ಆರ್ಖಿಯಾಪ್ಟೆರಿಕ್ಸ್

ಪ್ರಾಚೀನ ಗ್ರೀಕ್ ಭಾಷೆಯ ಆರ್ಖಿಯೋಸ್ ಮತ್ತು ಪ್ಟೆರಿಕ್ಸ್ ಪದಗಳಿಂದ ರೂಪಿತವಾದ ಆರ್ಖಿಯಾಪ್ಟೆರಿಕ್ಸ್.ಹಾಗೆಂದರೆ ಪುರಾತನ ಗರಿ ಅಥವಾ ಪುರಾತನ ರೆಕ್ಕೆ ಎಂದರ್ಥ.

ವಾಸ್ತವವಾಗಿ ಆರ್ಖಿಯಾಪ್ಟೆರಿಕ್ಸ್ ಪಳೆಯುಳಿಕೆಯ ರೂಪದಲ್ಲಿ ಲಭಿಸಿರುವ ಹಕ್ಕಿಯೊಂದರ ಹೆಸರು.ಆರ್ಖಿಯಾಪ್ಟೆರಿಕ್ಸ್ ಖಗ ಸಂಕುಲನದ ಪ್ರಪ್ರಥಮ ಹಕ್ಕಿ .೧೮೬೧ ರಲ್ಲಿ ಜರ್ಮನಿಯಲ್ಲಿ ಲಭಿಸಿದ ಈ ಮೂಲ ಹಕ್ಕಿ ಪಳೆಯುಳಿಕೆ ಆಗಿನಿಂದಲೂ ವಿಶ್ವ ವಿಖ್ಯಾತ.ಚಾರ್ಲ್ಸ್ ಡಾರ್ವಿನ್ ನ ಜೀವ ವಿಕಾಸ ಸಿಧಾಂತ ಕುರಿತು "ದಿ ಒರಿಜಿನ್ ಆಫ್ ಸ್ಪೀಸೀಸ್" ಪ್ರಕಟಗೊಂಡ ಎರಡೇ ವರ್ಶಗಳ ನಂತರ ಲಭಿಸಿ ಆ ಸಿದ್ಧಾಂತಕ್ಕೆ ಮತ್ತೊಂದು ಭದ್ರ ಆಧಾರ ಒದಗಿಸಿದ ಪಳೆಯುಳಿಕೆ ಇದು.

  ಆರ್ಖಿಯಾಪ್ಟೆರಿಕ್ಸ್ ನ ವಿಶೇಷ ಏನೆಂದರೆ ಸರೀಸ್ರುಪಗಳಾದ ಡೈನೋಸಾರ್ಗಳ ಕೆಲವಿ ಲಕ್ಶಣಗಳ ಜೊತೆಗೆ ಆಧುನಿಕ ಹಕ್ಕಿಗಳ ಕೆಲವು ಲಕ್ಶಣಗಳನ್ನು ಮೈಗೋಡಿಸಿಕೊಂಡಿದೆ.ಆರ್ಖಿಯಾಪ್ಟೆರಿಕ್ಸ್ ನ ಬಾಯಲ್ಲಿ ಡೈನೋಸಾರ್ ಗಳಂತೆ ಚೂಪಾದ ದಂತ ಪಂಕ್ತಿಗಳಿವೆ. ಎಲುಬು ಸಹಿತವಾದ ಉದ್ದವಾದ ಬಾಲ ಇದೆ. ಜೊತೆಗೆ ಆಧುನಿಕ ಹಕ್ಕಿಗಳಂತೆ ಪುಕ್ಕ,ಗರಿ ,ರೆಕ್ಕೆಗಳಿವೆ ಹಾಗಾಗಿ ಆರ್ಖಿಯಾಪ್ಟೆರಿಕ್ಸ್ ಡೈನೋಸಾರ್ಗಳ ಮತ್ತು ಹಕ್ಕಿಗಳ ನಡುವಣ ಜೀವ ವಿಕಾಸದ  ಕೊಂಡಿಯಂತಿದೆ.ಡೈನೋಸಾರ್ಗಳಿಂದ ಎಂಬುದನ್ನು ಆರ್ಖಿಯಾಪ್ಟೆರಿಕ್ಸ್  ನಿರ್ವಿವಾದಗೊಳಿಸಿದೆ.
Archeopteryx color


ಆರ್ಖಿಯಾಪ್ಟೆರಿಕ್ಸ್ ಬದುಕಿದ್ದ ಕಾಲ ಈಗ್ಗೆ ಒಂದು ನೂರೈವತ್ತು ದಶಲಕ್ಶ ವರ್ಷಗಳ ಹಿಂದೆ.ಸಮರ್ಥ ಹಾರಾಟ ಮೈಗೂಡಿದ ಈ ಜೀವಿಯದು ಪುಕ್ಕ ಆವರಿಸಿದ,ಬಿಸಿರಕ್ತದ ಶರೀರ,ಗರಿಗಳಿಂದ ರೂಪಗೊಂಡಿದ್ದ ವಿಶಾಲ ರೆಕ್ಕೆಗಳು ಕೂಡ. ಒಂದೂವರೆ ಅಡಿ ಉದ್ದ,ಒಂದು ಕಿಲೋ ತೂಕದ ದೇಹ. ಈಗಿನ ಕಾಗೆಗಳ ಗಾತ್ರ.ನೆಲದ ಮೇಲೂ,ಪೊದೆ ಗಿಡ ಗಂಟಿ ಮರಗಳ ಮೇಲೂ ಜೀವನ.ಚಿಕ್ಕ ಪುಟ್ಟ ಪ್ರಾಣಿಗಳನ್ನು ಭೇಟೆಯಾಡಿ ತಿನ್ನುವ ಆಹಾರ ಕ್ರಮ.

ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾದ ಮತ್ತೊಂದು ಪ್ರಾಚೀನ ಖಗ ರೂಪಿ ಡೈನೋಸಾರ್ ನ ಪಳೆಯುಳಿಕೆ ಆರ್ಖಿಯಾಪ್ಟೆರಿಕ್ಸ್ ನ ಪ್ರಪ್ರಥಮ ಹಕ್ಕಿ ಎಂಬ ಹೆಗ್ಗಳಿಕೆಯ ಸ್ಥಾನವನ್ನು ಅಲುಗಾಡಿಸಿತ್ತು.