ಆರ್ಮ್‌ಸ್ಟ್ರಾಂಗ್ ಮತ್ತು ಅನುಯಾಯಿಗಳು

ಅಮೆಆರ್ಮ್‌ಸ್ಟ್ರಾಂಗ್ , ಚಂದ್ರನ ಮೇಲೆ’ ಯೋಜನೆಯಲ್ಲಿಆರ್ಮ್‌ಸ್ಟ್ರಾಂಗ್ದ್ದ ಚಂದ್ರಲೋಕ ಯಾತ್ರೆಯನ್ನು 1969ರ ಜುಲೈ ತಿಂಗಳಲ್ಲಿ ಯಶಸ್ವಿಯಾಗಿ ಪುರೈಸಿದ ಮೂವರು ಖಗೋಳಯಾತ್ರಿಗಳು. ಅಪೊಲೊ 11 ಎಂಬ ಆಕಾಶ ನೌಕೆಯಲ್ಲಿ ಈ ಅದ್ವಿತೀಯ ಯಾತ್ರೆಯನ್ನು ಕೈಗೊಂಡು, ಸಮರ್ಪಕ ರೀತಿಯಲ್ಲಿ ನೆರವೇರಿಸಿದ, ಉದ್ದೇಶಿಕ ಧ್ಯೇಯವನ್ನು ಸಾಧಿಸಿ, ಯುಗಪುರುಷರೆನಿಸಿಕೊಂಡ ಈ ಮೂವರೂ ಅಮೆರಿಕದ ಪ್ರಜೆಗಳು. ಸಮವಯಸ್ಕರು. ಜನನ: 1930-31. ವಿವಾಹಿತರು. ಇವರಲ್ಲಿ ಇಬ್ಬರು ಚಂದ್ರನ ಮೇಲಿಳಿದು ವಿಜ್ಞಾನಯುಗದಲ್ಲಿ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ.

ಆರ್ಮ್‌ಸ್ಟ್ರಾಂಗ್, ನೀಲ್ ಎ

ಬದಲಾಯಿಸಿ
 
ಆರ್ಮ್‌ಸ್ಟ್ರಾಂಗ್, ನೀಲ್ ಎ

ಚಂದ್ರನ ಮೇಲೆ ಕಾಲಿಟ್ಟ ಮೊಟ್ಟ ಮೊದಲ ಮಾನವ. 1930ರಲ್ಲಿ ಅಮೆರಿಕದ ಓಹಿಯೋನಲ್ಲಿನ ವಪಕೋನೆಟಾ ಎಂಬ ಒಂದು ಚಿಕ್ಕ ಪಟ್ಟಣದಲ್ಲಿ ಜನನ ಚಿಕ್ಕಂದಿನಿಂದಲೇ ಭೂಮಿಯನ್ನು ಬಿಟ್ಟು ಗಾಳಿಯಲ್ಲಿ ತೇಲಬೇಕೆಂಬ ಹಂಬಲ ಇವನಲ್ಲಿತ್ತು. ಇದಲ್ಲದೆ ತನ್ನ 9ನೆಯ ವಯಸ್ಸಿನಿಂದಲೂ ನಾನಾಬಗೆಯ ವಿಮಾನಗಳನ್ನು ನೋಡಿ ಅದರಲ್ಲಿ ಕುಳಿತು ಹಾರಾಡಬೇಕೆಂಬ ಬಯಕೆಯಿತ್ತು. ವಿಮಾನ ನಡೆಸುವುದರಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿದ್ದು, ಆ ವಿಭಾಗದಲ್ಲಿ ಶಿಕ್ಷಣ ಪಡೆದು ತನ್ನ 16ನೆಯ ವಯಸ್ಸಿನಲ್ಲೇ ವಿಮಾನಚಾಲಕನ ರಹದಾರಿಯನ್ನು ಪಡೆದ. ಅಮೆರಿಕದ ಪಡೂರ್ಯವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷಗಳ ಅಧ್ಯಯನ ನಡೆಸಿ ಏರೊನಾಟಿಕಲ್ ಎಂಜಿಯರಿಂಗ್ನಲ್ಲಿ (ವಾಯುಯಾನವಿಜ್ಞಾನ) ಪದವಿ ಪಡೆದು ವಾಯುಯಾನ ಶಿಕ್ಷಣ ಪಡೆವ ಸಲುವಾಗಿ ಪೆನ್ಸ್‌ಕೊಲಕ್ಕೆ ಹೋದ. ಶಿಕ್ಷಣ ಮುಗಿಸಿ ದವಿಗಳಿಸುವ ವೇಳೆಗೆ ಕೊರಿಯ ಯುದ್ಧ ಪ್ರಾರಂಭವಾಗಿತ್ತು. ತನ್ನ 21ನೆಯ ವಯಸ್ಸಿನಲ್ಲೇ ಕೊರಿಯ ಯುದ್ಧದಲ್ಲಿ ಪ್ಯಾಂಥರ್ ಜೆಟ್ ವಿಮಾನಗಳನ್ನು ಈತ ನಡೆಸಿದ್ದ. ಈತ ನಡೆಸಿದ 78 ಕಾಂಬ್ಯಾಟ್ ವಿಮಾನಹಾರಾಟಗಳ ಸಲುವಾಗಿ ಪ್ರಶಂಸೆಗೆ ಒಳಗಾಗಿ ಮೂರು ವಾಯುಪದಕಗಳನ್ನು ಗಳಿಸಿದ. ಇಂಥ ಹಾರಾಟಗಳ ಸಮಯದಲ್ಲಾದ ಆಕಸ್ಮಿಕಗಳನ್ನು ಧೈರ್ಯದಿಂದ ಎದುರಿಸಿದ ವ್ಯಕ್ತಿ. ಇದರಿಂದಾಗಿ ಅಮೆರಿಕ ನಾಸಾ ಸಂಸ್ಥೆಯಲ್ಲಿ ಏರೊನಾಟಿಕಲ್ ಸಂಶೋಧನಾಚಾಲಕನ ಹುದ್ದೆ ಈತನಿಗೆ ಲಭಿಸಿತು. ಪ್ರಪಂಚದಲ್ಲಿಯೇ ಅತ್ಯಧಿಕ ವೇಗದಿಂದ ಹಾರಾಟ ನಡೆಸುವ x - 15 ಎಂಬ ರಾಕೆಟ್ ವಿಮಾನವನ್ನು ಈತ ಅನೇಕ ಸಲ ನಡೆಸಿದ್ದಾನೆ. 1962ರಲ್ಲಿ ಇವನು ನಡೆಸಿದ x - 15 ಹಾರಾಟದಲ್ಲಿ ಅದು ಭೂಮಿಯಿಂದ ಸುಮಾರು 40 ಮೈಲುಗಳೆತ್ತರದವರೆಗೂ ಹೋಗಿ ಗಂಟೆಗೆ ಸುಮಾರು 4000 ಮೈಲಿ ವೇಗದಲ್ಲಿ ಹಾರಿತು. ಇದಲ್ಲದೆ F - 100 , F - 101, F - 102, F - 104, B - 47 ಮುಂತಾದ ಕಠಿಣ ತರಹೆಯ ವಿಮಾನಗಳನ್ನೂ ನಡೆಸಿದ್ದಾನೆ. B - 29 ಎಂಬ ಬೃಹತ್ ವಿಮಾನದಲ್ಲಿ ನೂರಕ್ಕೂ ಹೆಚ್ಚು ಸಲ ಹಾರಿದ್ದಾನೆ. 1966ರ ಮಾರ್ಚಿನಲ್ಲಿ ಅಮೆರಿಕ ನಡೆಸಿದ ಜೆಮಿನಿ 8 ಅಂತರಿಕ್ಷ ನೌಕೆಯ ಪ್ರಧಾನಚಾಲಕ ನಾಗಿದ್ದ. ಇವನೊಡನಿದ್ದ ಸಹಚಾಲಕ ಡೇವಿಡ್ ಸ್ಕಾಟ್ನೊಂದಿಗೆ ಭೂಕಕ್ಷೆ ಯಲ್ಲಿ ಸಂಚರಿಸುತ್ತಿದ್ದ (ಭೂಮಿ ಯಿಂದ ನೂರುಮೈಲುಗಳೆತ್ತರದಲ್ಲಿ) ಅಜೆನಾ ರಾಕೆಟ್ ಗುರಿವಾಹನವನ್ನು ಗುರುತಿಸಿ. ಮೊದಲಬಾರಿಗೆ ಕೂಡಿಕೆ ಯನ್ನು (ಡಾಕಿಂಗ್) ಯಶಸ್ವಿಯಾಗಿ ಸಾಧಿಸಿದ. ದುರದೃಷ್ಟವಶಾತ್ ಜೆಟ್ನೂಕುಯಂತ್ರದಲ್ಲಿ (ಜೆಟ್ ಥ್ರಸ್ಟರ್) ಕಂಡುಬಂದ ವಿದ್ಯುತ್ ದೋಷದಿಂದಾಗಿ, ಆತ ನಡೆಸುತ್ತಿದ್ದ ವಾಹನ ಹತೋಟಿತಪ್ಪಿ, ಬೆಂಕಿ ಕಾರಿಕೊಂಡು ಗಿರಗಿರನೆ ಸುತ್ತತೊಡಗಿತು. ಇದರಿಂದಾಗಿ ಮೂರು ದಿವಸಗಳಿಗೆಂದು ಮೊದಲು ಗೊತ್ತುಪಡಿಸಿದ್ದ ಹಾರಾಟವನ್ನು ಮೊಟಕುಮಾಡಿ ಧರೆಗಿಳಿದ. ಈ ಪರಿಸ್ಥಿತಿಯಲ್ಲಿ ಆತನ ಅದ್ಭುತ ಕೌಶಲ, ಸಮಯ ಸ್ಪೂರ್ತಿ ಪ್ರಕಟವಾದಂತಾಯಿತು. ಈ ಧೈರ್ಯಸಾಹಸ, ಸಮಯ ಪ್ರಜ್ಞೆಗಳಿಂದಾಗಿ ಈತನಿಗೆ ಅಮೆರಿಕದ ಅಂತರಿಕ್ಷಯಾನ ವಿಜ್ಞಾನದ ಸಂಸ್ಥೆಯ ಆಕ್ವೀವ್ ಛಾನ್ಯೂಟ್ ಬಹುಮಾನ ದೊರೆಯಿತು. 1969ರ ಜುಲೈ 18ರಂದು ಅಮೆರಿಕ ಹಾರಿಸಿದ ಅಪೊಲೊ 11 ಅಂತರಿಕ್ಷನೌಕೆಯಲ್ಲಿ ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೇಲ್ ಕಾಲಿನ್್ಸರೊಡನೆ ಆರ್ಮ್‌ಸ್ಟ್ರಾಂಗ್ ಚಂದ್ರ ಲೋಕಪ್ರಯಾಣ ಮಾಡಿದ. ಜುಲೈ 21ರಂದು ಚಂದ್ರನ ಮೇಲಿಳಿದು ವಿಶ್ವದ ಇತಿಹಾಸದಲ್ಲೇ ಒಂದು ಮಹತ್ಸಾಧನೆಯನ್ನು ಮಾಡಿ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿದ. ಈ ಯಶಸ್ವೀ ಸಾಧನೆಗೋಸ್ಕರ ನೀಡಲಾದ ಗಾಲ್ಬರ್ಟ್ ಅಂತರ ರಾಷ್ಟ್ರೀಯ ವೈಮಾನಿಕ ಬಹುಮಾನದ ಒಬ್ಬ ಪಾಲುಗಾರ, ಬಹುಮಾನದ ಮೊತ್ತ 4000 ಡಾಲರುಗಳು.

ಆಲ್ಡ್ರಿನ್, ಎಡ್ವಿನ್

ಬದಲಾಯಿಸಿ
 
ಆಲ್ಡ್ರಿನ್, ಎಡ್ವಿನ್

ಚಂದ್ರನ ಮೇಲೆ ಕಾಲಿಟ್ಟ ಎರನೆಯವ, ಅಪೊಲೊ 11ರ ಚಂದ್ರ ಕೋಶದ (ಲೂನಾರ್ ಮಾಡ್ಯೂಲ್) ಚಾಲಕನಾಗಿದ್ದ. ಬಸ್ ಎಂಬುದು ಇವನ ಅಡ್ಡ ಹೆಸರು. ಈತನಿಗೂ ಚಿಕ್ಕಂದಿನಿಂದಲೇ ವಿಮಾನಗಳನ್ನು ನಡೆಸುವುದರಲ್ಲಿ ಆಸಕ್ತಿ, ಪ್ರೌಢ ಶಾಲೆಗೆ ಸೇರುವ ಮೊದಲೇ ವಿಮಾನ ಚಾಲಕನಾಗಬೇಕೆಂದುಬಾಗಿ ನಿರ್ಧರಿ ಸಿದ್ದ. ಅಮೆರಿಕದ ವಿಮಾನ ಶಿಕ್ಷಣ ಶಾಲೆಗೆ ಸೇರಿ 1951 ರಲ್ಲಿ ಪದವೀಧರ ನಾದ. ಇದಕ್ಕೆ ಮೊದಲು ಅಮೆರಿಕದ ಬ್ರಯನ್, ಟೆಕ್ಸಾಸ್ಗಳಲ್ಲಿ ಒಂದು ವರ್ಷದ ಶಿಕ್ಷಣವನ್ನು ಪುರೈಸಿದ್ದನಲ್ಲದೆ ಕೊರಿಯ ಯುದ್ದ ಕಾಯಾಚರಣೆ ಯಲ್ಲೂ ಪಾಲ್ಗೊಂಡಿದ್ದ. 66ಸಲ ಯುದ್ದ ಕಾರ್ಯಾಚರಣೆಯ ಕಾಂಬ್ಯಾಟ್ ವಿಮಾನಗಳನ್ನು ನಡೆಸಿ ರುವುದಲ್ಲದೆ ಅತ್ಯಂತ ಶಕ್ತಿಯುವಾದ ಮಿಗ್ ವಿಮಾನಗಳನ್ನು ಕೊರಿಯ ಯುದ್ಧ ಸಮಯದಲ್ಲಿ ಹೊಡೆದುರು ಳಿಸಿ ಒಂದು ಮಿಗ್ ವಿಮಾನವನ್ನು ಪುರ್ಣವಾಗಿ ನಾಶಪಡಿಸಿದ ಖ್ಯಾತಿ ಇವನದು. ಜರ್ಮನಿಯಲ್ಲಿ F-100 ಎಂಬ ಕದನ ವಿಮಾನಗಳನ್ನು ನಡೆಸಿ, ಅಲ್ಲಿ ಕಂಡುಬಂದ ಸಾಮಥರ್್ಯದ ಕೊರತೆಯ ಸಲುವಾಗಿ ಅಮೆರಿಕ ಮೆಸಾಚುಸೆಟ್ಸ್ ಇನ್್ಸಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉನ್ನತಶಿಕ್ಷಣ ಪಡೆಯಲವಕಾಶವಾಯಿತು. ಆರ್ಬಿಟಲ್ ಮೆಕ್ಯಾನಿಕ್ಸ್ ಎಂಬ ವಿಷಯದ ಮೇಲೆ ಈತ ಬರೆದ ಒಂದು ಪ್ರೌಢ ಪ್ರಬಂಧದ ಸಲುವಾಗಿ ಈತನಿಗೆ ಡಾಕ್ಟೊರೇಟ್ ಪದವಿ ಲಭಿಸಿತು (1963). 1966ರ ನವೆಂಬರ್ ನಲ್ಲಿ ಅಮೆರಿಕ ನಡೆಸಿದ 12 ಅಂತರಿಕ್ಷನೌಕೆಯ ಸಹಚಾಲಕನಾಗಿದ್ದ. ನಾಲ್ಕು ದಿವಸದ ಈ ಹಾರಾಟದಲ್ಲಿ 59 ಸಲ ಭೂಮಿಯನ್ನು ಸುತ್ತಿದ. ಅಂತರಿಕ್ಷ ನೌಕೆಯ ತೆರೆದ ಕಿಂಡಿಯಲ್ಲಿ ನಿಂತು ಸುಮಾರು 200 ಮಿನಿಟುಗಳವರೆಗೆ ಭೂಮಿಯ ಛಾಯಾಚಿತ್ರಗಳನ್ನು ತೆಗೆದ. ಅನಂತರ ನೌಕೆಯಿಂದ ಹೊರಬಂದು ಸುಮಾರು 130 ಮಿನಿಟುಗಳ ಕಾಲ ಅಂತರಿಕ್ಷದಲ್ಲಿ ನಡೆದ. 1969ರ ಜುಲೈ 18 ರಂದು ಅಪೊಲೊ-11 ಅಂತರಿಕ್ಷನೌಕೆಯಲ್ಲಿ ಚಂದ್ರಲೋಕಪ್ರಯಾಣಮಾಡಿ, ಆರ್ಮ್‌ಸ್ಟ್ರಾಂಗ್ನಂತೆಯೇ ಚಂದ್ರನ ಮೇಲಿಳಿದ. ಇವರಿರ್ವರೂ ಚಂದ್ರನ ಮೇಲಿಳಿದು, ಅಲ್ಲಿ ಕೆಲವು ವೈಜ್ಞಾನಿಕ ಸಾಧನೋಪಕರಣಗಳನ್ನು ನೆಟ್ಟು, ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಿ, ಚಂದ್ರ ಕಲ್ಲು ಮಣ್ಣುಗಳನ್ನು ಭೂಮಿಗೆ ತಂದಿದ್ದಾರೆ. ಈ ಅದ್ಭುತ ಸಾಧನೆಗೋಸ್ಕರ ನೀಡಲಾಗಿರುವ ಗಾಲ್ಬರ್ಟ್ ಅಂತರರಾಷ್ಟ್ರೀಯ ಬಹುಮಾನದ ಎರಡನೆಯ ಪಾಲುಗಾರ.

ಕಾಲಿನ್ಸ್, ಮೈಕೇಲ್

ಬದಲಾಯಿಸಿ
 
ಕಾಲಿನ್ಸ್, ಮೈಕೇಲ್

ಚಂದ್ರನ ಮೇಲೆ ಅಮ್ರ್ ಸ್ವ್ರಾಂಗ್ ಮತ್ತು ಆಲ್ಡ್ರಿನ್ ಇಳಿದು, ಅಲ್ಲಿ ಹಲವು ಗಂಟೆಗಳು ತಂಗಿದ್ದ ಸಮಯದಲ್ಲಿ ಚಂದ್ರನ ಸುತ್ತಲೂ ಸುಮಾರು 70 ಮೈಲು ಎತ್ತರದಲ್ಲಿ ಅಪೊಲೊ 11ರ ಪ್ರಧಾನ ನೌಕೆಯಲ್ಲಿ ಕುಳಿತು, ಅದರ ಚಾಲಕನಾಗಿದ್ದು, ಅನಂತರ ಅವರೊಡಗೂಡಿ ಭೂಮಿಗೆ ಹಿಂತಿರುಗಿದ ಧೈರ್ಯಶಾಲಿ, ಇಟಲಿಯ ರೋಮ್ನಲ್ಲಿ ಒಂದು ಮಿಲಿಟರಿ ಕುಟುಂಬದಲ್ಲಿ ಜನನ (1931). ಅಮೆರಿಕದ ವೆಸ್ಟ್ ಪಾಯಿಂಟ್ ವಿಮಾನ ಶಿಕ್ಷಣ ಶಾಲೆಗೆ ಸೇರಿ 1952ರಲ್ಲಿ ಪದವೀಧರನಾದ. ಅನಂತರ ವಾಯುಪಡೆಯನ್ನು ಸೇರಿ ಅನೇಕ ಯುದ್ಧ ಕಾರ್ಯಾಚರಣೆಯ ವಿಮಾಗಳನ್ನು ನಡೆಸಿದ್ದಾನೆ. x - 15 ರಾಕೆಟ್ ವಿಮಾನದ ಪ್ರಯೋಗಾರ್ಥ ಹಾರಾಟದ ಪರೀಕ್ಷಾಧಿಕಾರಿಯಾಗಿ ಕೆಲಸಮಾಡಿ ಹಾರಾಟವನ್ನು ನಡೆಸಿದ್ದಾನೆ. 1966ರ ಜೆಮಿನಿ 10 ಅಂತರಿಕ್ಷನೌಕೆಯ ಸಹಚಾಲಕನಾಗಿದ್ದ ಜಾನ್ ಯಂಗ್ನೊಡಗೂಡಿ ಭೂಕಕ್ಷೆಯಲ್ಲಿ ಸುತ್ತುತಿದ್ದ ಅಜೆನಾ ಗುರಿವಾಹಕದೊಂದಿಗೆ ಕೂಡಿಕೆ ಯನ್ನು ನಡೆಸಿದ, ಅನಂತರ ತಮ್ಮ ಕಕ್ಷೆಯನ್ನು ಬದಲಾಯಿಸಲು ಆ ವಾಹನವನ್ನು ಭೂಮಿಯಿಂದ 475 ಮೈಲುಗಳೆತ್ತರಕ್ಕೆ ಕೊಂಡೊಯ್ದು ದಾಖಲೆಯನ್ನು ಸ್ಥಾಪಿಸಿದ. ಈತ ನಡೆಸಿದ ಅಂತರಿಕ್ಷನಡಿಗೆಯ ಸಮಯದಲ್ಲಿ ಅಜೆನಾ ರಾಕೆಟ್ಟನ್ನು ಸಂಧಿಸಿ ಅದರೊಳಗಿನಿಂದ ಒಂದು ಸೂಕ್ಷುಲ್ಕಾಪೆಟ್ಟಿಗೆಯನ್ನು ತೆಗೆದು ಪುನಃ ತನ್ನ ನೌಕೆಯನ್ನು ಸೇರಿಕೊಂಡ. 1969ರ ಜುಲೈನಲ್ಲಿ ಅಮೆರಿಕ ನೆಡೆಸಿದ ಅಪೊಲೊ 11 ರ ಚಂದ್ರ ಲೋಕಯಾತ್ರೆಯಲ್ಲಿ ಪಾಲ್ಗೊಂಡ ಚಂದ್ರನಲ್ಲಿಳಿದ ಖಗೋಳಯಾತ್ರಿಗಳಿಗೆ ಮಾತೃನೌಕೆಗೆ ಹಿಂತಿರುಗಲು ಯಾವುದಾದರೂ ತೊಮದರೆ ಸಂಭವಿಸಿದ ಪಕ್ಷಕ್ಕೆ ಅವರಿಗೆ ಈತ ಸಹಾಯಮಾಡಬೇಕೆಂಬ ಒಂದು ದೊಡ್ಡ ಕಾರ್ಯವನ್ನು ನಿಗದಿಮಾಡಲಾಗಿತ್ತು. ಚಂದ್ರಕೋಶ ಚಂದ್ರನನ್ನು ಬಿಟ್ಟು ಬಂದು ಮತ್ತೆ ಪ್ರಧಾನನೌಕೆಗೆ ಕೂಡಿಕೊಳ್ಳುವ ಸಮಯದಲ್ಲಿ ಕಾಲಿನ್ಸ್ ಬಹು ಜಾಗರೂಕತೆಯಿಂದ ಕಾರ್ಯನಿರ್ವಹಣೆ ಮಾಡಿದ.