ಆಶಾ ಕುಮಾರಿ (ರಾಜಕಾರಣಿ)
ಆಶಾ ಕುಮಾರಿ | |
---|---|
ಹಿಮಾಚಲ ಪ್ರದೇಶ ವಿಧಾನಸಭೆ
| |
ಅಧಿಕಾರ ಅವಧಿ ೨೦೧೨ – ೨೦೨೨ | |
ಉತ್ತರಾಧಿಕಾರಿ | ಧವಿಂದರ್ ಸಿಂಗ್ |
ಮತಕ್ಷೇತ್ರ | ಡಾಲ್ಹೌಸಿಯಿಂದ ವಿಧಾನಸಭೆ |
ವೈಯಕ್ತಿಕ ಮಾಹಿತಿ | |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಬೃಜೇಂದ್ರ ಸಿಂಗ್ |
ಅಭ್ಯಸಿಸಿದ ವಿದ್ಯಾಪೀಠ | ಬರ್ಕಾತುಲ್ಲ ವಿಶ್ವವಿದ್ಯಾಲಯ |
ಆಶಾ ಕುಮಾರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮತ್ತು ಪಂಜಾಬ್‌ನ ಮಾಜಿ ಎಐಸಿಸಿ ಉಸ್ತುವಾರಿ ವಹಿಸಿದ್ದರು. ಅವರು ಡಾಲ್ಹೌಸಿಯಿಂದ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ]</link>[ ಉಲ್ಲೇಖದ ಅಗತ್ಯವಿದೆ ]
ಅವರು ೨೦೦೩ ರಿಂದ ೨೦೦೫ ರ ವರೆಗೆ ರಾಜ್ಯದ ಶಿಕ್ಷಣ ಸಚಿವರಾಗಿದ್ದರು.
ವೈಯಕ್ತಿಕ ಜೀವನ
ಬದಲಾಯಿಸಿಅವರು ಚಂಬಾದ ರಾಜ ಲಕ್ಷ್ಮಣ ಸಿಂಗ್ ಅವರ ಮಗ ಬ್ರಿಜೇಂದ್ರ ಸಿಂಗ್ ಅವರನ್ನು ವಿವಾಹವಾದರು.[ ಉಲ್ಲೇಖದ ಅಗತ್ಯವಿದೆ ]
ವಿವಾದ
ಬದಲಾಯಿಸಿ೨೯ ಡಿಸೆಂಬರ್ ೨೦೧೭ ರಂದು ಆಶಾ ಕುಮಾರಿಯವರು ವಾದದ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿ ವಿವಾದವನ್ನು ಹುಟ್ಟು ಹಾಕಿದರು. ನಂತರ ಆ ಕಾನ್‌ಸ್ಟೆಬಲ್ ತಿರುಗಿ ಆಶಾ ಕುಮಾರಿಯವರಿಗೆ ಕಪಾಳಮೋಕ್ಷ ಮಾಡಿದರು. [೧] ನಂತರ ಅವರು ತನ್ನ ತಪ್ಪಿಗೆ ಕ್ಷಮೆಯಾಚಿಸಿದರು. [೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Asha Kumari: Congress MLA slaps cop, gets one back in return". The Times of India (in ಇಂಗ್ಲಿಷ್). 2017-12-30. Retrieved 2019-08-22.