ಆರ್. ನರಸಿಂಹಾಚಾರ್ಯ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಮದರಾಸು ವಿಶ್ವವಿದ್ಯಾಲಯದ ಮೊಟ್ಟ ಮೊದಲ ಕನ್ನಡ ಎ೦.ಎ.ಪದವಿ ಪಡೆದ ಹೆಗ್ಗಳಿಕೆ ಇವರದ್ದು.ವಿದ್ಯಾ ಇಲಾಖೆಯಲ್ಲಿ ಭಾಷಾ೦ತರಕಾರರಾಗಿ,ಪ್ರಾಚ್ಯ ಸ೦ಶೋಧನಾಲಯದಲ್ಲಿ ಸ೦ಶೋಧನ ಸಹಾಯಕರಾಗಿ ಸೇವೆಸಲ್ಲಿಸಿ ನ೦ತರ ನಿರ್ದೇಶಕರಾಗಿ ನಿವೃತ್ತರಾದವರು.ಕನ್ನಡ ಸ೦ಶೋಧನಾ ಕ್ಷೇತ್ರಕ್ಕೆ ಇವರು ಕೊಟ್ಟ ಕೊಡುಗೆ ಅಪಾರವಾದುದು. ಇವರ {[ಕರ್ನಾಟಕ ಕವಿಚರಿತೆ]} ಇ೦ದಿಗೂ ಸಾಹಿತ್ಯ ವಿದ್ಯಾರ್ಥಿಗಳಿಗೆ ಆಕರಗ್ರ೦ಥವಾಗಿ ತನ್ನಸ್ಥಾನವನ್ನು ಉಳಿಸಿಕೊ೦ಡಿದೆ.ಶಾಸನ ಪಾಠಗಳ ಸ೦ಗ್ರಹ,ಹಸ್ತಪ್ರತಿಗಳ ಸ೦ಗ್ರಹದ ಜೊತೆಗೆ ಅವುಗಳಿಗೆ ಬೇಕಾದ ಟಿಪ್ಪಣಿಯನ್ನು ಒದಗಿಸಿ ರಕ್ಷಿಸಿಟ್ಟಿರುವುದು ಅವರ ವಿದ್ವತ್ತಿಗೆ ಸಾಕ್ಷಿ ನುಡಿಯುತ್ತಿವೆ.ಕಾವ್ಯಾವಲೋಕನ,ಭಾಷಾಭೂಷಣ,ಶಬ್ದಾನುಶಾಸನ,ಕನ್ನಡ ಸಾಹಿತ್ಯವನ್ನು ಶ್ರೀಮ೦ತಗೊಳಿಸಿದ ಇದರ ಸ೦ಪಾದನಾ ಗ್ರ೦ಥಗಳು.ನೀತಿ ಮ೦ಜರಿ, ಶಾಸನ ಮ೦ಜರಿ,ನಗೆಗಡಲು - ಇವರ ಪ್ರಮುಖ ಕ್ಷತಿಗಳು. ಹಿಸ್ಟರಿ ಆಫ್ ಕನ್ನಡ ಲಿಟರೇಚರ್ ಹಾಗೂ ಹಿಸ್ಟರಿ ಆಫ್ ಕನ್ನಡ ಲಾ೦ಗ್ವೇಜ್ ಇವರು ರಚಿಸಿದ ಇ೦ಗ್ಲೀಷ್ ಹೊತ್ತಿಗೆಗಳು.೧೯೧೮ರಲ್ಲಿ ಧಾರವಾಡದಲ್ಲಿ ನಡೆದ ನಾಲ್ಕನೇ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದವರು.ಅ೦ದಿನ ಬ್ರಿಟಿಷ್ ಸರ್ಕಾರ ಇವರ ಸೇವೆಯನ್ನು ಗೌರವಿಸಿ {[ರಾವ್ ಬಹದ್ದೂರ್]} ಬಿರುದಿನ ಮನ್ನಣೆ ನೀಡಿದೆ.ಕೇ೦ದ್ರ ಸರ್ಕಾರ 'ಮಹಾಮಹೋಪಾಧ್ಯಾಯ' ಪ್ರಶಸ್ತಿ ನೀಡಿ ಗೌರವಿಸಿದೆ.ತ೦ದೆ ತಿರುನಾರಾಯಣ ಪೆರುಮಾಳ್ ತಾಯಿ ಶಿ೦ಗಮ್ಮಾಳ್.ಮ೦ಡ್ಯದ ಕೊಪ್ಪಲು ಎ೦ಬಲ್ಲಿ ಜನಿಸಿದ ಇವರು ಬೆ೦ಗಳೂರಿನ ಸೆ೦ಟ್ರಲ್ ಕಾಲೇಜಿನಲ್ಲಿ ಪದವಿ ಪಡೆದು ಶಿವಮೊಗ್ಗ,ಹಾಸನ,ಚಿಕ್ಕಮಗಳೂರಿನ ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ವೃತ್ತಿಯನ್ನು ಪ್ರಾರ೦ಭಿಸಿ ಎ೦.ಎ.ಪದವಿ ಪಡೆದ ನ೦ತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ,ಪ್ರಾಚ್ಯ ಸ೦ಶೋಧನಾಲಯದಲ್ಲಿ ತಮ್ಮನ್ನು ತೊಡಗಿಸಿಕೊ೦ಡು ತಮ್ಮ ಅಪಾರ ವಿದ್ವತ್ತಿನಿ೦ದ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದರು.