ಆಯತ (ಆಕಾರ)
ಯೂಕ್ಲೀಡಿಯನ್ ಸಮತಲ ರೇಖಾಗಣಿತದಲ್ಲಿ, ಆಯತ ಎಂದರೆ ನಾಲ್ಕು ಸಮಕೋನಗಳಿರುವ ಒಂದು ಚತುರ್ಭುಜ. ಇದನ್ನು ಸಮಕೋನೀಯ ಚತುರ್ಭುಜವೆಂದೂ ವ್ಯಾಖ್ಯಾನಿಸಬಹುದು, ಏಕೆಂದರೆ ಸಮಕೋನೀಯ ಎಂದರೆ ಅದರ ಎಲ್ಲ ಕೋನಗಳು ಸಮಾನವಾಗಿರುವವು ಎಂದು (360°/4 = 90°). ಇದನ್ನು ಸಮಕೋನ ಹೊಂದಿರುವ ಸಮಾಂತರ ಚತುರ್ಭುಜ ಎಂದೂ ವ್ಯಾಖ್ಯಾನಿಸಬಹುದು. ಸಮಾನ ಉದ್ದದ ನಾಲ್ಕು ಬದಿಗಳಿರುವ ಆಯತವನ್ನು ಚೌಕವೆಂದು ಕರೆಯಲಾಗುತ್ತದೆ. ABCD ಎಂಬ ತುದಿಗಳಿರುವ ಆಯತವನ್ನು ಟೆಂಪ್ಲೇಟು:Rectanglenotation ಎಂದು ಸೂಚಿಸಲಾಗುತ್ತದೆ.
ಆಯತಗಳನ್ನು ಅನೇಕ ಶಬಲ ರಚನೆ ಸಮಸ್ಯೆಗಳಲ್ಲಿ ಒಳಗೊಳ್ಳಲಾಗುತ್ತದೆ, ಉದಾಹರಣೆಗೆ ಸಮತಲವನ್ನು ಆಯತಗಳಿಂದ ಹದ್ದಿಸುವುದು ಅಥವಾ ಆಯತವನ್ನು ಬಹುಕೋನಗಳಿಂದ ಹದ್ದಿಸುವುದು.
ಸ್ವರೂಪ ಚಿತ್ರಣ
ಬದಲಾಯಿಸಿಒಂದು ಕಾನ್ವೆಕ್ಸ್ ಚತುರ್ಭುಜವು ಕೆಳಗಿನವುಗಳಲ್ಲಿ ಯಾವುದಾದರೂ ಒಂದಾಗಿದ್ದಾಗ ಮಾತ್ರ ಆಯತವೆನಿಸಿಕೊಳ್ಳುತ್ತದೆ:[೧]
- ಕನಿಷ್ಠಪಕ್ಷ ಒಂದು ಸಮಕೋನವಿರುವ ಸಮಾಂತರ ಚತುರ್ಭುಜ
- ಸಮಾನ ಉದ್ದದ ಕರ್ಣರೇಖೆಗಳನ್ನು ಹೊಂದಿರುವ ಸಮಾಂತರ ಚತುರ್ಭುಜ
- ಒಂದು ಸಮಾಂತರ ಚತುರ್ಭುಜ ABCDಯಲ್ಲಿ ತ್ರಿಕೋನಗಳಾದ ABD ಮತ್ತು DCA ಸರ್ವಸಮವಾಗಿದ್ದಾಗ
- ಒಂದು ಸಮಕೋನೀಯ ಚತುರ್ಭುಜ
- ನಾಲ್ಕು ಸಮಕೋನಗಳಿರುವ ಚತುರ್ಭುಜ
- ಅನುಕ್ರಮದ ಬದಿಗಳಾದ a, b, c, d ಯನ್ನು ಹೊಂದಿರುವ ಮತ್ತು ವಿಸ್ತೀರ್ಣ
- ಅನುಕ್ರಮದ ಬದಿಗಳಾದ a, b, c, d ಯನ್ನು ಹೊಂದಿರುವ ಮತ್ತು ವಿಸ್ತೀರ್ಣ ಇರುವ ಕಾನ್ವೆಕ್ಸ್ ಚತುರ್ಭುಜ.
ಲಕ್ಷಣಗಳು
ಬದಲಾಯಿಸಿಸಮರೂಪತೆ
ಬದಲಾಯಿಸಿಆಯತವು ಚಕ್ರೀಯವಾಗಿದೆ: ಎಲ್ಲ ಮೂಲೆಗಳು ಒಂದೇ ವೃತ್ತದ ಮೇಲೆ ಇರುತ್ತವೆ.
ಇದು ಸಮಕೋನೀಯವಾಗಿದೆ: ಅದರ ಎಲ್ಲ ಮೂಲೆಗಳ ಕೋನಗಳು ಸಮಾನವಾಗಿವೆ (ಪ್ರತಿಯೊಂದು 90 ಡಿಗ್ರಿ).
ಇದು ಶೃಂಗ-ಸಕರ್ಮಕವಾಗಿದೆ: ಇದರ ಎಲ್ಲ ಮೂಲೆಗಳು ಒಂದೇ ಸಮ್ಮಿತಿ ಕಕ್ಷೆಯಲ್ಲಿ ಇರುತ್ತವೆ.
ಇದು ದರ್ಜೆ ೨ರ ಪ್ರತಿಫಲನ ಸಮ್ಮಿತಿ ಹಾಗೂ ಆವರ್ತನೀಯ ಸಮ್ಮಿತಿಯ ಎರಡು ಸಾಲುಗಳನ್ನು ಹೊಂದಿರುತ್ತದೆ.
ಆಯತ-ರಾಂಬಸ್ ಉಭಯತ್ವ
ಬದಲಾಯಿಸಿಕೆಳಗಿನ ಕೋಷ್ಟಕದಲ್ಲಿ ತೋರಿಸಿದಂತೆ, ರಾಂಬಸ್ ಆಯತದ ಉಭಯ ಬಹುಭುಜವಾಗಿದೆ.
ಆಯತ | ರಾಂಬಸ್ |
---|---|
ಎಲ್ಲ ಕೋನಗಳು ಸಮವಾಗಿವೆ. | ಎಲ್ಲ ಬಾಹುಗಳು ಸಮವಾಗಿವೆ. |
ಪರ್ಯಾಯ ಬಾಹುಗಳು ಸಮವಾಗಿವೆ. | ಪರ್ಯಾಯ ಕೋನಗಳು ಸಮವಾಗಿವೆ. |
ಇದರ ಕೇಂದ್ರ ಇದರ ಶೃಂಗಗಳಿಂದ ಸಮದೂರದಲ್ಲಿದೆ, ಹಾಗಾಗಿ ಇದು ಪರಿವೃತ್ತವನ್ನು ಹೊಂದಿದೆ. | ಇದರ ಕೇಂದ್ರ ಇದರ ಬಾಹುಗಳಿಂದ ಸಮದೂರದಲ್ಲಿದೆ, ಹಾಗಾಗಿ ಇದು ಅಂತರ್ವೃತ್ತವನ್ನು ಹೊಂದಿದೆ. |
ಸಮ್ಮಿತಿಯ ಇದರ ಅಕ್ಷಗಳು ವಿರುದ್ಧ ಬಾಹುಗಳನ್ನು ಇಬ್ಭಾಗ ಮಾಡುತ್ತವೆ. | ಸಮ್ಮಿತಿಯ ಇದರ ಅಕ್ಷಗಳು ವಿರುದ್ಧ ಕೋನಗಳನ್ನು ಇಬ್ಭಾಗ ಮಾಡುತ್ತವೆ. |
ಕರ್ಣರೇಖೆಗಳು ಉದ್ದದಲ್ಲಿ ಸಮವಾಗಿವೆ. | ಕರ್ಣರೇಖೆಗಳು ಸಮ ಕೋನಗಳಲ್ಲಿ ಛೇದಿಸುತ್ತವೆ. |
ಉಲ್ಲೇಖಗಳು
ಬದಲಾಯಿಸಿ- ↑ Zalman Usiskin and Jennifer Griffin, "The Classification of Quadrilaterals. A Study of Definition", Information Age Publishing, 2008, pp. 34–36 ISBN 1-59311-695-0.