ಆಲಿಸ್ ಸಾಲೊಮನ್ (19 ಏಪ್ರಿಲ್ 1872, ಬರ್ಲಿನ್ – 30 ಆಗಸ್ಟ್ 1948, ನ್ಯೂಯಾರ್ಕ್) ಅವರು ಜರ್ಮನ್ ಸಾಮಾಜಿಕ ಸುಧಾರಕರು ಮತ್ತು ಸಮಾಜ ಸುಧಾರಣೆಯನ್ನು ಒಂದು ಶೈಕ್ಷಣಿಕ ಅಧ್ಯಯನದ ವಿಷಯವನ್ನಾಗಿಸಿದವರು. ಜರ್ಮನ್ ಸಮಾಜ ಸುಧಾರಣೆಗಾಗಿ ಅವರು ಮಾಡಿದ ಕೆಲಸವನ್ನು ಗುರುತಿಸಿ ಅವರ ಹೆಸರಿನಲ್ಲಿ ೧೯೮೯ರಲ್ಲಿ ಒಂದು ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು. ಜರ್ಮನಿಯಲ್ಲಿ ಒಂದು ವಿಶ್ವವಿದ್ಯಾಲಯ, ಒಂದು ಉದ್ಯಾನ ಮತ್ತು ವೃತ್ತಗಳನ್ನು ಅವರ ಹೆಸರಿನಿಂದ ಕರೆಯಲಾಗುತ್ತಿದೆ.

ಆಲಿಸ್ ಸಾಲೊಮನ್

ಜೀವನ ಮತ್ತು ವೃತ್ತಿಜೀವನ

ಬದಲಾಯಿಸಿ

ಆಲಿಸ್ ಸಾಲೊಮನ್ ಅವರು ಅವರ ಹೆತ್ತವರಿಗೆ ಎಂಟು ಮಕ್ಕಳಲ್ಲಿ ಮೂರನೆಯವರು, ಮತ್ತು ಎರಡನೇ ಮಗಳು. ಶಿಕ್ಷಕಿಯಾಗುವ ತನ್ನ ಮಹತ್ವಾಕಾಂಕ್ಷೆಯಿದ್ದೂ ಆ ಕಾಲದ ಅನೇಕ ಶ್ರೀಮಂತ ಹುಡುಗಿಯರ ಹಾಗೆ ಅವರಿಗೂ ಶಿಕ್ಷಣವನ್ನು ಮುಂದುವರಿಸಲಾಗಲಿಲ್ಲ.  

೧೯೦೦ ರಲ್ಲಿ ಅವರು  Bund Deutscher Frauenvereine ("ಫೆಡರೇಶನ್ ಆಫ್ ಜರ್ಮನ್ ಮಹಿಳಾ ಸಂಘಗಳು" - BDF ) ಸೇರಿದರು. ಕಾಲಕ್ರಮೇಣ ಅವರು  ಉಪ ಅಧ್ಯಕ್ಷೆಯಾಗಿ ಆಯ್ಕೆಯಾದರು ಹಾಗು ೧೯೨೦ ರವರೆಗೆ ಉಪ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು. ಈ ಸಂಸ್ಥೆಯು ಅಶಕ್ತ, ತೊರೆದುಹೋದ ಅಥವಾ ಏಕೈಕ ತಾಯಂದಿರನ್ನು ಬೆಂಬಲಿಸಿತು ಮತ್ತು ಅವರ ಮಕ್ಕಳನ್ನು ನಿರ್ಲಕ್ಷಿಸಿರುವುದನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತು.

೧೯೦೨ ರಿಂದ ೧೯೦೬ ರ ವರೆಗೂ ಅವರು ಬರ್ಲಿನ್ನ ಫ್ರೆಡ್ರಿಕ್ ವಿಲ್ಹೆಲ್ಮ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ೧೯೦೮ ರಲ್ಲಿ "ಪುರುಷ ಮತ್ತು ಮಹಿಳೆಯರ ಸಂಬಳಗಳಲ್ಲಿನ ಅಸಮಾನತೆಗೆ ಕಾರಣಗಳು" ಎಂಬ ಪ್ರಬಂಧದೊಂದಿಗೆ ತಮ್ಮ ಡಾಕ್ಟರೇಟ್ ಪದವಿಯನ್ನು  ಪಡೆದರು.[]

೧೯೦೯ ರಲ್ಲಿ ಅವರು ರಾಷ್ಟ್ರೀಯ ಮಹಿಳಾ ಒಕ್ಕೂಟಕ್ಕೆ  ಕಾರ್ಯದರ್ಶಿಯಾಗಿದ್ದರು. ಅವರು ಜುದಾಯಿಸಂ ಇಂದ ೧೯೧೪ ರಲ್ಲಿ ಲೂಥರನ್ ಚರ್ಚಿಗೆ ಪರಿವರ್ತನೆಯಾದರು. ೧೯೧೭ ರಲ್ಲಿ ಅವರು ಜರ್ಮನ್ ಮಹಿಳಾ ಸಾಮಾಜಿಕ ಶಾಲೆಗಳ ಸಮ್ಮೇಳನದ ಅಧ್ಯಕ್ಷರಾದರು. ೧೯೧೯ ರ ಹೊತ್ತಿಗೆ ಅವರು ಹದಿನಾರು ಶಾಲೆಗಳನ್ನು  ಸ್ಥಾಪಿಸಿದರು.

೧೯೨೦ ರ ಉತ್ತರಾರ್ಧದಲ್ಲಿ ಮತ್ತು ೧೯೩೦ ರ ದಶಕದ ಆರಂಭದಲ್ಲಿ, ಜರ್ಮನಿಯ ಬಡವರು ಎದುರಿಸಿದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಈ ಸಂಘಟನೆಯು ಹದಿಮೂರು ಏಕಗೀತೆಗಳನ್ನು ಪ್ರಕಟಿಸಿತು. ಆಲಿಸ್ ಸಾಲೋಮನ್ ಅವರ ೬೦ ನೇ ಹುಟ್ಟುಹಬ್ಬದಂದು, ಅವರು ಬರ್ಲಿನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು ಮತ್ತು ಪ್ರಶ್ಯನ್ ರಾಜ್ಯ ಸಚಿವಾಲಯದ ರಜತ ಪದಕವನ್ನು ಪಡೆದರು.

 
೨೫ ಜನವರಿ ೧೯೩೯ ರಿಂದ ಜರ್ಮನಿಯ ಪೌರತ್ವವನ್ನು ಕಳೆದುಕೊಂಡ ದಾಖಲೆ

ಆಯ್ದ ಪ್ರಕಟಣೆಗಳು

ಬದಲಾಯಿಸಿ
  • Character is Destiny: the autobiography of Alice Salomon, edited by Andrew Lees, Ann Arbor: University of Michigan Press, 2004, ISBN 04721136740472113674
  • Charakter ist Schicksal, Lebenserinnerungen, herausgegeben von Rüdiger Baron und Rolf Landwehr, Weinheim und Basel: Beltz Verlag, 1983 ISBN 3-407-85036-03-407-85036-0 (Auszug in: Lixl-Purcell (Hg) (German)
  • Erinnerungen deutsch-jüdischer Frauen 1900 - 1990 Reclam, Lpz. 1992 u.ö. ISBN 3-379-01423-03-379-01423-0 S. 120 - 125) (German)

ಆಯ್ಕೆಮಾಡಿದ ಗ್ರಂಥಸೂಚಿ

ಬದಲಾಯಿಸಿ

Translator's note: These are in German.

  • Elga Kern, Führende Frauen Europas, Sammelbuch, München 1927
  • Muthesius, Hans, hrsg, Alice Salomon, die Begründerin des sozialen Frauenberufs in Deutschland, ihr Leben und ihr Werk. [von Dora Peyser et al.], Köln, C. Heymann 1958
  • Margarete Hecker: Sozialpädagogische Forschung: Der Beitrag der Deutschen Akademie für soziale und pädagogische Forschung. In: Soziale Arbeit. 1984/Nr. 2, S. 106-121
  • Joachim Wieler: Er-Innerung eines zerstörten Lebensabends - Alice Salomon während der NS-Zeit (1933-37) und im Exil (1937-48). Lingbach, Darmstadt 1987, ISBN 3-923982-01-13-923982-01-1
  • Manfred Berger (Pädagoge): Alice Salomon. Pionierin der sozialen Arbeit und der Frauenbewegung. Brandes & Apsel, Frankfurt am Main 1998. ISBN 3-86099-276-73-86099-276-7
  • Carola Kuhlmann: Alice Salomon. Ihr Lebenswerk als Beitrag zur Entwicklung der Theorie und Praxis sozialer Arbeit. Deutscher Studienverlag, Weinheim 2000, ISBN 3-89271-927-63-89271-927-6
  • Gudrun Deuter: Darstellung und Analyse der Vortragszyklen an der Deutschen Akademie für soziale und pädagogische Frauenarbeit in den Jahren 1925-1932.Bonn 2001 (unveröffentl. Diplomarbeit)
  • Norbert Rühle: Jeanette Schwerin. Ihr Leben, ihr Werk und ihre Bedeutung für die Soziale Arbeit heute, München 2001 (unveröffentlichte Diplomarbeit)
  • Anja Schüler: Frauenbewegung und soziale Reform. Jane Addams und Alice Salomon im transatlantischen Dialog, 1889-1933. Franz Steiner Verlag, Stuttgart 2004, ISBN 3-515-08411-83-515-08411-8
  • Manfred Berger: Frauen in sozialer Verantwortung: Alice Salomon. In: Unsere Jugend. 2008/Nr. 10, S. 430-433

ಉಲ್ಲೇಖಗಳು

ಬದಲಾಯಿಸಿ


ಮಾರ್ಚ್ ೨೮, ೨೦೦೯ ರಂದು ಜರ್ಮನ್ ವಿಕಿಪೀಡಿಯದಿಂದ ಸಂಕ್ಷಿಪ್ತಗೊಳಿಸಿ, ಅನುವಾದಿಸಲಾಗಿತ್ತು. 

ಬಾಹ್ಯ ಕೊಂಡಿಗಳು

ಬದಲಾಯಿಸಿ