ಆರ್.ಕಲ್ಯಾಣಮ್ಮ

ಆರ್.ಕಲ್ಯಾಣಮ್ಮನವರು ಕ್ರಿ.ಶ. ೧೮೯೪ ರಲ್ಲಿ ಬಡಕುಟುಂಬದಲ್ಲಿ ಜನಿಸಿದರು.೧೦ನೆಯ ವರ್ಷಕ್ಕೆ ಇವರ ವಿವಾಹವಾಯಿತು. ಮರುವರ್ಷವೆ ಇವರು ವಿಧವೆಯಾದರು. ತಮ್ಮ ತಂದೆಯ ಉತ್ತೇಜನದಿಂದ ಎಲ್.ಎಸ್. ಉತ್ತೀರ್ಣರಾದ ಕಲ್ಯಾಣಮ್ಮನವರು ಹಿರಿಯ ಸಾಹಿತಿಗಳ ಪ್ರೋತ್ಸಾಹದಿಂದ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ೧೯೪೦ರಲ್ಲಿ ಸರಸ್ವತಿ ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿ ೪೨ ವರ್ಷಕಾಲ ನಡೆಯಿಸಿಕೊಂಡು ಬಂದರು. ಕಲ್ಯಾಣಮ್ಮನವರು ೧೯೩೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ಅದೆ ವರ್ಷ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಕಲ್ಯಾಣಮ್ಮನವರ ಸಾಹಿತ್ಯ ರಚನೆ: ಕಾದಂಬರಿಗಳು:

 • ಭಕ್ತಮೀರಾ
 • ಸತಿಪದ್ಮಿನಿ
 • ಷಹಜಹಾನ್
 • ಸ್ನೇಹಲತಾ
 • ಮಾಧವಿ
 • ನಿರ್ಮಲಾ
 • ನೀರದಾ
 • ರಣಕೇಸರಿ
 • ಇಂದಿರೆ
 • ಪ್ರಿಯಂವದೆ
 • ಸುಖಲತಾ

ನಾಟಕಗಳು:

 • ಬಲಿಪೀಠ
 • ಬ್ಯಾರಿಸ್ಟರ್ ರಾಮಚಂದ್ರನ್
 • ಇಪ್ಪತ್ತನೆಯ ಶತಮಾನದ ಅಳಿಯ
 • ಯದುರಾಯ
 • ವರದಕ್ಷಿಣೆ
 • ದರಿದ್ರನಾರಾಯಣ

ಪುರಸ್ಕಾರಗಳು ಕಲ್ಯಾಣಮ್ಮನವರಿಗೆ ೧೯೩೮ ರಲ್ಲಿ ಶ್ರೀಮನ್ಮಹಾರಾಜ ಕೃಷ್ಣರಾಜ ಒಡೆಯರಿಂದ ಪ್ರಥಮ ವರ್ಗದ ಸಾರ್ವಜನಿಕ ಸುವರ್ಣ ಪದಕ ಹಾಗು ವಂಗ ಸಾಹಿತ್ಯ ಸಂಘದಿಂದ ವಿದ್ಯಾ ವಿನೋದಿನಿ ಬಿರುದು ದೊರೆತವು. ಆರ್. ಕಲ್ಯಾಣಮ್ಮನವರು ೧೯೬೫ರಲ್ಲಿ ನಿಧನರಾದರು.