಮಕ್ಕಳು ಯಾವ ಶಾಲೆಗೂ ಹೋಗುತ್ತಿರಲಿಲ್ಲ; ಮೂವರು ಭಾನುವಾರದ ಶಾಲೆಗಳಿಗೆ ಹೋಗುತ್ತಿದ್ದರು : ಇಬ್ಬರು ಅಸಮರ್ಪಕವಾದ ಅಜ್ಜಿಮಠಕ್ಕೋ ಹಗಲು ಶಾಲೆಗೋ ಹೋಗುತ್ತಿದ್ದರು ; ಒಬ್ಬನಿಗೆ ಮಾತ್ರ ತೃಪ್ತಿಕರ ವಿದ್ಯಾಭ್ಯಾಸ ದೊರೆಯುತ್ತಿತ್ತು, ಎಂಬ ಅಂಶಗಳು ಬೆಳಕಿಗೆ ಬಂದುವು. ಶಾಲಾ ಕಟ್ಟಡಗಳ ಅಭಾವ, ದುರವಸ್ಥೆ, ಶಿಕ್ಷಕರ ಅಸಾಮಥ್ರ್ಯ ಇವುಗಳನ್ನು ಉತ್ತಮಪಡಿಸಬೇಕೆಂಬ ಕೂಗು ಎದ್ದಿತು. 1833ರಲ್ಲಿ ಸರ್ಕಾರ ಮೊಟ್ಟಮೊದಲಬಾರಿಗೆ ಶಾಲಾಕಟ್ಟಡಗಳಿಗೆ ಹಣ ವಿನಿಯೋಗಿಸುವ ತತ್ತ್ವವನ್ನು ಒಪ್ಪಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಧುಮುಕಿತು.1833-1870ರ ವರೆಗೆ ಪಾರ್ಲಿಮೆಂಟಿನಲ್ಲೂ ಹೊರಗಡೆಯೂ ವಿದ್ಯಾಭ್ಯಾಸದ ಮುನ್ನಡೆಗಾಗಿ ಶ್ರಮಿಸಿದವರಲ್ಲಿ ಡಾ. ಕೇ (1804-77) ಎಂಬುವರನ್ನು ಹೆಸರಿಸಬಹುದು. ಶಾಲೆಗಳ ಕಾರ್ಯಗಳಿಗೆ ಪ್ರೋತ್ಸಾಹ ನೀಡಲು ಅನುದಾನ ಕೊಡಬೇಕೆಂಬ ನಿಯಮವನ್ನು ಕಾಲಕ್ರಮೇಣ ಒಪ್ಪಿಕೊಂಡು, ಸರ್ಕಾರದ ನಿರೀಕ್ಷಕರು (ಇನ್ಸ್‍ಪೆಕ್ಟರುಗಳು) ನಡೆಸುವ ಪರೀಕ್ಷಾಫಲಿತಾಂಶಕ್ಕನುಗುಣವಾಗಿ ಹಣ ನೀಡಬೇಕೆಂಬ ತತ್ತ್ವ ಜಾರಿಗೆ ಬಂತು. ಫಲಿತಾಂಶಕ್ಕನುಗುಣವಾಗಿ ಧನಸಹಾಯ ನೀಡುವ ಈ ತತ್ತ್ವ ಸುಮಾರು 60-70 ವರ್ಷಗಳ ಕಾಲ ಜಾರಿಯಲ್ಲಿತ್ತು.

ಪ್ರಾಥಮಿಕ ಶಿಕ್ಷಣದ ಚರಿತ್ರೆ

ಬದಲಾಯಿಸಿ

1870ರಲ್ಲಿ ಸರ್ಕಾರ ಒಂದು ಕಾಯಿದೆ ಹೊರಡಿಸಿತು. ಇಂಗ್ಲಿಷ್ ಪ್ರಾಥಮಿಕ ಶಿಕ್ಷಣದ ಚರಿತ್ರೆಯಲ್ಲಿ ಈ ಕಾಯಿದೆ ಬಹಳ ಮುಖ್ಯ. ಇದರ ಪ್ರಕಾರ ದೇಶವನ್ನು ಹಲವು ಶಾಲಾ ಜಿಲ್ಲೆಗಳಾಗಿ ವಿಂಗಡಿಸಲಾಯಿತು. (ಲಂಡನ್ ನಗರವನ್ನು ಒಂದು ಶಾಲಾ ಜಿಲ್ಲೆಯೆಂದು ಪರಿಗಣಿಸಲಾಯಿತು). ಕೇಂದ್ರದಲ್ಲಿ ವಿದ್ಯಾಭ್ಯಾಸ ಇಲಾಖೆ ಸ್ಥಾಪಿತವಾಗಿ ಅದು ಪ್ರತಿಯೊಂದು ಜಿಲ್ಲೆಯ ಶಾಲೆಗಳ ಸ್ಥಿತಿ ಹಾಗೂ ಸ್ಥಳಾವಕಾಶದ ಬಗ್ಗೆ ತನಿಖೆ ನಡೆಸಿ ಯಾವ ರೀತಿ ಅವನ್ನು ಉತ್ತಮಪಡಿಸಬಹುದೆಂದು ತೀರ್ಮಾನ ಕೈಗೊಳ್ಳುವ ಅಧಿಕಾರ ಪಡೆಯಿತು. ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಸ್ಥಳೀಯ ಅಧಿಕಾರ ವ್ಯವಸ್ಥೆ ಸ್ಥಾಪಿತವಾಯಿತು. ಆ ಸ್ಥಳದ ಜನರಿಂದಲೇ ಆಯ್ಕೆ ಹೊಂದಿದ ಶಾಲಾಮಂಡಲಿ ತನ್ನ ಜಿಲ್ಲೆಯ ವಿದ್ಯಾಭ್ಯಾಸದ ಜವಾಬ್ದಾರಿ ಪಡೆಯಿತು. 5-12 ವಯಸ್ಸಿನ ಎಲ್ಲ ಮಕ್ಕಳೂ ಶಾಲೆಗೆ ಹಾಜರಾಗುವಂತೆ ಪ್ರೋತ್ಸಾಹಿಸಬೇಕೆಂದೂ ಶಾಲೆಗಳಲ್ಲಿ ಸ್ಥಳಾವಕಾಶದ ಬಗ್ಗೆ ಮೇಲ್ವಿಚಾರಣೆ ನಡೆಸಬೇಕೆಂದೂ ಅಸರ್ಮಪಕವಾದ ಶಾಲೆಗಳನ್ನು ಸರಿಪಡಿಸಬೇಕೆಂದೂ ಹೊಸದಾಗಿ ಶಾಲೆಗಳ ನಿರ್ಮಾಣದ ಅವಶ್ಯಕತೆ ಕಂಡುಬಂದರೆ ಮಂಡಳಿಯ ಶಾಲೆಗಳನ್ನು ಸ್ಥಾಪಿಸಬೇಕೆಂದೂ ಈ ಕಾಯಿದೆ ನಿಬಂಧನೆ ಮಾಡಿತು. ಬಡಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಸಿಕ್ಕಿತು. 1870ರ ಕಾಯಿದೆ ಶಿಕ್ಷಣಪ್ರಯೋಗದಲ್ಲಿ ದ್ವಂದ್ವ ಪದ್ಧತಿಯನ್ನು (ಡ್ಯೂಯಲ್ ಸಿಸ್ಟಮ್) ಒಪ್ಪಿಕೊಂಡಿತು. ಒಂದು ಕಡೆ ಖಾಸಗಿ ಶಾಲೆಗಳೂ ಇನ್ನೊಂದು ಕಡೆ ಮಂಡಲಿಯ ಶಾಲೆಗಳೂ ನಡೆಯುತ್ತಿದ್ದುವು. ಶಾಲಾಮಂಡಲಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಜಿಲ್ಲೆಗಳಲ್ಲಿ ಕಡ್ಡಾಯ ಶಿಕ್ಷಣಪದ್ಧತಿಯನ್ನೂ ಇತರ ಕಾರ್ಯಕ್ರಮಗಳನ್ನೂ ಜಾರಿಗೆ ತಂದುವು. ಇಷ್ಟು ಹೊತ್ತಿಗಾಗಲೇ ಜನಸಾಮಾನ್ಯರಲ್ಲಿ ಶಿಕ್ಷಣದ ಪ್ರಾಮುಖ್ಯ, ಪ್ರಯೋಜನಗಳ ಅರಿವೂ ಜಾಗೃತಿಯೂ ಉಂಟಾಗಿದ್ದುದರಿಂದ 1882ರಲ್ಲಿ ಕಡ್ಡಾಯ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲು ಕಷ್ಟವಾಗಲಿಲ್ಲ. ಈ ಕಾಯಿದೆ ಜಾರಿಗೆ ಬರುವ 12 ವರ್ಷ ಮುಂಚೆ (1870) 40%ರಷ್ಟು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದರು. ಇದು ಜಾರಿಗೆ ಬಂದ 20 ವರ್ಷದಲ್ಲಿ (1902) ಎಲ್ಲರೂ ಹೋಗುವಂತಾಯಿತು.1902ರ ಕಾಯಿದೆಯಲ್ಲಿ ಶಾಲಾಮಂಡಲಿಗಳನ್ನು ರದ್ದುಪಡಿಸಿ ಜಿಲ್ಲೆ ಮತ್ತು ನಗರಸಭೆಗಳನ್ನು ಸ್ಥಾಪಿಸಿ (ಕೌಂಟಿ ಮತ್ತು ಕೌಂಟಿಬರೋ) ಆಯಾ ಸ್ಥಳದ ಪ್ರಾಥಮಿಕ ಮತ್ತು ಸೆಕೆಂಡರಿ ವಿದ್ಯಾಭ್ಯಾಸದ ಎಲ್ಲ ಕೆಲಸ ಕಾರ್ಯಗಳನ್ನು ಅವುಗಳಿಗೆ ಒಪ್ಪಿಸಲಾಯಿತು. ಸುಮಾರು 120 ಸಂಖ್ಯೆಯಲ್ಲಿದ್ದ ಇವನ್ನು ಸ್ಥಳೀಯ ಶಿಕ್ಷಣಾಧಿಕಾರ ವ್ಯವಸ್ಥೆ (ಲೋಕಲ್ ಎಜುಕೇಷನ್ ಅಥಾರಿಟಿ) ಎಂದು ಕರೆಯಲಾಯಿತು.1902ರ ಕಾಯಿದೆ ಇಂಗ್ಲೆಂಡಿನಲ್ಲಿ ಒಂದು ರಾಷ್ಟ್ರೀಯ ಶಿಕ್ಷಣ ಧೋರಣೆಯನ್ನು ಜಾರಿಗೆ ತರಲು ಸಹಾಯಕವಾಯಿತು.

ಸೆಕಂಡರಿ ಶಿಕ್ಷಣ

ಬದಲಾಯಿಸಿ

ಇಂಗ್ಲೆಂಡಿನ ಸೆಕಂಡರಿ ಶಿಕ್ಷಣ ಚರಿತ್ರೆಯಲ್ಲಿ ಗ್ರಾಮರ್ ಸ್ಕೂಲ್ ಅಥವಾ ದತ್ತಿ ಶಾಲೆ (ಎಂಡೋಡ್ ಸ್ಕೂಲ್) ಬಹಳ ಪ್ರಾಚೀನವಾದದ್ದು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಮತ್ತು ಗ್ರಂಥಗಳ ಬೋಧನೆಯೇ ಪ್ರಧಾನವಾಗುಳ್ಳ ಈ ಶಾಲೆಗಳು ರೋಮನ್ನರ ಆಳ್ವಿಕೆಯ ಕಾಲದಲ್ಲಿಯೇ ಪ್ರಾರಂಭವಾದುವೆನ್ನಬಹುದು.ದತ್ತಿ ಶಾಲೆಗಳು ಅನೇಕ ದಾನಿಗಳಿಂದಲೂ ಸಂಸ್ಥೆಗಳಿಂದಲೂ ಪ್ರಾರಂಭವಾದುವು. ಪಾದ್ರಿಗಳಿಂದ ಅಥವಾ ಚರ್ಚಿನಿಂದ ನಡೆಸಲ್ಪಡುತ್ತಿದ್ದವೇ ಹೆಚ್ಚು. ಕೆಲವು ನಗರಗಳಲ್ಲಿ ಬಡ ಹುಡುಗರ ಉನ್ನತ ವಿದ್ಯಾಭ್ಯಾಸಕ್ಕಾಗಿ ಶ್ರೀಮಂತರಿಂದಲೊ ವ್ಯಾಪಾರಿ ವರ್ಗದವರಿಂದಲೋ ಕೆಲವು ಶಾಲೆಗಳು ಸ್ಥಾಪಿಸಲ್ಪಟ್ಟುವು. 1382ರಲ್ಲಿ ಪ್ರಾರಂಭವಾದ ವಿಂಚೆಸ್ಟರ್ ಶಾಲೆ, 1440ರಲ್ಲಿ ಆರಂಭವಾದ ಈಟನ್ ಶಾಲೆ - ಇವುಗಳು ಆಗ ಪ್ರಸಿದ್ಧವಾಗಿದ್ದ ಆಕ್ಸ್‍ಫರ್ಡ್, ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ತಯಾರುಮಾಡುವ ಉದ್ದೇಶದಿಂದ ಪ್ರಾರಂಭವಾದುವು.ಗ್ರಾಮರ್ ಸ್ಕೂಲುಗಳೆಲ್ಲವೂ ದತ್ತಿ ಶಾಲೆಗಳೆ. ಇವು ಖಾಸಗಿ ಶಾಲೆಗಳು; ಉನ್ನತ ವಿದ್ಯಾಭ್ಯಾಸಕ್ಕೆ ಮೀಸಲಾದವು. ಮೊದಮೊದಲು ಬಹುಮಟ್ಟಿಗೆ ಈ ಶಾಲೆಗಳೆಲ್ಲವೂ (ವಿಂಚೆಸ್ಟರ್ ಮತ್ತು ಈಟನ್ ಶಾಲೆಗಳನ್ನುಳಿದು) ಬಡಹುಡುಗರ, ನಿರ್ಗತಿಕರ ಶಿಕ್ಷಣಕ್ಕಾಗಿ ಪ್ರಾರಂಭವಾಗಿ, ಬರಬರುತ್ತ ಶ್ರೀಮಂತರ ಪಾಲಾಗಿ ತಮ್ಮ ಸ್ವರೂಪವನ್ನೇ ಪರಿವರ್ತಿಸಿಕೊಂಡವು. ಈ ಗ್ರಾಮರ್ ಶಾಲೆಗಳ ಪೈಕಿ ಅನೇಕ ಶಾಲೆಗಳು ಪಬ್ಲಿಕ್ ಸ್ಕೂಲುಗಳೆಂದು ಪ್ರಸಿದ್ಧಿ ಪಡೆದವು. ರಗ್ಬಿ, ಹ್ಯಾರೋ ಮುಂತಾದ ಶಾಲೆಗಳು ಈ ಪಂಗಡಕ್ಕೆ ಸೇರಿದವು. ಮೊದಲಿನಿಂದಲೂ ಪಬ್ಲಿಕ್ ಶಾಲೆಗಳ ಲಕ್ಷಣಗಳನ್ನು ಹೊಂದಿದ್ದ ಶಾಲೆಗಳೆಂದರೆ ಈಟನ್ ಮತ್ತು ವಿಂಚೆಸ್ಟರ್.ಇಲ್ಲಿ ಗ್ರಾಮರ್ ಎಂದರೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆ, ಸಾಹಿತ್ಯಗಳ ಅಧ್ಯಯನ ಎಂದರ್ಥ. ಅಂತೆಯೇ ಗ್ರಾಮರ್ ಶಾಲೆಗಳಲ್ಲಿ ಈ ಪ್ರಾಚೀನ ಭಾಷೆಗಳ ಮತ್ತು ಗ್ರಂಥಗಳ ಅಧ್ಯಯನಕ್ಕೆ ಬಹಳ ಪ್ರಾಧಾನ್ಯ. ಅದು ಲ್ಯಾಟಿನ್ ಭಾಷೆಯೇ ಸಂಸ್ಕ್ರತಿಯ ಪರಕಾಷ್ಠೆಯೆಂದು ನಂಬಿಕೆಯಿದ್ದ ಕಾಲ. ಗ್ರೀಕ್ ಶಾಲೆಗಳಲ್ಲಿ ಪ್ರಚಲಿತವಾಗಿದ್ದ ತ್ರಯ (ಟ್ರಿವಿಯಂ) ಮತ್ತು ಚತುಷ್ಟಯ (ಕ್ವಾಡ್ರಿವಿಯಂ) ಇವುಗಳಿಗೆ ಪ್ರಧಾನ ಸ್ಥಾನವಿತ್ತು. ಜ್ಞಾನ ಪುನರುಜ್ಜೀವನ ಕಾಲದಿಂದ ಇಂಗ್ಲಿಷ್ ಭಾಷೆಗೆ ಸ್ವಲ್ಪ ಗೌರವಸ್ಥಾನ ದೊರಕಿತಾದರೂ ಲ್ಯಾಟಿನ್ ಭಾಷೆಯ ಶ್ರೇಷ್ಠತೆಗೆ ಕುಂದು ಬರಲಿಲ್ಲ.

ಪಬ್ಲಿಕ್ ಮತ್ತು ಗ್ರಾಮರ್ ಸ್ಕೂಲುಗಳು

ಬದಲಾಯಿಸಿ

ಪಬ್ಲಿಕ್ ಮತ್ತು ಗ್ರಾಮರ್ ಶಾಲೆಗಳು ಲ್ಯಾಟಿನ್ ಬೋಧನೆಗೆ ಮಾತ್ರ ಪುರಸ್ಕಾರ ನೀಡಿ ಸಂಕುಚಿತ ರೀತಿಯ ಶಿಕ್ಷಣ ನೀಡುತ್ತಿದ್ದುವು. ಅನೇಕ ಶಾಲೆಗಳು ಬಹಳ ಹೀನಸ್ಥಿತಿಯಲ್ಲಿದ್ದು ಅಶಿಸ್ತಿನ ಅಗರಗಳಾಗಿದ್ದುವು. ಆದರೆ ಇಂಗ್ಲೆಂಡಿನ ಸಾರ್ವಜನಿಕ ಜೀವನದಲ್ಲಿ, ಮತೀಯ ಅಧಿಕಾರವರ್ಗದವರಲ್ಲಿ ಉನ್ನತ ಪದವಿಗಳನ್ನು ಅಲಂಕರಿಸಿ ದೇಶಕ್ಕೆ ಅಮೂಲ್ಯ ಸೇವೆ ಮಾಡಿದ ಅನೇಕ ಮಹನೀಯರನ್ನು ತಯಾರು ಮಾಡಿದ ಕೀರ್ತಿ ಈ ಶಾಲೆಗಳಿಗೆ ಸಲ್ಲಬೇಕು. ರಗ್ಬಿ ಶಾಲೆಯ ಡಾ. ಥಾಮಸ್ ಆರ್ನಲ್ಡರಂಥ (1795-1842) ಸುಪ್ರಸಿದ್ಧ ಮುಖ್ಯೋಪಾಧ್ಯಾಯರ ಸಹಾಯದಿಂದ ಗ್ರಾಮರ್ ಶಾಲೆಗಳ ಕಾರ್ಯಕ್ರಮಗಳೂ ಶಿಸ್ತೂ ಕೀರ್ತಿಯೂ ಹೆಚ್ಚಿದುವು.ಸಾಧಾರಣವಾಗಿ ಪಬ್ಲಿಕ್ ಮತ್ತು ಗ್ರಾಮರ್ ಸ್ಕೂಲುಗಳು ಬಾಲಕರಿಗೆ ಮೀಸಲಾಗಿದ್ದುವು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆಗಳೂ ಇದ್ದುವು. ಅವರಿಗೆ ಮದುವೆಯೇ ಗುರಿಯಾಗಿದ್ದುದರಿಂದ ಓದು ಬರೆಹ, ಗೃಹಕೃತ್ಯ, ಸಂಗೀತ, ಕಸೂತಿ, ಹೊಲಿಗೆ, ಫ್ರೆಂಚ್ ಇತ್ಯಾದಿ ವಿಷಯಗಳಲ್ಲಿ ಮಾತ್ರ ಬೋಧನೆ ದೊರಕುತ್ತಿತ್ತು. ಗಂಡಸಿಗೆ ಮಾತ್ರ ವಿದ್ಯಾಭ್ಯಾಸದ ಅಗತ್ಯವಿದೆ, ಹೆಂಗಸಿನ ಸ್ಥಾನ ಮನೆಯಲ್ಲಿ ಎಂಬ ಭಾವನೆಗಳ ಪ್ರಭಾವದಿಂದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯ ದೊರೆಯಲಿಲ್ಲ.ಗ್ರಾಮರ್ ಶಾಲೆಗಳು ಕಾಲಕ್ರಮೇಣ ಪ್ರಬಲವಾದುವು. ಧರ್ಮ ಸುಧಾರಣೆಯ ಅನಂತರ ನೂರೈವತ್ತು ವರ್ಷಗಳಲ್ಲಿ 558 ಹೊಸ ಶಾಲೆಗಳು ಪ್ರಾರಂಭವಾದುವು. ಪ್ರಾಟೆಸ್ಟಂಟ್ ಮತದಲ್ಲಿ ಇಂಗ್ಲಿಷ್ ಭಾಷೆಯ ಬೋಧನೆಗೆ ಪ್ರಾಶಸ್ತ್ಯ ದೊರೆಯಿತು. ವಿe್ಞÁನಕ್ಕೆ ಪಠ್ಯಕ್ರಮದಲ್ಲಿ ಗೌರವಸ್ಥಾನ ದೊರೆಯಲು ಬಹಳ ಕಾಯಬೇಕಾಯಿತು.

ಲಾರ್ಡ್ ಟ್ಯಾಮಟನ್ನನ ಅಧ್ಯಕ್ಷತೆ

ಬದಲಾಯಿಸಿ

19ನೆಯ ಶತಮಾನದ ಮಧ್ಯಭಾಗದಿಂದ ಜನರಲ್ಲೂ ಸರ್ಕಾರದಲ್ಲೂ ಶಿಕ್ಷಣದ ಬಗ್ಗೆ ಆಸಕ್ತಿ ಆಕಾಂಕ್ಷೆಗಳು ಉಂಟಾದುದರಿಂದಲೂ ಅದರ ಅಗತ್ಯದ ಅರಿವು ಉಂಟಾದ್ದರಿಂದಲೂ ಸೆಕಂಡರಿ ಶಾಲೆಗಳ ಪ್ರಗತಿಗೆ ಅನೇಕ ಪ್ರಯತ್ನಗಳು ನಡೆದುವು. ಅವುಗಳಲ್ಲಿ 1868ರಲ್ಲಿ ಲಾರ್ಡ್ ಟ್ಯಾಮಟನ್ನನ ಅಧ್ಯಕ್ಷತೆಯಲ್ಲಿ ನೇಮಿತವಾದ ಶಾಲಾ ತನಿಖಾ ಆಯೋಗ ಬಹಳ ಮುಖ್ಯವಾದ್ದು. ಈ ಆಯೋಗ 942 ಶಾಲೆಗಳನ್ನು ವೀಕ್ಷಿಸಿ ಅನೇಕ ಸಲಹೆಗಳನ್ನು ನೀಡಿತು. ಸೆಕಂಡರಿ ಶಿಕ್ಷಣದಲ್ಲಿ ಮಕ್ಕಳ ಶಕ್ತಿ ಯೋಗ್ಯತೆಗಳನ್ನನುಸರಿಸಿ ಮೂರು ಹಂತಗಳಿರಬೇಕು ; ಮೊದಲನೆಯ ಹಂತ 14ನೆಯ ವಯಸ್ಸಿನಲ್ಲೂ ಎರಡನೆಯದು 16ರಲ್ಲೂ ಮೂರನೆಯದು 18ರಲ್ಲೂ ಮುಕ್ತಾಯವಾಗಬೇಕು. ಗಣಿತ, ವಿe್ಞÁನ, ಆಧುನಿಕ ಭಾಷಾಭೋದನೆ ಹೆಚ್ಚಬೇಕು ; ಎಲ್ಲ ಸೆಕೆಂಡರಿ ವಿದ್ಯಾಭ್ಯಾಸದ ಮೇಲ್ವಿಚಾರಣೆಗೆ ಒಂದು ಕೇಂದ್ರ ಆಡಳಿತ ಸಮಿತಿಯನ್ನು ನೇಮಿಸಬೇಕು ; ಪ್ರಾದೇಶಿಕ ಆಡಳಿತ ಸಮಿತಿಗಳ ನೇಮಕವೂ ಆಗಬೇಕು ; ಶಿಕ್ಷಕರ ಮಟ್ಟವನ್ನು ಉತ್ತಮಗೊಳಿಸಲು ಶಿಕ್ಷಕರಿಗೆ ಅರ್ಹತಾಪತ್ರಗಳನ್ನು ನೀಡುವ ವ್ಯವಸ್ಥೆಯಾಗಬೇಕು; ಇಂಥ ಪತ್ರನೀಡಿಕೆಗೆ ಸೂಕ್ತ ಪರೀಕ್ಷೆಗಳನ್ನು ನಡೆಸಬೇಕು. ಇವು ಈ ಸಲಹೆಗಳ ಮುಖ್ಯಾಂಶಗಳು. ಈ ತನಿಖಾ ಆಯೋಗದ ವರದಿ ಸೆಕೆಂಡರಿ ಶಿಕ್ಷಣದ ಒಂದು ಪ್ರಮುಖ ಹೆಜ್ಜೆ. ಮುಂದೆ ಜಾರಿಗೆ ಬಂದ ಅನೇಕ ಉತ್ತಮ ಸುಧಾರಣೆಗಳಿಗೆ ಈ ಸಲಹೆಗಳು ತಳಹದಿ ಹಾಕಿದುವು. 1902ರ ಕಾಯಿದೆ, 1908ರ ಕಾಯಿದೆ ಮತ್ತು ಅತ್ಯಂತ ಮುಖ್ಯವಾದ 1944ರ ಕಾಯಿದೆಗಳು ಸೆಕೆಂಡರಿ ವಿದ್ಯಾಭ್ಯಾಸಕ್ಕೆ ಈಗಿರುವ ಸ್ವರೂಪ ತಂದು ಕೊಟ್ಟಿವೆ.

ವಿಶ್ವವಿದ್ಯಾನಿಲಯಗಳು

ಬದಲಾಯಿಸಿ

ಮಧ್ಯಯುಗದಿಂದಲೂ ಜಗತ್ಪ್ರಸಿದ್ಧವಾಗಿರುವ ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳು ಇಂಗ್ಲಿಷ್ ಶಿಕ್ಷಣದ ಮಹೋನ್ನತ ಸಂಸ್ಥೆಗಳು.

ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ

ಬದಲಾಯಿಸಿ

ಇಂಗ್ಲೆಂಡಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯ. ಕ್ರಿ.ಶ. 1133ರಲ್ಲಿ ಪ್ಯಾರಿಸ್ ವಿಶ್ವವಿದ್ಯಾನಿಲಯದಿಂದ ರಾಬರ್ಟ್ ಪುಲನ್ ಎಂಬ ಧಾರ್ಮಿಕ ಗುರು ಆಕ್ಸ್‍ಫರ್ಡಿಗೆ ಒಂದು ಉಚ್ಚ ತರಗತಿಗಳನ್ನು ಸ್ಥಾಪಿಸಿ ಬಂದು ವಿಶ್ವವಿದ್ಯಾನಿಲಯಕ್ಕೆ ತಳಪಾಯ ಹಾಕಿದ. 1163ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂತು. 1214ರ ಹೊತ್ತಿಗೆ ಆಕ್ಸ್‍ಫರ್ಡಿನ ಚಾನ್ಸೆಲರ್ (ಮಹಾಕುಲಪತಿ) ಚುನಾಯಿತರಾದರು. 1355ರಲ್ಲಿ ಆಕ್ಸಫರ್ಡ್ ಪಟ್ಟಣ ಈ ಮಹಾಕುಲಪತಿಯ ಆಡಳಿತಕ್ಕೊಳಪಟ್ಟು ವಿಶ್ವವಿದ್ಯಾನಿಲಯ ನಗರವಾಗಿ ಪರಿವರ್ತನೆಗೊಂಡಿತು.

ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ

ಬದಲಾಯಿಸಿ

ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲದಲ್ಲಿ ಅನೇಕ ಕಾಲೇಜುಗಳಿವೆ. 1261-66ರಲ್ಲಿ ಸ್ಥಾಪಿಸಲ್ಪಟ್ಟ ಬ್ಯಾಲಿಯೊಲ್ ಕಾಲೇಜು ಮೊದಲನೆಯದು. ಅನಂತರ 1280ರಲ್ಲಿ ಯೂನಿವರ್ಸಿಟಿ, 1314-16ರಲ್ಲಿ ಎಕ್ಸ್‍ಟರ್, 1341ರಲ್ಲಿ ಕ್ವೀನ್ಸ್, 1379ರಲ್ಲಿ ವಿಂಚೆಸ್ಟರ್ ಸೇಂಟ್ ಮೇರಿ (ಈಗ ಇದು ನ್ಯೂ ಕಾಲೇಜ್ ಎಂದು ಪ್ರಸಿದ್ಧವಾಗಿದೆ), 1438ರಲ್ಲಿ ಆಲ್ ಸೋಲ್ಸ್, 1532ರಲ್ಲಿ ಕ್ರೈಸ್ಟ್ ಚರ್ಚ್, 1554-55ರಲ್ಲಿ ಟ್ರಿನಿಟಿ, 1571ರಲ್ಲಿ ಜೀಸಸ್, 1624ರಲ್ಲಿ ಪ್ರೆಂಬ್ರೋಕ್, 1714ರಲ್ಲಿ ವೋರ್ಸೆಸ್ಟರ್, 1874ರಲ್ಲಿ ಹರ್ಟ್‍ಫರ್ಡ್-ಈ ಕಾಲೇಜುಗಳು ಆಕ್ಸ್‍ಫರ್ಡಿನ ಕಾಲೇಜುಗಳಲ್ಲಿ ಮುಖ್ಯವಾದುವು. ಆಕ್ಸ್‍ಫರ್ಡಿನಲ್ಲಿ 13ನೆಯ ಶತಮಾನದ ಹೊತ್ತಿಗೆ 1,500 ವಿದ್ಯಾರ್ಥಿಗಳಿದ್ದರೆಂದು ಹೇಳಲಾಗಿದೆ. ಪ್ಯಾರಿಸ್ ವಿಶ್ವವಿದ್ಯಾನಿಲಯವನ್ನು ಬಿಟ್ಟರೆ ಉತ್ತರ ಯೂರೋಪಿನಲ್ಲೆಲ್ಲ ಅತ್ಯಂತ ಪ್ರಮುಖ ಕೇಂದ್ರವೆಂದು ಆಕ್ಸ್‍ಫರ್ಡ್ ಹೆಸರಾಯಿತು. ಅದು ರೋಜರ್ ಬೇಕನ್, ಎಡ್ಮಂಡ್ ರಿಚ್ ಮುಂತಾದ ಸುಪ್ರಸಿದ್ಧ ಶಿಕ್ಷಕರನ್ನು ಹೊಂದಿತ್ತು. 14ನೆಯ ಶತಮಾನದ ಹೊತ್ತಿಗೆ 3-4 ಸಾವಿರ ವಿದ್ಯಾರ್ಥಿಗಳು ಇದ್ದಿರಬೇಕು (ಕೆಲವರು 30,000 ವಿದ್ಯಾರ್ಥಿಗಳಿದ್ದರೆಂದು ಹೇಳುವ ಮಾತು ಉತ್ಪ್ರೇಕ್ಷೆಯೆಂದು ಪರಿಗಣಿಸಲಾಗಿದೆ). ಆಕ್ಸ್ ಫರ್ಡಿನಿಂದ ಹೊರಬಿದ್ದ ಅನೇಕ ವಿದ್ವಾಂಸರು ಪ್ರಸಿದ್ಧ ಪುರುಷರಾಗಿ ಬೆಳಗಿದರು.e್ಞÁನಪುನರುಜ್ಜೀವನ ಮತ್ತು ಧರ್ಮಸುಧಾರಣೆಗಳ ಪ್ರಭಾವ ಆಕ್ಸ್‍ಫರ್ಡಿನ ಮೇಲೆ ಬೀಳದೆ ಇರಲಿಲ್ಲ. ಹೊಸ ತತ್ತ್ವಗಳಿಗೂ ಹಳೆಯ ಸಂಪ್ರದಾಯಗಳಿಗೂ ನಿರಂತರ ವಾಗ್ವಾದ ನಡೆಯಿತು. ಕೆಲವು ಆಂತರಿಕ ಬದಲಾವಣೆಗಳೂ ಆದುವು. 18ನೆಯ ಶತಮಾನದಲ್ಲಿ ಇಡೀ ಯೂರೋಪಿನಲ್ಲಿ ವಿದ್ಯಾಮಟ್ಟ ಇಳಿದಿತ್ತು. ಆಕ್ಸ್‍ಫರ್ಡಿನಲ್ಲೂ ಇದು ಕ್ಷೀಣದೆಶೆಯಲ್ಲಿತ್ತು. ವಿದ್ಯೆ. ಧರ್ಮ, ನೀತಿ ಇತ್ಯಾದಿ ಸುಂದರ ಮತ್ತು ಉತ್ಕøಷ್ಟ ಮೌಲ್ಯಗಳ ಸಂರಕ್ಷಣೆ ಮತ್ತು ವಿಕಾಸಕ್ಕಾಗಿ ಶ್ರದ್ಧಾವಂತ ದಾನಿಗಳಿಂದ ಆರಂಭವಾದ ಈ ಕಾಲೇಜುಗಳು ಅe್ಞÁನ, ಅಶ್ರದ್ಧೆ, ಲಂಚಕೋರತನ, ವಿಷಯಲಂಪಟತನ ಇವುಗಳ ತೌರಾಗಿವೆಯೆಂದು ಆಕ್ಸ್‍ಫರ್ಡಿನ ವಿಸೆಸಿಮಸ್ ನಾಕ್ಸ್ ಎಂಬ ಹಳೆಯ ವಿದ್ಯಾರ್ಥಿ ಕಟುವಾಗಿ ಟೀಕಿಸಿದ್ದಾನೆ. ಶಿಕ್ಷಕರಿಗೆ ಕೊಡುತ್ತಿದ್ದ ಅಲ್ಪ ವೇತನಗಳೂ ಅವರು ಕ್ರೈಸ್ತಪಾದ್ರಿಗಳಂತೆ ಅವಿವಾಹಿತರಾಗಿರಬೇಕೆಂಬ ನಿಯಮವೂ ವಿದ್ಯಾರ್ಥಿಗಳಲ್ಲಿದ್ದ ನಿರ್ಲಕ್ಷ್ಯವೂ ಪರೀಕ್ಷಾಪದ್ಧತಿಯಲ್ಲಿದ್ದ ಲೋಪದೋಷಗಳೂ ಈ ಪರಿಸ್ಥಿತಿಗೆ ಕಾರಣವಾದವೆನ್ನಬಹುದು. ಆದರೆ ನಿಜವಾದ ಸತ್ತ್ವಪೂರಿತವಾದ ಆಕ್ಸ್‍ಫರ್ಡ್ 19ನೆಯ ಶತಮಾನದಲ್ಲಿ ಚೇತರಿಸಿಕೊಂಡು ತನ್ನನ್ನು ತಾನೇ ಸುಧಾರಿಸಿಕೊಂಡು, ಶಿಕ್ಷಣಪ್ರಪಂಚದಲ್ಲಿ ತನಗಿದ್ದ ಅಗ್ರಸ್ಥಾನವನ್ನು ಪುನ: ಪಡೆಯಿತು. ಅದು ತನ್ನ ಪರೀಕ್ಷಾ ಪದ್ಧತಿಯನ್ನು ಉತ್ತಮಗೊಳಿಸಿಕೊಂಡಿತು ; ಉತ್ತಮ ಶಿಕ್ಷಕರನ್ನು ನೇಮಿಸಿಕೊಂಡಿತು; ವಿದ್ಯಾರ್ಥಿವೇತನ, ಫೆಲೋಷಿಪ್ಗಳನ್ನು; ಯೋಗ್ಯತೆಗನುಸರವಾಗಿ ಹಂಚುವ ಕ್ರಮ ಕೈಗೊಂಡಿತು ; ಉತ್ತಮ ವಿದ್ಯಾರ್ಥಿಗಳನ್ನು ಪಡೆಯುವುದಕ್ಕಾಗಿ ಆನರ್ಸ ತರಗತಿಗಳನ್ನು ತೆರೆಯಿತು. ಹೀಗೆ ಅದು ತನ್ನ ಶಿಕ್ಷಣಮಟ್ಟವನ್ನೇರಿಸಿಕೊಂಡಿತು. ಜೊತೆಗೆ 1854ರ ವಿಶ್ವವಿದ್ಯಾನಿಲಯ ಸುಧಾರಣಾ ಕಾಯಿದೆ, 1881ರ ವಿಶ್ವವಿದ್ಯಾನಿಲಯ ಆಯೋಗ ಇವುಗಳ ಸಲಹೆಗಳ ಪ್ರಕಾರ ಅದರ ಆಡಳಿತದಲ್ಲೂ ಶಿಕ್ಷಣ ವ್ಯವಸ್ಥೆಯಲ್ಲೂ ಉತ್ತಮ ಬದಲಾವಣೆಗಳು ಆದುವು. ಆಕ್ಸ್‍ಫರ್ಡ್ ಮತ್ತೆ ಉನ್ನತಿ ಪಡೆಯಿತು.

ಕೇಂಬ್ರಿಜ್ ವಿಶ್ವವಿದ್ಯಾನಿಲಯ

ಬದಲಾಯಿಸಿ

ಇಂಗ್ಲೆಂಡಿನ ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಇನ್ನೊಂದು. ಇದರ ಉಗಮ ಹೇಗಾಯಿತೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ಈ ವಿಶ್ವವಿದ್ಯಾನಿಲಯ ಇದರ ಕಾಲೇಜುಗಳಿಗಿಂತ ಹಳೆಯದೆಂಬುದಂತೂ ನಿಜ. 13ನೆಯ ಶತಮಾನದ ಆರಂಭಕಾಲದಿಂದ ಇಲ್ಲಿ ವಿದ್ಯಾರ್ಥಿಗಳಿದ್ದ ದಾಖಲೆ ಸಿಗುತ್ತದೆ. ಕ್ರಿ.ಶ. 1209ರಲ್ಲಿ ಆಕ್ಸ್‍ಫರ್ಡಿನಿಂದ ಕೆಲವು ವಿದ್ವಾಂಸರು ಇಲ್ಲಿಗೆ ಬಂದರೆಂದೂ ಅನಂತರ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಆರಂಭವಾಗಿರಬೇಕೆಂದೂ ಖಚಿತವಾಗಿದೆ. ಆಕ್ಸ್‍ಫರ್ಡಿನಂತೆಯೇ ಕೇಂಬ್ರಿಜ್, ಅನೇಕ ಕಾಲೇಜುಗಳನ್ನು ಹೊಂದಿದೆ. 1284ರಲ್ಲಿ ಸೇಂಟ್ ಪೀಟರ್ಸ್, 1326ರಲ್ಲಿ ಕ್ಲೇರ್, 1347ರಲ್ಲಿ ಪೆಂಬ್ರೋಕ್, 1350ರಲ್ಲಿ ಟ್ರಿನಿಟಿಹಾಲ್, 1352ರಲ್ಲಿ ಕಾರ್ಪಸ್ ಕ್ರಿಸ್ಟಿ, 1441ರಲ್ಲಿ ಕಿಂಗ್ಸ್, 1448ರಲ್ಲಿ ಕ್ವೀನ್ಸ್, 1496ರಲ್ಲಿ ಜೀಸಸ್, 1511ರಲ್ಲಿ ಸೆಂಟ್ ಜಾನ್, 1546ರಲ್ಲಿ ಟ್ರಿನಿಟಿ ಕಾಲೇಜುಗಳು ಸ್ಥಾಪಿತವಾದುವು.ಆಕ್ಸ್‍ಫರ್ಡಿನಲ್ಲಿರುವಂತೆಯೇ ಕೇಂಬ್ರಿಜ್‍ನಲ್ಲೂ ದೇವತಾಶಾಸ್ತ್ರ, ಕಾನೂನು, ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯಗಳ ಅಧ್ಯಯನ-ಇವು ಮುಖ್ಯ ಬೋಧನ ವಿಷಯಗಳಾಗಿದ್ದುವು. e್ಞÁನಪುನರುಜ್ಜೀವನ ಕಾಲದಿಂದೀಚೆಗೆ ತರ್ಕ, ವಾಕ್ಪ್ರತಿಭೆ, ಗಣಿತ, ಖಗೋಳಶಾಸ್ತ್ರ, ಸಂಗೀತಗಳಲ್ಲಿಯೂ ಪಾಠಪ್ರವಚನಗಳು ಪ್ರಾರಂಭವಾದುವು. ಆದರೆ ಧರ್ಮಸುಧಾರಣೆಯ ಅನಂತರ ಧರ್ಮಶುದ್ಧಿವಾದಿಗಳ (ಪ್ಯೂರಿಟನ್ಸ್) ಪ್ರಭಾವದಿಂದ ಧರ್ಮಬೋಧನೆ ಪುನರ್ ಪ್ರತಿಷ್ಠಿತವಾಯಿತು. 1511ರಲ್ಲಿ ಇರಾಸ್ ಮಸ್ ಕೇಂಬ್ರಿಜ್‍ನ ಪ್ರೊಫೆಸರ್ ಆದ. 1535ರಲ್ಲಿ ಥಾಮಸ್ ಕ್ರಾಮ್‍ವೆಲ್ ಮಹಾಕುಲಪತಿಯಾದದ್ದರಿಂದ ಈ ಬಗೆಯ ಧರ್ಮಶುದ್ಧಿಭಾವನೆಯ ಬೋಧನೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು. ಮುಂದೆ ವಿe್ಞÁನದ ಮತ್ತು ಮಾನವಿಕ ಶಾಸ್ತ್ರದ ಬೆಂಬಲಿಗರು ಅವಿಚ್ಛಿನ್ನ ಹೋರಾಟ ನಡೆಸಿ ಲೌಕಿಕ e್ಞÁನಬೋಧನೆ ಪ್ರಧಾನವಾಗುವಂತೆ ಮಾಡಿದರು. ಅನಂತರ ಸರ್ (ನೋಡಿ- ನ್ಯೂಟನ್,-ಐಸಾಕ್), (ನೋಡಿ- ಕೇಲಿ,-ಆರ್ಥರ್), (ನೋಡಿ- ಆಡಮ್ಸ್-ಜಾನ್) ಮೊದಲಾದವರೂ ಇತ್ತೀಚೆಗೆ ಸರ್, (ನೋಡಿ- ತಾಮ್ಸನ್,-ಜೋಸೆಫ್) ಮೊದಲಾದ ಪ್ರಸಿದ್ಧ ಶಿಕ್ಷಕರೂ ಕೇಂಬ್ರಿಜ್‍ನಲ್ಲಿ ಬೋಧಕರಾದರು (ಇವರನ್ನು ಕುರಿತ ಆಯಾ ಶೀರ್ಷಿಕೆಗಳನ್ನು ನೋಡಿ).ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಟ್ರೈಪಾಸ್ ಎಂಬ ಉನ್ನತ ಶ್ರೇಣಿಯ ಪರೀಕ್ಷಾಪದ್ಧತಿಯನ್ನು ವಿವಿಧ ವಿಷಯಗಳಲ್ಲಿ ಸ್ಥಾಪಿಸಿ ಶಿಕ್ಷಣದ ಮಟ್ಟವನ್ನು ಉತ್ತಮಗೊಳಿಸಲಾಯಿತು. ಗಣಿತಶಾಸ್ತ್ರ ಬೋಧನೆಯಲ್ಲಿ ಕೇಂಬ್ರಿಜ್ ಜಗದ್ವಿಖ್ಯಾತವಾಯಿತು. ಗಣಿತೀಯ ಭೌತಶಾಸ್ತ್ರ (ಮ್ಯಾಥಮ್ಯಾಟಿಕಲ್ ಫಿಸಿಕ್ಸ್), ನ್ಯಾಯಶಾಸ್ತ್ರ, ಇತಿಹಾಸ, ನೀತಿಶಾಸ್ತ್ರ, ತತ್ತ್ವಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿಯೂ ಟ್ರೈಪಾಸ್ ಪರೀಕ್ಷೆಗಳನ್ನು ಏರ್ಪಡಿಸಲಾಯಿತು. 1850ರ ಹೊತ್ತಿಗೆ, ಕೇಂಬ್ರಿಜ್‍ನಲ್ಲಿ ಪ್ರಾಣಿಶಾಸ್ತ್ರ, ಶಸ್ತ್ರ ಚಿಕಿತ್ಸೆ, ಶರೀರಕ್ರಿಯಾಶಾಸ್ತ್ರ (ಫಿಸಿಯಾಲಜಿ), ವ್ಯವಸಾಯ, ಜೀವಶಾಸ್ತ್ರ ಮೊದಲಾದವುಗಳಲ್ಲಿಯೂ ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶ ದೊರೆಯಿತು.ಈಚೀಚೆಗೆ ಪ್ರಾರಂಭವಾದ ಹೊಸ ಹೊಸ ವಿಶ್ವವಿದ್ಯಾನಿಲಯಗಳ ಪ್ರಭಾವದಿಂದ ಆಕ್ಸ್‍ಫರ್ಡ್ ಕೇಂಬ್ರಿಜ್‍ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಬೋಧನೆ ಮತ್ತು ಸಂಶೋಧನೆಯಲ್ಲಿ ಇಂದಿಗೂ ಆಕ್ಸ್‍ಫರ್ಡ್, ಕೇಂಬ್ರಿಜ್‍ಗಳು ಶ್ರೇಷ್ಠ e್ಞÁನಪೀಠಗಳಾಗಿ ಉಳಿದಿವೆ.

ಲಂಡನ್ ವಿಶ್ವವಿದ್ಯಾನಿಲಯ

ಬದಲಾಯಿಸಿ

ಅನೇಕ ಶತಮಾನಗಳ ಕಾಲ ಇಂಗ್ಲೆಂಡಿನಲ್ಲಿ ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ಎರಡೇ ವಿಶ್ವವಿದ್ಯಾನಿಲಯಗಳಿದ್ದವು. ಮೂರನೆಯದಾದ ಲಂಡನ್ ವಿಶ್ವವಿದ್ಯಾನಿಲಯ 1836ರಲ್ಲಿ ಸ್ಥಾಪಿತವಾಯಿತು. ಇದು ಜನ್ಮತಳೆಯುವುದಕ್ಕೆ ಮೊದಲಿನಿಂದಲೂ ಲಂಡನ್ ನಗರದಲ್ಲಿ ಮತ್ತು ಸುತ್ತಮುತ್ತ ಅನೇಕ ಪ್ರಸಿದ್ಧ ಕಾಲೇಜುಗಳು ಇದ್ದುವು. ಅವುಗಳೆಲ್ಲವನ್ನೂ ಕೂಡಿಸಿ ಈ ವಿಶ್ವವಿದ್ಯಾನಿಲಯದ ಸ್ಥಾಪನೆಯಾಯಿತು.ಲಂಡನ್ ವಿಶ್ವವಿದ್ಯಾನಿಲಯಕ್ಕೂ ಆಕ್ಸ್‍ಫರ್ಡ್ ಕೇಂಬ್ರಿಜ್‍ಗಳಿಗೂ ಒಂದು ಮುಖ್ಯ ವ್ಯತ್ಯಾಸವಿದೆ. ಆಕ್ಸ್‍ಫರ್ಡ್ ಕೇಂಬ್ರಿಜ್‍ಗಳಲ್ಲಿ ವಿವಿಧ ಕಾಲೇಜುಗಳಿದ್ದರೂ ಅವೆಲ್ಲವೂ ಒಂದೇ ಆಡಳಿತ ಸ್ವಾಮ್ಯಕ್ಕೆ ಒಳಪಟ್ಟವು. ಅವುಗಳನ್ನು ಬೋಧಿಸುವ ವಿಶ್ವವಿದ್ಯಾನಿಲಯಗಳು (ಟೀಚಿಂಗ್ ಯೂನಿವರ್ಸಿಟಿ) ಎನ್ನಬಹುದು. ಆದರೆ ಲಂಡನ್ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಕಾಲೇಜುಗಳು ತಮ್ಮವೇ ಆಡಳಿತಗಳನ್ನು ಪಡೆದಿದ್ದುವು. ಲಂಡನ್ ವಿಶ್ವವಿದ್ಯಾನಿಲಯಕ್ಕೆ ಪಠ್ಯಕ್ರಮವನ್ನೂ ಪರೀಕ್ಷೆಗಳನ್ನೂ ಮನ್ನಣೆ ಮಾಡುವ ಮತ್ತು ಪದವೀ ಪ್ರಧಾನ ಮಾಡುವ ಅಧಿಕಾರಗಳು ಮಾತ್ರ ಇದ್ದುವು. ಲಂಡನ್ ವಿಶ್ವವಿದ್ಯಾನಿಲಯದ ಮಾದರಿಯಲ್ಲೇ ಭಾರತದಲ್ಲಿ 1857ರಲ್ಲಿ ಬ್ರಿಟಿಷರಿಂದ (ನೋಡಿ- ಕಲ್ಕತ್ತ), (ನೋಡಿ- ಮದ್ರಾಸ್) ವಿಶ್ವವಿದ್ಯಾನಿಲಯಗಳು ಸ್ಥಾಪಿತವಾದುವು (ಈ ವಿಶ್ವವಿದ್ಯಾನಿಲಯಗಳನ್ನು ಕುರಿತ ಆಯಾ ಲೇಖನಗಳನ್ನು ನೋಡಿ).(ನೋಡಿ- ಮದ್ರಾಸ್-ವಿಶ್ವವಿದ್ಯಾಲಯ)(ನೋಡಿ- ಕಲ್ಕತ್ತ-ವಿಶ್ವವಿದ್ಯಾಲಯ)ಲಂಡನ್ ವಿಶ್ವವಿದ್ಯಾನಿಲಯದ ಬಗ್ಗೆ ಮೊದಮೊದಲು ಅಷ್ಟಾಗಿ ತೃಪ್ತಿ ಇರಲಿಲ್ಲ. ಅನೇಕ ಆಯೋಗಗಳ ಸಲಹೆಯಂತೆ ಬೋಧನೆಯ ಕಾರ್ಯವನ್ನೂ ಮಾಡುವಂತೆ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹಲವು ಕಾಲೇಜುಗಳನ್ನು ಸ್ಥಾಪಿಸಲಾಯಿತು. ಈಗ ಲಂಡನ್ ಬೋಧಿಸುವ ಮತ್ತು ನಿಬದ್ಧಿಸುವ (ಅಫಿಲಿಯೇಟಿಂಗ್) ಸಂಸ್ಥೆಯಾಗಿ ಉಳಿದಿದೆ.ಇತ್ತೀಚೆಗೆ ಇಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಏರಿದೆ. ದೊಡ್ಡ ನಗರಗಳಾದ ಡರ್‍ಹ್ಯಾಂ, ಮ್ಯಾಂಚೆಸ್ಟರ್, ಲೀಡ್ಸ್, ಲಿವರ್ಪೂಲ್, ಬ್ರಿಸ್ಟಲ್‍ಗಳಲ್ಲಿ ಪೌರ ವಿಶ್ವವಿದ್ಯಾನಿಲಯಗಳೂ ರೀಡಿಂಗ್, ನಾಟಿಂಗ್‍ಹ್ಯಾಂ, ಸೌತಾಂಪ್ಟನ್, ಸಸಿಕ್ಸ್ ಮೊದಲಾದ ನೂತನ ವಿಶ್ವವಿದ್ಯಾನಿಲಯಗಳೂ ಸ್ಥಾಪಿತವಾಗಿವೆ. ವಿಶ್ವವಿದ್ಯಾನಿಲಯ ಶಿಕ್ಷಣದ ಜೊತೆಗೆ ಸೆಕೆಂಡರಿ ವಿದ್ಯಾಭ್ಯಾಸದ ಅನೇಕ ಕಾಲೇಜುಗಳಿವೆ. (ಮುಂದೆ ಅವುಗಳ ಬಗ್ಗೆ ವಿವರಣೆ ಕೊಡಲಾಗಿದೆ).

ಶಿಕ್ಷಣ ವ್ಯವಸ್ಥೆಯ ವಿವರಗಳು

ಬದಲಾಯಿಸಿ

1944ರ ಶಿಕ್ಷಣ ಕಾಯಿದೆಯಲ್ಲಿ ಪ್ರತಿಯೊಂದು ಮಗುವಿಗೂ ಅದರ ಶಕ್ತಿಸಾಮಥ್ರ್ಯಗಳಿಗೆ ತಕ್ಕ, ಅದರ ಸರ್ವತೋಮುಖ (ದೈಹಿಕ, ಮಾನಸಿಕ, ನೈತಿಕ, ಬೌದ್ಧಿಕ, ಮತ್ತು ಪಾರಮಾರ್ಥಿಕ) ಬೆಳವಣಿಗೆಗೆ ಸೂಕ್ತವಾದ ಶಿಕ್ಷಣವನ್ನು ಅದರ ಮಾತಾಪಿತರ ಸ್ಥಾನಮಾನವನ್ನು ಲೆಕ್ಕಿಸದೆ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂಬ ತತ್ತ್ವ ಪ್ರತಿಪಾದಿತವಾಯಿತು. ಇಂಗ್ಲೆಂಡಿನ ಶಿಕ್ಷಣ ಚರಿತ್ರೆಯಲ್ಲಿ 1944ರ ಶಿಕ್ಷಣ ಕಾಯಿದೆಯ (ಬಟ್ಲರ್ ಆಕ್ಟ್) ಸ್ಥಾನ ಅತ್ಯಂತ ಹಿರಿದು. ಶಿಕ್ಷಣ ವ್ಯವಸ್ಥೆ ಈ ಕಾಯಿದೆಗನುಸಾರವಾಗಿ ನಡೆಯುತ್ತಿದೆ. 1944ರ ಕಾಯಿದೆಯ ಮುಖ್ಯ ಅಂಶಗಳಿವು : 1 ಶಿಕ್ಷಣಕ್ಕಾಗಿ ಕೇಂದ್ರದಲ್ಲಿ ಒಬ್ಬ ಮಂತ್ರಿಯ ನೇಮಕ. ನಾಡಿನ ಶೈಕ್ಷಣಿಕ ಧೋರಣೆಯನ್ನು ನಿರೂಪಿಸುವ ಹಕ್ಕು ಈತನ ವಶ. 2 ಹದಿನಾಲ್ಕರಿಂದ ಹದಿನೈದಕ್ಕೆ ಕಡ್ಡಾಯ ಶಿಕ್ಷಣ ವಯಸ್ಸಿನ ಮಿತಿಯ ಏರಿಕೆ (ಇದು ಜಾರಿಗೆ ಬಂದದ್ದು 1947ರಿಂದ) ; 1970-71ರ ಹೊತ್ತಿಗೆ 16ಕ್ಕೆ ಇದರ ಏರಿಕೆ: 3 ಶಿಕ್ಷಣ ಪದ್ಧತಿಯನ್ನು ಪ್ರೈಮರಿ (5-11 ವಯಸ್ಸಿನ ವರೆಗೆ) ; ಸೆಕೆಂಡರಿ (12-18ರ ವರೆಗೆ) ಮತ್ತು ಮುಂದುವರಿದ (ಫರ್ದರ್) ಶಿಕ್ಷಣ ಎಂಬುದಾಗಿ ವಿಂಗಡಣ; 4 ಜಿಲ್ಲೆಗಳಲ್ಲಿ (ಕೌಂಟಿ) ಹಾಗೂ ದೊಡ್ಡ ನಗರಗಳಲ್ಲಿ (ಕೌಂಟಿಬರೊ) ಸ್ಥಳೀಯ ಶಿಕ್ಷಣ ಅಧಿಕಾರ ಮಂಡಲಿಗಳ ಸ್ಥಾಪನೆ ; 5 ಶಾಲೆಗಳಲ್ಲಿ ಪ್ರತಿದಿನವೂ ಕಡ್ಡಾಯವಾಗಿ ಪ್ರಾರ್ಥನೆ ಮತ್ತು ಧರ್ಮಬೋಧೆ.

ಕೇಂದ್ರ ಶಿಕ್ಷಣಮಂತ್ರಿಯ ಅಧಿಕಾರ

ಬದಲಾಯಿಸಿ

ಶಿಕ್ಷಣ ವಿಷಯದಲ್ಲಿ ಶಿಕ್ಷಣಮಂತ್ರಿಗೆ ಪರಮಾಧಿಕಾರ. ಆತನೇ ಶಿಕ್ಷಣ ಮತ್ತು ವಿe್ಞÁನ ಇಲಾಖೆಯ ಮುಖ್ಯಸ್ಥ. ಕಡ್ಡಾಯ ಶಿಕ್ಷಣದ ಮಟ್ಟದ ತೀರ್ಮಾನ. ಶಾಲಾ ಕಟ್ಟಡಗಳ ಮೇಲ್ವಿಚಾರಣೆ, ಶಿಕ್ಷಕರ ತರಪೇತಿ ಮತ್ತು ಅವರ ಅರ್ಹತಾಮಟ್ಟದ ನಿರ್ಧಾರ, ಶಿಕ್ಷಕರ ಸಂಬಳ ಇತ್ಯಾದಿಗಳ ನಿಗದಿ, ಸ್ಥಳೀಯ ಶಿಕ್ಷಣ ಅಧಿಕಾರ ಮಂಡಲಿಗಳಿಗೆ ಧನಸಹಾಯ, ಎಲ್ಲ ಮಟ್ಟಗಳಲ್ಲಿಯೂ ನಡೆಯುವ ಸಂಶೋಧನೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ. ಮುಖ್ಯ ಸಂಸ್ಥೆಗಳ ನೇರ ನಿರ್ವಹಣೆ, ಸ್ಥಳೀಯ ಶಿಕ್ಷಣ ಮಂಡಲಿಗಳ ಒಳಗೂ ಮಂಡಲಿಗಳಿಗೂ ಮಾತಾಪಿತೃಗಳಿಗೂ ನಡುವೆಯೂ ಉದ್ಭವಿಸುವ ಭಿನ್ನಾಭಿಪ್ರಾಯಗಳ ತೀರ್ಮಾನ-ಇವುಗಳ ಜವಾಬ್ದಾರಿಯೆಲ್ಲ ಮಂತ್ರಿಗೆ ಸೇರಿದ್ದು. ಕೇಂದ್ರ ನಿರೀಕ್ಷಕರ (ಎಚ್. ಎಂ. ಇನ್ಸ್‍ಪೆಕ್ಟರ್ಸ್) ಹಾಗೂ ಇತರ ಪರಿಣತರ ಮತ್ತು ನಾನಾ ಸಲಹಾಮಂಡಲಿಗಳ ಸಹಾಯದಿಂದ ಈತ ತನ್ನ ಕಾರ್ಯಭಾರವನ್ನು ನಡೆಸಿಕೊಂಡು ಹೋಗುತ್ತಾನೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸರ್ವಾಧಿಕಾರವಿದ್ದರೂ ಈತ ಸ್ಥಳೀಯ ಮಂಡಲಿಗಳೊಂದಿಗೆ ಸೌಹಾರ್ದ ಸಹಕಾರಗಳ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾನೆ. ಕೇಂದ್ರ ಸರ್ಕಾರಕ್ಕೂ ಸ್ಥಳೀಯ ಸಂಸ್ಥೆಗಳಿಗೂ ಇರುವ ಸಾಮರಸ್ಯ ಸೌಹಾರ್ದಗಳಿಂದ ಇಂಗ್ಲೆಂಡಿನ ಶಿಕ್ಷಣ ಪದ್ಧತಿ ಬಹಳ ಪ್ರಗತಿ ಸಾಧಿಸಿದೆ.

ಸ್ಥಳೀಯ ಶಿಕ್ಷಣಾಧಿಕಾರ ಮಂಡಲಿ

ಬದಲಾಯಿಸಿ

ಮುಂಚೆ ಇದ್ದ ಶಾಲಾ ಜಿಲ್ಲೆಗಳನ್ನು ರದ್ದುಪಡಿಸಿ ಈ ಜಿಲ್ಲೆಗಳ (ಮತ್ತು ನಗರ ಸಭೆಗಳ) ಅಧಿಕಾರ ಮಂಡಲಿಗಳು ಸ್ಥಾಪಿತವಾದುವು. ಈ ಶಿಕ್ಷಣ ಮಂಡಲಿಗಳಲ್ಲಿ ಅನೇಕ ಸದಸ್ಯರಿದ್ದಾರೆ. ಇದು ಶಿಕ್ಷಣ ಪರಿಣತರಿಂದಲೂ ಸ್ಥಳೀಯ ಚುನಾಯಿತ ಸದಸ್ಯರಿಂದಲೂ ಕೂಡಿರುತ್ತದೆ. ಕಾನೂನುಬದ್ಧವಾಗಿ ನೇಮಕವಾಗಿರುವ ಈ ಮಂಡಲಿಗಳಿಗೆ ಶಿಕ್ಷಣ ವಿಚಾರದಲ್ಲಿ ಹೆಚ್ಚಿನ ಅಧಿಕಾರವೂ ಜವಾಬ್ದಾರಿಯೂ ಇವೆ. ಈಗ ಇಂಗ್ಲೆಂಡಿನಲ್ಲಿ ಇಂಥ 162 ಮಂಡಲಿಗಳಿವೆ.

ಸ್ಥಳೀಯ ಶಿಕ್ಷಣಾಧಿಕಾರಿ ಮಂಡಲಿಗಳ ಮುಖ್ಯ ಕರ್ತವ್ಯಗಳಿವು

ಬದಲಾಯಿಸಿ

i.ಕೇಂದ್ರ ಮಂತ್ರಿಗಳು ಹಾಕಿರುವ ಮಟ್ಟಕ್ಕೆ ತಕ್ಕಂತೆ ಶಾಲೆಯ ಕಟ್ಟಡಗಳು ಇರುವಂತೆ ನೋಡಿಕೊಳ್ಳುವುದು ; ii ಪ್ರತಿಯೊಂದು ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಯಲ್ಲಿ ಗೊತ್ತಾದ ರೀತಿಯಲ್ಲಿ ಮೇಲ್ವಿಚಾರಕ ಸಮಿತಿ ರಚಿಸಿ ಕಾರ್ಯಸುಸೂತ್ರವಾಗಿ ನಡೆಯುವಂತೆ ನಿಯೋಜಿಸುವುದು ; iii. ನಿಗದಿಮಾಡಿದ ಪಠ್ಯಕ್ರಮದಂತೆ ಪ್ರತಿದಿನವೂ ಶಾಲೆಗಳಲ್ಲಿ ಪ್ರಾರ್ಥನೆ ಮತ್ತು ಮತಬೋಧೆ ನಡೆಯುತ್ತದೆ ಎಂಬುದನ್ನು ನೋಡಿಕೊಳ್ಳುವುದು ; iv ಕಡ್ಡಾಯ ಶಿಕ್ಷಣದ ನಿಬಂಧನೆಗಳನ್ನು ಜಾರಿಗೆ ತರುವುದು ; v ಮುಂದುವರಿದ ವಿದ್ಯಾಭ್ಯಾಸಕ್ಕೆ ಸೂಕ್ತ ಏರ್ಪಾಡು ಮಾಡುವುದು ; vi ಶಾಲೆಗಳಲ್ಲಿ ಮಕ್ಕಳಿಗೆ ಯುಕ್ತ ವೈದ್ಯ ಪರೀಕ್ಷೆ ಏರ್ಪಡಿಸುವುದು ಮತ್ತು ಉಚಿತ ಔಷಧೋಪಚಾರ ದೊರಕುವಂತೆ ಮಾಡುವುದು ; vii ವಿಶೇಷ ಶಿಕ್ಷಣಕ್ಕೆ ಅರ್ಹರಾದ ಮಕ್ಕಳ ಬಗ್ಗೆ ತಕ್ಕ ಏರ್ಪಾಡು ಮಾಡುವುದು ; viii. ಶಾಲಾ ಮಕ್ಕಳಿಗೆ ಹಾಲು ಮತ್ತು ಆಹಾರದ ಏರ್ಪಾಡು ಮಾಡುವುದು ; ix ಶಾರೀರಿಕ ಶಿಕ್ಷಣ ಆಟಪಾಟ ಮತ್ತು ಮನೋರಂಜನೆಯ ಕಾರ್ಯಗಳು ನಡೆಯಲು ಏರ್ಪಾಡು ಮಾಡುವುದು ; x ಮೂರು ಮೈಲಿ ಅಥವಾ ಅದಕ್ಕಿಂತ ಹೆಚ್ಚು ದೂರದಿಂದ ಬರುವ ಮಕ್ಕಳಿಗೆ ವಾಹನ ಸೌಕರ್ಯ ಏರ್ಪಾಡು ಮಾಡುವುದು ; xi ಕೇಂದ್ರಮಂತ್ರಿಯ ಸಲಹೆಯಂತೆ ಶಿಕ್ಷಕರ ತರಬೇತಿ ಕಾಲೇಜುಗಳ ಸ್ಥಾಪನೆ ಮಾಡುವುದು ಅಥವಾ ಅವುಗಳಿಗೆ ಸಹಾಯ ನೀಡುವುದು ; xii ಮಂತ್ರಿಗೆ ಕಾಲಕಾಲಕ್ಕೆ ವರದಿಗಳನ್ನು ಕಳುಹಿಸುವುದು ; xiii ಮುಖ್ಯ ಶಿಕ್ಷಣಾಧಿಕಾರಿಯೊಬ್ಬನನ್ನು ನೇಮಿಸುವುದು ; xiv ತಾವು ಪಡೆದ ಹಣದ ಬಗ್ಗೆ ಸರಿಯಾದ ಲೆಕ್ಕಪತ್ರಗಳನ್ನಿಡುವುದು.ಪ್ರತಿಯೊಂದು ಜಿಲ್ಲಾ ಶಿಕ್ಷಣ ಮಂಡಲಿಯೂ ಕೇಂದ್ರದಿಂದ ಧನಸಹಾಯ ಪಡೆಯುವುದೇ ಅಲ್ಲದೆ, ತನ್ನ ಜಿಲ್ಲೆಯಲ್ಲಿ ತೆರಿಗೆ ಸುಂಕಗಳನ್ನು ಹಾಕಿ ಹಣ ಸಂಪಾದಿಸಿಕೊಳ್ಳುತ್ತದೆ. 1966ರಲ್ಲಿ ತನ್ನ ಹಣದಲ್ಲಿ ಸುಮಾರು 55% ಭಾಗವನ್ನು ಉಪಾಧ್ಯಾಯರ ಮತ್ತು ಇತರರ ಸಂಬಳಕ್ಕಾಗಿಯೂ 17.5% ರಷ್ಟನ್ನೂ ಕಟ್ಟಡಗಳಿಗಾಗಿಯೂ 7% ರಷ್ಟನ್ನು ವಿದ್ಯಾರ್ಥಿಗಳ ನೆರವಿಗಾಗಿಯೂ ವೆಚ್ಚ ಮಾಡಿತು.ಎರಡನೆಯ ಮಹಾಯುದ್ಧವಾದ ಮೇಲೆ ಶಾಲೆಗಳ ಕಟ್ಟಡಗಳ ಅವಸ್ಥೆ ಶೋಚನೀಯವಾಗಿತ್ತು. ಕಟ್ಟಡಗಳ ದುರಸ್ತಿ ಮತ್ತು ಅನುಕೂಲವಾದ ಕಟ್ಟಡಗಳ ನಿರ್ಮಾಣವೂ ಆದ್ಯ ಅವಶ್ಯಕತೆಗಳಲ್ಲಿ ಸೇರಿದುವು. 1959ರಲ್ಲಿ 25 ಕೋಟಿ ಪೌಂಡುಗಳ ಖರ್ಚಿನಲ್ಲಿ 1,500 ಹೊಸ ಕಟ್ಟಡಗಳನ್ನು ಕಟ್ಟಲಾಯಿತು. ಬಹಳ ಸಂಶೋಧನೆ ನಡೆಸಿದ ಮೇಲೆ ಈಗ ಶಾಲೆಗಳ ಕಟ್ಟಡಗಳ ಮಾದರಿ ನಿಗದಿಯಾಗಿವೆ. ಕಟ್ಟಡ ನಿರ್ಮಾಣಕ್ಕೆ ಮುಂಚೆ ಕೇಂದ್ರ ಸರ್ಕಾರದ ಅಪ್ಪಣೆ ಸಹಾಯ ಪಡೆಯಬೇಕೆಂದು ವಿಧಿಸಲಾಯಿತು. ಕಟ್ಟಡಗಳ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿತು.ಶಾಲೆಗಳ ಕಾರ್ಯಗಳ ನಿರೀಕ್ಷಣೆ ಕೇಂದ್ರ ಸರ್ಕಾರದ ನಿರೀಕ್ಷಕರುಗಳಿಂದಲೂ ಸ್ಥಳೀಯ ಮಂಡಲಿಯ ನಿರೀಕ್ಷಕರಿಂದಲೂ ಯಥವತ್ತಾಗಿ ನಡೆಯುತ್ತದೆ. ಇವರುಗಳೇ ಅಲ್ಲದೆ ಶಾಲೆಯ ಮುಖ್ಯೋಪಾಧ್ಯಾಯರಿಗೂ ಈ ಅಧಿಕಾರವಿದೆ. ಎಲ್ಲ ಬಗೆಯ ಶಾಲೆಗಳೂ ಈ ನಿರೀಕ್ಷಣೆಗೆ ಒಳಪಡಬೇಕು.

ಶಾಲೆಗಳ ವ್ಯವಸ್ಥೆ

ಬದಲಾಯಿಸಿ

ಇಂಗ್ಲೆಂಡಿನಲ್ಲಿ ಪ್ರತಿಯೊಂದು ಶಾಲೆಯೂ ತನ್ನದೇ ಆದ ವ್ಯಕ್ತಿತ್ವವನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನೂ ಪಡೆದಿದೆ. ಪ್ರತಿಶಾಲೆಯಲ್ಲೂ ಒಂದು ಆಡಳಿತ ಮಂಡಲಿ ಇದೆ. ಶಾಲೆಯ ಮುಖ್ಯೋಪಾಧ್ಯಾಯರಿಗೂ ಬಹಳ ಗೌರವಸ್ಥಾನವಿದೆ.ಶಾಲೆಗಳಲ್ಲಿ ಜಿಲ್ಲಾ ಶಾಲೆಗಳು, ಸ್ವಯಂನಿರ್ಮಿತ ಶಾಲೆಗಳು (ವಾಲಂಟರಿ ಸ್ಕೂಲ್ಸ್), ನೇರ ನೆರವಿನ ಶಾಲೆಗಳು ಮತ್ತು ಸ್ವತಂತ್ರ ಶಾಲೆಗಳು ಎಂಬ ನಾಲ್ಕು ಬಗೆಗಳಿವೆ. ಜಿಲ್ಲಾ ಶಾಲೆ (ಕೌಂಟಿ ಸ್ಕೂಲ್) ಮಂಡಲಿಯಿಂದ ನೇರವಾಗಿ ನಡೆಸಲ್ಪಡುವ ಶಾಲೆ. ಇಂಥವು ಸುಮಾರು 20,000 ಇವೆ. ಸ್ವಯಂನಿರ್ಮಿತ ಶಾಲೆಗಳಿಗೆ ಮಂಡಲಿಯಿಂದ ಧನಸಹಾಯ ದೊರೆಯುತ್ತದೆ. ಆದರೆ ಅನೇಕ ಅಂಶಗಳಲ್ಲಿ ಆ ಶಾಲೆಯವರೂ ಜವಾಬ್ದಾರಿ ವಹಿಸಬೇಕಾಗುತ್ತದೆ. ದೇಶದಲ್ಲಿ ಸುಮಾರು 10,000 ಸ್ವಯಂನಿರ್ಮಿತ ಶಾಲೆಗಳಿವೆ. 179 ನೇರವಾಗಿ ಕೇಂದ್ರದಿಂದ ಧನ ಸಹಾಯ ಪಡೆಯುವ ಶಾಲೆಗಳು. ಇವು ಗ್ರಾಮರ್ ಶಾಲೆಗಳು. ಸಾರ್ವಜನಿಕ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿ ಕನಿಷ್ಠಪಕ್ಷ ನಾಲ್ಕನೆಯ ಒಂದು ಭಾಗಕ್ಕೆ ಇವು ಪ್ರವೇಶ ನೀಡಬೇಕು. ಸುಮಾರು 3,400 ಸ್ವತಂತ್ರ ಶಾಲೆಗಳಿವೆ. ಅವುಗಳಿಗೆ ಯಾವ ಧನಸಹಾಯವೂ ದೊರೆಯುವುದಿಲ್ಲ. ಆದರೆ ಅವು ಕೇಂದ್ರ ಸರ್ಕಾರದ ತನಿಖೆಗೆ ಒಳಪಡಬೇಕು. ಈ ಗುಂಪಿನಲ್ಲಿ 300 ಪಬ್ಲಿಕ್ ಸ್ಕೂಲುಗಳು ಸೇರಿವೆ. ಶಾಲೆಗಳು ಧನಸಹಾಯ ಪಡೆಯಲಿ, ಪಡೆಯದೇ ಇರಲಿ ಅವೆಲ್ಲವೂ ಕೇಂದ್ರ ಸರ್ಕಾರದಿಂದ ಮನ್ನಣೆ ಪಡೆದಿರಬೇಕು. ಮನ್ನಣೆ ಪಡೆಯದೆ ಶಾಲೆಗಳನ್ನು ನಡೆಸುವಂತಿಲ್ಲ. ಮಕ್ಕಳನ್ನು ಅಂಥ ಶಾಲೆಗೆ ಕಳುಹಿಸುವಂತಿಲ್ಲ.

ಪ್ರಾಥಮಿಕ ಶಾಲೆಗಳು

ಬದಲಾಯಿಸಿ

ಮಕ್ಕಳಿಗೆ ಅವರ 5ನೆಯ ವಯಸ್ಸಿನಿಂದ 11ರವರೆಗೆ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ದೊರೆಯುತ್ತದೆ. ಮೊದಲೆರಡು ಮೂರು ವರ್ಷಗಳು ಕ್ರಿಯಾತ್ಮಕ ಆಟಪಾಠಗಳ ಮೂಲಕ ಶಿಕ್ಷಣ ನಡೆಯುತ್ತದೆ. ಅನಂತರ ಗಣಿತ, ಓದು, ವಾಕ್ಯರಚನೆ, ಚರಿತ್ರೆ, ಭೂಗೋಳ, ವಿe್ಞÁನ, ಇತ್ಯಾದಿಗಳಲ್ಲಿ ಬೋಧನೆಯಾಗುತ್ತದೆ. ಇವುಗಳೊಂದಿಗೆ ಚಿತ್ರಕಲೆ, ಸಂಗೀತ, ವ್ಯಾಯಾಮ, ಕೈಕೆಲಸ ಇವುಗಳೂ ಬೋಧನ ವಿಷಯಗಳು. ಮಕ್ಕಳು ಸಾಧಾರಣವಾಗಿ ದಿನವೆಲ್ಲ ಒಬ್ಬನೇ ಉಪಾಧ್ಯಾಯನೊಂದಿಗೆ ಕಳೆಯುತ್ತಾರೆ. ತರಗತಿಗಳಲ್ಲಿ 30 ರಿಂದ 40 ಬಾಲಕರಿರುತ್ತಾರೆ. ಎಲ್ಲ ಪ್ರಾಥಮಿಕ ಶಾಲೆಗಳಲ್ಲೂ ಬಾಲಕ ಬಾಲಕಿಯರು ಒಟ್ಟಿಗೆ ಇರುತ್ತಾರೆ.ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆಯ ಒಂದು ವಿಶೇಷ ಅಂಶವೆಂದರೆ ಪ್ರಾಥಮಿಕ ಶಿಕ್ಷಣದ ಮುಕ್ತಾಯದಲ್ಲಿ ನಡೆಸುವ ಪರೀಕ್ಷೆ. ವಿದ್ಯಾರ್ಥಿ ಯಾವ ಬಗೆಯ ಸೆಕೆಂಡರಿ ಶಾಲೆಗೆ ಹೋಗಬೇಕು ಎನ್ನುವುದನ್ನು ಹನ್ನೊಂದನೆಯ ವಯಸ್ಸು ತುಂಬಿದ ಮೇಲೆ (11+) ನಡೆಸುವ ಪರೀಕ್ಷೆಯಲ್ಲಿ ನಿರ್ಧರಿಸಲಾಗುತ್ತದೆ. ವಿದ್ಯಾರ್ಥಿಗಳ ಯೋಗ್ಯತೆಯನ್ನು ನಿರ್ಧರಿಸುವುದಕ್ಕಾಗಿ ಈಚೀಚೆಗೆ ಈ ಪರೀಕ್ಷೆಯೊಂದಿಗೆ ಇತರ ಪ್ರಯೋಗಗಳನ್ನೂ ಉಪಯೋಗಿಸಿಕೊಳ್ಳುತ್ತಿದ್ದಾರೆ.


ಸೆಕೆಂಡರಿ ಶಾಲೆ

ಬದಲಾಯಿಸಿ

1944ರ ಕಾಯಿದೆಗೆ ಮೊದಲು ಸೆಕೆಂಡರಿ ಶಿಕ್ಷಣ ಕೆಲವರಿಗೆ ಮಾತ್ರವಾಗಿತ್ತು. ಆದರೆ ಈಗ ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರಕುವಂತಾಗಿದೆ. ಅದಕ್ಕಾಗಿ ಒಂದು ತ್ರಿಪಕ್ಷ ಪದ್ಧತಿಯನ್ನು ಸೆಕೆಂಡರಿ ಶಿಕ್ಷಣದಲ್ಲಿ ಜಾರಿಗೆ ತರಲಾಗಿದೆ. ಸೆಕೆಂಡರಿ ಶಾಲೆಗಳಲ್ಲಿ ಮೂರು ವಿಧ. 1 ಗ್ರಾಮರ್ ಶಾಲೆ, 2 ಸೆಕೆಂಡರಿ, ತಾಂತ್ರಿಕ ಶಾಲೆ ಮತ್ತು 3 ಮಾಡರ್ನ್ ಶಾಲೆ.

ಗ್ರಾಮರ್ ಶಾಲೆಗಳು

ಬದಲಾಯಿಸಿ

ಹಿಂದಿನಿಂದ ಪ್ರಚಲಿತವಾದ ಸೆಕೆಂಡರಿ ಶಿಕ್ಷಣ ಪದ್ಧತಿಯ ಶಾಲೆಗಳು. ಸೇ. 15-20ರಷ್ಟು ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ಈ ಶಾಲೆಗಳು ಬಹಳ ಉತ್ತಮ ದರ್ಜೆಯ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳುತ್ತವೆ. ಪಾಂಡಿತ್ಯ ಶಿಕ್ಷಣಕ್ಕೆ ಪ್ರಾಧಾನ್ಯವಿರುವ ಈ ಶಾಲೆಗಳಲ್ಲಿ ವಿಷಯ, ಪಾಂಡಿತ್ಯ, ಪರಿಶ್ರಮಗಳಿಗೇ ಬೆಲೆ ಹೆಚ್ಚು. ಈ ಶಾಲೆಗಳಲ್ಲಿ ಉಪಾಧ್ಯಾಯ-ವಿದ್ಯಾರ್ಥಿ ಸರಾಸರಿ ಕಡಿಮೆ. 78%ರಷ್ಟು ಶಿಕ್ಷಕರು ಪದವೀಧರರು. ಬಹುಮಟ್ಟಿನ ಶಾಲೆಗಳು ಕೇವಲ ಬಾಲಕರಿಗೆ ಅಥವಾ ಬಾಲಕಿಯರಿಗೆ ಮೀಸಲಾಗಿವೆ. ಇವು ಮೊದಮೊದಲು ಸಾಮಾನ್ಯ ಶಿಕ್ಷಣ ಕೊಟ್ಟು ಅನಂತರ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಅನುಗುಣವಾದ ಪಠ್ಯಕ್ರಮ ಅನುಸರಿಸುತ್ತವೆ. ನಾಲ್ಕು ವರ್ಷ ಅವಧಿಯಲ್ಲಿ ಮತ ಬೋಧನೆ, ಇಂಗ್ಲಿಷ್, ಚರಿತ್ರೆ, ಭೂಗೋಳ, ಫ್ರೆಂಚ್, ಗಣಿತ, ಸಾಮಾನ್ಯ ವಿe್ಞÁನ, ಕಲೆ, ಸಂಗೀತ, ಕೈಕೆಲಸ, ದೈಹಿಕ ಶಿಕ್ಷಣ ಇವುಗಳನ್ನು ಅಭ್ಯಸಿಸಬೇಕು. ಎರಡನೆಯ ವರ್ಷದಲ್ಲಿ ಲ್ಯಾಟಿನ್ ಭಾಷೆಯನ್ನೂ ಕೆಲವು ಕಡೆ ಸೇರಿಸುತ್ತಾರೆ.ಗ್ರಾಮರ್ ಶಾಲೆಗಳಲ್ಲಿ ನಡೆಯುವ ಬೋಧನೆ ಜನರಲ್ ಸರ್ಟಿಫಿಕೇಟ್ ಪರೀಕ್ಷೆಗೆ (ಜಿ.ಸಿ.ಇ.) ಕೂರಲು ತಯಾರು ಮಾಡುತ್ತದೆ. ಈ ಪರೀಕ್ಷೆಯನ್ನು ವಿಶ್ವವಿದ್ಯಾನಿಲಯಗಳ ಸಹಾಯದಿಂದ ಒಂಬತ್ತು ಮಂಡಲಿಗಳಿಂದ ನಡೆಸಲಾಗುತ್ತದೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಎಷ್ಟು ವಿಷಯಗಳನ್ನಾದರೂ ಆರಿಸಿಕೊಳ್ಳಬಹುದು. ಪ್ರತಿ ವಿಷಯದಲ್ಲೂ ಎರಡು ಶ್ರೇಣಿಗಳಿವೆ-ಸಾಮಾನ್ಯ ಶ್ರೇಣಿ ಮತ್ತು ಉನ್ನತ ಶ್ರೇಣಿ. ಸಾಮಾನ್ಯ ಶ್ರೇಣಿಯ ಪರೀಕ್ಷೆಯನ್ನು 16ನೆಯ ವಯಸ್ಸಿನಲ್ಲೂ ಉನ್ನತ ಶ್ರೇಣಿಯನ್ನು 18ನೆಯ ವಯಸ್ಸಿನಲ್ಲೂ ತೆಗೆದುಕೊಳ್ಳಬಹುದು. ಸ್ಕಾಲರ್‍ಷಿಪ್ ಶ್ರೇಣಿ ಎನ್ನುವುದು ಉನ್ನತ ಶ್ರೇಣಿಗಿಂತಲೂ ಕಠಿಣವೂ ಹೆಚ್ಚಿನದೂ ಆಗಿದೆ. ಜಿ.ಸಿ.ಇ. ಪರೀಕ್ಷೆಯ ಮತ್ತೊಂದು ವಿಶೇಷವೆಂದರೆ, ಶಾಲೆಯಲ್ಲಿ ಓದದೆ ಇರುವವರೂ 16ಕ್ಕಿಂತ ಕಡಿಮೆ ವಯಸ್ಸಿನವರೂ (ಅವರ ಉಪಾಧ್ಯಾಯರ ಅನುಮತಿ ಪಡೆದು) ಇದಕ್ಕೆ ಕೂಡಬಹುದು.

ಗ್ರಾಮರ್ ಸ್ಕೂಲಿನ ವಿವರ

ಬದಲಾಯಿಸಿ

ಗ್ರಾಮರ್ ಸ್ಕೂಲಿನಲ್ಲಿ ಸಾಧಾರಣವಾಗಿ 500 ವಿದ್ಯಾರ್ಥಿಗಳಿರುತ್ತಾರೆ. ಪ್ರತಿವರ್ಷವೂ 90ರಿಂದ 100ರವರೆಗೆ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಇದಕ್ಕಿಂತ ಕಡಿಮೆಯ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ವಿದ್ಯಾರ್ಥಿಸಂಖ್ಯೆ ಕಾಣಬಹುದು. ಈ ವಿದ್ಯಾರ್ಥಿಗಳನ್ನು ಅವರವರ ಬುದ್ಧಿಗೆ ತಕ್ಕಂತೆ ವಿಂಗಡಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಬಾಲಕರಿಗೆ 16ನೆಯ ವಯಸ್ಸಿನ ಜಿ.ಸಿ.ಇ. ಪರೀಕ್ಷೆಯ ಸಾಮಾನ್ಯ ಮಟ್ಟಕ್ಕೆ ಅವರ ಸೆಕೆಂಡರಿ ಶಿಕ್ಷಣ ಪರಿಸಮಾಪ್ತಿಯಾಗುತ್ತದೆ. ಆದರೆ ಈಚೀಚೆಗೆ 18ರ ತನಕ ಮುಂದುವರಿಯುವವರ ಸಂಖ್ಯೆ 40%ರಷ್ಟಾಗಿದೆ.ಕಡೆಯ (17, 18ನೆಯ ವಯಸ್ಸಿನ) ಎರಡು ವರ್ಷಗಳ ಪಾಠಕ್ರಮವನ್ನು 6ನೆಯ ಫಾರಂ ಎಂದು ಕರೆಯಲಾಗಿದೆ. (ಕೆಲವು ವೇಳೆ ಇದು 3 ವರ್ಷ ಆಗುವುದುಂಟು). 6ನೆಯ ಫಾರಂನಲ್ಲಿ ಓದಿದ ಅನಂತರ ಜಿ.ಸಿ.ಇ. ಉನ್ನತ ಶ್ರೇಣಿಯ ಪರೀಕ್ಷೆಗೆ ಕೂಡಲಅವಕಾಶ ಸಿಗುತ್ತದೆ.ಗ್ರಾಮರ್ ಶಾಲೆಗಳಲ್ಲಿ ಮಾನವಿಕ (ಆಟ್ರ್ಸ್) ಮತ್ತು ವಿe್ಞÁನ ಎಂಬ ಎರಡು ಮುಖ್ಯ ಭಾಗಗಳಲ್ಲಿ ವಿಶೇಷ ಪರಿಶ್ರಮ ಪಡೆಯಬಹುದು. ಸುಮಾರು 60%ರಷ್ಟು ಮಂದಿ ವಿe್ಞÁನ ವಿಷಯಗಳಲ್ಲಿ ನಿರತರಾಗಿದ್ದಾರೆ.

ಸೆಕೆಂಡರಿ, ತಾಂತ್ರಿಕ ಶಾಲೆ

ಬದಲಾಯಿಸಿ

ಕೇವಲ ಶೆ. 5ರಷ್ಟು ಮಕ್ಕಳಿಗೆ ಮಾತ್ರ ಈ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮರ್ ಶಾಲೆಗಳಂತೆ ಈ ಸ್ಕೂಲುಗಳಿಗೆ ಪ್ರವೇಶ ಪಡೆಯುವುದಕ್ಕೂ ಬಹಳ ಪೈಪೋಟಿಯಿದೆ. ಇವುಗಳ ಮುಖ್ಯ ಉದ್ದೇಶ ಉದ್ಯೋಗ ಮತ್ತು ವಾಣಿಜ್ಯ ವಿಷಯಗಳ ಬೋಧನೆ. ಮೊದಲೆರಡು ಮೂರು ವರ್ಷಕಾಲ ಗ್ರಾಮರ್ ಶಾಲೆಗಳಂತೆಯೇ ಸಾಮಾನ್ಯ ಶಿಕ್ಷಣ ನೀಡುವ ಈ ಶಾಲೆಗಳು ಕಡೆಯ 3-4 ವರ್ಷಗಳಲ್ಲಿ ತಾಂತ್ರಿಕ, ಔದ್ಯೋಗಿಕ ಮತ್ತಿತರ ಬೋಧನೆಯ ವಿಷಯಗಳನ್ನು ಕಲಿಸುತ್ತವೆ. ಈ ಶಾಲೆಗಳ ಮಕ್ಕಳು ಜಿ.ಸಿ.ಇ. ಸಾಮಾನ್ಯ ಮಟ್ಟದ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಕೆಲವು ಶಾಲೆಗಳಲ್ಲಿ 6ನೆಯ ಫಾರಂನಲ್ಲಿ ಗಣಿತ ವಿe್ಞÁನಗಳಲ್ಲಿ ಪರಿಶ್ರಮ ಪಡೆದು ಜಿ.ಸಿ.ಇ. ಉನ್ನತಮಟ್ಟದ ಪರೀಕ್ಷೆಗೆ ಕೂರಲು ಅವಕಾಶವಿದೆ. ಈಗ ಇಂಗ್ಲೆಂಡಿನಲ್ಲಿ ಇಂಥ ತಾಂತ್ರಿಕ ಶಾಲೆಗಳು ಸುಮಾರು 200 ಇವೆ.

ಸೆಕೆಂಡರಿ ಮಾಡರ್ನ್ ಶಾಲೆಗಳು

ಬದಲಾಯಿಸಿ

ಪ್ರಾಥಮಿಕ ಶಾಲೆಯಿಂದ ಹೊರಬರುವ ಬಹುಜನ ವಿದ್ಯಾರ್ಥಿಗಳಿಗೆ (ಸು. 75%ರಷ್ಟು) ಅವರ 15ನೆಯ ವಯಸ್ಸಿನ ತನಕ ಸಾಮಾನ್ಯಶಿಕ್ಷಣ ಮತ್ತು ಯಾವುದಾದರೂ ಔದ್ಯೋಗಿಕ ತರಬೇತಿ ಕೊಡಲು ಈ ಶಾಲೆಗಳಿವೆ. ಸಾಮಾನ್ಯ ಶಿಕ್ಷಣದಲ್ಲಿ ಇಂಗ್ಲಿಷ್, ಚರಿತ್ರೆ, ಗಣಿತ, ಭೂಗೋಳ, ಸಂಗೀತ, ಕಲೆ ಇವುಗಳನ್ನು ಕಲಿಸಲಾಗುತ್ತದೆ. 15ನೆಯ ವಯಸ್ಸಿನಿಂದ ಮುಂದಕ್ಕೆ ಕೆಲವು ವೇಳೆ ವಿದ್ಯೆ ಕಲಿಸಿ ಜಿ.ಸಿ.ಇ. ಸಾಮಾನ್ಯ ಮಟ್ಟದ ಪರೀಕ್ಷೆಗೆ ಕಟ್ಟಲು ಅವಕಾಶ ಕೊಡುತ್ತಾರೆ.ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿಗದಿಯಾಗಿಲ್ಲ. ಎಷ್ಟೇ ಆದರೂ ಈ ಶಾಲೆಗಳಿಗೆ ಪ್ರತಿಷ್ಠೆ ಕಡಿಮೆ. ಮಕ್ಕಳನ್ನು ಆಕರ್ಷಿಸುವ ಶಕ್ತಿಯೂ ಕಡಿಮೆ.ಹೀಗೆ ವಿಶಿಷ್ಟವಾಗಿರುವ ಗ್ರಾಮರ್, ತಾಂತ್ರಿಕ ಮತ್ತು ಮಾಡರ್ನ್ ಶಾಲೆಗಳು ವಿದ್ಯಾರ್ಥಿಗಳಲ್ಲಿ ಕೀಳು ಮೇಲು ಭಾವನೆಗಳ ಬೆಳವಣಿಗೆಗೆ ಎಡೆಕೊಟ್ಟಿವೆ. ಇದಕ್ಕಾಗಿ ಈ ಮೂರು ವರ್ಗದ ಶಾಲೆಗಳ ಉದ್ದೇಶಗಳನ್ನೂ ಒಟ್ಟಿಗೆ ಪೂರೈಸುವ ವ್ಯಾಪಕ (ಕಾಂಪ್ರಿಹೆನ್ಸಿವ್) ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕೆಲವು ಕಡೆ ಎರಡು ಬಗೆಯ (ಗ್ರಾಮರ್ ಮತ್ತು ಮಾರ್ಡನ್) ಬೋಧನ ಹೊಂದಿರುವ ಶಾಲೆಗಳೂ (ಬೈಲ್ಯಾಟರಲ್ ಸ್ಕೂಲ್ಸ್) ಇವೆ.ಶಾಲೆಗಳಲ್ಲಿ ಅನೇಕ ಬಗೆಯ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದೆ. ಬಾಲಕರು ತಮ್ಮ ಆಸಕ್ತಿಗನುಸಾರವಾಗಿ ಕ್ಲಬ್ಬುಗಳನ್ನು ರಚಿಸಿಕೊಳ್ಳುತ್ತಾರೆ. ಆಟ, ನಾಟಕ ಮತ್ತು ಇತರ ಆಸಕ್ತಿಗಳಿಗಾಗಿ ಗೃಹ (ಹೌಸ್) ಪದ್ಧತಿ ಅನುಸರಿಸುತ್ತಾರೆ. ಇಂಥ ಚಟುವಟಿಕೆಗಳಲ್ಲಿ ಶಿಸ್ತು ಸಾಧಿಸುವ ಉದ್ದೇಶದಿಂದ ಮುಂದುವರಿದ ವಿದ್ಯಾರ್ಥಿಗಳಲ್ಲಿ ಕೆಲವರನ್ನು ಗೃಹನಾಯಕರನ್ನಾಗಿ ಅಥವಾ ಮಾನಿಟರುಗಳನ್ನಾಗಿ ನೇಮಿಸುತ್ತಾರೆ.ಶಾಲೆಗಳಲ್ಲಿ ವೃತ್ತಿಮಾರ್ಗದರ್ಶನ (ವೊಕೇಷನಲ್ ಗೈಡೆನ್ಸ್) ನೀಡಲು ಅನೇಕ ಸಂಸ್ಥೆಗಳು ಸಹಾಯಮಾಡುತ್ತವೆ. ಎಷ್ಟೋ ಶಾಲೆಗಳಲ್ಲಿ ಇದಕ್ಕಾಗಿಯೇ ಪರಿಶ್ರಮ ಪಡೆದ ಉಪಾಧ್ಯಾಯರೂ ಇರುವುದುಂಟು. ವಿಶೇಷ ಶಾಲೆಗಳು : ಮೇಲೆ ಹೇಳಿದ ಸಾಮಾನ್ಯ ಶಾಲೆಗಳೇ ಅಲ್ಲದೆ, ಅಂಧರು, ಅಂಗವಿಕಲರು, ಮಂದಬುದ್ಧಿಯವರು, ಉಗ್ಗರು ಇತ್ಯಾದಿ ದೋಷಪೂರಿತ ವಿದ್ಯಾರ್ಥಿಗಳಿಗೆ ವಿಶೇಷ ಶಾಲೆಗಳಿವೆ.

1961-62ರಲ್ಲಿ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದವರ ಸಂಖ್ಯೆ ಹೀಗಿದೆ

ಬದಲಾಯಿಸಿ

ಶಿಕ್ಷಣಕ್ಷೇತ್ರ ಶಾಲೆಗಳ ಸಂಖ್ಯೆ ಉಪಾಧ್ಯಾಯರ ಸಂಖ್ಯೆ ವಿದ್ಯಾರ್ಥಿ ಸಂಖ್ಯೆ

ನರ್ಸರಿ .... ಪ್ರಾಥಮಿಕ ..... ಸೆಕೆಂಡರಿ ..... ಮುಂದುವರಿದ ಶಿಕ್ಷಣ ....

ವಿಶ್ವವಿದ್ಯಾನಿಲಯ .... ಶಿಕ್ಷಕರ ತರಬೇತಿ .... ಇತರ .... ವಿಶೇಷ ಶಿಕ್ಷಣ .... ವಯಸ್ಕರ ಶಿಕ್ಷಣ 690 26,586 6,550 803

20 145 16 837 17,052 1,519 1,85,309 1,65,551 23,392 (ಒಪ್ಪೊತ್ತಿನವರು) 12,059 4,114 1,681 6,236 659 31,969 43,20,471 32,47,258 14,52,544 13,24,171 1,08,658

35,614

27,151 68,186 12,31,992ಬಹುಮಟ್ಟಿನ ವಯಸ್ಕರ ಶಿಕ್ಷಣದಲ್ಲಿ ಉಪಾಧ್ಯಾಯರು ಒಪ್ಪೊತ್ತಿನ ಕೆಲಸದವರು. ಇಲ್ಲಿ ಹೇಳಿರುವ ಸಂಖ್ಯೆ ಪೂರ್ಣಕಾಲದವರಿಗೆ ಸಂಬಂಧಿಸಿದ್ದು.

ಉಚ್ಚ ಶಿಕ್ಷಣ : ಇಂಗ್ಲೆಂಡಿನಲ್ಲಿ ಉಚ್ಚಶಿಕ್ಷಣ ಮೂರು ಬಗೆಯ ಸಂಸ್ಥೆಗಳಿಂದ ನಡೆಯುತ್ತಿದೆ. : (i) ವಿಶ್ವವಿದ್ಯಾನಿಲಯಗಳು ಮತ್ತು ಪದವಿ ಕೊಡುವ ವಿಶ್ವವಿದ್ಯಾನಿಲಯ ಕಾಲೇಜುಗಳು ಮತ್ತು ಇಲಾಖೆಗಳು, (ii) ಉನ್ನತ ತಾಂತ್ರಿಕ ಕಾಲೇಜುಗಳು ಮತ್ತು (iii) ಶಿಕ್ಷಕ ತರಬೇತಿ ಕಾಲೇಜುಗಳು.


i ವಿಶ್ವವಿದ್ಯಾನಿಲಯಗಳು

ಬದಲಾಯಿಸಿ

ವಿಶ್ವವಿದ್ಯಾನಿಲಯಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡದೆ ಸ್ವಯಂ ಆಡಳಿತ ನಡೆಸುತ್ತವೆ. 1944ರ ಕಾಯಿದೆ ಕೂಡ ವಿಶ್ವವಿದ್ಯಾನಿಲಯಗಳ ಸ್ವಾತಂತ್ರ್ಯದ ಗೋಜಿಗೆ ಹೋಗಲಿಲ್ಲ. ಆದರೂ ಆಗಿಂದಾಗ್ಗೆ ಕೇಂದ್ರ ಸರ್ಕಾರ ಕೆಲವು ಆಯೋಗಗಳನ್ನು ರಚಿಸಿ ಅವುಗಳ ಅಭಿವೃದ್ಧಿಗೆ ಕಾರಣವಾಗಿದೆ. ಈ ಸಂಸ್ಥೆಗಳೊಂದಿಗೆ ನಿಕಟಸಂಬಂಧ ಹೊಂದಿರುವ ವಿಶ್ವವಿದ್ಯಾನಿಲಯ ಅನುದಾನ ಸಮಿತಿ ಸರ್ಕಾರದಿಂದ ನೇಮಕವಾದದ್ದು. ಇದೇ ವಿಶ್ವವಿದ್ಯಾನಿಲಯಗಳಿಗೆ ಧನಸಹಾಯ ನೀಡುವ ಹಕ್ಕು ಹೊಂದಿದೆ. ಆದರೂ ವಿಶ್ವವಿದ್ಯಾನಿಲಯಗಳ ಆಂತರಿಕ ಆಡಳಿತ, ಪಠ್ಯ. ಬೋಧನೆ, ಇತ್ಯಾದಿಗಳಲ್ಲಿ ಬಹುಮಟ್ಟಿಗೆ ತಲೆಹಾಕುವುದಿಲ್ಲ. ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಗಳಲ್ಲಿ ಏಕರೂಪತೆಯಿಲ್ಲ. ಆಕ್ಸ್‍ಫರ್ಡ್ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಆ ಸಂಸ್ಥೆಗಳಲ್ಲಿನ ಶಿಕ್ಷಕರ ಹಾಗೂ ಆಧಿಕಾರಿಗಳ ವಶದಲ್ಲಿದೆ. ಹೊರಗಿನ ಯಾವ ಸಂಸ್ಥೆಯಾಗಲಿ ಸರ್ಕಾರವಾಗಲಿ, ಸ್ಥಳೀಯ ಶಿಕ್ಷಣಾಧಿಕಾರ ಸಂಸ್ಥೆಯಾಗಲಿ ಏನೊಂದು ಅಧಿಕಾರವನ್ನೂ ಪಡೆದಿಲ್ಲ. ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾನಿಲಯಗಳಲ್ಲಿ ಕೋರ್ಟು, ಕೌನ್ಸಿಲ್ ಮತ್ತು ಸೆನೆಟ್ ಎಂಬ ಮೂರು ಬಗೆಯ ಆಡಳಿತ ವ್ಯವಸ್ಥೆಯಿದೆ. ಬಹುಮಟ್ಟಿನ ವಿಶ್ವವಿದ್ಯಾನಿಲಯಗಳಲ್ಲಿ ವೈಸ್‍ಚಾನ್ಸೆಲರ್ (ಕುಲಪತಿ) ಅವರೆ ಶ್ರೇಷ್ಠತಮ ಅಧಿಕಾರಿಗಳು. ಅವರಿಗೆ ಸಹಾಯಕರಾಗಿ ರಿಜಿಸ್ಟ್ರಾರ್ ಅಥವಾ ಕಾರ್ಯದರ್ಶಿ, ಬರ್ಸರ್ (ಕೋಶಾಧಿಕಾರಿ) ಇತ್ಯಾದಿ ಅಧಿಕಾರಿಗಳು ಇರುತ್ತಾರೆ.ಹಣಕಾಸು ವ್ಯವಸ್ಥೆಯ ಬಗ್ಗೆಯೂ ಏಕರೂಪತೆ ಕಾಣುವುದು ಕಷ್ಟ. 1960-61ರ ಅಂಕಿ ಅಂಶಗಳ ಪ್ರಕಾರ ವಿಶ್ವವಿದ್ಯಾನಿಲಯಗಳಿಗೆ ಕೇಂದ್ರ ಸರ್ಕಾರದಿಂದ ಶೇ. 72.2ರಷ್ಟೂ ಶುಲ್ಕಗಳಿಂದ ಶೇ. 9.2 ರಷ್ಟೂ ದಾನದತ್ತಿಗಳಿಂದ 2.9ರಷ್ಟೂ ಸ್ಥಳೀಯ ಅಧಿಕಾರ ಮಂಡಲಿಗಳಿಂದ ಶೇ. 2.3ರಷ್ಟೂ ಕೊಡುಗೆ ಇತ್ಯಾದಿಗಳಿಂದ ಶೇ. 0.7 ರಷ್ಟೂ ಸಂಶೋಧನೆಗಾಗಿ ಶೇ. 9.1ರಷ್ಟೂ ಮತ್ತು ಇತರ ಮೂಲಗಳಿಂದ ಶೇ. 3.6ರಷ್ಟೂ ಸಂದಾಯವಾಯಿತು. ಅವುಗಳ ಖರ್ಚಿನ ಬಾಬಿನಲ್ಲಿ ಆಡಳಿತ ವೆಚ್ಚಕ್ಕೆ ಶೇ. 6.7ರಷ್ಟನ್ನೂ ಉಪಾಧ್ಯಾಯರು ಮತ್ತು ಇತರ ಅಧಿಕಾರಿಗಳಗೆ ಸಂಬಳ ಸಾರಿಗೆಗಳಿಗೆ ಶೇ. 44.1ರಷ್ಟನ್ನೂ ತಾಂತ್ರಿಕ ಕೆಲಸಗಾರರಿಗೆ ಶೇ. 11.2ರಷ್ಟನ್ನೂ, ಗ್ರಂಥಾಲಯ ಮತ್ತು ಇತರ ಇಲಾಖೆಗಳ ವೆಚ್ಚಕ್ಕೆ ಶೇ. 14.1ರಷ್ಟನ್ನೂ ಕಟ್ಟಡಗಳ ರಿಪೇರಿ ಮತ್ತು ಮೇಲ್ವಿಚಾರಣೆಗೆ ಶೇ. 3.3ರಷ್ಟನ್ನೂ ವಿನಿಯೋಗಿಸಲಾಯಿತು. ಕೇಂದ್ರದಿಂದ ಐದು ವರ್ಷಕ್ಕೊಮ್ಮೆ ಪಡೆಯುವ ಧನಸಹಾಯವನ್ನು ಪ್ರತಿಯೊಂದು ವಿಶ್ವವಿದ್ಯಾನಿಲಯವೂ ತನಗೆ ತೋರಿದ ರೀತಿಯಲ್ಲಿ ವ್ಯಯಮಾಡುವ ಹಕ್ಕು ಪಡೆದಿದೆ. ಈ ಸಾಮಾನ್ಯ ಖರ್ಚುಗಳ ಜತೆಗೆ, ಹೊಸ ಕಟ್ಟಡಗಳಿಗಾಗಿ ಶೇ. 90 ಭಾಗ ವಿಶೇಷ ಧನ ಸಹಾಯದ ಏರ್ಪಾಡೂ ಇದೆ.

ವಿಶ್ವವಿದ್ಯಾನಿಲಯ ವಿದ್ಯಾಶಾಖೆ

ಬದಲಾಯಿಸಿ

ಸಾಧಾರಣವಾಗಿ ವಿಶ್ವವಿದ್ಯಾನಿಲಯಗಳು ವಿದ್ಯಾಶಾಖೆಗಳನ್ನು (ಫ್ಯಾಕಲ್ಟಿ) ಒಳಗೊಂಡಿರುತ್ತವೆ. ಮಾನವಿಕಶಾಸ್ತ್ರ, ಸಮಾಜಶಾಸ್ತ್ರಗಳು, ವಿಜ್ಞಾನ, ತಾಂತ್ರಿಕಶಾಸ್ತ್ರ (ಟೆಕ್ನಾಲಜಿ), ವೈದ್ಯಶಾಸ್ತ್ರ, ದಂತಶಾಸ್ತ್ರ, ವ್ಯವಸಾಯ ಮತ್ತು ಅರಣ್ಯ, ಪಶು ವೈದ್ಯಶಾಸ್ತ್ರ ಇವು ಕೆಲವು ಮುಖ್ಯ ಶಾಖೆಗಳು. ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಮೊದಲ ಮೂರು ವಿಭಾಗಗಳನ್ನು ಬೋಧಿಸುತ್ತಾರೆ. 16 ಸಂಸ್ಥೆಗಳಲ್ಲಿ ವೈದ್ಯ ಶಾಸ್ತ್ರಬೋಧನೆಗೆ ಅವಕಾಶವಿದೆ; 12ರಲ್ಲಿ ದಂಡಶಾಸ್ತ್ರವನ್ನು ಬೋಧಿಸಲಾಗುತ್ತದೆ. ಹೊಸ ವಿಶ್ವವಿದ್ಯಾನಿಲಯಗಳು ಈ ಶಾಖೆಗಳ ಬದಲು ಶಾಲೆಗಳನ್ನು ತೆರೆಯುತ್ತಿವೆ. ಸಮಾಜಶಾಸ್ತ್ರ ಶಾಲೆ, ಯೂರೋಪಿಯ ವಿಷಯ ಶಾಲೆ, ಶಿಕ್ಷಣ ಶಾಲೆ ಇತ್ಯಾದಿಗಳು ಸಾಮಾನ್ಯವಾಗುತ್ತಿವೆ.ಪ್ರತಿಯೊಂದು ವಿಶ್ವವಿದ್ಯಾನಿಲಯಕ್ಕೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದರಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಕೆಲವು ತಮ್ಮವೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಆದರೆ ಜನರಲ್ ಸರ್ಟಿಫಿಕೇಟ್ ಉನ್ನತ ಪರೀಕ್ಷೆಯ (ಜಿ.ಸಿ.ಇ. ಅಡ್ವಾನ್ಸ್ಡ್) ಫಲಿತಾಂಶವನ್ನವಲಂಬಿಸಿ ಪ್ರವೇಶ ನಿರ್ಧರಿಸುವುದು ಸಾಮಾನ್ಯ ಪದ್ಧತಿ. ಅಭ್ಯರ್ಥಿ ಕಡೆಯ ಪಕ್ಷ ಐದು ಅಥವಾ ಆರು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಅಥವಾ ವಿದ್ವತ್‍ಶ್ರೇಣಿಯಲ್ಲಿ (ಸ್ಕಾಲರ್ಷಿಪ್) ಉತ್ತೀರ್ಣನಾಗಿರಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಅವಕಾಶ ಕಡಿಮೆಯಿರುವುದರಿಂದ ಪ್ರವೇಶಕ್ಕೆ ತೀವ್ರ ಸ್ಪರ್ಧೆಯಿದೆ. ಶಾಲಾ ಉಪಾಧ್ಯಾಯರು ವಿದ್ಯಾರ್ಥಿಗಳ ಬಗ್ಗೆ ಬರೆಯುವ ರಹಸ್ಯ ವರದಿಗಳಿಗೂ ವಿದ್ಯಾರ್ಥಿಗಳು ಭೇಟಿಯ ಸಮಯದಲ್ಲಿ ಪ್ರಕಟಪಡಿಸುವ ಚುರುಕು, ಪರಿಶ್ರಮ, ಪ್ರತಿಭೆಗಳಿಗೂ ಹೆಚ್ಚಿನ ಪ್ರಾಮುಖ್ಯವಿದೆ.

ವಿಶ್ವವಿದ್ಯಾನಿಲಯದ ಪದವಿಗಳು

ಬದಲಾಯಿಸಿ

ವಿಶ್ವವಿದ್ಯಾನಿಲಯಗಳು ನೀಡುವ ಪದವಿಗಳು ಎರಡು ಬಗೆ. ಮೊದಲನೆಯ ಬಗೆಯವು ಬಿ.ಎ. ಮತ್ತು ಬಿ.ಎಸ್‍ಸಿ. ಈ ಪದವಿಗಳ ವ್ಯಾಸಂಗ ಕಾಲ ತಲಾ ಮೂರು ವರ್ಷ. ವೈದ್ಯ, ಶಿಲ್ಪಶಾಸ್ತ್ರ ಇತ್ಯಾದಿಗಳಲ್ಲಿ 5-6 ವರ್ಷಗಳ ಅನಂತರವೇ ಮೊದಲ ಪದವಿ ಲಭಿಸುತ್ತದೆ. ಪ್ರಥಮ ಪದವಿಯಲ್ಲಿಯೂ ಪಾಸ್ ಮತ್ತು ಆನರ್ಸ್ ಎಂಬ ಎರಡು ವರ್ಗಗಳಿವೆ. ಸ್ನಾತಕೋತ್ತರ ಪದವಿಗಳಲ್ಲಿ ಎಂ.ಎ., ಎಂ.ಎಸ್‍ಸಿ., ಪಿಎಚ್.ಡಿ. ಮೊದಲಾದ ಪದವಿಗಳಿವೆ. ಎರಡು ವರ್ಷ ವ್ಯಾಸಂಗಮಾಡಿ ಸಂಶೋಧನ ಪ್ರಬಂಧ ಬರೆದರೆ ಸ್ನಾತಕೋತ್ತರ ಎಂ.ಎ. ಅಥವಾ ಎಂ.ಎಸ್‍ಸಿ. ಪದವಿ ದೊರಕುತ್ತದೆ. ಒಂದು ವರ್ಷ ಓದಿದ ಅನಂತರ ಸ್ನಾತಕೋತ್ತರ ಡಿಪ್ಲೊಮ ಪಡೆಯಲವಕಾಶಗಳೂ ಇವೆ.ಪ್ರತಿ ವರ್ಷದ ಕಡೆಯಲ್ಲೂ ಪರೀಕ್ಷೆಗಳಿರುತ್ತವೆ. ಈ ಪರೀಕ್ಷೆಗಳನ್ನು ಆಯಾ ವಿಶ್ವವಿದ್ಯಾನಿಲಯಗಳೇ ನಡೆಸುತ್ತವೆ. ಬಾಹ್ಯ (ಎಕ್ಸ್ಟರ್ನಲ್) ಪರೀಕ್ಷಕರನ್ನು ಉಪಯೋಗಿಸಿಕೊಳ್ಳುವ ಪದ್ಧತಿಯೂ ಇದೆ. ಆಕ್ಸ್‍ಫರ್ಡ್, ಕೇಂಬ್ರಿಜ್‍ಗಳಲ್ಲಿ ಮಾತ್ರ ಆಯಾ ಶಿಕ್ಷಕರೇ ಪರೀಕ್ಷಕರು.ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಯಷ್ಟೇ ಸಂಶೋಧನೆಗೂ ಪ್ರಾಮುಖ್ಯವಿದೆ. ಸುಮಾರು ಅರ್ಧದಷ್ಟು ವೇಳೆಯನ್ನು ಶಿಕ್ಷಕರು ಸಂಶೋಧನೆಗಾಗಿ ವಿನಿಯೋಗಿಸುತ್ತಾರೆ. ಸಂಶೋಧನೆಗಾಗಿ ವಿಶ್ವವಿದ್ಯಾನಿಲಯ ಅನುದಾನ ಸಮಿತಿ ವಿಶ್ವವಿದ್ಯಾನಿಲಯಗಳಿಗೆ ಹೇರಳವಾಗಿ ಅನುದಾನ ನೀಡುತ್ತದೆ.ಬೋಧನೆಯಲ್ಲಿ ಉಪನ್ಯಾಸಕ್ರಮಕ್ಕೆ ಬೆಲೆಯಿದ್ದರೂ ಒಬ್ಬರು, ಇಬ್ಬರು ಅಥವಾ ಮೂರು ವಿದ್ಯಾರ್ಥಿಗಳಿಗೆ ಒಬ್ಬೊಬ್ಬ ಅಧ್ಯಾಪಕ ಮೇಲ್ವಿಚಾರಕರನ್ನು ನೇಮಿಸುವ ಟ್ಯುಟೋರಿಯಲ್ ಪದ್ಧತಿಗೆ ಬಹಳ ಪುರಸ್ಕಾರವಿದೆ.

ವಿಶ್ವವಿದ್ಯಾನಿಲಯಗಳ ಶಿಕ್ಷಕರಲ್ಲಿ ಅನೇಕ ವರ್ಗಗಳಿವೆ

ಬದಲಾಯಿಸಿ

ಪ್ರೊಫೆಸರ್, ರೀಡರ್, ಸೀನಿಯರ್ ಲೆಕ್ಚರರ್, ಜೂನಿಯರ್ ಲೆಕ್ಚರರ್, ಟ್ಯೂಟರ್ ಇತ್ಯಾದಿ. ಸಾಧಾರಣವಾಗಿ ಶಿಕ್ಷಕರನ್ನು ಒಮ್ಮೆ ಆರಿಸಿಕೊಂಡ ಮೇಲೆ ಖಾಯಂ ಆಗಿ ಅವರನ್ನು ಇಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಬ್ಬ ಪ್ರೊಫೆಸರನ ವಾರ್ಷಿಕ ಸಂಬಳ 2,600ರಿಂದ 3,600 ಪೌಂಡು. ರೀಡರ್ ಮತ್ತು ಸೀನಿಯರ್ ಲಕ್ಚರರುಗಳ ಸಂಬಳ ಸರಾಸರಿಯಲ್ಲಿ (1963ನೆಯ ಇಸವಿಯಲ್ಲಿದ್ದಂತೆ) 2,425 ಪೌಂಡು, ಲೆಕ್ಚರರುಗಳಿಗೆ 1,150ರಿಂದ 1,950 ಪೌಂಡು.ವಿದ್ಯಾರ್ಥಿಗಳು ಸಾಧಾರಣವಾಗಿ ಒಂದು ಟರ್ಮಿಗೆ 60 ರಿಂದ 75 ಪೌಂಡುಗಳಷ್ಟು ಶುಲ್ಕ ಕೊಡಬೇಕು. ಆದರೆ ಸುಮಾರು ಶೇ. 80ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಏರ್ಪಾಡಿದೆ. ಸ್ಥಳೀಯ ಸಂಸ್ಥೆಗಳೂ ದತ್ತಿ ಸಂಸ್ಥೆಗಳೂ ಸರ್ಕಾರವೂ ಉಚ್ಚ ಶಿಕ್ಷಣಕ್ಕೆ ಉದಾರವಾಗಿ ಸಹಾಯ ಮಾಡುತ್ತಿವೆ.

ii ಉನ್ನತ ತಾಂತ್ರಿಕ ಕಾಲೇಜುಗಳು

ಬದಲಾಯಿಸಿ

ಇಂಗ್ಲೆಂಡಿನಲ್ಲಿ 1963ರಲ್ಲಿ ಹತ್ತು ಉನ್ನತಮಟ್ಟದ ತಾಂತ್ರಿಕ ಕಾಲೇಜುಗಳೂ 25 ಪ್ರಾದೇಶಿಕ ಕಾಲೇಜುಗಳೂ ಆರು ರಾಷ್ಟ್ರೀಯ ಕಾಲೇಜುಗಳೂ ಇತರ ಅನೇಕ ಪದವಿಮಟ್ಟದ ಕಾಲೇಜುಗಳೂ ಇದ್ದುವು. ಡಿಪ್ಲೊಮ ಪಡೆದ ವಿದ್ಯಾರ್ಥಿಗಳಿಗೂ ಜಿ.ಸಿ.ಇ. ಪರೀಕ್ಷೆಯ ಐದು ವಿಷಯಗಳಲ್ಲಿ ವಿಶೇಷ ಮಟ್ಟದಲ್ಲಿ ತೇರ್ಗಡೆ ಹೊಂದಿದವರಿಗೂ ತಾಂತ್ರಿಕ ಕಾಲೇಜುಗಳಲ್ಲಿ ಪ್ರವೇಶ ದೊರಕುತ್ತದೆ. ಸಾಧಾರಣವಾಗಿ ನಾಲ್ಕು ವರ್ಷ ಕಾಲದ ವಿದ್ಯಾಭ್ಯಾಸದ ಅನಂತರ ಪದವಿ ಕೊಡಲಾಗುತ್ತದೆ. ಮುಂದೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೂ ಅವಕಾಶವಿದೆ.ಈ ಕಾಲೇಜುಗಳಲ್ಲಿ ಶುಲ್ಕ ಕಡಿಮೆ. ವಿಶ್ವವಿದ್ಯಾನಿಲಯಗಳಂತೆಯೇ ಇಲ್ಲಿಯೂ ವಿದ್ಯಾರ್ಥಿವೇತನಗಳಿದ್ದು, ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವಿದೆ. ಸರ್ಕಾರವೂ ಸ್ಥಳೀಯ ಶಿಕ್ಷಣಾಧಿಕಾರ ಮಂಡಲಿಯೂ ಈ ಕಾಲೇಜುಗಳಿಗೆ ಹೆಚ್ಚಿನ ಧನಸಹಾಯ ಮಾಡುತ್ತವೆ.ಈ ತಾಂತ್ರಿಕ ಕಾಲೇಜುಗಳಲ್ಲಿ ಪೂರ್ಣಕಾಲಿಕ ಮತ್ತು ಒಪ್ಪೊತ್ತಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶವಿದೆ.

3. ಶಿಕ್ಷಕರ ತರಬೇತಿ ಕಾಲೇಜುಗಳು

ಬದಲಾಯಿಸಿ

ಶಿಕ್ಷಕರ ತರಬೇತಿಗೆ 24 ವಿಶ್ವವಿದ್ಯಾನಿಲಯಗಳ ಶಿಕ್ಷಣ ಇಲಾಖೆಗಳಲ್ಲದೆ, 162 ಕಾಲೇಜುಗಳಿವೆ. ಪದವೀಧರರಲ್ಲದ ವಿದ್ಯಾರ್ಥಿಗಳಿಗೆ ಮೂರು ವರ್ಷಕಾಲ ಶಿಕ್ಷಕ ತರಬೇತಿ ಕೊಡುವವು. ಗೃಹವಿಜ್ಞಾನವನ್ನು ಸ್ತ್ರೀಯರಿಗೆ ಮಾತ್ರ ಬೋಧಿಸುವವು. ತಾಂತ್ರಿಕ ಮತ್ತು ಔದ್ಯೋಗಿಕ ಶಾಲೆಗಳಲ್ಲಿ ಶಿಕ್ಷಕರಾಗಲು ಬಯಸುವವರಿಗೆ ಒಂದು ವರ್ಷಕಾಲ ತರಬೇತಿ ಕೊಡುವವು. ಕಲೆಯಲ್ಲಿ ನಿಷ್ಣಾತರಾದವರಿಗೆ ಶಿಕ್ಷಕರಾಗಲು ಒಂದು ವರ್ಷಕಾಲ ತರಬೇತಿ ನೀಡುವವು-ಎಂದು ಇವುಗಳಲ್ಲಿ ಬೇರೆ ಬೇರೆ ವಿಧಗಳನ್ನು ಕಾಣಬಹುದು.ಮೂರು ವರ್ಷ ತರಬೇತಿ ಪಡೆದ ಅಭ್ಯರ್ಥಿ ಪ್ರಾಥಮಿಕ ಅಥವಾ ಸೆಕಂಡರಿ ಶಾಲೆಗಳಲ್ಲಿ ನೇಮಿತನಾಗಬಹುದು. ಕೆಲವು ಪಬ್ಲಿಕ್ ಶಾಲೆಗಳು ಪದವಿ ಪಡೆದವರನ್ನು ಮಾತ್ರ ಆರಿಸಿಕೊಳ್ಳುತ್ತವೆ. ಪದವೀಧರರು ಈಚೆಗೆ ಒಂದು ವರ್ಷಕಾಲದ ವಿಶ್ವವಿದ್ಯಾನಿಲಯ ಶಿಕ್ಷಣ ವಿಭಾಗದಲ್ಲಿ ತರಬೇತಿ ಪಡೆದು ಶಾಲಾಶಿಕ್ಷಕರಾಗಿ ಹೋಗುತ್ತಿದ್ದಾರೆ.18 ವರ್ಷ ವಯಸ್ಸಿನ ಮತ್ತು ಜಿ.ಸಿ.ಇ. ಪರೀಕ್ಷೆಯಲ್ಲಿ ಸಾಮಾನ್ಯಮಟ್ಟದಲ್ಲಿ ಐದು ವಿಷಯಗಳಲ್ಲಿ ತೇರ್ಗಡೆಯಾದವರನ್ನು ಈ ಶಿಕ್ಷಕ ಕಾಲೇಜುಗಳಿಗೆ ಸೇರಿಸುತ್ತಾರೆ. ಸಾಮಾನ್ಯ ಶಿಕ್ಷಣಶಾಸ್ತ್ರದಲ್ಲೂ 5 ರಿಂದ 7, ಅಥವಾ 7 ರಿಂದ 14, ಅಥವಾ 11ರಿಂದ 18 ವರ್ಷ ವಯಸ್ಸಿನ ಮಕ್ಕಳ ಶಿಕ್ಷಣದ ಬಗ್ಗೆಯೂ ವಿಶೇಷ ಪರಿಶ್ರಮವನ್ನೂ ಯಾವುದಾದರೂ ವಿಷಯಗಳಲ್ಲಿ ಹೆಚ್ಚಿನ ಪರಿಣತಿಯನ್ನೂ ಪಡೆಯಲು ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಯೂ ಪ್ರಯತ್ನಿಸುತ್ತಾನೆ.ಈ ಕಾಲೇಜುಗಳಲ್ಲಿ ಶುಲ್ಕಗಳು ಭಾರಿ ಪ್ರಮಾಣದಲ್ಲಿದ್ದರೂ ಬ್ರಿಟಿಷ್ ಪ್ರಜೆಯಾದ ಯಾರಾದರೂ ಉಚಿತ ವಿದ್ಯಾಭ್ಯಾಸ ಪಡೆಯಲು ಅರ್ಹತೆಯಿರುತ್ತದೆ. ತರಬೇತಿ ಸಮಯದಲ್ಲಿ ಅವನಿಗೆ ಅನೇಕ ಬಗೆಯ ಧನಸಹಾಯ ದೊರಕುತ್ತದೆ. ಈ ಕಾಲೇಜುಗಳ ಮೇಲ್ವಿಚಾರಣೆಗಾಗಿ ಪ್ರಾದೇಶಿಕ ತರಬೇತಿ ಆಡಳಿತ ಸಂಸ್ಥೆ (ಏರಿಯಾ ಟ್ರೈನಿಂಗ್ ಆರ್ಗನೈಸೇಷನ್) ಇದೆ. ಇದು ವಿಶ್ವವಿದ್ಯಾನಿಲಯಗಳಲ್ಲಿನ ಶಿಕ್ಷಕ ಇಲಾಖೆ ಅಥವಾ ಶಿಕ್ಷಕ ಶಾಲೆ, ಸ್ಥಳೀಯ ಶಿಕ್ಷಣಾಧಿಕಾರ ಮಂಡಲಿ ಇವುಗಳ ಸಹಾಯ ಸಹಕಾರಗಳೊಂದಿಗೆ ಶಿಕ್ಷಕರ ತರಬೇತಿ ಕಾಲೇಜುಗಳನ್ನು ನಡೆಸುತ್ತವೆ.ಇಂಗ್ಲೆಂಡಿನ ವಿಶ್ವವಿದ್ಯಾನಿಲಯಗಳೂ ಉಚ್ಚಶಿಕ್ಷಣ ಕೇಂದ್ರಗಳೂ ಹೆಸರುವಾಸಿಯಾಗಿ, ಪ್ರಪಂಚದ ಅನೇಕ ರಾಷ್ಟ್ರಗಳಿಂದ ಅಭ್ಯರ್ಥಿಗಳನ್ನು ಆಕರ್ಷಿಸುತ್ತಿವೆ. ಇಂದಿಗೂ ಆಕ್ಸ್‍ಫರ್ಡ್, ಕೇಂಬ್ರಿಜ್, ಲಂಡನ್ ಮುಂತಾದ ಸುಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಪಡೆದ ಶಿಕ್ಷಣ ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗಿದೆ. 1963ರಲ್ಲಿ ಪ್ರಕಟವಾದ ರಾಬಿನ್ ಸಮಿತಿ ವರದಿಯಲ್ಲಿ ಇಂಗ್ಲೆಂಡಿನ ಉಚ್ಚ ಶಿಕ್ಷಣದಲ್ಲಿ ಎರಡು ಮುಖ್ಯ ದೋಷಗಳಿವೆಯೆಂದೂ ಅವುಗಳ ನಿವಾರಣೆಯಾಗಬೇಕೆಂದೂ ತಿಳಿಸಿದೆ. ಮೊದಲನೆಯದಾಗಿ ವಿಶಾಲ ಸ್ವರೂಪದ ಪದವಿ ಪಡೆಯುವವರ ಸಂಖ್ಯೆ ಬಹಳ ಕಡಿಮೆ. ಎರಡನೆಯದಾಗಿ ಸ್ನಾತಕೋತ್ತರ ಶಿಕ್ಷಣಕ್ಕೂ ಸಂಶೋಧನೆಗೂ ಸಾಕಷ್ಟು ಅವಕಾಶವಿಲ್ಲ. ಇವೆರಡು ದೋಷಗಳ ನಿವಾರಣೆಗೆ ಪ್ರಯತ್ನ ನಡೆಸಬೇಕೆಂದು ಕೆಲವು ಸಲಹೆಗಳನ್ನು ಮಾಡಿದೆ.

ಶಿಕ್ಷಣ ವೆಚ್ಚ

ಬದಲಾಯಿಸಿ

ಮೊದಲೇ ತಿಳಿಸಿದಂತೆ ಶಿಕ್ಷಣದ ವೆಚ್ಚವನ್ನು ಕೇಂದ್ರ ಸರ್ಕಾರವೂ ಸ್ಥಳೀಯ ಮಂಡಲಿಯೂ ಹೊರುತ್ತವೆ. 1961-62ರಲ್ಲಿ ಶಿಕ್ಷಣಕ್ಕೆ ಎಷ್ಟು ಖರ್ಚಾಯಿತೆಂಬುದನ್ನು ಮುಂದೆ ಕೊಟ್ಟಿದೆ : ಶಿಕ್ಷಣದ ಆಯ-ವ್ಯಯ (1961-62)

ಸಾವಿರ ಪೌಂಡುಗಳಲ್ಲಿ ಸಾವಿರ ಪೌಂಡುಗಳಲ್ಲಿ

ಕೇಂದ್ರ ಸರ್ಕಾರ 173,400 ಆಡಳಿತ ವ್ಯವಸ್ಥೆ 31,900 ಸ್ಥಳೀಯ ಮಂಡಲಿ 834,600 ಉಪಾಧ್ಯಾಯರಿಗೂ ಕೊಡುಗೆ ಇತ್ಯಾದಿ 5,600 ಇತರರಿಗೂ ವೇತನ ಸಂಶೋಧನೆಗೆ ಕೊಡುಗೆ 6,800 ಇತ್ಯಾದಿ 3,99,000 ಇತರ ವೆಚ್ಚ 3,50,500 ಆವರ್ತಕ ವೆಚ್ಚ 1,67,700 ಸಾಲಕ್ಕಾಗಿ 71,300

10,20,400 10,20,400 ಆವರ್ತಕ ವೆಚ್ಚ-ವಿವಿಧ ಕ್ಷೇತ್ರಗಳಿಗೆ (1961-62)

ಸಾವಿರ  % ಪೌಂಡುಗಳಲ್ಲಿ

1. ಆಡಳಿತ ವೆಚ್ಚ 31,900 4.1 2. ಬೋಧನೆಗಾಗಿ 6,43,800 82.4 ನರ್ಸರಿ 2,500 0.3 ಪ್ರಾಥಮಿಕ 2,09,200 26.8 ಸೆಕೆಂಡರಿ 3,03,000 38.8 ವಿಶ್ವವಿದ್ಯಾನಿಲಯ ಮತ್ತು ಉಚ್ಚ ಶಿಕ್ಷಣ 1,10,600 14.1 ವಿಶೇಷ ಶಾಲೆ 17,800 2.3 ವಯಸ್ಕರ ಶಿಕ್ಷಣ 700 0.1 3. ಇತರ 1,05,700 13.5

ಉಲ್ಲೇಖಗಳು

ಬದಲಾಯಿಸಿ