ಬಿಳಿ ವಿಲೋವನ್ನು ಇಲ್ಲಿ ಪುನರ್ ನಿರ್ದೇಶಿಸಲಾಗಿದೆ. ನಾರ್ವೆ ದೇಶದ ವಾದ್ಯವೃಂದ ಬಿಳಿ ವಿಲೋ (ವಾದ್ಯವೃಂದ) ವನ್ನು ನೋಡಿ
ಗೋಲ್ಡನ್ ವಿಲೋವನ್ನು ಇಲ್ಲಿ ಪುನರ್ನಿರ್ದೇಶಿಸಲಾಗಿದೆ. ಈ ಹೆಸರಿನಲ್ಲಿರುವ ಕುದುರೆಯ ಬಗೆಗಿನ ಮಾಹಿತಿಗಾಗಿ ಗೋಲ್ಡನ್ ವಿಲೋವನ್ನು ನೋಡಿ.
ಇಂಗ್ಲೀಷ್ ವಿಲೋ
White Willow foliage; note white undersides of leaves
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. alba
Binomial name
Salix alba

ಸ್ಯಾಲಿಕ್ಸ್ ಆಲ್ಬಾ (ಬಿಳಿ ವಿಲೋ ) ಎಂಬುದು ವಿಲೋದ ಉಪಜಾತಿಯಾಗಿದ್ದು, ಯುರೋಪ್ ಮತ್ತು ಪಶ್ಚಿಮ ಮತ್ತು ಮಧ್ಯಏಷ್ಯಾದಲ್ಲಿ ಕಂಡುಬರುತ್ತದೆ.[][] ಈ ಹೆಸರು ಎಲೆಗಳ ಕೆಳಮೇಲ್ಮೈನಲ್ಲಿದ್ದ ಬಿಳಿಯ ಛಾಯೆಯಿಂದ ಹುಟ್ಟಿಕೊಂಡಿದೆ. ಇದು ವ್ಯಾಪ್ತಿಯಲ್ಲಿ ಮಧ್ಯಮ ಗಾತ್ರದಲ್ಲಿದ್ದು, ಪರ್ಣಪಾತಿ ಮರವಾಗಿದೆ. ಇದು 10 ರಿಂದ 30 ಮೀಟರ್ ಗಳಷ್ಟು ಉದ್ದ ಬೆಳೆಯಬಲ್ಲದು, ಅಲ್ಲದೇ 1 ಮೀಟರ್ ವ್ಯಾಸದಷ್ಟು ಇದರ ಕಾಂಡ ಹರಡಿದ್ದು, ಅಡ್ಡದಿಡ್ಡಿಯಾಗಿ ಬೆಳೆದಿರುತ್ತದೆ ಹಾಗು ಕಿರೀಟದಂತೆ ಬಾಗಿರುತ್ತದೆ. ಇದರ ತೊಗಟೆ ಬೂದು- ಕಂದು ಬಣ್ಣದಲ್ಲಿರುತ್ತದೆ ಹಾಗು ಹಳೆಯ ಮರಗಳಲ್ಲಿ ಆಳವಾಗಿ ಬಿರುಕು ಬಿಟ್ಟಿರುತ್ತದೆ. ಪ್ರಾತಿನಿಧಿಕ ಉಪಜಾತಿಗಳಲ್ಲಿ ಚಿಗುರು ಬೂದು- ಕಂದು ಬಣ್ಣದಿಂದ ಹಸಿರು-ಕಂದು ಬಣ್ಣದಲ್ಲಿರುತ್ತದೆ. ಇದರ ಎಲೆಗಳು ಅದರ ಮೇಲಿರುವ ಅದರಲ್ಲು ವಿಶೇಷವಾಗಿ ಅದರ ಕೆಳಮೇಲ್ಮೈನಲ್ಲಿರುವ ನುಣುಪಾದ ಬಿಳಿರೋಮದಿಂದಾಗಿ ಬಹುಪಾಲು ಇತರ ವಿಲೋಗಳಿಗಿಂತ ಬಿಳಚಿಕೊಂಡಿರುತ್ತವೆ; ಅವುಗಳು 5 ರಿಂದ 10 ಸೆಂಟಿಮೀಟರ್ ಉದ್ದವಿದ್ದು, 0.5 ರಿಂದ 1.5 ಸೆಂಟಿ ಮೀಟರ್ ಅಗಲವಿರುತ್ತವೆ. ಹೂಗಳನ್ನು ಏಕ ಲಿಂಗ ಪುಷ್ಪಗಳ ರೂಪದಲ್ಲಿ ವಸಂತ ಕಾಲದ ಪೂರ್ವಾರ್ಧದಲ್ಲಿ ಬಿಡಲಾಗುತ್ತದೆ ಮತ್ತು ಕೀಟಗಳಿಂದಾಗಿ ಪರಾಗಾಸ್ಪರ್ಶ ಮಾಡುತ್ತವೆ. ಇದು ಪ್ರತ್ಯೇಕವಾದ ಮರಗಳಲ್ಲಿ ಗಂಡು ಮತ್ತು ಹೆಣ್ಣು ಗೊಂಚಲುಗಳೊಂದಿಗೆ ಭಿನ್ನಲಿಂಗಿಯಾಗಿರುತ್ತದೆ; ಪರಾಗಸ್ಪರ್ಶದಲ್ಲಿ ಗಂಡು ಹೂ ಗೊಂಚಲುಗಳು 4–5 ಸೆಂಟಿ ಮೀಟರ್ ಉದ್ದವಿದ್ದರೆ, ಹೆಣ್ಣು ಹೂ ಗೊಂಚಲುಗಳು 3–4 ಸೆಂಟಿ ಮೀಟರ್ ಉದ್ದವಿರುತ್ತವೆ, ಹಣ್ಣು ಪಕ್ವವಾದಂತೆ ಉದ್ದ ಹೆಚ್ಚಾಗುತ್ತದೆ. ಬೇಸಿಗೆಯ ಮಧ್ಯಾವಧಿಯಲ್ಲಿ ಅರಳಿದಾಗ ಹೆಣ್ಣು ಹೂ ಗೊಂಚಲುಗಳು ಚಿಕ್ಕದಾದ (4 ಮಿಲಿ ಮೀಟರ್) ಅನೇಕ ಕೋಶಗಳನ್ನು ಹೊಂದಿರುತ್ತವೆ. ಅಲ್ಲದೇ ಪ್ರತಿ ಕೋಶಗಳು ಕೆಳಭಾಗದಲ್ಲಿ ಬಿಳಿ ಬಣ್ಣದಿಂದ ಆವೃತವಾಗಿರುವ ಅನೇಕ ಸಂಖ್ಯೆಯ ಸಣ್ಣ ಸಣ್ಣ ಬೀಜಗಳನ್ನು ಒಳಗೊಂಡಿರುತ್ತವೆ. ಇದರಿಂದಾಗಿ ಗಾಳಿಯ ಮೂಲಕ ಬೀಜಗಳ ಪ್ರಸಾರಣವಾಗುತ್ತದೆ.[][][]

ಪರಿಸರವಿಜ್ಞಾನ

ಬದಲಾಯಿಸಿ
 
ಸುತ್ತಲಿರುವ ಮರಗಳಿಗೆ ಹೋಲಿಸಿದರೆ ನಸು ಬಿಳಿಬಣ್ಣದ ಪರ್ಣಸಮೂಹವನ್ನು ಹೊಂದಿರುವ ಮರ

ಬಿಳಿ ವಿಲೋಗಳು ವೇಗವಾಗಿ ಬೆಳೆಯುತ್ತವೆ ಆದರೆ ಇತರ ಮರಗಳಿಗೆ ಹೋಲಿಸಿದಲ್ಲಿ ಬ್ಯಾಕ್ಟೀರಿಯಾದ ಬರ್ನೇರಿಯಾ ಸಾಲಿಸಿಸ್ ನಿಂದ ಉಂಟಾಗುವ ಜಲಚಿಹ್ನೆ ರೋಗ ವನ್ನು ಒಳಗೊಂಡಂತೆ ಅನೇಕ ರೋಗಗಳಿಗೆ ತುತ್ತಾಗಿ ಅಲ್ಪ ಕಾಲ ಜೀವಿಸುತ್ತವೆ.( 'ಜಲಚಿಹ್ನೆ' ಯ ಗುಣಲಕ್ಷಣವು ಮರದಲ್ಲಿರುವ ಕಾರಣ ಇದನ್ನು ಜಲಚಿಹ್ನೆಯ ರೋಗವೆಂದು ಕರೆಯಲಾಗುತ್ತದೆ ; ಸಮಾನಾರ್ಥಕ ಪದಗಳು. ಎರ್ವಿನಿಯಾ ಸ್ಯಾಲಿಸಿಸ್ ). ಅಲ್ಲದೇ ಮಾರ್ಸೊನಿನ ಸಾಲಿಸಿಕೋಲಾ ಶಿಲೀಂಧ್ರ ದಿಂದ ಉಂಟಾಗುವ ವಿಲೋ ಅನಾತ್ರ ಅಕ್ನೋಸ್ (ಕ್ಯಾಂಕರ್)ನಂತಹ ರೋಗದಿಂದಲು ಕೂಡ ಅಲ್ಪ ಕಾಲದವರೆಗಿರುತ್ತದೆ. ಮರದ ದಿಮ್ಮಿಗಾಗಿ ಅಥವಾ ಪೂಜಾ ಸಾಧನಗಳಿಗಾಗಿ ಬೆಳೆಸುವಂತಹ ಮರಗಳ ಮೇಲೆ ಈ ರೋಗಗಳು ಅತ್ಯಂತ ದೊಡ್ಡ ಸಮಸ್ಯೆಯಾಗಬಹುದು. ಇದು ಸುಲಭವಾಗಿ ಕ್ರ್ಯಾಕ್ ವಿಲೋ ಸ್ಯಾಲಿಕ್ಸ್ ಫ್ರಾಗಿಲೀಸ್ ನೊಂದಿಗೆ ಸಹಜವಾಗಿ ಮಿಶ್ರ ತಳಿಯನ್ನು ರೂಪಿಸಬಲ್ಲದು. ಈ ಮಿಶ್ರ ತಳಿಯನ್ನು ಸ್ಯಾಲಿಕ್ಸ್× ರುಬೆನ್ಸ್ ಸ್ಚರಾಂಕ್ ಎಂದು ಕರೆಯಲಾಗುತ್ತದೆ.[]

ಉಪಯೋಗಗಳು

ಬದಲಾಯಿಸಿ

ಇದರ ಮರ ವು ಒರಟಾಗಿ, ಗಟ್ಟಿಯಾಗಿ ಮತ್ತು ಹಗುರವಾಗಿರುತ್ತದೆ , ಆದರೆ ಶಿಥಲಗೊಳ್ಳುವಿಕೆಯನ್ನು ತಡೆದು ಕೊಳ್ಳುವ ಕನಿಷ್ಠ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಬುಡದ ವರೆಗೆ ಕತ್ತರಿಸಿದ ಮತ್ತು ಬೋಳು ಮರಗಳಿಂದ ತೆಗೆದುಕೊಂಡ ಕಾಂಡಗಳನ್ನು (ಯಾವುದೇ ಜಾತಿಯ ವಿಲೋ ಮರ) ಬುಟ್ಟಿಯನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಈ ಮರದಿಂದ ಉತ್ಪಾದಿಸಲಾದ ಇದ್ದಿಲು, ಕೋವಿ ಮದ್ದಿನ ತಯಾರಿಕೆಯಲ್ಲಿ ಅತ್ಯಂತ ಪ್ರಮುಖವಾಗಿದೆ. ಇದರ ತೊಗಟೆಯನ್ನು ಚರ್ಮ ಸಂಸ್ಕರಣಕ್ಕೆ ಬಳಸಲಾಗುತ್ತದೆ.[][]

ಕೃಷಿ ಪ್ರಭೇದಗಳು ಮತ್ತು ಮಿಶ್ರತಳಿಗಳು

ಬದಲಾಯಿಸಿ

ಅನೇಕ ಸಂಖ್ಯೆಯ ಕೃಷಿ ಪ್ರಭೇದಗಳನ್ನು ಮತ್ತು ಮಿಶ್ರತಳಿಗಳನ್ನು ವನ್ಯ ಪ್ರದೇಶದ ಮತ್ತು ತೋಟಗಾರಿಕೆಯ ಬಳಕೆಗಾಗಿ ಆಯ್ಕೆ ಮಾಡಲಾಗುತ್ತದೆ:[][]

  • ಸ್ಯಾಲಿಕ್ಸ್ ಆಲ್ಬಾ 'ಕ್ಯಾರುಲಿಯಾ' (ಕ್ರಿಕೆಟ್-ಬ್ಯಾಟ್ ವಿಲೋ ; ಸಮಾನಾರ್ಥಕ. ಸ್ಯಾಲಿಕ್ಸ್ ಆಲ್ಬಾ ವಾರ್. ಕ್ಯಾರುಲಿಯಾ (Sm.) Sm.; ಸ್ಯಾಲಿಕ್ಸ್ ಕ್ಯಾರುಲಿಯಾ Sm.) ವನ್ನು ಬ್ರಿಟನ್ ನಲ್ಲಿ ವಿಶೇಷವಾದ ಮರದ ದಿಮ್ಮಿ ಬೆಳೆಯಂತೆ ಬೆಳೆಯಲಾಗುತ್ತದೆ. ಇದನ್ನು ಪ್ರಧಾನವಾಗಿ ಕ್ರಿಕೆಟ್ ಬ್ಯಾಟ್ ಗಳ ಉತ್ಪಾದನೆಗಾಗಿ ಹಾಗು ಎಲ್ಲಿ ಒರಟಾದ ಹಗೂರವಾದ ಮತ್ತು ಸುಲಭವಾಗಿ ಸೀಳುಬಿಡದಿರುವ ಮರದ ಅಗತ್ಯವಿರುತ್ತದೋ ಅಲ್ಲಿ ಬಳಸಲಾಗುತ್ತದೆ. ಇದನ್ನು ಇದರ ಬೆಳವಣಿಗೆಯ ಆಕಾರದ ಮೇಲೆ ವಿಂಗಡಿಸಲಾಗುತ್ತದೆ. ಇದು ವೇಗವಾಗಿ ಬೆಳೆಯುವ ತಳಿಯಾಗಿದ್ದು, ನೇರವಾದ ಏಕ ಕಾಂಡವನ್ನು ಒಳಗೊಂಡಿರುತ್ತದೆ. ಅಲ್ಲದೇ ಅಧಿಕ ನೀಲಿ- ಹಸಿರು ಬಣ್ಣದೊಂದಿಗೆ ಸ್ವಲ್ಪ ಮಟ್ಟಿಗೆ ದೊಡ್ಡದಾಗಿರುವ ಇದರ ಎಲೆಗಳ (10–11 ಸೆಂಟಿ ಮೀಟರ್ ಉದ್ದ, 1.5–2 ಸೆಂಟಿ ಮೀಟರ್ ಅಗಲ) ಆಧಾರದ ಮೇಲು ವಿಂಗಡಿಸಲಾಗುತ್ತದೆ. ಇದರ ಮೂಲ ತಿಳಿದಿಲ್ಲ; ಬಹುಶಃ ಇದು ಬಿಳಿ ವಿಲೋ ಮತ್ತು ಕ್ರ್ಯಾಕ್ ವಿಲೋ ನಡುವಿನ ಮಿಶ್ರ ತಳಿಯಾಗಿರಬಹುದು. ಆದರೆ ಇದು ಧೃಢಪಟ್ಟಿಲ್ಲ.[]
  • ಸ್ಯಾಲಿಕ್ಸ್ ಆಲ್ಬಾ 'ವಿಟೆಲೀನಾ

' (ಗೋಲ್ಡನ್ ವಿಲೋ ; ಸಮಾನಾರ್ಥಕ. ಸ್ಯಾಲಿಕ್ಸ್ ಆಲ್ಬಾ ವಾರ್. ವಿಟೆಲೀನಾ (L.) ಸ್ಟೋಕ್ಸ್) ಇದು ಉದ್ಯಾನಗಳಲ್ಲಿ ಬೆಳೆಸಲಾಗುವ ಕೃಷಿ ಪ್ರಭೇದವಾಗಿದ್ದು , ಇದರ ಚಿಗುರಿಗಾಗಿ ಇದನ್ನು ಬೆಳೆಸಲಾಗುತ್ತದೆ. ಇವುಗಳು ಕಂದು ಬಣ್ಣಕ್ಕೆ ತಿರುಗುವ ಮೊದಲು ಒಂದು- ಎರಡು ವರ್ಷ ಬಂಗಾರದ ಹಳದಿ ಬಣ್ಣದಲ್ಲಿರುತ್ತವೆ. ವಿಶೇಷವಾಗಿ ಚಳಿಗಾಲದಲ್ಲಿ ಇದು ಅಲಂಕಾರಿಕವಾಗಿರುತ್ತದೆ; ಉತ್ತಮ ಬಣ್ಣದೊಂದಿಗೆ ಉದ್ದವಾದ ಚಿಗುರಿನ ಕುಡಿ ಬೆಳೆಯುವಂತೆ ಮಾಡಲು ಪ್ರತಿ 2- 3 ವರ್ಷಗಳಿಗೆ ಇದನ್ನು ಬುಡದ ವರೆಗೆ ಕತ್ತರಿಸಿ ಬಿಟ್ಟು ಬಿಡಲಾಗುತ್ತದೆ. ಇದರಿಂದಾಗಿ ಉತ್ತಮ ಫಲಿತಾಂಶ ದೊರೆಯುತ್ತದೆ. ಇದೇ ರೀತಿಯ ಇತರ ಪ್ರಭೇದಗಳು, 'ಬ್ರಿಟ್ಜೆನ್ಸೀಸ್', 'ಕಾರ್ಡಿನಲ್', ಮತ್ತು 'ಚೆರ್ಮೆನ್ಸಿನಾ' ಗಳನ್ನು ಒಳಗೊಂಡಿದ್ದು, ಇವುಗಳನ್ನು ಇನ್ನೂ ಗಾಢವಾದ ಕಿತ್ತಳೆ- ಕೆಂಪು ಚಿಗುರಿಗಾಗಿ ಆಯ್ಕೆ ಮಾಡಲಾಗಿದೆ.

  • ಸ್ಯಾಲಿಕ್ಸ್ ಆಲ್ಬಾ 'ಸೆರಿಸಿಯಾ' (ಸಿಲ್ವರ್ ವಿಲೋ ) ಎಂಬುದು ಕೃಷಿ ಪ್ರಭೇದವಾಗಿದ್ದು, ಎಲೆಗಳ ಮೇಲಿರುವ ಬಿಳಿ ರೋಮಗಳು ಹೆಚ್ಚು ದಟ್ಟವಾಗಿರುತ್ತವೆ. ಈ ಮೂಲಕ ಗಾಢವಾದ ರಜತ ಸದೃಶ- ಬಿಳಿ ಪರ್ಣಸಮೂಹವನ್ನು ನೀಡುತ್ತವೆ.
  • ಸ್ಯಾಲಿಕ್ಸ್ ಆಲ್ಬಾ 'ವಿಟೆಲೀನಾ-ಟ್ರಿಸ್ಟಿಸ್' (ಗೋಲ್ಡನ್ ವೀಪಿಂಗ್ ವಿಲೋ (ರೆಂಬೆಗಳು ಜೋತು ಬಿದ್ದಿರುವ ಗೋಲ್ಡನ್ ವಿಲೋ), ಸಮಾನಾರ್ಥಕ 'ಟ್ರಿಸ್ಟಿಸ್') ಇದು ರೆಂಬೆಗಳು ಇಳಿಬೀಳುವ ಕೃಷಿ ಪ್ರಭೇದವಾಗಿದ್ದು, ಚಳಿಗಾಲದಲ್ಲಿ ನಸುಗೆಂಪು- ಕಿತ್ತಳೆ ಬಣ್ಣಕ್ಕೆ ತಿರುಗುವ ಹಳದಿ ಬಣ್ಣದ ರೆಂಬೆಗಳನ್ನು ಹೊಂದಿರುತ್ತದೆ. ಈಗ ಇದನ್ನು ಹೆಚ್ಚಾಗಿ ಬೆಳೆಯುವುದಿಲ್ಲ. ಅಲ್ಲದೇ ಇದರ ಬದಲಿಗೆ ಸ್ಯಾಲಿಕ್ಸ್ ಸೆಪಲ್ ಕ್ರಾಲಿಸ್ ಗ್ರೂಪ್ 'ಕ್ರೈಸೊಕೊಮಾ' ವನ್ನು ಕಾಣಬಹುದಾಗಿದೆ. ಆದರೂ ಕೂಡ ಕೆನಡಾ, ಉತ್ತರ U.S.A. ಮತ್ತು ರಷ್ಯಾದಂತಹ ಪ್ರಪಂಚದ ಅತ್ಯಂತ ಶೀತ ಭಾಗಗಳಲ್ಲಿ ಬೆಳೆಯಲು ಇದು ಈಗಲು ಕೂಡ ಅತ್ಯುತ್ತಮ ಆಯ್ಕೆಯಾಗಿದೆ.
  • ಗೋಲ್ಡನ್ ಹೈಬ್ರಿಡ್ ವೀಪಿಂಗ್ ವಿಲೋ (ಸ್ಯಾಲಿಕ್ಸ್ ಸೆಪಲ್ ಕ್ರಾಲಿಸ್ ಗ್ರೂಪ್ 'ಕ್ರೈಸೊಕೋಮಾ') ಇದು ಬಿಳಿ ವಿಲೋ ಮತ್ತು ಪೆಕ್ಕಿಂಗ್ ವಿಲೋ ಸ್ಯಾಲಿಕ್ಸ್ ಬ್ಯಾಬಿಲೋನಿಕಾ ದ ನಡುವಿನ ಮಿಶ್ರತಳಿಯಾಗಿದೆ.

ಔಷಧೀಯ ಉಪಯೋಗಗಳು

ಬದಲಾಯಿಸಿ
 
ಸ್ಯಾಲಿಕ್ಸ್ ಆಲ್ಬಾ ಟಿಂಚರ್

ಹಿಪೊಕ್ರೇಟ್ಸ್ ಕ್ರಿಸ್ತ ಪೂರ್ವ 5 ನೇ ಶತಮಾನದಲ್ಲಿ ನೋವು ವೇದನೆ ಮತ್ತು ಜ್ವರವನ್ನು ಕಡಿಮೆಮಾಡುವ ವಿಲೋ ತೊಗಟೆಯ ಸಾರ ತೆಗೆದು ಮಾಡಲಾದ ಕಹಿ ಪುಡಿಯ ಬಗ್ಗೆ ಬರೆದಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ಈ ರೋಗ ಪರಿಹಾರವನ್ನು ಪ್ರಾಚೀನ ಈಜಿಪ್ಟ್, ಸಮರ್, ಮತ್ತು ಅಸಿರಿಯಾ ದಿಂದ ದೊರೆತ ಪಠ್ಯಗಳಲ್ಲು ಉಲ್ಲೇಖಿಸಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಇಂಗ್ಲೆಂಡ್ ನ ಆಕ್ಸ್ ಫರ್ಡ್ಶಿರ್ ನ ಜಿಲ್ಲಾ ಪಾದ್ರಿಯಾಗಿದ್ದ ಪೂಜ್ಯ ಎಡ್ಮಂಡ್ ಸ್ಟೋನ್, ರವರು 1763 ರಲ್ಲಿ ವಿಲೋ ತೊಗಟೆ ಜ್ವರವನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.[] ಟಿಂಚರ್ ಅನು ಉತ್ಪಾದಿಸಲು ಇದರ ತೊಗಟೆಯನ್ನು ಈತೈಲ್ ಆಲ್ಕಹಾಲ್ ನಲ್ಲಿ ನೆನೆಸಿ ಮಿದುಗೊಳಿಸಲಾಗುತ್ತದೆ. ತೊಗಟೆಯಿಂದ ತೆಗೆದ ಸಾರವನ್ನು ಮೊದಲು ಲ್ಯಾಟೀನ್ ಭಾಷೆಯ ಸ್ಯಾಲಿಕ್ಸ್ ಎಂಬ ಹೆಸರಿನಿಂದ ಕರೆಯಲಾಯಿತು. ಅನಂತರ ಸ್ಯಾಲಿಸಿನ್ ಎಂದು ಕರೆಯಲಾಯಿತು. ಇದನ್ನು 1828 ರಲ್ಲಿ ಫ್ರೆಂಚ್ ಔಷಧಿಕಾರ ಹೆನ್ರಿ ಲೆರಾಕ್ಸ್ ಮತ್ತು ಇಟಲಿಯನ್ ರಸಾಯನ ಶಾಸ್ತ್ರಜ್ಞ ರಾಫ್ಯಾಲೆ ಪಿರಿಯಾ, ಎಂಬುವವರು ಇದರ ಕ್ರಿಸ್ಟಲಿನ್ ಭಾಗವನ್ನು ವಿಭಾಗಿಸಿದರು. ಅನಂತರ ಇವರು ಅದರ ಶುದ್ಧ ಸ್ಥಿತಿಯಲ್ಲಿಯೇ ಆಮ್ಲವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಆಸ್ಪರಿನ್ ನಂತಹ ಸ್ಯಾಲಿಸಿಕ್ ಆಮ್ಲವು , ಸ್ಯಾಲಿಸಿನ್ ನ ರಾಸಾಯನಿಕ ಜನ್ಯವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ಮೆಕೆಲ್, ಆರ್.ಡಿ. (1984 ವಿಲೋಸ್ ಅಂಡ್ ಪಾಪ್ಯೂಲರ್ಸ್ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡ್ . BSBI ಹ್ಯಾಂಡ್ ಬುಕ್ ನಂ. 4. ISBN 0-478-29453-0.
  2. ೨.೦ ೨.೧ ೨.೨ ೨.೩ ರಷ್ ಫೋರ್ತ್, ಕೆ. (1999). ಟ್ರೀಸ್ ಆಫ್ ಬ್ರಿಟನ್ ಅಂಡ್ ಯುರೋಪ್ . ಕೊಲೀನ್ಸ್ ISBN 0-00-220013-9.
  3. ಮಿಟ್ಚೆಲ್, ಏ. ಎಫ್. (1974). ಅ ಫೀಲ್ಡ್ ಗೈಡ್ ಟು ದಿ ಫೀಲ್ಡ್ಸ್ ಆಫ್ ಬ್ರಿಟನ್ ಅಂಡ್ ನಾರ್ದನ್ ಯುರೋಪ್ . ಕೊಲೀನ್ಸ್ ISBN 0-00-212035-6
  4. ಸ್ಟೋನ್, ಇ. (1763). ಆನ್ ಅಕೌಂಟ್ ಆಫ್ ದಿ ಸಕ್ಸಸ್ ಆಫ್ ದಿ ಬಾರ್ಕ್ ಆಫ್ ದಿ ವಿಲೋ ಇನ್ ದಿ ಕ್ಯೂರ್ ಆಫ್ ಅಗ್ಯೂಸ್. ಫಿಲಾಸಫಿಕಲ್ ಟ್ರಾನ್ಸಾಕ್ಷನ್ ಆಫ್ ದಿ ರಾಯಲ್ ಸೊಸೈಟಿ ಆಫ್ ಲಂಡನ್ 53.