ಆಲ್ ಗೊರ್

ಅಮೆರಿಕದ ೪೫ನೇ ಉಪಾಧ್ಯಕ್ಷ

ಆಲ್ ಗೊರ್, ಅಮೆರಿಕದ ಮಾಜಿ ಉಪಾದ್ಯಕ್ಷರು, ತಮ್ಮ ಪದವಿಯಲ್ಲಿದ್ದ ಸಮಯದಲ್ಲೂ ಪರಿಸರಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿವಹಿಸಿದ ವ್ಯಕ್ತಿ. ತಮ್ಮ ೮ ವರ್ಷಗಳ ಉಪಾಧ್ಯಕ್ಷರ ಪದವಿಯಲ್ಲೂ, ವಿಶ್ವದ ತಾಪಮಾನದಲ್ಲಾಗುತ್ತಿರುವ ವೃದ್ಧಿಯನ್ನು ತೀವ್ರವಾಗಿ ಗಮನಿಸುತ್ತಾಬಂದಿದ್ದಾರೆ. ಇದೊಂದು ಕಳವಳ ಅವರಿಗೆ. ಅದಕ್ಕೆ ಸಮಾಧಾನಕರವಾದ ಉಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಯ ಜೊತೆ ಜಂಟಿಯಾಗಿ ಕಾರ್ಯನಿರ್ವಸುತ್ತಿರುವ ಏಕೈಕ ವ್ಯಕ್ತಿ . ತಮ್ಮ ದಿನದ ಪೂರ್ಣ ಸಮಯವನ್ನು ನಿಗದಿಮಾಡಿ ದುಡಿಯುತ್ತಿರುವ ವ್ಯಕ್ತಿ ಆಲ್ ಗೊರ್- ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ೨೦೦೭ ರ ನೊಬೆಲ್ ಶಾಂತಿ ಪುರಸ್ಕಾರವನ್ನು ಭಾರತದ ಡಾ. ರಾಜೇಂದ್ರ ಕುಮಾರ್ ಪಚೌರಿಯವರೊದನೆ ಹಂಚಿಕೊಂಡಿದ್ದಾರೆ. ಆಲ್ ಗೊರ್ : ಆಲ್ಬರ್ಟ್ ಆರ್ನಾಲ್ಡ್ ಆಲ್ ಗೊರ್ ಜುನಿಯರ್

ಅಮೆರಿಕದ ರಾಜಕೀಯದಲ್ಲಿ, ಆಲ್ ಗೊರ್, ಪರಿವಾರದ ಬಹಳ ವರ್ಷಗಳ ನಂಟು

ಬದಲಾಯಿಸಿ

ಹುಟ್ಟಿದ್ದು ವಾಶಿಂಟನ್ ಡಿ.ಸಿ. ಯಲ್ಲಿ , ೩೧ ರ ಮಾರ್ಚ್, ೧೯೪೮ ರಂದು. ಆಲ್ ಗೊರ್ ರವರು, ೪೫ ನೆಯ ಉಪಾಧ್ಯಕ್ಷರಾಗಿ, ಬಿಲ್ ಕ್ಲಿಂಟನ್ ರವರ ಸಮಯದಲ್ಲಿದ್ದರು. (೧೯೭೭ ರಿಂದ ೧೯೮೫) ರವರೆಗೆ ಅಮೆರಿಕದ ಸದನದ ಪ್ರತಿನಿಧಿಯಾಗಿ, ಹಾಗೂ ಸೆನೆಟರ್ ಆಗಿ, ೧೯೮೫ ರಿಂದ ೧೯೯೩ ರವರೆವಿಗೆ, ಇದ್ದರು. ಅವರು ಟೆನ್ನಿಸಿ, ರಾಜ್ಯವನ್ನು ಪ್ರತಿನಿಧಿಸಿ ಆಯ್ಕೆಯಾದ ವ್ಯಕ್ತಿ.

ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ವಿವಾದಾಸ್ಪದವಾದ ಮತಗಳ ಮರು-ಎಣಿಕೆ ಯ ಪ್ರಕ್ರಿಯೆಯಲ್ಲಿ, ಜಾರ್ಜ್ ಬುಶ್, ಮುಂದಾದರು :

ಬದಲಾಯಿಸಿ

ಸನ್, ೨೦೦೦ ದಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ, ಅತ್ಯಂತ ಪ್ರಚಂಡ ಜನಪ್ರಿಯ ವ್ಯಕ್ತಿಯಾಗಿ , ಮತಗಣತಿಯ ಸಮಯದಲ್ಲಿ ಮಂಚೂಣಿಯಲ್ಲಿದ್ದರು. ಫ್ಲಾರಿಡ ರಾಜ್ಯದ, ನ್ಯಾಯಯುತ ಪುನರ್- ಮತಗಣತಿಯ ಬೇಡಿಕೆ ಬಂದ ಸಮಯದಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ವಿಜಯದ ತೀರ್ಮಾನ ಜಾರ್ಜ್ ಬುಷ್ ರವರ ಕಡೆಯಾದ್ದರಿಂದ , ಅವರು ತಮ್ಮ ಅಹವಾಲನ್ನು ವಾಪಸ್, ತೆಗೆದುಕೊಳ್ಳಬೇಕಾಯಿತು. ಅಮೆರಿಕದೇಶದ ಇತಿಹಾಸಲ್ಲೇ ಇದೊಂದು ನಿರ್ಣಯ, ವಿವಾದಾಸ್ಪದವಾದದ್ದೆಂದು ದಾಖಲಾಗಿದೆ. ಆಲ್ ಗೊರ್, ಅಮೆರಿಕನ್ ಟೆಲೆವಿಶನ್ ಛಾನೆಲ್, ನ "ಕರೆಂಟ್ ಟಿ.ವಿ", ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಇದಲ್ಲದೆ ಇನ್ನೂ ಹಲವಾರು ಸಂಸ್ಥೆಗಳಲ್ಲಿ, ಉನ್ನತ ಹುದ್ದೆಗಳಲ್ಲಿ ದುಡಿಯುತ್ತಿದ್ದಾರೆ.

ಆಲ್ ಗೊರ್ ರ ತಂದೆ-ತಾಯಿಗಳು :

ಬದಲಾಯಿಸಿ

ಆಲ್ ಗೊರ್ ರ ವರ ತಂದೆ, ಆಲ್ಬರ್ಟ್ ಆರ್ನಾಲ್ಡ್ ಗೊರ್, ಸೀನಿಯರ್. ವಾಶಿಂಗ್ ಟನ್ ನಲ್ಲಿ, ಅಮೆರಿಕದ ಪ್ರತಿನಿಧಿಯಾಗಿ, (೧೯೩೯-೧೯೪೪) ರವರೆಗೆ ಆಯ್ಕೆ ಯಾಗಿದ್ದರು. ಪುನಃ (೧೯೪೫-೫೩) ರವರೆಗೆ, ಮುಂದೆ, ಸೆನೆಟರ್ ಆಗಿ, ೧೯೫೩-೭೧ ರವಗೆ ಸತತವಾಗಿ ಅಧಿಕಾರದಲ್ಲಿದ್ದರು. ತಾಯಿ- ಪಾಲಿನ್ ಲಫಾನ್ ಗೊರ್, ಯವರು, ವ್ಯಾಂಡರ್ ಬಿಲ್ಟ್ ವಿಶ್ವವಿದ್ಯಾಲಯದ ಕಾನೂನು ಪದವೀಧರೆ. ಆಕೆ ಅದೇ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪದವೀಧರರಲ್ಲಿ ಒಬ್ಬರು, ಎನ್ನುವುದು ಧಾಖಲಿಸಲು ಯೋಗ್ಯವಾದ ಸಂಗತಿ, ಸಹಿತ. ಆಲ್ ಗೊರ್, ಜೂನಿಯರ್, ತಮ್ಮ ಅಧಿಕಾರದ ಸಮಯದಲ್ಲೂ ವಿಶ್ವದ ಹಮಾನವೈಪರೀತ್ಯದ ಬಗ್ಗೆ ಬಹಳ ಚಿಂತಿಸುತ್ತಿದ್ದರು. ಹವಾಮಾನದ ತೀವ್ರ ಬದಲಾವಣೆಗೆ, ಮಾನವನ ದುರ್ವ್ಯವಹಾರಗಳೂ ಕೊಡುಗೆಯನ್ನು ಬಹಳಮಟ್ಟಿಗೆ ಕಾರಣವಾಗಿವೆ ಎನ್ನುವ ಮಾತನ್ನು ಅವರು ಪದೇ-ಪದೇ ಒತ್ತಿ-ಒತ್ತಿ ಹೇಳುತ್ತಲೇ ಇದ್ದರು. ಈ ಪಿಡುಗನ್ನು ಮೊದಲು ಸರಿಯಾಗಿ ವೈಜ್ಞಾನಿಕವಾಗಿ ದಾಖಲಿಸಿ, ನಂತರ ಅದರ ಬಗ್ಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ, ಅಂತಹ ನಿಸ್ವಾರ್ಥವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಂತಾಗಿದೆ. ನಿಜವಾಗಿಯೂ ಆಲ್ ಗೋರ್, ಅಂತಹ ಕಾರ್ಯತತ್ಪರರಲ್ಲಿ ಮೇಲ್ಪಂಕ್ತಿಯಲ್ಲಿದ್ದಾರೆ.