ಆಫ್ರಿಕೀಯ ಟ್ರೈಪನೊಸೋಮಯಾಸಿಸ್

ಆಫ್ರಿಕೀಯ ಟ್ರೈಪನೊಸೋಮಯಾಸಿಸ್ ಅಥವಾ ಸ್ಲೀಪಿಂಗ್ ಸಿಕ್‍ನೆಸ್[] ಮಾನವರು ಮತ್ತು ಇತರ ಪ್ರಾಣಿಗಳಲ್ಲಿ ಕಂಡುಬರುವ ಒಂದು ಪರಾವಲಂಬಿ ರೋಗ. ಇದು ಟ್ರೈಪನೊಸೋಮ ಬ್ರೂಸಿ ಜಾತಿಯ ಒಂದು ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ. [] ಇವುಗಳಲ್ಲಿ ಎರಡು ಬಗೆಯವು ಮಾನವರಲ್ಲಿ ಸೋಂಕನ್ನುಂಟು ಮಾಡುತ್ತವೆ, ಅವು ಯಾವುವೆಂದರೆ ಟ್ರೈಪನೊಸೋಮ ಬ್ರೂಸಿ ಗಾಂಬಿಯನ್ಸ್ (ಟಿ.ಬಿ.ಜಿ.) ಮತ್ತು ಟ್ರೈಪನೊಸೋಮ ಬ್ರೂಸಿ ರ್ಹೋಡಿಸೆನ್ಸ್ (ಟಿ.ಬಿ.ಆರ್.).[] ವರದಿಯಾದ ಪ್ರಕರಣಗಳಲ್ಲಿ 98%ಕ್ಕೂ ಹೆಚ್ಚನ್ನು ಟಿ.ಬಿ.ಜಿ.ಉಂಟು ಮಾಡುತ್ತದೆ. [] ಎರಡೂ ಸಹ ಸಾಮಾನ್ಯವಾಗಿ ಸೋಂಕು ತಗಲಿದ ಸೆಟ್ಸೆ ಫ್ಲೈ ಕಚ್ಚಿದಾಗ ವರ್ಗಾವಣೆಗೊಳ್ಳುತ್ತವೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು ಸರ್ವೇಸಾಮಾನ್ಯ. [] ಆರಂಭದಲ್ಲಿ, ರೋಗದ ಮೊದಲ ಹಂತದಲ್ಲಿ, ಜ್ವರ, ತಲೆನೋವು, ಕೆರೆತ ಮತ್ತು ಕೀಲು ನೋವು ಕಂಡುಬರುತ್ತವೆ.[] ಕಚ್ಚಿಸಿಕೊಂಡ ಒಂದರಿಂದ ಮೂರು ವಾರಗಳ ನಂತರ ಆರಂಭವಾಗುತ್ತದೆ. [] ವಾರಗಳಿಂದ ತಿಂಗಳುಗಳ ನಂತರ, ಗೊಂದಲ, ಕಳಪೆ ಸಹಯೋಜನೆ, ಮರಗಟ್ಟುವಿಕೆ ಮತ್ತು ನಿದ್ರಿಸುವಲ್ಲಿ ತೊಂದರೆಯೊಂದಿಗೆ ಎರಡನೇ ಹಂತವು ಆರಂಭಗೊಳ್ಳುತ್ತದೆ.[][] ರಕ್ತ ಲೇಪ ಅಥವಾ ದುಗ್ಧಗ್ರಂಥಿಯ ದ್ರವದಲ್ಲಿ ಪರಾವಲಂಬಿ ಜೀವಿಯನ್ನು ಪತ್ತೆ ಮಾಡುವ ಮೂಲಕ ರೋಗಪತ್ತೆ ಸಾಧ್ಯ. [] ರೋಗ ಮೊದಲ ಹಂತದಲ್ಲಿದೆಯೋ ಅಥವಾ ಎರಡನೇ ಹಂತದಲ್ಲಿದೆಯೋ ಎಂದು ಹೇಳಲು ಸಾಮಾನ್ಯವಾಗಿ ಕಟಿರಂಧ್ರ ಚಿಕಿತ್ಸೆಯ ಮೂಲಕ ತೆಗೆದುಕೊಳ್ಳಲಾದ ಮಾದರಿ ಅಗತ್ಯವಾಗುತ್ತದೆ.[] ರೋಗದ ನಿವಾರಣೆಯು, ತೊಂದರೆಗೊಳಗಾಗಿರುವ ಜನರ ರಕ್ತವನ್ನು ಟಿ.ಬಿ.ಜಿ.ಗಾಗಿ ಪರೀಕ್ಷೆ ಮಾಡಿ, ಅವರನ್ನು ಸ್ಕ್ರೀನ್ ಮಾಡುವುದನ್ನು ಒಳಗೊಳ್ಳುತ್ತದೆ. [] ರೋಗವನ್ನು ಮುಂಚಿತವಾಗಿ ಮತ್ತು ನರಸಂಬಂಧಿ ರೋಗಲಕ್ಷಣಗಳು ಕಂಡುಬರುವ ಮೊದಲೇ ಪತ್ತೆ ಮಾಡಿದರೆ ಚಿಕಿತ್ಸೆ ಹೆಚ್ಚು ಸುಲಭ. [] ಮೊದಲ ಹಂತದ ಚಿಕಿತ್ಸೆಯನ್ನು ಪೆಂಟಾಮಿಡೈನ್ ಅಥವಾ ಸುರಾಮಿನ್ ಔಷಧೋಪಚಾರದೊಂದಿಗೆ ಮಾಡಲಾಗುತ್ತದೆ.[] ಟಿ.ಬಿ.ಜಿ.ಗಾಗಿ ಎರಡನೇ ಹಂತದ ಚಿಕಿತ್ಸೆಯು ಎಫ್ಲೋಮಿಥೈನ್ ಅನ್ನು ಅಥವಾ ನೈಫರ್ಟಿಮಾಕ್ಸ್ ಮತ್ತು ಎಫ್ಲೋಮೈಥ್ರಿನ್ ಸಂಯೋಜನೆಯನ್ನು ಒಳಗೊಳ್ಳುತ್ತದೆ.[] ಮೆಲಾರ್ಸೊಪ್ರಾಲ್ ಎರಡಕ್ಕೂ ಕೆಲಸ ಮಾಡುತ್ತದಾದರೂ, ಗಂಭೀರ ಅಡ್ಡಪರಿಣಾಮಗಳ ಕಾರಣ ಇದನ್ನು ಹೆಚ್ಚಾಗಿ ಟಿ.ಬಿ.ಆರ್.ಗಾಗಿ ಬಳಸಲಾಗುತ್ತದೆ.[] ರೋಗವು ಸಬ್-ಸಹಾರನ್ ಆಫ್ರಿಕಾ ಪ್ರದೇಶಗಳಲ್ಲಿ ನಿಯತವಾಗಿ ಕಂಡುಬರುತ್ತಿದ್ದು, ಅಪಾಯಕ್ಕೊಳಗಾಗಬಹುದಾದ ಜನಸಂಖ್ಯೆ 36 ದೇಶಗಳಲ್ಲಿನ ಸುಮಾರು 70 ಮಿಲಿಯನ್ ಜನರು. [] 1990ರಲ್ಲಿ 34,000 ಸಾವಿನ ಸಂಖ್ಯೆಯಿಂದ 2010ರ ಸಮಯಕ್ಕೆ ಇದು ಸುಮಾರು 9000 ಸಾವುಗಳನ್ನು ಉಂಟುಮಾಡಿದೆ.[] 2012ರಲ್ಲಿ 7000 ಹೊಸ ಸೋಂಕುಗಳೊಂದಿಗೆ ಪ್ರಸ್ತುತದಲ್ಲಿ ಅಂದಾಜು 30,000 ಜನರು ಸೋಂಕಿಗೊಳಪಟ್ಟಿದ್ದಾರೆ.[] ಇವುಗಳಲ್ಲಿ 80%ಕ್ಕೂ ಹೆಚ್ಚು ಕೇಸ್‍ಗಳು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದ ಕಾಂಗೊನಲ್ಲಿವೆ.[] ಇತ್ತೀಚಿನ ಚರಿತ್ರೆಯಲ್ಲಿ ಮೂರು ಪ್ರಮುಖ ಹರಡುವಿಕೆಗಳು ಉಂಟಾಗಿವೆ: ಒಂದು, 1896ರಿಂದ 1906ರವರೆಗೆ ಮುಖ್ಯವಾಗಿ ಉಗಾಂಡಾ ಮತ್ತು ಕಾಂಗೊ ಬೇಸಿನ್ನಲ್ಲಿ ಮತ್ತು ಎರಡನೆಯದು 1920 ಮತ್ತು 1970ರಲ್ಲಿ ಹಲವು ಆಫ್ರಿಕೀಯ ರಾಷ್ಟ್ರಗಳಲ್ಲಿ.[] ಹಸು ಮುಂತಾದ ಪ್ರಾಣಿಗಳು ರೋಗವನ್ನು ಒಯ್ಯಬಹುದು ಮತ್ತು ಸೋಂಕಿಗೊಳಪಡಬಹುದು. []

African trypanosomiasis
Classification and external resources
Trypanosoma forms in a blood smear
ICD-10B56
ICD-9086.5
DiseasesDB29277 13400
MedlinePlus001362
eMedicinemed/2140
MeSHD014353

ಉಲ್ಲೇಖಗಳು

ಬದಲಾಯಿಸಿ
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ WHO Media centre (June 2013). "Fact sheet N°259: Trypanosomiasis, Human African (sleeping sickness)". {{cite journal}}: Cite journal requires |journal= (help)CS1 maint: year (link)
  2. MedlinePlus Encyclopedia Sleeping sickness
  3. ೩.೦ ೩.೧ ೩.೨ ೩.೩ ೩.೪ Kennedy, PG (2013 Feb). "Clinical features, diagnosis, and treatment of human African trypanosomiasis (sleeping sickness)". Lancet neurology. 12 (2): 186–94. PMID 23260189. {{cite journal}}: Check date values in: |date= (help)
  4. Simarro PP, Cecchi G, Franco JR, Paone M, Diarra A, Ruiz-Postigo JA, Fèvre EM, Mattioli RC, Jannin JG (2012). "Estimating and Mapping the Population at Risk of Sleeping Sickness". PLoS Negl Trop Dis. 6 (10): e1859. doi:10.1371/journal.pntd.0001859.{{cite journal}}: CS1 maint: multiple names: authors list (link) CS1 maint: unflagged free DOI (link)
  5. Lozano, R (Dec 15, 2012). "Global and regional mortality from 235 causes of death for 20 age groups in 1990 and 2010: a systematic analysis for the Global Burden of Disease Study 2010". Lancet. 380 (9859): 2095–128. doi:10.1016/S0140-6736(12)61728-0. PMID 23245604.