ಆರ್ಕೀಡ್ ಹೂವುಗಳ ಪರಾಗಸ್ಪರ್ಷ
ಆರ್ಕೀಡ್ ಗಳು ಕಾಲಕ್ರಮೇಣ ಬೆಳೆಸಿಕೊಂಡು ಬಂದ ಮಿಶ್ರ ಪರಾಗ ಸ್ಪರ್ಷದ ಅಥವಾ ಒಂದು ಜಾತಿಯ ಸಸ್ಯದ ಹೂವಿನ ಪರಾಗದಿಂದ ಇನ್ನೊಂದು ಜಾತಿಯ ಸಸ್ಯದ ಪರಾಗಕ್ಕೆ ಸ್ಪರ್ಷ ಮಾಡಿಸುವ ಸಂಕೀರ್ಣ ಪ್ರಕ್ರಿಯೆಗಳನ್ನು ಚಾರ್ಲ್ಸ್ ಡಾರ್ವಿನ್ ನಿಂದ ಸಂಶೋಧಿಸಲ್ಪಟ್ಟಿತು.ಈ ಪ್ರಕ್ರಿಯೆಗಳನ್ನು ಡಾರ್ವಿನ್ನನು ೧೮೬೨ರಲ್ಲಿ ಪ್ರಕಟಗೊಂಡ `ಫರ್ಟಿಲೈಜೇಶನ್ ಆಫ್ ಆರ್ಕೀಡ್ 'ಎಂಬ ಗ್ರಂಥದಲ್ಲಿ ವರ್ಣಿಸಿದ್ದಾನೆ.
ಪರಾಗ ಸ್ಪರ್ಷ ಮಾಡುವ ಕೀಟಗಳು ಹೆಚ್ಚಿನ ಸಂದರ್ಭಗಳಲ್ಲಿ ಕಣ್ಣಿಗೆ ಕಾಣುವ ರೂಪ ಮತ್ತು ಬಣ್ಣಗಳಿಂದ ಆಕರ್ಷಿತಗೊಳ್ಳುತ್ತವೆ. ಹೂವುಗಳು ಆಕರ್ಷಕ ಪರಿಮಳವನ್ನು ಉತ್ಪಾದಿಸಬಹುದು. ಹೆಚ್ಚಿನ ಕುಲದಲ್ಲಿ ಇಲ್ಲದಿದ್ದರೂ, ಮಕರಂದವನ್ನು ಹೂವಿನ ಅಂಗದಿಂದ ಹೊರಡುವ, ತೆಳ್ಳಗೆ ಟೊಳ್ಳಾಗಿರುವ ಹೊರಚಾಚಿಕೆಯಲ್ಲಿ ಸಸ್ಯ ಶಲಾಕೆಯ ಬುಡದಲ್ಲಿ ಅಂಡವನ್ನು ಉತ್ಪತ್ತಿ ಮಾಡುವ ದುಂಡನೆಯ ಭಾಗದ ವಿಭಾಜಕ ಭಿತ್ತಿಗಳಲ್ಲಿ, ಅಥವಾ ಪುಷ್ಪಪಾತ್ರೆ ಯಾ ದಳದ ತುದಿಯಲ್ಲಿ(ಮಕರಂದವನ್ನು) ಉತ್ಪಾದಿಸಬಹುದು. ಪರಾಗು ಅಣುವನ್ನು ಉತ್ಪಾದಿಸುವ ಆರ್ಕೀಡುಗಳಲ್ಲಿ ಪರಾಗ ಸ್ಪರ್ಷವು ಈ ಕೆಳಗೆ ನಮೂದಿಸಿದ ವಿಭಿನ್ನತೆಯಲ್ಲಿ ಸಂಭವಿಸುತ್ತವೆ. ಪರಾಗಸ್ಪರ್ಷ ಕೀಟಾಣು ಹೂವಿನೊಳಗೆ ಪ್ರವೇಶಿಸಿದಾಗ, ಅದು ಅಂಟಾದ ಪದಾರ್ಥವನ್ನು ಸ್ಪರ್ಷಿಸುತ್ತದೆ. ಅದು ಕೂಡಲೆ ಕೀಟಾಣುವಿನ ದೇಹಕ್ಕೆ ಅಂಟಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆ ಅಥವಾ ಹೊಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಹೂವನ್ನು ಬಿಟ್ಟು ಹೋಗುವಾಗ ಅದು ಪರಾಗ ಧೂಳಿ ಅಥವಾ ಪರಾಗವನ್ನು ಪರಾಗಕೋಶದಿಂದ ಹೊರಕ್ಕೆ ಎಳೆಯುತ್ತದೆ. ಅದು ಅಂಟಿನಿಂದ ಪರಾಗಕ್ಕೆ ಕೊಡಿಕಲ್ ಅಥವಾ ಕಾಂಡದಿಂದ ಸಂಪರ್ಕದಲ್ಲಿರುತ್ತದೆ. ಕಾಂಡ ಅಥವಾ ಕೊಡಿಕಲ್ ಆಗ ಬಾಗುತ್ತದೆ ಮತ್ತು ಪರಾಗವು ಮುಂದಕ್ಕೆ ಮತ್ತು ಕೆಳಮುಖವಾಗಿ ಚಲಿಸುತ್ತದೆ. ಪರಾಗಸ್ಪರ್ಷ ಕೀಟಾಣು ಅದೆ ತಳಿಯ ಇನ್ನೊಂದು ಹೂವಿನಲ್ಲಿ ಪ್ರವೇಶಿಸಿದಾಗ, ಪರಾಗ ಕಣಗಳು ಎರಡನೆ ಹೂವಿನ ಶ್ವಾಸ ರಂದ್ರಕ್ಕೆ ಅಂಟಿಕೊಳ್ಳುವ ಸ್ಥಿತಿಯಲ್ಲಿರುತ್ತದೆ. ಆ ರಂದ್ರವು ಪರಾಗ ಸ್ಪರ್ಷ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಆರ್ಕೀಡುಗಳನ್ನು ಹೊಂದಿದವರು ಸಣ್ಣ ಪೆನ್ಸಿಲ್, ಸಣ್ಣ ಪ್ಯೆಂಟ್ ಬ್ರಶ್, ಅಥವಾ ಅದೆ ರೀತಿಯ ಸಲಕರಣೆಗಳಿಂದ ಆರ್ಕೀಡನ್ನು ಪುನರುತ್ಪಾದನೆ ಮಾಡಲು ಸಾಧ್ಯವಾಗಬಹುದು. ಕೆಲವು ಆರ್ಕೀಡುಗಳು ಸ್ವಯಂ ಪರಾಗಸ್ಪರ್ಷ ಹೊಂದುತ್ತವೆ. ವಿಶೇಷವಾಗಿ ಚಳಿ ಪ್ರದೇಶಗಳಲ್ಲಿ ಪರಾಗಸ್ಪರ್ಷ ಕೀಟಾಣುಗಳು ತುಂಬ ಕಡಿಮೆ ಇರುವ ಪ್ರದೇಶದಲ್ಲಿ ಸ್ವಯಂ ಪರಾಗಸ್ಪರ್ಷ ಮಾಡಿಕೊಳ್ಳುತ್ತವೆ. ಹೂವುಗಳ ಪರಾಗಧೂಳಿಯು ಕೀಟಗಳಿಂದ ಸ್ಪರ್ಷಿಸಲ್ಪಡದಿದ್ದಾಗ ಅವುಗಳು ಒಣಗಿ ಹೋಗುತ್ತವೆ. ಮತ್ತು ಪರಾಗವು ನೇರವಾಗಿ ಇನ್ನೊಂದು ಹೂವಿನೊಳಗೆ ಬೀಳುತ್ತವೆ. ಇಲ್ಲದಿದ್ದರೆ ಪರಾಗಧೂಳಿಯು ಸುತ್ತಿರುಗುತ್ತವೆ ಮತ್ತೆ ಹೂವಿನ ಅಂಟಿನ ಖಾಲಿ ಪ್ರದೇಶವನ್ನು ಪ್ರವೇಶಿಸುತ್ತವೆ. ಹಲವು ನ್ಯೂಯೋ-ಟ್ರೊಪಿಕಲ್ ಅಥವಾ ಉಷ್ಣ ಹವಾಮಾನ ಪ್ರದೇಶಗಳಲ್ಲಿ ಆರ್ಕೀಡುಗಳು ಗಂಡು ಜೇನ್ನೊಣಗಳಿಂದ ಪರಾಗ ಸ್ಪರ್ಷ ಹೊಂದುತ್ತವೆ. ಅವುಗಳು ಅವುಗಳಿಗೆ ಬೇಕಾದ ಭಾಷ್ಪಶೀಲ ದ್ರವ್ಯವನ್ನು ಸಂಗ್ರಹಿಸಲು, ಪ್ರಚೋದಕ ರಸಾಯನಗಳನ್ನು ತನ್ನ ಪ್ರತಿಕ್ರಿಯೆ ತಿಳಿಸಲು ವಿಸರ್ಜಿಸುವ ರಾಸಾಯನಿಕ, ಕೀಟಗಳನ್ನು ಸೆಳೆಯುವ ಯಾ ಆಕರ್ಷಿಸುವ ವಸ್ತುವನ್ನು ಸಂಯೋಜಿಸಲು ಬರುತ್ತವೆ.
ಬೀಜಗಳು
ಬದಲಾಯಿಸಿಅಂಡಾಣುವು ವೈಶಿಷ್ಟ್ಯಪೂರ್ಣವಾಗಿ ಜೀವಕೋಶಗಳಾಗಿ ಅಭಿವೃದ್ಧಿ ಹೊಂದುತ್ತವೆ. ಅಂದರೆ ಮೂರು ಅಥವಾ ಆರು ಉದ್ದುದ್ದವಾಗಿ ಹೋಗುವ ಸೀಳುಗಳಿಂದ ವಿದಳಿಸಲ್ಪಡುತ್ತವೆ. ಆಗ ಎರಡು ಕೊನೆಗಳು ಮುಚ್ಚಲ್ಪಡುತ್ತವೆ. ಬೀಜಕೋಶಗಳ ಪಕ್ವವಾಗುವಿಕೆಗೆ ಎರಡರಿಂದ ಹದಿನೆಂಟು ತಿಂಗಳುಗಳಷ್ಟು ತಗಲಬಹುದು. ಬೀಜಗಳು ಸಾಮಾನ್ಯವಾಗಿ ಸೂಕ್ಷ್ಮ ದರ್ಶಕ ಯಂತ್ರದಲ್ಲಿ ಮಾತ್ರ ನೋಡಬಹುದಾದಷ್ಟು ಚಿಕ್ಕ ಇರುತ್ತವೆ. ಮತ್ತು ಅಸಂಖ್ಯಾತವಾಗಿರುತ್ತವೆ.ಕೆಲವು ತಳಿಗಳಲ್ಲಿ ಒಂದು ದಶಲಕ್ಷಕ್ಕೂ ಮಿಕ್ಕಿ ಇರುತ್ತವೆ. ಬೀಜಕೋಶಗಳು ಪಕ್ವಗೊಂಡ ಮೇಲೆ ಅವುಗಳು ಧೂಳಿ ಕಣಗಳಾಗಿ ಸೂಕ್ಷ್ಮ ಜೀವಿಗಳಂತೆ ಗಾಳಿಯಲ್ಲಿ ಚೆದುರಿ ಹೋಗುತ್ತವೆ. ಬೀಜ ಪೋಷಕದ ಕೊರತೆಯನ್ನು ಹೊಂದಿರುತ್ತವೆ. ಮತ್ತು ಒಂದು ಶಿಲೀಂದ್ರ ಹಾಗೂ ಸಸ್ಯವೊಂದರ ಬೇರು, ಇವುಗಳ ನಡುವೆ ರೂಪುಗೊಳ್ಳುವ ಸಹಜೀವನ, ಪರಸ್ಪರ ಸಹಕಾರದ ಸಂಬಂಧದೊಳಗೆ ಪ್ರವೇಶ ಮಾಡಲೇಬೇಕು. ಅದು ಜೋಡಿಯಾಗಲು ಬೇಕಾಗುವ ಅವಶ್ಯಕ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ಎಲ್ಲ ಆರ್ಕೀಡ್ ತಳಿಗಳು ಬೀಜೋತ್ಪತ್ತಿಯಾಗುವಾಗ ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸಲು ಶಿಲೀಂದ್ರದ ಮೇಲೆ ಅವಲಂಬಿಸಿದೆ. ಮೇಲಿನ ನಡುವಣ ಪಕಳೆಯನ್ನು ಲ್ಯಾಬೆಲ್ಲಮ್ ಅಥವಾ ತುಟಿ ಎಂದು ಕರೆಯಲಾಗುತ್ತದೆ. ಇದುಯಾವಾಗಲೂ ಪರಿವರ್ತಿತಗೊಳ್ಳುತ್ತದೆ ಮತ್ತು ದೊಡ್ಡದಾಗುತ್ತಿರುತ್ತದೆ. ಕೆಳ ಮಟ್ಟದ ಸಸ್ಯಶಲಾಕೆಯ ಬುಡದಲ್ಲಿ ಅಂಡವನ್ನು ಉತ್ಪತ್ತಿ ಮಾಡುವ ದುಂಡನೆಯ ಭಾಗ ಅಥವಾ ಪೆಡಿಸೆಲ್ ಯಾ ಕೂಳೆ ಪೆಡಿಸಲ್ ಉಳ್ಳ ಕಾಂಡವಿರುವ ಭಾಗವು ಸಾಮಾನ್ಯವಾಗಿ ೧೮೦ ಡಿಗ್ರಿಯಷ್ಟು ಸುತ್ತಿರುತ್ತದೆ. ಹಾಗಾಗುವುದರಿಂದ ಲ್ಯಾಬೆಲ್ಲಮ್ ಹೂವಿನ ಕೆಳ ಭಾಗಕ್ಕೆ ಹೋಗುತ್ತದೆ ಮತ್ತು ಹಾಗೆ ಪರಾಗಸ್ಪರ್ಷ ಮಾಡುವ ದೂತಗಳಿಗೆ ಯೋಗ್ಯವಾದ ವೇದಿಕೆ ರೂಪಗೊಳ್ಳುತ್ತದೆ. ಈ ಗುಣ ಲಕ್ಷಣವನ್ನು ರೆಸ್ಯುಪಿನೇಶನ್ ಎಂದು ಕರೆಯಲಾಗುತ್ತದೆ. ಮೊತ್ತ ಮೊದಲಿಗೆ ಆದಿಯಲ್ಲಿ, ಕುಟುಂಬದಲ್ಲಿ ಸಂಭವಿಸುತ್ತದೆ. ಮತ್ತು ಇದನ್ನು ಎಪೊಮೋರ್ಫಿಕ್ ಎಂದು ಪರಿಗಣಿಸಲಾಗುತ್ತದೆ. ಕೆಲವು ಆರ್ಕೀಡುಗಳು ಈ ರೆಸ್ಯುಪಿನೇಶನ್ ನ್ನು ದ್ವಿತಿಯಕವಾಗಿ(ಸೆಕೆಂಡರಿ) ಕಳೆದುಕೊಂಡಿರುತ್ತವೆ. ಉದಾಹರಣೆಗಾಗಿ ಝೈಗೊಪೆಟಲಮ್ ಮತ್ತು ಎಪಿಡೆಂಡ್ರಮ್ ಸೆಕ್ಯುಂಡಮ್. ಸಹಜವಾದ ದಳವು ಕ್ಯಾಟಿಲಿಯಾದಲ್ಲಿ ಕಂಡುಬರುತ್ತವೆ. ಅವು ತ್ರಿಕೋನಾಕೃತಿಯದ್ದಾಗಿರುತ್ತದೆ. ಲೆಕ್ಕಕ್ಕಿಂತ ಹೆಚ್ಚು ಸಂಖ್ಯೆಗಳಲ್ಲಿ ಪಕಳೆಗಳಿರುವ ಅಥವಾ ತುಟಿಗಳಿರುವ ಆರ್ಕೀಡ್ ಹೂವುಗಳನ್ನು ಪೆಲೋರಿಕ್ ಎಂದು ಕರೆಯಲಾಗುತ್ತದೆ. ಪೆಲೋರಿಯಾ ಇದು ವಂಶವಾಹಿನಿಯ ವಿಶಿಷ್ಟತೆಯಾಗಿದೆ. ಆದರೆ ಅದರ ಹೊರತೋರುವಿಕೆಯು ಪರಿಸರದಿಂದ ಪ್ರಭಾವಿತವಾಗಿರುತ್ತವೆ. ಮತ್ತು ಯಾದೃಚ್ಛಿಕವಾಗಿ ಕಂಡು ಬರಬಹುದು. ಪರಾಗ ಸ್ಪರ್ಷದ ಅಣುಗಳು ಒಂದೆ ಸರಣಿಯಲ್ಲಿ ಸಸ್ಯದ ಬೀಜಕೋಶವಾಗಿ ಬಿಡುಗಡೆಗೊಳ್ಳುತ್ತವೆ. ಹೆಚ್ಚಿನ ಸಸ್ಯಗಳಾದ ಎಪೊಸ್ಟಾಯಿಯೊಡಿಯೆ, ಸೈಪ್ರಿಡಿಯೊಡಿಯೆ, ಮತ್ತು ವೆನಿಲೊಯಿಡಿಯೊಗಳಲ್ಲಿ ಹೀಗೆ ಆಗುತ್ತದೆ. ಉಳಿದ ಉಪಕುಟುಂಬಗಳಲ್ಲಿ, ಅವುಗಳು ಬಹು ಸಂಖ್ಯಾಕವಾಗಿವೆ. ಅವುಗಳು ಎಂಥರ್ ನ್ನು ಅಥವಾ ಪರಾಗವನ್ನು ಅಥವಾ ಪರಾಗಧೂಳಿಯನ್ನು ಒಳ್ಗೊಂಡಿರುತ್ತವೆ. ಅದು ಎರಡು ಪರಾಗವನ್ನು ಕೊಂಡೊಯ್ಯುವುದು. ಪರಾಗಸ್ಪರ್ಷಕ್ಕೆ ನೆರವಾಗುವ ಕೀಟ ಅಂದರೆ ಪೊಲಿನೇಟರ್. ಪರಾಗಾಣುವು ಮೇಣ್ದಂತಹ ಪರಾಗ ಅಥವಾ ಹೂಧೂಳಿನ ಬೀಜಕೋಶದ ರಾಶಿಯು ಅಂಟಿನಂತಹ ಸಸ್ಯಮೂಲವಾದ ಅಂಟಿನಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತದೆ. ಪ್ರತಿ ಪರಾಗವು ಪರಾಗಕೋಶಕ್ಕೆ ಅಸರೆಯಾಗಿರುವ ಪುಂಕೇಸರದ ಭಾಗಕ್ಕೆ ಸಂಪರ್ಕಿಸಲ್ಪಟ್ಟಿದೆ. ಅದು ಕೊಡಿಕಲ್ ರೂಪವನ್ನು ತಾಳಲು ಸಾಧ್ಯ. ಅಥವಾ ವಂದಾ ಆರ್ಕೀಡ್ ನಲ್ಲಿದ್ದಂತೆ ತೊಟ್ಟು ಅಥವಾ ಕಾಂಡದ ರೂಪವನ್ನು ತಾಳ್ಬಹುದು. ಅಥವಾ ಶಲಾಕಾ ಕೋಶದ ಆಧಾರ ಕಾಂಡದ ರೂಪವನ್ನು ಪಡೆಯಬಹುದು. ಈ ಕಾಂಡವು ಪರಾಗವನ್ನು ಅಂಟಿಗೆ ಹಿಡಿದಿಟ್ಟಿರುತ್ತದೆ. ಒಂದು ಅಂಟಿನಂತ ಪ್ಯಾಡ್ ಇದು ಪರಾಗವನ್ನು ಪರಾಗಸ್ಪರ್ಷ ಮಾಡುವ ಕೀಟಾಣುಗಳ ಶರೀರಕ್ಕೆ ಅಂಟಿಸಿಬಿಡುತ್ತದೆ.