ಇಂಗುದಿ
Terminalia catappa | |
---|---|
Conservation status | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | ಮಿರ್ಟೇಲ್ಸ್ |
ಕುಟುಂಬ: | ಕಾಂಬ್ರೆಟೇಸಿಯೇ |
ಕುಲ: | ಟರ್ಮಿನೇಲಿಯಾ |
ಪ್ರಜಾತಿ: | T. catappa
|
Binomial name | |
Terminalia catappa | |
Synonyms[೨] | |
List
|
ಟರ್ಮಿನೇಲಿಯ ಕಟಪ್ಪ ಎಂಬ ಶಾಸ್ತ್ರೀಯ ನಾಮವಿರುವ ಮರ;
ಇದನ್ನು ಬಾದಾಮಿ ಮರ, ಕಾಡು ಬಾದಾಮಿ ಮರ, ಮೆಲುಕ್ಕಾಸ್ ಬಾದಾಮಿ ಮರ ಎಂದು ಕರೆಯುವುದೂ ಇದೆ. ಆದರೆ ನಿಜವಾದ ಬಾದಾಮಿ ಮರ ಪ್ರುನಸ್ ಅಮೊಗ್ಡಾಲಿಸ್ ಎಂಬ ರೊಸೇಸಿ ಕುಟುಂಬದ ಒಂದು ವೃಕ್ಷ.
ಸಿಮಾರುಬೇಸಿ ಕುಟುಂಬಕ್ಕೆ ಸೇರಿದ ಬೆಲಟೈಟಿಸ್ ಈಜಿಪ್ಟಿಕ ಎಂಬ ಸಸ್ಯವನ್ನು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಇಂಗುದಿ ವೃಕ್ಷ ಎಂದು ಕರೆಯಲಾಗಿದೆ.
ಬೆಳೆಯುವ ಪ್ರದೇಶ
ಬದಲಾಯಿಸಿಮೂಲತಃ ಇಂಗುದಿ ಮರ ಮೆಲುಕ್ಕಾಸ್ ಮತ್ತು ಅಂಡಮಾನ್ ದ್ವೀಪಗಳ ನಿವಾಸಿ ಎಂದು ಅನೇಕ ಸಸ್ಯ ಶಾಸ್ತ್ರಜ್ಞರ ಅಭಿಪ್ರಾಯ. ಈ ಮರವನ್ನು ಮಲಯದಿಂದ ತಂದು ಭಾರತದ ಎಲ್ಲ ಕಡೆಗಳಲ್ಲೂ ಬೆಳೆಸಲು ಪ್ರಯತ್ನಿಸಲಾಗಿದೆ. ಆದರೆ ಒಣಹವೆಯುಳ್ಳ ಪ್ರದೇಶಗಳಲ್ಲಿ ಮಾತ್ರ ಇದು ಚೆನ್ನಾಗಿ ಬೆಳೆಯುವುದು.
ಸಸ್ಯವರ್ಣನೆ
ಬದಲಾಯಿಸಿಇಂಗುದಿ ಮರ ಕೋಂಬ್ರಿ ಟೇಸಿ ಕುಟುಂಬಕ್ಕೆ ಸೇರಿದೆ. ಇದರ ವರ್ಣ ತಂತುಗಳ ಸಂಖ್ಯೆ ಸಿಮ್ಮಂಡ್ಸರ ಹೇಳಿಕೆಯ (1954) ಪ್ರಕಾರ 2ಟಿ = 24. ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಈ ಮರದ ಎಲೆಗಳೆಲ್ಲ ಉದುರಿ ಹೋಗುತ್ತವೆ. ಮರದ ಎಲೆಗಳ ಉದ್ದ 5-12 ಅಗಲ 3-6. ಇವುಗಳಿಗೆ ಸಣ್ಣ ತೊಟ್ಟುಗಳಿವೆ. ಎಲೆಗಳು ಉದು ರುವ ಮೊದಲು, ಅವು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಮರದ ಹೂಗಳು ಚಿಕ್ಕವು. ಅವು 6-8 ಉದ್ದವಿರುವ ಹೂಗೊಂಚಲುಗಳಲ್ಲಿ ಸೇರಿರುತ್ತವೆ. ಹೂಗಳಿಗೆ ಪುಷ್ಪದಳಗಳಿಲ್ಲ. ಆದರೆ 10 ಕೇಸರಗಳು ಇವೆ. ಪರಾಗಕೋಶಗಳು ಬಲು ಚಿಕ್ಕವು. ಒಣಗಿದ ಕಾಯಿಗಳಲ್ಲಿ ತುಪ್ಪಳ ಇರುವುದಿಲ್ಲ. ಅವುಗಳ ಎರಡೂ ಕಡೆ ಚಪ್ಪಟೆ ಆಕಾರ. ಈ ಕಾಯಿಗಳಿಗೆ ಭ್ರೂಣಾಹಾರ ರಹಿತವಾದ ಒಂದೇ ಒಂದು ಬೀಜ ಇದೆ. ಇಂಗುದಿ ಮರದ ಒಳಭಾಗ ಕೆಂಪು.
ಉಪಯೋಗಗಳು
ಬದಲಾಯಿಸಿಮರ ಹಗುರವಾದರೂ ಗಟ್ಟಿಯಾಗಿದ್ದು ಬಲು ಕಾಲ ಬಾಳಿಕೆ ಬರುತ್ತದೆ. ಈ ಮರದ ತೊಗಟೆ ಮತ್ತು ಎಲೆಗಳಿಂದ ಒಂದು ಬಗೆಯ ಕಪ್ಪು ಬಣ್ಣವನ್ನು ತಯಾರಿಸಿ ಹಲ್ಲುಗಳಿಗೆ ಶಾಶ್ವತವಾಗಿ ಕಪ್ಪುಬಣ್ಣ ಬರಿಸಿಕೊಳ್ಳಲು ಹಾಸನದ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಹೆಂಗಸರು ಉಪಯೋಗಿಸುತ್ತಾರೆ. ಬೀಜಗಳಿಂದ ಬೆಲೆಬಾಳುವ ಒಳ್ಳೆಯ ಎಣ್ಣೆ ಸಿಕ್ಕುತ್ತದೆ. ಇದಕ್ಕೆ ಬಾದಾಮಿ ಎಣ್ಣೆಯ ವಾಸನೆಯೇ ಇದೆ. ಆದ್ದರಿಂದ ಬಾದಾಮಿ ಎಣ್ಣೆಯ ಬದಲು ಒಮ್ಮೊಮ್ಮೆ ಇದನ್ನು ಉಪಯೋಗಿಸುತ್ತಾರೆ. ಕುಷ್ಠ ರೋಗ, ಕಜ್ಜಿ, ಮತ್ತ್ತಿತರ ಚರ್ಮಸಂಬಂಧ ಕಾಯಿಲೆಗಳನ್ನು ಗುಣಪಡಿಸಲು ಎಲೆಗಳಿಂದ ಒಂದು ಬಗೆಯ ಮುಲಾಮನ್ನು ತಯಾರಿಸು ವರು. ಒತ್ತಲೆನೋವಿನಿಂದ ನರಳುವವರಿಗೆ ಎಲೆಯ ಕಷಾಯ ಔಷಧ. ತೊಗಟೆಯ ರಸ ಕೆಲವು ಹೃದ್ರೋಗಗಳಿಗೆ ಔಷಧಿ. ತೊಗಟೆ ಮತ್ತು ಎಲೆಗಳಿಂದ ಟಾನಿಕ್ ತೆಗೆಯಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Thomson, L.; Evans, B. (2019). "Terminalia catappa". IUCN Red List of Threatened Species. 2019: e.T61989853A61989855. doi:10.2305/IUCN.UK.2019-3.RLTS.T61989853A61989855.en. Retrieved 19 November 2021.
- ↑ "The Plant List: A Working List of All Plant Species".