ಆಸೆ (ಕನ್ನಡ ಧಾರಾವಾಹಿ)

ಆಸೆ ಪ್ರಸ್ತುತವಾಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು 11 ಡಿಸೆಂಬರ್ 2023ರಂದು ಪ್ರಥಮವಾಗಿ ಪ್ರಸಾರವಾಯಿತು. ಪ್ರಸ್ತುತವಾಗಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೦೭:೩೦ ವರೆಗೆ ಪ್ರಸಾರವಾಗುತ್ತಿದೆ. ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದ್ದಾರೆ[] []. ಈ ಧಾರಾವಾಹಿಯು ತಮಿಳಿನ ಸಿರಗಾಡಿಕ್ಕ ಆಸೈ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ನಿನಾದ್ ಹರಿತ್ಸ, ಪ್ರಿಯಾಂಕಾ ಡಿ ಎಸ್ ಮತ್ತು ಮಂಡ್ಯ ರಮೇಶ್ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ[].


ಆಸೆ (ಕನ್ನಡ ಧಾರಾವಾಹಿ)
ಶೈಲಿಮನೋರಂಜನೆ
ತಯಾರಕರು
ಬರೆದವರುರತಿಬಾಲಾ, ಸಂಭಾಷಣೆ - ಮೃಗಶಿರಾ ಶಶಿಕಾಂತ್
ನಿರೂಪಣಾ ಸಂಗೀತಕಾರಗಿರಿಧರ್ ದಿವಾನ್
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ರವಿ ಜೋಶಿ
ಸಂಕಲನಕಾರರುದರ್ಶನ್ ಭಟ್ ಮತ್ತಿಘಟ್ಟ
ಛಾಯಾಗ್ರಹಣಕಿಟ್ಟಿ ಕೌಶಿಕ್
ಸಮಯ22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ವಂದನಾ ಮೀಡಿಯಾ ಕ್ರಿಯೆಷನ್ಸ್
ಪ್ರಸಾರಣೆ
ಮೂಲ ವಾಹಿನಿಸ್ಟಾರ್ ಸುವರ್ಣ
ಮೂಲ ಪ್ರಸಾರಣಾ ಸಮಯ11 ಡಿಸೆಂಬರ್ 2023 – ಪ್ರಸ್ತುತ


ಕಥಾ ಹಂದರ

ಬದಲಾಯಿಸಿ

ಧಾರಾವಾಹಿಯ ಕಥೆಯು ಸಾಮಾನ್ಯ ವರ್ಗದಜನರ ಜೀವನದ ಮೇಲೆ ಕೇಂದ್ರಿಕೃತವಾಗಿದೆ.

ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ. ಈತನ ಮಾತು ಸ್ವಲ್ಪ ಒರಟಾದರೂ ಮೃದುವಾದ ಮನಸ್ಸನ್ನು ಹೊಂದಿದ್ದಾನೆ. ಜೀವನದಲ್ಲಿ ನೊಂದು - ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯನು ತಂದೆಯ ಮುದ್ದಿನ ಮಗನಾಗಿದ್ದಾನೆ.

ಮತ್ತೊಂದೆಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಕಥಾ ನಾಯಕಿ ಮೀನಾ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿಯಾಗಿದ್ದಾಳೆ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಆಗಿದ್ದಾಳೆ[].

ಒಂದುಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರುವ ಹುಡುಗ ಸೂರ್ಯನಾಗಿದ್ದರೆ, ಇನ್ನೊಂದೊಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ಇವರಿಬ್ಬರಿಗೂ ಕಾರಾಣಾಂತರದಿಂದ ಮದುವೆಯಾಗುವ ಸಂದರ್ಭ ಬರುತ್ತದೆ . ತದ್ವಿರುದ್ದವಾಗಿರುವ ಮೀನಾ ಹಾಗೂ ಸೂರ್ಯ ಹೇಗೆ ತಮ್ಮ ಬದುಕುನ್ನು ನಡೆಸುತ್ತಾರೆ ಎಂಬುವುದೇ ಕಥೆಯ ಹಂದರಾವಾಗಿದೆ.

ಪಾತ್ರ ವರ್ಗ

ಬದಲಾಯಿಸಿ

ಮುಖ್ಯ ಪಾತ್ರಗಳು

ಬದಲಾಯಿಸಿ
  • ನಿನಾದ್ ಹರಿತ್ಸ: ಕಥಾನಾಯಕ ಸೂರ್ಯನಾಗಿ.
  • ಪ್ರಿಯಾಂಕಾ ಡಿ ಎಸ್[]: ಕಥಾನಾಯಕಿ ಮೀನಾ ಪಾತ್ರದಲ್ಲಿ.

ಪೋಷಕ ಪಾತ್ರದಲ್ಲಿ

ಬದಲಾಯಿಸಿ
  • ಮಂಡ್ಯಾ ರಮೇಶ್: ರಂಗನಾಥ್ ಪಾತ್ರದಲ್ಲಿ. ಸೂರ್ಯನ ತಂದೆ ಮತ್ತು ಮೀನಾ ಗಂಡನಾಗಿ.
  • ಸ್ನೇಹಾ ಈಶ್ವರ್ []: ಮೀನಾ ಪಾತ್ರದಲ್ಲಿ. ರಂಗನಾಥ್ ಹೆಂಡತಿಯಾಗಿ.
  • ಅಮೃತ ರಾಮ್‌ ಮೂರ್ತಿ: ರೋಹಿಣಿ ಪಾತ್ರದಲ್ಲಿ. ಮನೋಜ್ ಹೆಂಡತಿಯಾಗಿ.
    • ಚಂದನಾ ರಾಘವೇಂದ್ರ
    • ನಯನ
  • ?: ಮನೋಜ್ ಪಾತ್ರದಲ್ಲಿ. ಮೀನಾ ಹಿರಿ ಮಗನಾಗಿ ಮತ್ತು ರೋಹಿಣಿ ಗಂಡನಾಗಿ.

ರೂಪಾಂತರಗಳು

ಬದಲಾಯಿಸಿ
ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ತಮಿಳು ಸಿರಗಡಿಕ್ಕ ಆಸಾಯೈ
சிறகடிக்க ஆசை
23 ಜನವರಿ 2023 ಸ್ಟಾರ್ ವಿಜಯ ಪ್ರಸಾರವಾಗುತ್ತಿದೆ ಮೂಲ
ತೆಲುಗು ಗುಂಡನಿಂದಾ ಗುಡಿಗಂಟಲು
గుండెనిండా గుడిగంటలు
2 ಅಕ್ಟೋಬರ್ 2023 ಸ್ಟಾರ್ ಮಾ ರೀಮೆಕ್
ಕನ್ನಡ Aase
ಆಸೆ
11 ಡಿಸೆಂಬರ್ 2023 ಸ್ಟಾರ್ ಸುವರ್ಣ
ಮಲಯಾಳಂ ಚಿಂಪನ್ನೀರ್ ಪೂವು
ചെമ്പനീർ പൂവ്
29 ಜನವರಿ 2024 ಏಷ್ಯಾನೆಟ್
ಹಿಂದಿ Udne Ki Aasha
उडने की आशा
12 ಮಾರ್ಚ್ 2024 ಸ್ಟಾರ್ ಪ್ಲಸ್
ಮರಾಠಿ ಸಾಧಿ ಮಾಣಸ
साधी माणसं
18 ಮಾರ್ಚ್ 2024 ಸ್ಟಾರ್ ಪ್ರವಾಹ್
ಬಂಗಾಳಿ Uraan
উড়ান
27 ಮೇ 2024 ಸ್ಟಾರ್ ಜಾಸ್ಲ

ಉಲ್ಲೇಖಗಳು

ಬದಲಾಯಿಸಿ
  1. " ಆಸೆ ನಿರ್ಮಾಣದಲ್ಲಿ ರಮೇಶ್ ಅರವಿಂದ್!". ಉದಯವಾಣಿ. Retrieved 6 ನವೆಂಬರ್ 2023.
  2. "ನಿನಾದ್ ಹರಿತ್ಸ, ಪ್ರಿಯಾಂಕಾ ನಟನೆಯ 'ಆಸೆ' ಧಾರಾವಾಹಿಯನ್ನು ಇಷ್ಟಪಟ್ಟ ನಟ ರಮೇಶ್ ಅರವಿಂದ್; ಕಾರಣ ಏನು?". vijaykarnataka. ವಿಜಯ ಕರ್ನಾಟಕ. Retrieved 5 Jan 2024.
  3. "ಒರಟು ಹುಡುಗ ಸೂರ್ಯ, ಬಡತನದಲ್ಲಿ ಅರಳಿದ ಹುಡುಗಿ ಮೀನಾ.. ಆಸೆ ಧಾರಾವಾಹಿ ನಾಯಕ ನಾಯಕಿಯ ಸಂದರ್ಶನ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 31 ಜನವರಿ 2024.
  4. "ಸ್ಟಾರ್‌ ಸುವರ್ಣದಲ್ಲಿ ಹೊಸ ಧಾರಾವಾಹಿ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 6 ಡಿಸೆಂಬರ್ 2023.
  5. "'ಪುಣ್ಯವತಿ'ಗೆ ಕಿರುತೆರೆಯತ್ತ 'ಆಸೆ'.. ನಟಿ ಪ್ರಿಯಾಂಕಾ ಸೆಕೆಂಡ್ ಇನ್ನಿಂಗ್ಸ್ ಶುರು". ಫಿಲ್ಮಿಬೀಟ್ ಕನ್ನಡ. Retrieved 3 ನವೆಂಬರ್ 2023.
  6. "ಸೀರಿಯಲ್‌ ನೋಡಿಯೇ ಸೊಸೆಯನ್ನಾಗಿ ಸ್ವೀಕರಿಸಿದ್ರು... ಆಸೆ ಧಾರಾವಾಹಿ ನಟಿ ಸ್ನೇಹ ಈಶ್ವರ್". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 20 ಜುಲೈ 2024.

ಬಾಹ್ಯಕೊಂಡಿಗಳು

ಬದಲಾಯಿಸಿ