ಆಶಾ ಸೇಥ್

ಕೆನಡಿಯನ್ ಪೋಲಿಟಿಯನ್

'ಆಶಾ ಸೇಥ್', ಕೆನಡಾ ದೇಶದ, ಟೊರಾಂಟೋನಗರದ ಒಬ್ಬ 'ಅತ್ಯಂತ ಯಶಸ್ವೀ ವೃತ್ತಿಪರ ಸ್ತ್ರೀರೋಗ ವೈದ್ಯೆ' [] ಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯಮೂಲದ ಹೆಣ್ಣುಮಗಳು. 'ಆಶಾರವರು' [] ಪ್ರತಿದಿನವನ್ನೂ ಒಂದು ಹೊಸ ಪ್ರಯೋಗ, ಹಾಗೂ ಹೊಸಕಾರ್ಯಸಾಧನೆಗೆ ಎದುರಾಗುವ ಸವಾಲೆಂದು ಭಾವಿಸುತ್ತಾರೆ. ತಾಯಿ-ಮಗುವಿನ ಆರೋಗ್ಯದ ಬಗ್ಗೆ ಮತ್ತು ಸ್ತ್ರೀರೋಗದಬಗ್ಗೆ ಅತ್ಯಂತ ಹೆಚ್ಚಿನ ಅನುಭವಪಡೆದು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿರುವ 'ಆಶಾ ಸೇಥ್'ರವರು ಸಂಪ್ರದಾಯ ಮನೆಯ ಚೌಕಟ್ಟಿನಲ್ಲಿ ಬೆಳೆದು ಬಂದು ಅದನ್ನು ಪೋಶಿಸುತ್ತಾ, ಅಂಧ-ವಿಶ್ವಾಸವನ್ನು ಖಂಡಿಸಿ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ಸನ್ನು ಕಂಡಿದ್ದಾರೆ. 'ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಯಾವ ಸಾಮಾಜಿಕ ಆಘಾತಗಳಿಗೆ ಮೊದಲು ಸ್ಪಂದಿಸುವ, ಸ್ವಂತ ಸಹಾಯಕ್ಕೆ ನೆರವಾಗುವ ಅವರದು ಎತ್ತಿದ ಕೈ. ಬೇರೆ ಚಾರಿಟಿಗಳಿಗೂ ಸದಾಕೊಡುಗೈದಾನಿಯಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ಧನಸಹಾಯ ಸಂಗ್ರಹಿಸುವ ಅಭಿಯಾನಕ್ಕೆ ಯಾವಾಗಲೂ ಸಿದ್ಧರಿರುವ 'ಆಶಾ ಸೇಥ್' ರವರು ಕೆನಡಾದ ನಾಗರಿಕರ ಅತ್ಯಂತ ಪ್ರಿಯ ವೈದ್ಯೆಯಾಗಿದ್ದಾರೆ. ಹೊಸಹೊಸ ಆವಿಷ್ಕಾರಗಳನ್ನು ಸ್ವಾಗತಿಸುತ್ತಾ, ಇಂದಿನ ಪರಿಸರಕ್ಕೆ ಆಗಲೇ ಲಗ್ಗೆಹಾಕಿದ ಅತ್ಯುತ್ತಮ ಹೊಸತಂತ್ರಜ್ಞಾನಗಳಿಗೆ ಸ್ಪಂದಿಸುತ್ತಾ, ಈನಿಟ್ಟಿನಲ್ಲಿ ಶಿಕ್ಷಣಕ್ಕೆ ಬೆಂಬಲನೀಡುತ್ತಾ ಸಾಗಿರುವ ಭಾರತೀಯ ಕೆನೆಡಿಯನ್ ಪ್ರಜೆ, ಆಶಾರವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. []

'ಡಾ. ಆಶಾ ಸೇಥ್'
ಆಶಾ ಸೇಥ್
ಜನನ
ಆಶ

ಲಖ್ನೊ, ಭಾರತ
ವೃತ್ತಿ(ಗಳು)ಸೆನೆಟರ್, ಬಹುಮುಖ ಪ್ರತಿಭೆಯ ವೈದ್ಯೆ. ಪತ್ರಿಕೆಗಳಲ್ಲಿ ಜನಜಾಗೃತಿಯ ಅಂಕಣ ಬರೆಯುತ್ತಿದ್ದಾರೆ.
ಪ್ರಶಸ್ತಿಗಳು
  1. ೨೦೧೩, ಸೆನೆಟರ್ ಆಶಾಸೇಥ್ ೨೦೧೩ ರ ಸಾಲಿನ ಎನ್.ಆರ್.ಐ.ದಿವಾ ಪ್ರಶಸ್ತಿ ದೊರೆಯಿತು. # ೨೦೧೧, ಸೆನೆಟರ್ ಆಶಾಸೇಥ್ ರಿಗೆ,'ಆಂಟೇರಿಯೊದ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್ ನ ಕೌನ್ಸಿಲ್ ಪ್ರಶಸ್ತಿ'. # ೨೦೧೦, ಡಾ.ಆಶಾಸೇಥ್ ರಿಗೆ 'ಕೆನೆಡಿಯನ್ ಇಮಿಗ್ರೆಂಟ್ಸ್ ಮ್ಯಾಗಝಿನ್' ನಿರ್ಧರಿಸಿದ ಅತಿ ಪ್ರಸಿದ್ಧ ೨೫ ಕೆನೆಡಿಯನ್ಸ್ ಇಮಿಗ್ರೆಂಟ್ಸ್ ಪ್ರಶಸ್ತಿ ದೊರೆಯಿತು.
  2. ೨೦೦೯, ಸೆನೆಟರ್ ಆಶಾಸೇಥ್ ರಿಗೆ ವಾರ್ಷಿಕ ಐ.ಸಿ.ಸಿ.ಸಿ.ಪ್ರಶಸ್ತಿ ಸಮಾರಂಭದ ದಿನದಂದು,ಮಿನಿಸ್ಟರ್ ಸ್ಟಾಕ್ವೆಲ್ ರವರಿಂದ, ಇಂಡೋ ಕೆನೆಡಿಯನ್ ಛೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ,
ಜಾಲತಾಣThe Honourable Dr. Asha seth

ಜನನ ಬಾಲ್ಯ

ಬದಲಾಯಿಸಿ

ಆಶಾ, [] ೧೯೩೯ ರ, ಡಿಸೆಂಬರ್, ೧೫ ರಲ್ಲಿ ಭಾರತದಲ್ಲಿ ಜನಿಸಿದರು.'ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್' ನಲ್ಲಿ ಪದವಿಗಳಿಸಿ, 'ಲಂಡನ್ ನ ರಾಯಲ್ ಬರ್ಕ್ ಶೈರ್ ರುಗ್ಣಾಲಯ', ದಲ್ಲಿ ತರಪೇತಿಹೊಂದಿ ೧೯೭೪ ರಲ್ಲಿ ಕೆನಡದ ಪ್ರಜೆಯಾದರು.

ಪರಿವಾರ

ಬದಲಾಯಿಸಿ

ಡಾ.ಆಶಾಸೇಥ್.ಡಾ. ಅರುಣ್ ಸೇಥರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಡಾ.ಅನಿಲಾ ಸೇಥ್ ಶರ್ಮ,ಎಂಡೋಕ್ರಿನೋಲಜಿಸ್ಟ್,(Endocrinologist) ಆಂಗಿ ಸೇಥ್, ಸ್ಟಾಂಜೆಚಿಚ್,(Angie (Seth) Stanjevich), ಒಬ್ಬ ಪ್ರಶಸ್ತಿವಿಜೇತೆ, ಹೆಸರಾಂತ ಪತ್ರಿಕಾಕರ್ತೆ, ಹಾಗೂ ಸಮಾಚಾರ ಆಂಕರ್, ಓಮ್ನಿ ಟೆಲಿವಿಶನ್,Anchor, (OMNI Television), ೪ ಜನ ಮೊಮ್ಮಕ್ಕಳಿದ್ದಾರೆ.

ಕಾರ್ಯಕ್ಷೇತ್ರ

ಬದಲಾಯಿಸಿ
  1. ೧೯೭೬ ರಿಂದ 'ಟೊರಾಂಟೋದ ಸೇಂಟ್ ಜಾನ್ಸ್ ಹೆಲ್ತ್ ಸೆಂಟರ್' ನಲ್ಲಿ ವೈದ್ಯೆಯಾಗಿ ದುಡಿಯುತ್ತಿದ್ದಾರೆ.
  2. 'NIMDAC Foundation,' ನ ಸ್ಥಾಪಕರು
  3. 'Canada's National Institute for The Blind', ಸಂಸ್ಥೆಯ ತಂಡದ ಜೊತೆಯಲ್ಲಿ ದುಡಿಯುತ್ತಿದ್ದಾರೆ.
  4. ಕನ್ಸರ್ವೇಟಿವ್ ಪಕ್ಷದ ಸಮರ್ಥಕಿ', 'ಸ್ತ್ರೀರೋಗ ತಜ್ಞೆ, ಆಶಾ ಸೇಥ್',ಒಬ್ಬ ಹೆಸರಾಂತ 'ದಾನಿ'. ಹಲವಾರು ಜನಸೇವಾ ಸಂಸ್ಥೆಗಳ ಜೊತೆ ಸಂಬಂಧ ಇಟ್ಟುಕೊಂಡು, ಬಡವರ, ಅಶಕ್ತರ, ಅಂಗವಿಕಲರ, ಏಳಿಗೆಗಾಗಿ ದುಡಿಯುತ್ತಿದ್ದಾರೆ.

೨೦೧೨, ೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ

ಬದಲಾಯಿಸಿ

'ಸನ್, ೨೦೧೨ ರ ಜುಲೈ,ನ ೧೪ ರ ಶನಿವಾರದಂದು,ಟೋರಾಂಟೋದಲ್ಲಿ ಜರುಗಿದ '೪೦ನೇ ವರ್ಷದ ಫೆಸ್ಟಿವಲ್ ಆಫ್ ಇಂಡಿಯಾ,ಸಮಾರಂಭ'ದಲ್ಲಿ, ಆಶಾ ಸೇಥ್ ರವರು, 'ಪ್ರಮುಖ ಅತಿಥಿ'ಯಾಗಿ ಆಗಮಿಸಿದ್ದರು. 'ಇಸ್ಕಾಂ ದೇವಾಲಯದ ಭಕ್ತಿ ಮಾರ್ಗಸ್ವಾಮಿ'ಗಳಿಂದ 'ಆಶಾ ಸೇಥ್' ರವರಿಗೆ ಅವರ ಸೇವಾಕಾರ್ಯಗಳನ್ನು ಮೆಚ್ಚಿದ ಬಗ್ಗೆ, 'ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು'.

ಸಮಾಜ ಸೇವಕಿ

ಬದಲಾಯಿಸಿ

ಸನ್. ೧೯೭೪,ರಿಂದ 'ಡಾ.ಆಶಾ ಸೇಥ್',[] ಮೇಪಲ್ ಎಲೆಯ ಲಾಂಛನವಾಗಿಟ್ಟುಕೊಂಡು ಸಮಾಜಸೇವೆಯನ್ನು ತಮ್ಮ ಜೀವನದ ಪರಮೋದ್ದೇಶವೆಂದು ನಂಬಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಮಂಚೂಣಿಯಲ್ಲಿರುವ ಕೆನಡಾದ ವಿಖ್ಯಾತ ಡಾ. ಆಶಾ ಸೇಥಿಯವರ ಸಾಮಾಜಿಕ ಕಾರ್ಯಕ್ರಮಗಳಿಗೆ ಹಣಸಂಗ್ರಹಣೆಗಾಗಿ ಯಾವಾಗಲೂ ಬೆಂಬಲ ನೀಡುತ್ತಾ ಬಂದ ಕೆನಡಾದ ಉನ್ನತ ವ್ಯಕ್ತಿಗಳು, ಪ್ರಮುಖರು, ಹಾಗೂ ಗಣ್ಯವ್ಯಕ್ತಿಗಳು, ಮೊದಲಾದವರ ಪಟ್ಟಿ ಹೀಗಿದೆ :

  • 'ಕೆನಡಾದ ಪ್ರಧಾನಿ ಮಾನ್ಯ, ಸ್ಟೀಫನ್ ಹಾರ್ಪರ್',
  • 'ಆಂಟೇರಿಯೊದ ಲೆಫ್ಟಿನೆಂಟ್ ಗವರ್ನರ್, ಮಾನ್ಯ, ಡೇವಿಡ್ ಸಿ.ಆನ್ಲೆ',
  • 'ಆಂಟೇರಿಯೊದ ಮುಖ್ಯಮಂತ್ರಿ, ಮಾನ್ಯ, ಡಾಲ್ಟನ್ ಮೆಗುಂಟಿ',

ಪ್ರಶಸ್ತಿಗಳು

ಬದಲಾಯಿಸಿ
  1. ೨೦೧೬ :[]
  2. ೨೦೧೩ : ಸೆನೆಟರ್ ಆಶಾಸೇಥ್ ೨೦೧೩ ರ ಸಾಲಿನ ಎನ್.ಆರ್.ಐ.ದಿವಾ ಪ್ರಶಸ್ತಿ ದೊರೆಯಿತು. []
  3. ೨೦೧೧ : ಸೆನೆಟರ್ ಆಶಾಸೇಥತಿಗೆ 'ಆಂಟೇರಿಯೊದ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್ ನ ಕೌನ್ಸಿಲ್ ಪ್ರಶಸ್ತಿ'.
  4. ೨೦೧೦ : ಡಾ.ಆಶಾಸೇಥರಿಗೆ ಒಂದು 'ಕೆನೆಡಿಯನ್ ಇಮಿಗ್ರೆಂಟ್ಸ್ ಮ್ಯಾಗಝಿನ್' ನಿರ್ಧರಿಸಿದ ಅತಿ ಪ್ರಸಿದ್ಧ ೨೫ ಕೆನೆಡಿಯನ್ಸ್ ಇಮಿಗ್ರೆಂಟ್ಸ್ ಪ್ರಶಸ್ತಿ ದೊರೆಯಿತು.
  5. ೨೦೦೯ : ಸೆನೆಟರ್ ಆಶಾಸೇಥರಿಗೆ ವಾರ್ಷಿಕ ಐ.ಸಿ.ಸಿ.ಸಿ.ಪ್ರಶಸ್ತಿ ಸಮಾರಂಭದ ದಿನದಂದು,ಮಿನಿಸ್ಟರ್ ಸ್ಟಾಕ್ವೆಲ್ ರವರಿಂದ, ಇಂಡೋ ಕೆನೆಡಿಯನ್ ಛೇಂಬರ್ ಆಫ್ ಕಾಮರ್ಸ್ ಪ್ರಶಸ್ತಿ,

ಉಲ್ಲೇಖಗಳು

ಬದಲಾಯಿಸಿ
  1. Parliment of Canada, SETH, The Hon. Asha, MD
  2. "ಕೆನಡಾದ ರಾಜಕೀಯ ವಲಯದಲ್ಲಿ ಭಾರತೀಯರ ವರ್ಚಸ್ಸು". Archived from the original on 2012-10-30. Retrieved 2016-07-23.
  3. //https://ashaseth.com Hon. Asha Seth representing Ontario 14th National Diwali celebrations,Asha Seth representing Ontario 14th National Diwali celebrations]
  4. [೧]
  5. Creation of International Maternal, Newborn and Child Health Week, admin December 5, 2014
  6. The Honourable Dr. Asha Seth awarded Life-achievement AwardThe Honourable Dr. Asha Seth awarded Life-achievement Award
  7. Awards & Recognitions