ಆಲೇಖಾನ್ ಜಲಪಾತ
ಆಲೇಖಾನ್ ಜಲಪಾತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆಲೇಖಾನ್ ಎಸ್ಟೇಟ್‍ನಿಂದ ಹರಿದು ಬರುವ ನೀರಿನಿಂದ ನಿರ್ಮಿತವಾಗಿರುವ ಒಂದು ಸುಂದರ ಜಲಪಾತ. ಸುಮಾರು ೫೦ ಅಡಿಗಳಷ್ಟು ಎತ್ತರವಿರುವ ಇದು ಚಾರ್ಮಾಡಿ ಘಟ್ಟದಲ್ಲಿ ಬರುತ್ತದೆ. ಕೊಟ್ಟಿಗೆಹಾರದಿಂದ ಚಾರ್ಮಾಡಿಗೆ ಹೋಗುವ ರಸ್ತೆಯಲ್ಲಿ ಮಲಯಮಾರುತ ಅತಿಥಿ ಗೃಹದ ನಂತರ ಆಲೇಖಾನ್ ಎಸ್ಟೇಟ್ನ ಬಳಿ ಎಡಗಡೆ ಇರುವ ಒಂದು ಸಣ್ಣ ಬಸ್ಸು ತಂಗುದಾಣದ ಹಿಂಬಾಗದಲ್ಲಿ ಇದೆ.