ಆಲನ್, ಡಾ ಜಾನ್
1885-1955. ಪ್ರಸಿದ್ಧ ನಾಣ್ಯಶಾಸ್ತ್ರಜ್ಞ.
ಬದುಕು
ಬದಲಾಯಿಸಿವಿದ್ಯಾಭ್ಯಾಸ ಎಡಿನ್ ಬರೊ ಲೀಪ್ ಜಿಗ್ ವಿಶ್ವವಿದ್ಯಾಲಯಗಳಲ್ಲಿ. 1902-47ರವರೆಗೆ ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಅಧಿಕಾರಿಯಾಗಿದ್ದ. ಇದೇ ಅವಧಿಯಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜು ಮತ್ತು ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ನಲ್ಲಿ ಸಂಸ್ಕೃತದ ಪ್ರಾಚಾರ್ಯನಾಗಿದ್ದ. 1949-54ರ ಅವಧಿಯಲ್ಲಿ ರಾಯಲ್ ಆರ್ಕಿಯಲಾಜಿಕಲ್ ಇನ್ಸ್ಟಿಟ್ಯೂಟಿನ ಉಪಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದಾನೆ.
ಭಾರತದ ಪ್ರಾಚೀನ ಇತಿಹಾಸದಲ್ಲ್ಲೂ, ನಾಣ್ಯ ವಿಷಯದಲ್ಲೂ ವಿಶೇಷ ಪರಿಶ್ರಮವಿತ್ತು.
ಸಾಧನೆ
ಬದಲಾಯಿಸಿಕ್ಯಾಟಲಾಗ್ ಆಫ್ ಗುಪ್ತ ಕಾಯಿನ್ಸ್,ಮಾರ್ಕ್ಡ್ ಪಂಚ್ ಮ ಕಾಯಿನ್ಸ್ - ಇವು ಆತನ ಪ್ರಮುಖ ಕೃತಿಗಳು. ಬ್ರಿಟಿಷ್ ಮ್ಯೂಸಿಯಮ್ನಲ್ಲಿರುವ ಭಾರತದ ನಾಣ್ಯಗಳ ಬಗ್ಗೆ ಒಂದು ಸುದೀರ್ಘ ಪುಸ್ತಕವನ್ನು ರಚಿಸಿದ್ದಾನೆ. ಇದಲ್ಲದೆ, ಇತರ ಗ್ರಂಥಗಳಲ್ಲಿ ಅಸ್ಸಾಮಿನ ಮತ್ತು ಮಾಲ್ಡೀವ್ ದ್ವೀಪದ ನಾಣ್ಯಗಳ ಬಗೆಗೂ ಮೌಲಿಕ ಪ್ರಬಂಧಗಳನ್ನು ಬರೆದಿದ್ದಾನೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: