ಆರ್.ಎಸ್.ಹುಕ್ಕರಿಕರ್
ಜೆ.ಎಸ್.ಎಸ್ ಸಮೂಹವನ್ನು ಸ್ಥಾಪಿಸಿ ಸದ್ವಿಶಯಗಳನ್ನು ಅನುಸರಿಸಲು ಅಡಿಪಾಯವನ್ನಾಗಿ ಹಾಕಿ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಮಹಾತ್ಮರು ಶ್ರೀ.ಹುಕ್ಕರಿಕರ್ [೧].
ಬಾಲ್ಯ
ಬದಲಾಯಿಸಿಶ್ರೀ.ಹುಕ್ಕರಿಕರ್ ಅವರು ೨೨-೧೦-೧೮೮೬, ಬೆಳಗಾವಿ ಜಿಲ್ಲೆಯ ಚಿಂಚಾಲಿಯಲ್ಲಿ ಜನಿಸಿದರು. ಅವರು ವೈಷ್ಣವ ಕುಟುಂಬದಲ್ಲಿ ಜನಿಸಿದರು. ಅವರ ನೈತಿಕ ಗುಣಗಳನ್ನು ಬಿಚ್ಚಿಡಲು ಮನೆಯ ವಾತಾವರಣವು ವಾಹಕವಾಗಿತ್ತು [೨].
ಜೀವನ
ಬದಲಾಯಿಸಿಅವರು ೧೯೧೦ ರಲ್ಲಿ ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿ.ಎ ಪದವಿ ಪಡೆದರು ಮತ್ತು ನಂತರ ೧೯೧೨ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದರು. ಅವರು ಗಾಂಧೀಜಿಯ ಸಮಕಾಲೀನರಾಗಿದ್ದರು ಮತ್ತು ಆರ್.ಆರ್. ದಿವಾಕರ್, ತಿಲಕ್, ಆಲೂರು ವೆಂಕಟರಾವ್ ಇತ್ಯಾದಿ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು.
ಲೋಕಮಾನ್ಯ ತಿಲಕರಿಂದ ಪ್ರೇರೇಪಿತರಾದ ಅವರು ಶಿಕ್ಷಣವನ್ನು ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಶಿಕ್ಷಣವೇ ಪ್ರಗತಿಯ ಹಾದಿ ಎಂದು ಅವರು ಭಾವಿಸಿದ್ದರು. ಆದ್ದರಿಂದ ಎಂ.ಎ ಪದವಿ ಪಡೆದ ನಂತರ ಅವರು ಧಾರವಾಡದ ವಿಕ್ಟೋರಿಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡು ೧೯೨೦ ರವರೆಗೆ ಅಲ್ಲಿ ಕೆಲಸ ಮಾಡಿದರು. ಬೋಧನಾ ಕೌಶಲ್ಯ, ಶಿಸ್ತು ಮತ್ತು ಉನ್ನತ ನೈತಿಕ ಮೌಲ್ಯಗಳಿಗೆ ಅವರು ಹೆಸರುವಾಸಿಯಾಗಿದ್ದರು ಹಾಗೂ ಜನರೆಲ್ಲರೂ ಅವರನ್ನು ಪ್ರೀತಿಯಿಂದ "ಮಾಸ್ಟರ್" ಎಂದು ಕರೆಯುತ್ತಾರೆ [೩].
ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರ
ಬದಲಾಯಿಸಿಅವರು ೧೯೨೪ ರಿಂದ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ೧೯೨೮ ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಿದ ನಂತರ ಅವರು ೧೯೪೨ ರವರೆಗೆ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. ೧೯೨೧ ರಿಂದ ಅವರು ತಮ್ಮ ಸಮಯಪ್ರಜ್ಞೆ ಬಳಸಿಕೊಂಡು ಕಾಂಗ್ರೆಸ್ ಚಳುವಳಿಯನ್ನು ಬಲಪಡಿಸಿದರು. ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು ಮತ್ತು ಆರ್. ಆರ್. ದಿವಾಕರ್ ಅವರ ಜೊತೆಗೆ ಯೆರವಡಾ ಜೈಲಿನಲ್ಲಿ ಬಂದಿಸಲ್ಪಟ್ಟಿದ್ದರು.
ಅವರ ಕೆಲಸಗಳು
ಬದಲಾಯಿಸಿಶ್ರೀ.ಹುಕ್ಕರಿಕರ್ ಅವರು ಕನ್ನಡ ನಿಯತಕಾಲಿಕ "ಕರ್ಮವೀರ" ದ ಸಂಪಾದಕರಾಗಿದ್ದರು. ಅವರು "ಯುನೈಟೆಡ್ ಕರ್ನಾಟಕ", "ಧನಂಜಯ" ಮತ್ತು "ಹಿಂದೂ" ಎಂಬ ಪತ್ರಿಕೆಗಳ ಸಂಪಾದಕರಾಗಿದ್ದರು. "ಖಾದಿ" ಯ ಕಾರಣವನ್ನು ಉತ್ತೇಜಿಸುವಲ್ಲಿ ಅವರು ಉತ್ಸಾಹಕರಾಗಿದ್ದರು ಮತ್ತು ೫ ವರ್ಷಗಳ ಕಾಲ ಅಖಿಲ ಭಾರತ ಖಾದಿ ಮತ್ತು ಗ್ರಾಮ ಕೈಗಾರಿಕೆಗಳ ಅಧ್ಯಕ್ಷರಾದರು. ರಾಜಕೀಯ ಜೀವನದಲ್ಲಿ ಅವರು ೧೯೪೬ರಲ್ಲಿ ಬಾಂಬೆ ವಿಧಾನಸಭೆಗೆ ಆಯ್ಕೆಯಾದರು. ನಂತರ ೧೯೫೨ ರಲ್ಲಿ ಅವರು ಬಾಂಬೆ ವಿಧಾನ ಪರಿಷತ್ ನ ಸದಸ್ಯರಾದರು.
ಶಿಕ್ಷಣದ ಪ್ರವರ್ತಕ ಜನತಾ ಶಿಕ್ಷಾ ಸಮಿತಿಯು ೧೯೪೪ ರಲ್ಲಿ ಕರ್ನಾಟಕ ಶಿಕ್ಷಣ ಮಂಡಳಿಯಿಂದ ಪ್ರಾರಂಭವಾದ ಜೆ.ಎಸ್.ಎಸ್ ಆರ್ಟ್ಸ್ ಕಾಲೇಜನ್ನು ಕೇವಲ ೪೦ ವಿದ್ಯಾರ್ಥಿಗಳ ಬಲದಿಂದ ಪ್ರಾರಂಭಿಸಿದರು [೪]. ಮೂಲತಃ ಇದು ಮಧ್ಯಂತರ ಕಾಲೇಜು ಆದರೆ ನಂತರ ೧೯೪೯ ರಲ್ಲಿ ವಿಜ್ಞಾನ ವಿಭಾಗವನ್ನು ಸೇರಿಸಲಾಯಿತು. ೧೯೫೬ ರಲ್ಲಿ ಸಕ್ರಿ ಕಾನೂನು ಕಾಲೇಜು ಮತ್ತು ಕೆಎಚ್‌ಕೆ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಹುಕ್ಕೇರಿಕರ್ ತೀವ್ರ ಆಸಕ್ತಿ ವಹಿಸಿದರು. ಇವರು ರಾಜಾರಾಮ್ ಮತ್ತು ಕರ್ನಾಟಕ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು "ಧರ್ಮವೀರ್" ಎಂಬ ಪತ್ರಿಕೆ ಪ್ರಾರಂಭಿಸಿದರು. ಅವರು ಮಾಡಿದ ಪ್ರಚಾರ ಕಾರ್ಯಕ್ಕಾಗಿ ಅವರ ವಿರುದ್ಧ ಬ್ರಿಟಿಷ್ ಸರ್ಕಾರವು ಐದು ಬಾರಿ ಕಾನೂನು ಕ್ರಮ ಜರುಗಿಸಿತು ಹಾಗು ಇವರು ಏಳು ವರ್ಷ ಜೈಲಿನಲ್ಲಿ ಕಳೆದರು.
೧೯೨೬ ರಿಂದ ಅವರು ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೩೦ ರಲ್ಲಿ ಹುಕ್ಕೇರಿಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಹುಕ್ಕೇರಿಕರ್ ಅವರು ಕರ್ನಾಟಕದಲ್ಲಿ ಗಾಂಧೀಜಿ ಅವರು ಶುರು ಮಾಡಿದ ತೆರಿಗೆ ರಹಿತ ಚಳುವಳಿಯಲ್ಲೂ ಸಹ ಪಾಲ್ಗೊಂಡಿದ್ದರು. ನಮ್ಮಲ್ಲೆ ಉತ್ಪಾದನೆ ಆಗುವ ಉಪ್ಪಿಗೆ ತೆರಿಗೆ ಕಟ್ಟಬೇಕು ಎಂಬ ಬ್ರಿಟಿಷರ ಆದೇಶದ ವಿರುದ್ಧ ಗಾಂಧೀಜಿ ಮತ್ತಿತರರೊಂದಿಗೆ ಹೋರಾಡಿ ನ್ಯಾಯ ತಂದುಕೊಟ್ಟಿದ್ದಾರೆ. ನೆಹರೂ ಸಮಿತಿಯು ಕರ್ನಾಟಕ ಏಕೀಕರಣವನ್ನು ಕಾರ್ಯಸಾಧ್ಯವಾದ ಯೋಜನೆ ಎಂದು ಗುರುತಿಸುವುದಕ್ಕೆ ಅವರು ಮುಖ್ಯವಾಗಿ ಕಾರಣರಾಗಿದ್ದರು.
ಇವರು ೧೯೬೩ ರಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ