ದೇಶದ ಆಯವ್ಯಯ. ಒಂದು ದೇಶವೂ ತನ್ನ ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತೋರಬೇಕಾದ ಕಾರಣ ಅದು ಪ್ರಜೆಗಳಿಗೆ ತನ್ನ ಬಜೆಟ್ ಅಧಿವೇಶನದಲ್ಲಿ ತನ್ನ ಮುಂದಿನ ಹಣಕಾಸು ವರ್ಷದ ನಿರೀಕ್ಷಿತ ಧನ ಸಂಗ್ರಹಣೆ ಹಾಗು ವಿವಿಧ ಪ್ರಮುಖ ಅತ್ಯಾವಶ್ಯಕ ಕ್ಷೇತ್ರಗಳಲ್ಲಿ ಹಾಗು ಅಭಿವೃದ್ಧಿ ಕ್ಷೇತ್ರದಲ್ಲಿ ತನ್ನ ಹಣ ಹೂಡಿಕೆಯ ಅಂದಾಜು ಮುಂಗಡ ಪತ್ರವನ್ನು ತಯಾರು ಮಾಡಿ ಮಂಡಿಸುತ್ತದೆ.ಇದು ಪ್ರಜಾಪ್ರಭುತ್ವದ ಆಡಳಿತದ ಬಹು ಮುಖ್ಯ ಕಾರ್ಯ.ದೇಶದ ಬಜೆಟ್ ಎಂಬುದು ದೇಶದ ರಾಜಾದಾಯದಿಂದ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಬಜೆಟ್ ಅಥವಾ ಮುಂಗಡಪತ್ರವು  ಹಣದ ಖರ್ಚು ಯೋಜನೆ ರಚಿಸಲು ಅವಕಾಶ ನೀಡುವುದರಿಂದ, ದೇಶದ ಕಾರ್ಯಾಂಗವು(ಎಕ್ಸಿಕ್ಯೂಟಿವ್) ಯಾವಾಗಲೂ ತನ್ನ ಅಭಿವೃದ್ಧಿ ಯೋಜನೆಗಳಿಗೆ ಮತ್ತು ಅತ್ಯಾವಶ್ಯಕ ಕಾರ್ಯಗಳಿಗೆ ಸಾಕಷ್ಟು ಹಣ ಹೊಂದಿರುವಂತೆ ಖಾತ್ರಿಗೊಳಿಸುತ್ತದೆ. ಅಷ್ಟೇ ಅಲ್ಲದೆ ಒಂದು ನಿಶ್ಚಿತ ಆಯವ್ಯಯ ಅಂದಾಜನ್ನು ಅಥವಾ ಖರ್ಚು ಯೋಜನೆ ಅನುಸರಿಸಿ ನಿರ್ವಹಿಸುವುದರಿಂದ ಹಣ ಸಾಲದೆ  ಸಾಲ ಮಾಡುವುದು ತಪ್ಪುತ್ತದೆ ಅಥವಾ ಪ್ರಸ್ತುತ ಸಾಲ ಗಳು ಇದ್ದಲ್ಲಿ ಅದರ ಹೊರೆ ಕಡಿಮೆ ಮಾಡಿಕೊಳ್ಳಲು  ಅವಕಾಶ ಒದಗುತ್ತದೆ. 

ಒಂದು ಸರ್ಕಾರದ ಬಜೆಟ್ ನ ಉದ್ದೇಶ ಆಯಾ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ನಿರೀಕ್ಷಿತ ವೆಚ್ಚಗಳ ಸಾರಾಂಶ ಅಥವಾ ಯೋಜನೆಯಾಗಿರುತ್ತದೆ. ಸರ್ಕಾರದ ಬಜೆಟ್ ಮೂರು ವಿಧಗಳಿವೆ. ಕಾರ್ಯಾಚರಣಾ ಅಥವಾ ಪ್ರಸ್ತುತ ಬಜೆಟ್, ಬಂಡವಾಳ ಅಥವಾ ಬಂಡವಾಳ ಹೂಡಿಕೆ ಬಜೆಟ್ ಮತ್ತು ನಗದು ಅಥವಾ ನಗದು ಹರಿವು ಬಜೆಟ್ .

  ಸರ್ಕಾರದ ಬಜೆಟ್ ಸಾಮಾನ್ಯವಾಗಿ ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ಅದನ್ನು ಖರ್ಚು ಮಾಡಲು ಅದರ ಪ್ರಸ್ತಾವಿತ ಖರ್ಚು ಅಂದಾಜು ಪ್ರಸ್ತುತ ಪಡಿಸುವ  ಸರ್ಕಾರೀ ದಾಖಲೆ.ಈ ಪ್ರಸ್ತಾವಗಳು ಕೇಂದ್ರ ಸರ್ಕಾರದಲ್ಲಿ  ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಅನುಮೋದಿತವಾಗಬೇಕು.  ರಾಜ್ಯಗಳಲ್ಲಿ ವಿದಾನ ಮಂಡಲದಿಂದ ಅನುಮೋದಿತವಾಗಬೇಕು. ಅವಶ್ಯವಾಗಿ  ಮತ್ತು  ಈ  ಪ್ರಸ್ತಾವವನ್ನು   ಹಣಕಾಸು ಸಚಿವರು ಶಾಸನ ಸಭೆಯಲ್ಲಿ  ದೇಶದ  ಪ್ರಜೆಗಳಿಗೆ ಮಂಡಿಸುತ್ತಾರೆ.  ಸಭೆಯಲ್ಲಿ ಚರ್ಚೆಯಾಗಿ ಶಾಸನಸಭೆಯಿಂದ ಅನುಮೋದಿತವಾದ ಧನವಿಧೇಯಕವು(ಹಣಕಾಸು ಮಸೂದೆ) ದೇಶದ ಮುಖ್ಯ ಕಾರ್ಯನಿರ್ವಾಹಕ ಅಥವಾ ರಾಷ್ಟ್ರಪತಿಗಳ  ಅನುಮೋದನೆ ಪಡೆದುಕೊಳ್ಳುತ್ತದೆ. ಬಜೆಟ್ ಅನ್ನು ದೇಶದ ವಾರ್ಷಿಕ ಹಣಕಾಸು ವಿವರಪತ್ರ ಎಂದು ಕರೆಯಲಾಗುತ್ತದೆ. ಈ ದಾಖಲೆಯು ಬರುವ (ಪ್ರಸ್ತುತ) ಹಣಕಾಸು ವರ್ಷದ ನಿರೀಕ್ಷಿತ ಸರ್ಕಾರದ ಆದಾಯಗಳು ಮತ್ತು ಸರ್ಕಾರಿ ವೆಚ್ಚಗಳ  ಅಂದಾಜು ನೀಡುತ್ತದೆ. ದೇಶದ  ಆದಾಯದಲ್ಲಿ  ಕೇವಲ ನಿರ್ದಿಷ್ಟ ಬಗೆಯ ತೆರಿಗೆಯನ್ನು ವಿವಿಧ ಮಟ್ಟದಲ್ಲಿ ಸಂಗ್ರಹಿಸಿಕೊಳ್ಳಬಹುದು.  ಆಸ್ತಿ ತೆರಿಗೆ  ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ  ಆದಾಯಗಳಿಗೆ ಆಧಾರವಾಗಿರುತ್ತದೆ. ಮಾರಾಟ ತೆರಿಗೆ ಮತ್ತು / ಅಥವಾ ಆದಾಯ ತೆರಿಗೆ ರಾಜ್ಯದ ಆದಾಯಕ್ಕೆ ಆಧಾರವಾಗಿರುತ್ತದೆ . ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ರಾಷ್ಟ್ರೀಯ ಆದಾಯಗಳಿಗೆ ಆಧಾರವಾಗಿವೆ.

ಸರ್ಕಾರದ ಬಜೆಟ್ ಮೂರು ರೀತಿಯಲ್ಲಿ ಇರುತ್ತವೆ: ಸಮತೋಲಿತ ಬಜೆಟ್: ಸರ್ಕಾರಿ ಆದಾಯ ಮತ್ತು ವೆಚ್ಚಸಮ ಸಮ ಇರುವುದು. ಹೆಚ್ಚುವರಿ ಬಜೆಟ್: ನಿರೀಕ್ಷಿತ ಆದಾಯ ವೆಚ್ಚಕ್ಕಿಂತ ಜಾಸ್ತಿಯಿರುವುದು. ಕೊರತೆ ಬಜೆಟ್: ನಿರೀಕ್ಷಿತ ವೆಚ್ಚ ಆದಾಯಕ್ಕಿಂತ ಹೆಚ್ಚಾಗಿರುವುದು.


ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ 'ಲೇಣೆ-ದೇಣಿ' ಪಟ್ಟಿಯು ಪ್ರಮುಖ ಸಾದನವಾಗಿದೆ. ಇದು ಬ್ಯಾಂಕಿನ ನೈಜ ಅಥವಾ ವಾಸ್ತವಿಕ ಹಣಕಾಸು ಸ್ಥಿತಿಗತಿಗಳನ್ನು ವ್ಯಕ್ತಪಡಿಸುತ್ತದೆ. ಇದನ್ನು ಪ್ರತಿ ಯೊಂದು ಬ್ಯಾಂಕು ಸಾಮಾನ್ಯ ವಾಗಿ ನಿಗದಿತ ದಿನಾಂಕದಂದು ಪ್ರಕಟ ಗೊಳಿಸುತ್ತವೆ. ಈ ಪಟ್ಟಿಗೆ ' ಆಸ್ತಿ-ಹೊಣೆಗರಿಕೆ' ಪಟ್ಟಿ 'ಸಾಲ-ಆಸ್ತಿಗಳ ' ಪಟ್ಟಿ ' ಅಢಾವೆ ಪಟ್ಟಿ ' , 'ಜಮಾ-ಖರ್ಚು ಪಟ್ಟಿ ', ಇತ್ಯಾದಿ ಹೆಸರುಗಳಿಂದಲೂ ಕರೆಯ ಲಾಗುತ್ತದೆ. ಒಂದು ಬ್ಯಾಂಕಿನ ವಾಸ್ತವಿಕ ಹಣಕಾಸಿನ ಸ್ಥಿತಿಗತಿ ಗಳನ್ನು ತೋರಿಸುವ ಪಟ್ಟಿಗೆ ' ಲೇಣೆ-ದೇಣೆ ಪಟ್ಟಿ' ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಪ್ರತಿ ಹಣ ಕಾಸಿನ ವರ್ಷ ಅಂತ್ಯದಲ್ಲಿ ಈ ಪಟ್ಟಿಯನ್ನು ತಯಾರಿಸಿ ಪ್ರಕಟಿಸ ಲಾಗುವುದು. ಲೇಣಿಗಳು ಅಥವಾ ಆಸ್ತಿಗಳು ಯಾರಾರು ಎಷ್ಟೆಷ್ಟು ಹಣವನ್ನು ಆ ಬ್ಯಾಂಕಿಗೆ ಕೊಡಬೇಕು ಎಂಬುದನ್ನು ತಿಳಿಸುತ್ತದೆ. ಈ ಆಧುನಿಕ ಕಾಲದಲ್ಲಿ ಎಲ್ಲಾ ಕಂಪನಿಗಳು ಆಯವ್ಯಯ ಪಟ್ಟಿಯನ್ನು ತಯಾರಿ ಮಾಡಬೇಕು.ಆಯವ್ಯಯ ಪಟ್ಟಿಯಿಂದ ಕಂಪನಿಯ ಸ್ಥಿತಿಯನ್ನು ಪಡೆಯ ಬಹುದು ಇದರಿಂದ[] ಆಯವ್ಯಯಪಟ್ಟಿ ಎಲ್ಲಾ ಕಂಪನಿಗಳಿಗು ಮುಖ್ಯವಾಗಿದೆ.

Balance sheet example

ಈ ಪಟ್ಟಿಯಲ್ಲಿ ಬ್ಯಾಂಕಿನ ವ್ಯವಹಾರಗಳ ಬಗೆಗಿನ ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ. ಯಾವುದೇ ಬ್ಯಾಂಕು ಅಭಿವೃದ್ಧಿಯಾಗ ಬೇಕಾದರೆ ಸಾರ್ವಜನಿಕರ ವಿಶ್ವಾಸವನ್ನು ಗಳಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಆಸ್ತಿ-ಹೊಣೆಗಾರಿಕೆ ಪಟ್ಟಿಯಲ್ಲಿ ಸಾರ್ವಜನಿಕರಿಗೆ ಸಹಜವಾಗಿ ಕೂತುಹಲವಿರುತ್ತದೆ. ಬ್ಯಾಂಕುಗಳು ಹಣ ವಿನಿಯೋಗದ ನೀತಿ, ವ್ಯವಹಾರ ಸಾಮರ್ಥ್ಯ, ಲಾಭ ದಾಯಕತೆಯ ಶಕ್ತಿ ಮುಂತಾದ ವಿಚಾರಗಳು ಲೇಣಿ-ದೇಣಿ ಪಟ್ಟಿಯಿಂದ ಬಹಿರಂಗಗೊಳ್ಳುವುದ ರಿಂದ ಇದು ತುಂಬಾ ಪ್ರಮುಖವಾಗಿದೆ. ಈ ಲೇಣಿ-ದೇಣಿ ಪಟ್ಟಿಯಲ್ಲಿ ಎರಡು ಭಾಗಗಳಿರುತ್ತವೆ.ಈ ಪಟ್ಟಿಯ ಎಡಭಾಗದಲ್ಲಿ ದೇಣಿಗಳನ್ನು (ಹೊಣೆಗಾರಿಕೆಗಳನ್ನು) ಹಾಗೂ ಬಲಭಾಗದಲ್ಲಿ ಲೇಣಿಗಳನ್ನು (ಆಸ್ತಿಗಳನ್ನು) ನಮೂದಿಸಲಾಗುತ್ತದೆ. ಸಮಾನ್ಯವಾಗಿ ಲೇಣಿ-ದೇಣಿ ಪಟ್ಟಿಯಲ್ಲಿ ಲೇಣಿಗಳ ಒಟ್ಟು ಮೊತ್ತವು ದೇಣಿಗಳ ಒಟ್ಟು ಮೊತ್ತಕ್ಕೆ ಸಮವಾಗಿರುತ್ತದೆ. ವಾಣಿಜ್ಯ ಬ್ಯಾಂಕಿನ ಒಂದು ಮಾದರಿ ಲೇಣಿ-ದೇಣಿ ಪಟ್ಟಿಯು ಈ ರೀತಿ ಇದೆ.[] ದೇಣಿಗಳು(ಹೊಣೆಗಳು) ಯಾರಿಗೆ ಎಷ್ಟೆಷ್ಟು ಆ ಬ್ಯಾಂಕು ಕೊಡಬೇಕು ಎಂಬುದನ್ನು ತಿಳಿಸುತ್ತದೆ. ಹಿಂದಿನ ಪಟ್ಟಿಯಲ್ಲಿ ಬ್ಯಾಂಕಿನ ಲೇಣಿ-ದೇಣಿಗಳ ವಿವರಗಳನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಬರುವ ವಿವಿಧ ಬಾಬುಗಳನ್ನು ವಿವರವಾಗಿ ನಾವು ಪರಿಶೀಲಿಸೋಣ:

ದೇಣಿಗಳು(ಹೊಣೆಗಾರಿಕೆಗಳು):-[]

ಬದಲಾಯಿಸಿ

ದೇಣಿಗಳು ಅಥವಾ ಹೊಣೆಗಾರಿಕೆಗಳ ವಿಭಾಗದಲ್ಲಿ ಬ್ಯಾಂಕು ಯಾವ ಯಾವ ಮೂಲಗಳಿಂದ ತನ್ನ ಸಂಪನ್ಮೂಲಗಳನ್ನು ಸಂಗ್ರಹಿಸುತ್ತದೆ ಎಂಬ ಅಂಶಗಳು ತಿಳಿಯುತ್ತವೆ. ಈ ವಿಭಾಗದಲ್ಲಿ ಬರುವ ಹೂಟೆಗಳು ಬ್ಯಾಂಕು ಬೇಡಿಕೆಯವರಿಗೆ ನೀಡಬೇಕಾಗುವ ಹಣದ ಮೊತ್ತವನ್ನು ತಿಳಿಸುತ್ತದೆ. ಅಂತಹ ಹೊಣೆಗಳೆಂದರೆ;

ಷೇರು ಬಂಡವಾಳ[]

ಬದಲಾಯಿಸಿ

ಷೇರು ಬಂಡವಾಳವು ಷೇರುದಾರರು ಬ್ಯಾಂಕಿಗೆ ಕೊಟ್ಟಿರುವ ಷೇರು ಹಣವನ್ನು ಸೂಚಿಸುತ್ತದೆ. ಷೇರು ಬಂಡವಾಳ ಷೇರುದಾರರಿಗೆ ಸೇರಿರುತ್ತದೆ, ಆದುದರಿಂದ ದು ಷೇರುದಾರನಿಗೆ ಕೊಡಲು ಹೊಣೆಗಾರನಾಗಿರುತ್ತದೆ. ಬ್ಯಾಂಕಿಗೆ ಬರುವ ಷೇರು ಬಂಡವಾಳವು ಎರಡು ರೀತಿಯಾಗಿವೆ: ಅವುಗಳು ೧) ಅಧಿಕೃತ ಬಂಡವಾಳ.೨)ಪಾವತಿಯಾದ ಬಂಡವಾಳ. ಅಧಿಕೃತ ಬಂಡವಾಳ ಎಂದರೆ ಬ್ಯಾಂಕು ಶಾಸನಾತ್ಮಕವಾಗಿ ಷೇರುಗಳ ಮೂಲಕ ಸಂಗ್ರಹಿಸಲಾಗುವ ಗರಿಷ್ಠ ಮೊತ್ತದ ಬಂಡವಾಳವಾಗಿರುತ್ತದೆ. ಷೇರುದಾರರಿಂದ ನೈಜವಾಗಿ ಸಂಗ್ರಹಿಸಲಾದ ಷೇರು ಹಣದ ಮೊತ್ತಕ್ಕೆಆವತಿಯಾದ ಬಂಡವಾಳ ಎನ್ನುತ್ತವೆ.

ಕಾಯ್ದಿರಿಸಲಾದ ನಿಧಿ

ಬದಲಾಯಿಸಿ

ಬ್ಯಾಂಕು ತನ್ನ ಲಾಭಾಂಶದಲ್ಲಿ ಒಂದಿಷ್ಟನ್ನು ಬಂಡವಾಳದಾರರಿಗೆ ಹಂಚದೆ ತಗೆದಿರಿಸಿದ ಹಣವೇ ಕಾಯ್ದಿರಿಸಲಾದ ನಿಧಿಯಾಗಿದೆ. ಅದು ಲಾಭದೊಳಗಿಂದ ಕೂಡಿಟ್ಟ ಹಣವಾಗಿದೆ. ಅದು ಷೇರುದಾರರಿಗೆ ಸೇರಿದ್ದರಿಂದ ಅದೂ ಸಹ ಬ್ಯಾಂಕಿನ ಹೊಣೆಯನ್ನು ಸೂಚಿಸುತ್ತದೆ.

ಠೇವಣಿಗಳು

ಬದಲಾಯಿಸಿ

ಬ್ಯಾಂಕು ಸಾರ್ವಜನಿಕರಿಂದ ವಿವಿಧ ಪ್ರಕಾರದ ಠೇವಣಿಗಳನ್ನು ಪಡೆದು ಕೊಳ್ಳುತ್ತದೆ. ಇದು ಬ್ಯಾಂಕಿನ ಪ್ರಮುಖ ಹೊಣೆಗಾರಿಕೆಯನ್ನು ಸೂಚಿಸುತ್ತದೆ. ಚಾಲ್ತಿ ಠೇವಣಿ, ಉಳಿತಾಯ ಠೇವಣಿ ಮತ್ತು ನಿಗದಿತ ಠೇವಣಿಗಳು ಠೇವಣಿದಾರರಿಗೆ ಸಂಬಂಧಿಸಿರುವುದರಿಂದ ಅವರು ಕೇಳಿದಾಗ ಹಿಂತಿರಿಗಿಸುವುದು ಬ್ಯಾಂಕಿನ ಹೊಣೆಯಾಗಿರುತ್ತದೆ.

ಇತರ ಬ್ಯಾಂಕುಗಳಿಂದ ಪಡೆದ ಸಾಲಗಳು

ಬದಲಾಯಿಸಿ

ಒಂದು ಬ್ಯಾಂಕು ಇತರ ಬ್ಯಾಂಕುಗಳಿಂದ ಸಾಲ ಪಡೆಯುವುದು ರೂಢಿಯಲ್ಲಿದೆ. ಈ ರೀತಿ ಪಡೆದ ಸಾಲಗಳು ತಾತ್ಕಾಲಿಕ ಸಾಲಗಳಾಗಿರುತ್ತವೆ. ಹಣವನ್ನು ಸಾಲ ಪಡೆದ ಬ್ಯಾಂಕು ಸಾಲ ಕೊಟ್ಟ ಬ್ಯಾಂಕಿಗೆ ಮರಳಿ ಕೊಡುವ ಹೊಣೆ ಹೊಂದಿರುತ್ತದೆ.

ಒಪ್ಪಿಗೆಗಳು ಮತ್ತು ಸಮ್ಮತಿಗಳು

ಬದಲಾಯಿಸಿ

ತನ್ನ ಗ್ರಾಹಕರ ಪರವಾಗಿ ಹಣಕೊಡಲು ಸಮ್ಮತಿಸಿ ಸಹಿಹಾಕಿದ ಹುಂಡಿಗಳು ಮತ್ತು ವಿನಿಮಯ ಪತ್ರಗಳು ಬ್ಯಾಂಕಿನ ಹೊಣೆಗಾರಿಕೆಗಳ ವಿಭಾಗದಲ್ಲಿ ಬರುತ್ತದೆ. ಈ ಹುಂಡಿ ಹಾಗೂ ವಿನಿಮಯ ಪತ್ರಗಳ ಹಣವನ್ನು ಗ್ರಾಹಕರು ನಿಗದಿಯಾದ ದಿವಸಕ್ಕೆ ಕೊಡಲು ಸಾಧ್ಯವಾಗದಿದ್ದರೆ, ಬ್ಯಾಂಕು ಅವುಗಳು ಹಣವ್ನು ಕೊಡಲು ಹೊಣೆಗಾರನಾಗಿರುತ್ತದೆ.

ಆಕಸ್ಮಿಕ ಹೊಣೆಗಳು

ಬದಲಾಯಿಸಿ

ಬ್ಯಾಂಕು ನಿರೀಕ್ಷಿಸಿರುವ ಹಾಗೂ ಆಕಸ್ಮಿಕವಾಗಿ ಬರುವ ಹೊಣೆಗಳನ್ನು " ಆಕಸ್ಮಿಕ ಹೊಣೆಗಳು " ಎನ್ನುತ್ತಾರೆ. ಇದಕ್ಕಾಗಿ ಎಲ್ಲಾ ಬ್ಯಾಂಕುಗಳು ಸ್ವಲ್ಪ ಹಣವನ್ನು ತೆಗೆದಿರುತ್ತದೆ.

ಲಾಭ ಹಾಗೂ ನಷ್ಟಗಳು:-

ಬದಲಾಯಿಸಿ

ಒಂದು ವರ್ಷದ ಅವಧಿಯಲ್ಲಿ ಬ್ಯಾಂಕು ಗಳಿಸಿದ ಲಾಭವನ್ನು ಅಥವಾ ನಷ್ಠವನ್ನು ಈ ಪಟ್ಟಿಯಲ್ಲಿ ತೋರಿಸಲಾಗುವುದು. ಲಾಭ ಅಥವಾ ನಷ್ಠಗಳು ಬಂಡವಾಳದಾರರಿಗೆ ಸಲ್ಲುವಂತಹುದು. ಅದರಿಂದ ಅವುಗಳನ್ನು ದೇಣಿ ಅಂಶಗಳಲ್ಲಿ ತೋರಿಸಲಾಗುತ್ತದೆ. ೧) ಕೊಡಬೇಕಾದ ಖಾತೆಗಳು. ೨) ಕಾನೂನು ಖಾತರಿ ಅಥವಾ ನ್ಯಾಯಾಲಯದ ತೀರ್ಪುಗಳ (ಸಂಭಾವ್ಯ ಮತ್ತು ಅಳೆಯಬಹುದಾದ ಎರಡೂ ಎಂದು ಅನಿಶ್ಚಿತ ಭಾದ್ಯತೆಗಳು) . ೩) ಆರ್ಥಿಕ ಭಾದ್ಯತೆಗಳು (ಹೊರತುಪಡಿಸಿ ನಿಬಂಧನೆಗಳನ್ನು ಮತ್ತು ಸಂದಾಯಗಳು ಖಾತೆಗಳನ್ನು ಉದಾಹರಣೆಗೆ), ೪) ಪ್ರಸ್ತುತ ಹೊಣೆಗಾರಿಕೆಗಳಿಗೆ ಮತ್ತು ಆಸ್ತಿಗಳು ತೆರಿಗೆ. ೫) ಮುಂದೂಡಲಾದ ತೆರಿಗೆ ಹೊಣೆಗಾರಿಕೆಗಳಿಗೆ ಮತ್ತು ಮುಂದೂಡಲಾದ ತೆರಿಗೆ ಸ್ವತ್ತುಗಳು. ೬) ಅನರ್ಜಿತ ಗ್ರಾಹಕರು ಸೇವಾದಾರರ ಆದಾಯ. ಇವುಗಳು ಹೊಣೆಗಾರಿಕೆಗಳಲ್ಲಿ ಬರುವ ಪ್ರಮುಕ ಅಂಶಗಳು.

 
PEF D354 Balance sheet 1893

ಲೇಣಿಗಳು (ಆಸ್ತಿಗಳು):- []

ಬದಲಾಯಿಸಿ

ಬ್ಯಾಂಕಿನ ಲೇಣಿ-ದೇಣಿ ಪಟ್ಟಿಯಲ್ಲಿ ಬರುವ ಲೇಣಿಗಳ (ಆಸ್ತಿಗಳ) ವಿಭಾಗವು ಬ್ಯಾಂಕು ತನ್ನ ಬಳಿ ಲಭ್ಯವಿರುವ ಸಂಪನ್ಮೂಲಗಳನ್ನು ಯಾವ ರೀತಿ ವಿನಿಯೋಗಿಸಿದೆ ಎಂಬುದನ್ನು ತಿಳಿಯುತ್ತದೆ. ಈ ವಿಭಾಗವು ಇತರರಿಂದ ಬ್ಯಾಂಕಿಗೆ ಬರಬೇಕಾದ ಹಣ ಮತ್ತು ಆದಾಯವನ್ನು ತೋರಿಸುತ್ತದೆ. ಬ್ಯಾಂಕು ತನ್ನ ಆಸ್ತಿಗಳನ್ನು ಹಂಚುವ ಸಂದರ್ಭದಲ್ಲಿ ದ್ರವತ್ವ ಲಾಭದಾಯಕತ್ವ ಮತ್ತು ಸುರಕ್ಷತೆಯ ತತ್ವಗಳಿಗೆ ಬದ್ಧವಾಗಿರುತ್ತದೆ. ಈ ವಿಭಾಗದಲ್ಲಿ ಬರುವ ಬಾಬುಗಳು ಈ ರೀತಿ ಇವೆ:-

ಬ್ಯಾಂಕು ತನ್ನಲ್ಲಿಟ್ಟುಕೊಂಡಿರುವ ನಗದು ಹಣವಾಗಿದೆ. ಈ ಹಣವು ತನ್ನ ಬಳಿ ಇಟ್ಟುಕೊಂಡಿರುವ ಹಣ, ಕೇಂದ್ರ ಬ್ಯಾಂಕಿನಲ್ಲಿರುವ ಹಣ ಹಾಗೂ ಇತರ ವಾಣಿಜ್ಯ ಬ್ಯಾಂಕುಗಳಲ್ಲಿ ಇಟ್ಟಿರುವ ಹಣಗಳನ್ನು ಒಳಗೊಂರುತ್ತದೆ. ಈ ನಗದು ಹಣವು ಬ್ಯಾಂಕಿಗೆ ಬೇಕೆಂದಾಗ ಲಭ್ಯವಾಗುದರಿಂದ ಈ ಆಸ್ತಿ ಅತ್ಯಧಿಕ ದ್ರವತ್ವ ಹೊಂದಿರುತ್ತದೆ. ಅದರಿಂದ ಈ ವಿಭಾಗದಲ್ಲಿ ಅದು ಪ್ರಥಮ ಸ್ಥಾನ ಪಡೆದುಕೊಂಡಿದೆ.

ಅಲ್ಪಾವಧಿ ಮುನ್ಸೂಚನಿ ಮತ್ತು ಕರೆ ಹಣ

ಬದಲಾಯಿಸಿ

ಈ ರೀತಿಯ ಸಾಲಗಳನ್ನು ಹುಂಡಿ ದಲ್ಲಾಳಿಗಳು, ವಟ್ಟ ಅಂಗಡಿಗಳು ಮತ್ತು ಸಣ್ಣ ಷೇರು ದಲ್ಲಾಳಿಗಳಿಗೆ ಕೊಡಲಾಗುತ್ತದೆ. ಈ ಸಾಲಗಳು ಕನಿಷ್ಠ ಏಳು ದಿನಗಳು ಅವಧಿಗೆ ನೀಡಲಾಗಿರುತ್ತದೆ ಹಾಗೂ ಬ್ಯಾಂಕುಗಳು ಕೇಳಿದ ತಕ್ಷಣ ಅಥವಾ ಮುನ್ಸೂಚನೆ ಕೊಟ್ಟಕ್ಷಣವೇ ಹಿಂದಿರುಗಿಸಬೇಕಾಗುತ್ತದೆ. ಇವುಗಳನ್ನು ಬ್ಯಾಂಕಿನ ದ್ವಿತೀಯ ರಕ್ಷಣಾಂಗವೆಂದು ಕರೆಯಲಾಗುತ್ತದೆ.

ವಟ್ಟಾಯಿಸಿದ ಹುಂಡಿಗಳು

ಬದಲಾಯಿಸಿ

ಪ್ರತಿಯೊಂದು ವಾಣಿಜ್ಯ ಬ್ಯಾಂಕು ೩ ತಿಂಗಳು ವಾಯಿದೆ ಮುಗಿಯುವ ಸರ್ಕಾರಿ ಖಜಾನೆ ಹುಂಡಿಗಳು ಹಾಗೂ ವಿನಿಮಯ ಹುಂಡಿಗಳ ಆಧಾರದಲ್ಲಿ ತನ್ನ ಗ್ರಾಹಕರಿಗೆ ಸಾಲ ನೀಡುತ್ತದೆ. ಈ ಹುಂಡಿಗಳ ವಾಯಿದೆ ಮುಗಿದ ನಂತರ ಬ್ಯಾಂಕು ತನ್ನ ಹಣವನ್ನು ಹಿಂದಕ್ಕೆ ಪಡೆಯುತ್ತದೆ. ಆದರೆ ಬ್ಯಾಂಕಿಗೆ ತುರ್ತಾಗಿ ಹಣ ಬೇಕಾಗಿದ್ದಲ್ಲಿವಾಯಿದೆ ತೀರುವ ಮೊದಲೆ ಈ ಹುಂಡಿಗಳನ್ನು ಕೇಂದ್ರ ಬ್ಯಾಂಕಿನಲ್ಲಿ ಮರುವಟ್ಟಾಯಿಸಿಕೊಂಡು ಸಾಲ ಪ್ಡೆಯುತ್ತದೆ. ಈ ಹುಂಡಿಗಳ ಮುರಿಯುವಿಕೆ ಬ್ಯಾಂಕಿಗೆ ಆದಾಯವನ್ನು ಜೊತೆಗೆ ದ್ರವತ್ವವನ್ನು ಒದಗಿಸುತ್ತದೆ. ಆದುದರಿಂದ ಇವುಗಳನ್ನು ಆಸ್ತಿಯ (ಲೇಣಿಗಳ) ವಿಭಾಗದಲ್ಲಿ ' ತೃತೀಯ ರಕ್ಷಣಾಂಗಗಳ ' ಎಂದು ಕರೆಯುತ್ತಾರೆ.

ಸಾಲಗಳು ಮತ್ತು ಮುಂಗಡಗಳು

ಬದಲಾಯಿಸಿ

ಬ್ಯಾಂಕಿಗೆ ಹೆಚ್ಚು ಲಾಭ ತರುವ ಅಂಶಗಳೆಂದರೆ ಸಾಲಗಳು ಮತ್ತು ಮುಂಗಡಗಳು. ಬ್ಯಾಂಕುಗಳು ಸಾಲ ನೀಡುವಾಗ ಸಾಲಗಾರರ ಮರುಪಾವತಿ ಸಾಮರ್ಥ್ಯ ಮತ್ತು ಅವರು ಒದಗಿಸುವ ಭದ್ರತೆಗಳನ್ನು ನೋಡಿಯೇ ನೀಡಲಾಗುತ್ತದೆ. ಇವು ಕಡಿಮೆ ದ್ರವತ್ವವನ್ನು ಹೊಂದಿರುತ್ತವೆ. ಏಕೆಂದರೆ ಈ ಸಾಲ ಮತ್ತು ಮುಂಗಡಗಳು ಬೇಗ ಮರುಪಾವತಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಬಂಡವಾಳ ಹೂಡಿಕೆಗಳು

ಬದಲಾಯಿಸಿ

ವಾಣಿಜ್ಯ ಬ್ಯಾಂಕುಗಳು ತನ್ನಲ್ಲಿರುವ ಹಣವನ್ನು ಸರ್ಕಾರದ ಭದ್ರತೆಗಳು, ಕಂಪನಿಗಳು ಷೇರುಗಳು ಮತ್ತು ಸಾಲಪತ್ರಗಳ ಮೇಲೆ ವಿನಿಯೋಗಿಸುತ್ತದೆ. ಇಂತಹ ಹೂಡಿಕೆಗಳು ದೀರ್ಘಾವಧಿಯವಾಗಿದ್ದು ಇವು ಬ್ಯಾಂಕಿಗೆ ಉತ್ತಮ ವರಮಾನ ತರುತ್ತವೆ. ವಿನಿಮಯ ಹುಂಡಿಗಳನ್ನು ಮಾರುವಷ್ಟು ಸುಲಭವಾಗಿ ಇವುಗಳನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಅದರಿಂದ ಇವು ಕಡಿಮೆ ದ್ರವತ್ವ ಹೊಂದಿರುತ್ತವೆ.

ಒಪ್ಪಿಗೆಗಳು ಮತ್ತು ಸಮ್ಮತಿಗಳು

ಬದಲಾಯಿಸಿ

ಒಪ್ಪಿಗೆಗಳು ಮತ್ತು ಸಮ್ಮತಿಗಳು ಲೇಣಿಗಳು ( ಆಸ್ತಿಗಳು ) ಪಟ್ಟಿಯಲ್ಲಿ ಬರುತ್ತವೆ. ಬ್ಯಾಂಕು ತನ್ನ ಗ್ರಾಹಕರ ಪರವಾಗಿ ಹಣಕೊಡಲು ಸಮ್ಮತಿಸಿ ಸಹಿಹಾಕಿದ ಹುಂಡಿಗಳು ಮತ್ತು ವಿನಿಮಯ ಪತ್ರಗಳಾಗಿರುತ್ತವೆ. ಈ ಹುಂಡಿಗಳಿಂದ ಬ್ಯಾಂಕುಗಳಿಗೆ ಕಮಿಷನ್ ಬರುತ್ತದೆ.

ಇತರ ಬಾಬುಗಳು

ಬದಲಾಯಿಸಿ

ಬ್ಯಾಂಕುಗಳ ಲೇಣಿ-ದೇಣಿ ಪಟ್ಟಿಯ ಆಸ್ತಿಗಳ ವಿಭಾಗದಲ್ಲಿ ಸ್ಥಿರ ಮತ್ತು ಚರ ಆಸ್ತಿಗಳು ನಮೂದಿಸಲಾಗುತ್ತದೆ.ಬ್ಯಾಂಕಿಗೆ ಸೇರಿದ ಆಸ್ತಿಗಳಿಂದ ಕಟ್ಟಡ, ಪೀಠೋಪಕರಣ , ನಿವೇಶನಗಳು, ವಾಹನಗಳು ಇತ್ಯಾದಿ. ಇವುಗಳೆಲ್ಲವೂ ಬ್ಯಾಂಕಿಗೆ ತನ್ನ ವ್ಯವಹಾರವನ್ನು ಸಾಗಿಸಿಕೊಂಡು ಹೋಗಲು ಅವಶ್ಯಕವಾಗಿ ಬೇಕಾಗುತ್ತದೆ. ಇವುಗಳ ಮಾರುಕಟ್ಟೆ ದರನಿಗದಿ ಕಷ್ಟವಾಗಿರುತ್ತದೆ. ಅದರಿಂದ ಇವುಗಳ ಅತ್ಯಂತ ಕಡಿಮೆ ದ್ರವತ್ವ ಹೊಂದಿರುತ್ತವೆ. ೧) ನಗದು ಮತ್ತು ತತ್ಸಮಾನ . ೨) ಸ್ವೀಕರಿಸುವಂತಹ ಖಾತೆಗಳು. ೩) ಆಸ್ತಿ, ಸಸ್ಯ ಮತ್ತು ಉಪಕರಣಗಳು. ಇವುಗಳು ಆಸ್ತಿಗಳಲ್ಲಿ ಬರುವ ಪ್ರಮುಕ ಅಂಶಗಳು.

 
Eurosystem balance sheet total

ಮೇಲಿನ ವಿವರಣೆಯಿಂದ ತಿಳಿಯುವುದೆನಂದರೆ, ಬ್ಯಾಂಕು ದ್ರವತ್ವ, ಲಾಭಾದಾಯಕತ್ವ ಹಾಗೂ ಸುರಕ್ಷತೆ ತತ್ವಗಳಲ್ಲಿ ಸಮನ್ವಯ ಸಾಧಿಸುವಂತೆ ತನ್ನಲಿರುವ ಠೇವಣಿಗಳ ನಗದು ಹಣವನ್ನು ಆದಾಯಗಳಿಸುವ ವಿವಿಧ ಆಸ್ತಿಗಳಲ್ಲಿ ತೊಡಗಿಸುತ್ತದೆ. ಒಂದು ವ್ಯಾಪಾರ ಅವಧಿಯ ಅಂತ್ಯದಲ್ಲಿ ಇಡೀ ಬ್ಯಾಂಕ್ ಬ್ಯಾಲೆನ್ಸ್, ಜೊತೆಗೆ ಕೈಯಲ್ಲಿ ಯಾವುದೇ ನಗದು ವಾಪಸ್ ಪಡೆಯುವ ಮೂಲಕ ಅದರ ಲಾಭ ಅಳೆಯಬಹುದು ನಗದು ಸಂಪೂರ್ಣವಾಗಿ ಕಾರ್ಯ. ಆದರು, ಅನೇಕ ವ್ಯಾಪಾರಗಳು ತಕ್ಷಣ ಹಣವನ್ನು ಅವರು ಸರಕುಗಳ ತಪಶೀಲು ನಿರ್ಮಿಸಲು ಮತ್ತು ಅವರು ಕಟ್ಟಡಗಳು ಮತ್ತು ಸಲಕರಣೆಗಳನ್ನು ಹೊಂದಲು.: ವ್ಯವಹಾರಗಳನನ್ನು ಆಸ್ತಿಗಳನ್ನು ಅವರು, ತಕ್ಷಣ ಪ್ರತಿ ಅವಧಿಯ ಅಂತ್ಯದಲ್ಲಿ ನಗದು ಮಾಡಲು ಬಯಸುವ ಸಹ, ಮತ್ತು ಆದ್ದರಿಂದ ಅವು ಹೆಚ್ಚಾಗಿ, ಈ ವ್ಯವಹಾರಗಳು ಸರಬರಾಜುದಾರರಿಗೆ ಮತ್ತು ತೆರಿಗೆ ಅಧಿಕಾರಿಗಳು ಹಣ ಪಡೆಯುತ್ತಾರೆ, ಮತ್ತು ಮಾಲೀಕರು ಪ್ರತಿ ಅವಧಿಯ ಅಂತ್ಯದಲ್ಲಿ ಎಲ್ಲರೂ ತಮ್ಮ ಮೂಲ ಬಂಡವಾಳ ಮತ್ತು ಲಾಭ ಹಿಂದಕ್ಕೆ ಇಲ್ಲ. ಅರ್ಥಾತ್ ವ್ಯಾಪಾರಗಳಲ್ಲಿ ಸಹ ಭಾದ್ಯತೆಗಳನ್ನು ಪಡೆಯುತ್ತಾರೆ. ಆಯವ್ಯಯಪಟ್ಟಿ ( ಲೇಣಿ-ದೇಣಿ ಪಟ್ಟಿ )ಯಿಂದ ಅವರ ಲಾಭ ನಷ್ಠಗಳನ್ನು ಇದರ ಮುಲಕ ತಿಳಿಯಬಹುದು. ದೇಶದ ಆಯವ್ಯಯ

ಉಲ್ಲೆಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. http://financial-dictionary.thefreedictionary.com/balance+sheet
  2. "ಆರ್ಕೈವ್ ನಕಲು". Archived from the original on 2016-03-04. Retrieved 2016-01-09.
  3. "ಆರ್ಕೈವ್ ನಕಲು". Archived from the original on 2016-01-15. Retrieved 2016-01-09.
  4. http://www.legalserviceindia.com/company%20law/com_2.htm
  5. http://accounting-simplified.com/elements-of-financial-statements.html
  6. ಹಣ ಮತ್ತು ಬ್ಯಾಂಕು - ಪುಟ ೨೬೦,೨೬೨