ಆಲನ್, ಗ್ರಾಂಟ್ (ಚಾರ್ಲ್ಸ್ ಗ್ರಾಂಟ್ ಬ್ಲೇರ್ ಫಿಂಡೀ)
1848-99. ಇಂಗ್ಲಿಷ್ ಗ್ರಂಥಕರ್ತ.
ಬದುಕು
ಬದಲಾಯಿಸಿಕೆನಡದ ಆಂಟೇರಿಯೊ ಜಿಲ್ಲೆಯ ಕಿಂಗ್ಸ್ಟನ್ನಲ್ಲಿ ಜನಿಸಿದ. ತಂದೆ ಐರಿಷ್ ಪಾದ್ರಿ. ಮೊದಲು ಅಮೆರಿಕ,ಫ್ರಾನ್ಸ್ ಗಳಲ್ಲಿ ಶಿಕ್ಷಣ ಪಡೆದು ಮುಂದೆ ಆಕ್ಸ್‌ಫರ್ಡ್‌ನ ಮರ್ಟನ್ ಕಾಲೇಜಿನಲ್ಲಿ ಓದಿ ಪದವೀಧರನಾದ. ಕೊಂಚಕಾಲ ಜಮೈಕದಲ್ಲಿ ಉಪಾಧ್ಯಾಯನಾಗಿದ್ದು ಅನಂತರ ಇಂಗ್ಲೆಂಡಿಗೆ ಬಂದು ನೆಲೆಸಿದ.
ಬರಹ
ಬದಲಾಯಿಸಿಅವನ ಗ್ರಂಥರಚನೆ ವಿಪುಲ. ಅನೇಕ ಕಾದಂಬರಿಗಳನ್ನು ಬರೆದ. ಅವುಗಳಲ್ಲಿ ಮುಖ್ಯವಾದುವು ಎರಡು. ದಿ ಡೆವಿಲ್ಸ್ ಡೈ ಎಂಬುದು ಭಾವೋದ್ರೇಕಕಾರಿ ಕಾದಂಬರಿ. ದಿ ವುಮನ್ ಹೂ ಡಿಡ್ ಎಂಬುದರಲ್ಲಿ ಲೈಂಗಿಕ ವಿಷಯಗಳನ್ನು ವಸ್ತುವಾಗಿಟ್ಟುಕೊಂಡಿದ್ದಾನೆ. ಮುಂದೆ ಹಲವು ಕಾದಂಬರಿಕಾರರು ಇವನ ಬರೆಹವನ್ನು ಅನುಕರಿಸಿದರು. ಸರಳತೆ ಇವನ ಬರೆಹದ ವೈಶಿಷ್ಟ್ಯ. ವಿಜ್ಞಾನಕ್ಕೆ ಸಂಬಂಧಿಸಿದ ಫಿಸಿಯಲಾಜಿಕಲ್ ಈಸ್ತೆಟಿಕ್ಸ್, ದಿ ಎವಲ್ಯೂಷನಿಸ್ಟ್ ಎಟ್ ಲಾರ್ಜ್, ದ ಎವಲ್ಯೂಷನ್ ಆಫ್ ದಿ ಐಡಿಯ ಆಫ್ ಗಾಡ್ ಮುಂತಾದ ಗ್ರಂಥಗಳಲ್ಲಿ ಕ್ಲಿಷ್ಟ ವಿಚಾರಗಳನ್ನು ಸರಳವಾಗಿ ನಿರೂಪಿಸಿದ್ದಾನೆ.
ಭಾಗಶಃ ಗ್ರಂಥಸೂಚಿ
ಬದಲಾಯಿಸಿ1877- ಸೈಕೊಲಾಜಿಕಲ್ ಎಸ್ತೆಟಿಕ್ಸ್
1879- ಧಿ ಕಲರ್ ಸೆನ್ಸ್: ಇಟ್ಸ್ ಒರಿಜಿನ್ ಅನ್ಡ್ ಡೆವಲಪ್ಮೆಂಟ್