ಆರಂಬೋಡಿ ಆದಿನಾಥ ಸ್ವಾಮಿ ಬಸದಿ

ಜೈನ ಧರ್ಮದ ಪುಣ್ಯ ಕ್ಷೇತ್ರಗಳು

ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದು.

ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆರಂಬೋಡಿ ಗ್ರಾಮದಲ್ಲಿದೆ.[] ಬೆಳ್ತಂಗಡಿಯಿಂದ ವೇಣೂರು ಮಾರ್ಗದಲ್ಲಿ ಸಿದ್ಧಕಟ್ಟೆಗೆ ತೆರಳಿ, ಅಲ್ಲಿಂದ ಒಕ್ಕಾಡಿಕೋಳಿಗೆ ೩.೫ ಕಿ.ಮೀ ದೂರದಲ್ಲಿ,[] ಆರಂಬೋಡಿ ಗ್ರಾಮದಲ್ಲಿದೆ.[] []

ಪ್ರಥಮ ತೀರ್ಥಂಕರರಾದ ಶ್ರೀ ಆದಿನಾಥ ಸ್ವಾಮಿಯು ಈ ಬಸದಿಯ ದೈವ. ಶ್ರೀ ಆದಿನಾಥ ಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ.

ಮೂಲನಾಯಕ

ಬದಲಾಯಿಸಿ

ಆದಿನಾಥ ಸ್ವಾಮಿಯು ಪದ್ಮಪೀಠದ ಕಲ್ಲಿನ ಮೇಲೆ ಖಡ್ಗಾಸನದಲ್ಲಿ ನಿಂತಿದ್ದು, ಮಕರ ತೋರಣದ ಅಲಂಕಾರದಲ್ಲಿದೆ. ಪ್ರಭಾವಳಿಯಲ್ಲಿ ಪುಷ್ಪಗಳ ಆಕೃತಿಗಳಿವೆ. ಶ್ರೀ ಆದಿನಾಥ ಸ್ವಾಮಿಯ ಕೆಳಗಡೆ ಯಾವುದೇ ರೀತಿಯ ಲಾಂಛನ ಕಂಡುಬರುವುದಿಲ್ಲ. ಮೂರ್ತಿಯ ಎಡ ಮತ್ತು ಬಲ ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳಿವೆ. ಮೂರ್ತಿಯ ಅಕ್ಕ ಪಕ್ಕದಲ್ಲಿ ಯಕ್ಷ ಯಕ್ಷಿಯರು ಗೋಮುಖ ಯಕ್ಷ ಮತ್ತು ಚಕ್ರೇಶ್ವರ ಯಕ್ಷಿಯರ ವಿಗ್ರಹಗಳು ಇವೆ. ಬಳಿಯಲ್ಲಿ ಶ್ರುತ ಗಣದರ ವಲಯ ಇವೆ. ಪ್ರಭಾವಳಿಯಲ್ಲಿ ಉಳಿದ ತೀರ್ಥಂಕರುಗಳ ಬಿಂಬಗಳಿವೆ. ಗಂಧ ಕುಟಿ ಇದೆ ಇಲ್ಲಿ ಅನೇಕ ವಿವಿಧ ಜಿನಮೂರ್ತಿಗಳಿವೆ. ಒಂದು ಶ್ರೀ ಬಾಹುಬಲಿಯ ಮೂರ್ತಿಯನ್ನು ಕೂಡ ಇಲ್ಲಿ ಕಾಣಬಹುದು. ಇದರ ಜೊತೆಗೆ ನಿಂತುಕೊಂಡಿರುವ, ಸ್ವತಂತ್ರವಾಗಿರುವ ಬ್ರಹ್ಮ ಯಕ್ಷ ಮೂರ್ತಿಯನ್ನು ಕಾಣಬಹುದು.[2020-09-09 4:24:06] ಶ್ರೀ ಆದಿನಾಥ ಸ್ವಾಮಿಯ ಎದುರುಗಡೆ ಪರ್ಯಂಕಾಸನದಲ್ಲಿರುವ ಒಂದು ಅಮೃತ ಶಿಲೆಯ ಮೂರ್ತಿ ಇದೆ. ಪಾಶ್ರ್ವನಾಥ ಸ್ವಾಮಿ ಗೆ ಸಂಬಂಧಿಸಿದಂತೆ ನಾಗಫಣವೂ ಇದೆ.

ಶೈಲಿ/ವಿನ್ಯಾಸ

ಬದಲಾಯಿಸಿ

ಶಿಖರಬಂದಿ, ಘರ ಜೈನ, ತೀರ್ಥ,

ಇದು ಖಾಸಗಿ ಸ್ವತ್ತು, ಬಹುತೇಕ ಘರಜೈನ್ ಬಸದಿ ಎಂದು ನಂಬುಗೆ.

ಬಸದಿಯ ಗರ್ಭಗುಡಿಯಿಂದ ಹೊರ ಬರುತ್ತಿರುವಂತೆ ಘಂಟಾ ಮಂಟಪ, ಪ್ರಾರ್ಥನಾ ಮಂಟಪ, ತೀರ್ಥ ಮಂಟಪಗಳನ್ನು ಎದುರಲ್ಲಿ ಗೋಪುರವನ್ನು ಕಾಣುತ್ತೇವೆ. ಈ ಬಸದಿಯಲ್ಲಿ ಮೇಗಿನ ನೆಲೆ ಇಲ್ಲ. ನಾವು ಘಂಟಾ ಮಂಟಪದಿಂದ ಹೊರಗಡೆ ಬರುವಾಗ ಹೊರಗಿನ ಜಗಲಿಯ ಗೋಡೆಗಳ ಮೇಲೆ ದ್ವಾರಪಾಲಕರ ಸುಂದರ ವರ್ಣ ಚಿತ್ರಗಳನ್ನು ಕಾಣಬಹುದು. ಬಸದಿಯಲ್ಲಿ ಮೂಲ ನಾಯಕ ಮತ್ತು ಇತರ ತೀರ್ಥಂಕರುಗಳ ಮೂರ್ತಿಗಳ ಬಗ್ಗೆ ನಾವು ನೋಡುವ ಇನ್ನೊಂದು ಮೂರ್ತಿ ಎಂದರೆ ಶ್ರೀ ಮಾತೆ ಪದ್ಮಾವತಿ ಅಮ್ಮನವರದ್ದು. ಪದ್ಮಾವತಿ ಅಮ್ಮನ ಮೂರ್ತಿಗೆ ವಿಶೇಷ ಪೂಜೆಗಳ ಸಂದರ್ಭದಲ್ಲಿ ಮಾತ್ರ ಸೀರೆ ಉಡಿಸಿ, ಬಳೆ ತೊಡಿಸಿ, ಪೂಜೆ ನಡೆಸಲಾಗುವುದು. ಪದ್ಮಾವತಿ ಅಮ್ಮನವರ ಮೂರ್ತಿಯ ಉತ್ತರಕ್ಕೆ ಮುಖ ಮಾಡಿದೆ. ಬಸದಿಯ ಮೂಲ ನಾಯಕನಿಗೂ ಕೂಡ ಹಿಂದೆ ಕ್ರಮಬದ್ಧವಾಗಿ ಪೂಜೆ ನಡೆಯುತ್ತಿದ್ದು ಬಸದಿಯ ಗೋಪುರದ ಹೊರಗಡೆಯ ಮೇಲೆ ಶ್ರೀ ವೃಷಭ ತೀಥರ್ಂಕರರ ತಾಯಿಗೆ ಆದಂತಹ 16 ಸ್ವಪ್ನಗಳ ವರ್ಣಚಿತ್ರಗಳನ್ನು ಕಾಣಬಹುದಾಗಿದೆ.

ಮಾಹಿತಿ ಇಲ್ಲ

ಮಾನಸ್ಥಂಭ

ಬದಲಾಯಿಸಿ

ಮಾಹಿತಿ ಇಲ್ಲ

ಇತಿಹಾಸ

ಬದಲಾಯಿಸಿ

ಮಾಹಿತಿ ಇಲ್ಲ

ಐತಿಹ್ಯ

ಬದಲಾಯಿಸಿ

ಮಾಹಿತಿ ಇಲ್ಲ

ವಿಶೇಷತೆ

ಬದಲಾಯಿಸಿ

ಗಂಧಕುಟಿಯಲ್ಲಿ ವಿಭಿನ್ನ ತೀರ್ಥಂಕರುಗಳ ಸಿಂಹಲಲಾಟ ಸಹಿತವಾದ ಮೂರ್ತಿಗಳಿವೆ. ಇದು ಇಲ್ಲಿಯ ಒಂದು ಧಾರ್ಮಿಕ ವೈಭವ.

ಕಾಲಮಾನ

ಬದಲಾಯಿಸಿ

ಸರಿಸುಮಾರು ೯೮ ವರ್ಷಗಳ ಹಿಂದೆ ಈ ಬಸದಿಯನ್ನು ನಿರ್ಮಿಸಲಾಗಿದೆ ಎಂದು ಅಂದಾಜು (ದಾಖಲಾತಿ ಇಲ್ಲ) ಈ ಬಸದಿ ಶ್ರೀ ಜಿನಪ್ಪ ಚೌಟರ ಕಾಲದಲ್ಲಿ ಕಟ್ಟಲಾಯಿತು ಎಂದು ನಂಬಲಾಗಿದೆ.

ನಿಮಾತೃ

ಬದಲಾಯಿಸಿ

ಶ್ರೀ ಜಿನಪ್ಪ ಚೌಟರ

ಆಚರಣೆಗಳು

ಬದಲಾಯಿಸಿ
  1. ಶ್ವೇತ ವಸ್ತ್ರ ಕಡ್ಡಾಯ
  2. ತಿನ್ನುವುದು/ಅಗಿಯುವುದು ನಿಷಿದ್ಧ
  3. ನೀರು ಕುಡಿಯುವುದು ನಿಷಿದ್ಧ
  4. ಚರ್ಮದ ವಶ್ತುಗಳ ಬಳಕೆ
  5. ಮೌನ ಆಚರಣೆ
  6. ಮೊಬೈಲ್ ಬಳಕೆ ನಿಷಿದ್ಧ
  7. ವಿಗ್ರಹ ಮುಟ್ಟುವುದು

ವಿಧಿ-ವಿಧಾನ

ಬದಲಾಯಿಸಿ

ಮಾಹಿತಿ ಇಲ್ಲ

ಪ್ರಸಕ್ತ ಉಸ್ತುವಾರಿ/ಮೇಲ್ವಿಚಾರಣೆ

ಬದಲಾಯಿಸಿ

೧೯೭೮ರಲ್ಲಿ ಜೀರ್ಣೋದ್ಧಾರ ನಡೆದಿದ್ದು ಎಂದು ತಿಳಿದಿದೆ. ಪ್ರಸಕ್ತ ಪೂಜಾ ಪಾಠಗಳು ಇದು ಖಾಸಗಿ ಸ್ವತ್ತು. ಈ ಬಸದಿಗೆ ಕೆಲವರ್ಷಗಳ ಹಿಂದೆ ಯಾರು ನಿಗ್ರ್ರಂಥ ಮುನಿಗಳು ಭೇಟಿ ನೀಡಿದ ಕುರುಹು ಇದೆ. ತದನಂತರ ಕಾರಣಾಂತರಗಳಿಂದ ಮುಖ್ಯವಾಗಿ ಇಂದ್ರರು ಲಭ್ಯವಿಲ್ಲದ ಕಾರಣ ಈಗ ವ್ಯವಸ್ಥಿತ ಪೂಜೆ ನಿಂತು ಹೋಗಿದೆ.

ಪೂಜಾ ಕೈಂಕರ್ಯ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ