ಆನೋಲೀಡ್ ಸುಮಾರು 1080ರಲ್ಲಿ ರಚಿತವಾದ ಒಂದು ಜರ್ಮನ್ ಕಾವ್ಯ.

ಕಾವ್ಯ ವಸ್ತು

ಬದಲಾಯಿಸಿ

ಕೊಲೋನ್ ನಗರದ ಆರ್ಚ್‍ಬಿಷಪ್ ಆಗಿದ್ದ ಆನೋ ಎಂಬ ಮಠಾಧಿಕಾರಿಯನ್ನು ಕುರಿತ ಪ್ರಶಸ್ತಿಕಾವ್ಯ.

ತೀರಾ ಸರಳವಾದ, ಜನಾದರಣೆಗೊಳಿಸಬಲ್ಲ ಶೈಲಿಯಲ್ಲಿ ರಚಿತವಾಗಿದ್ದುದರಿಂದ ಇದು ಹಲವರ ದೃಷ್ಟಿ ಸೆಳೆಯಿತು. ಹನ್ನೊಂದನೆಯ ಶತಮಾನದ ಮಧ್ಯದಲ್ಲಿ ಜರ್ಮನ್‍ಭಾಷೆ ಹಳೆಯ ಸ್ವರೂಪವನ್ನು ಕಳೆದು ಮಧ್ಯಯುಗದ ಪ್ರೌಢ ಜರ್ಮನ್ ಸ್ವರೂಪವನ್ನು ತಳೆಯುತ್ತಿದ್ದ ಕಾಲದಲ್ಲಿ ವಿಪರೀತವಾದ ಧಾರ್ಮಿಕ ಕಟ್ಟುಪಾಡುಗಳಿಗೆ ಸಿಕ್ಕಿ ಲೌಕಿಕ ಕಾವ್ಯ ನರಳುತ್ತಿತ್ತು. ಆ ಕಾಲದಲ್ಲಿ ರಚಿತವಾದ ಸಾಹಿತ್ಯಕ ಅಂಶಗಳನ್ನುಳಿಸಿಕೊಂಡ ಕಾವ್ಯ ಇದು. ಇದಕ್ಕೆ ಸ್ವಲ್ಪ ಮುಂಚೆ ಬ್ರಾನ್‍ಬರ್ಗನ್ ಕ್ರೈಸ್ತ ಸಂನ್ಯಾಸಿಯೊಬ್ಬ ಬರೆದ ಎಝೋಲೀಡ್ (1063) ಎಂಬ, ಏಸು ಕ್ರಿಸ್ತನ ಜೀವನ ಹಾಗೂ ಅಂತಿಮಕಾಲಕ್ಕೆ ಸಂಬಂಧಿಸಿದ ಪವಾಡಗಳನ್ನು ನಿರೂಪಿಸುವ ಇನ್ನೊಂದು ಕಾವ್ಯಕ್ಕೆ ಹೋಲಿಸುವುದುಂಟು. ಈ ಎರಡೂ ಕಾವ್ಯಗಳು, ಅತಿ ಧರ್ಮಶ್ರದ್ಧೆಯ ಮಂಜಿನಲ್ಲೂ ಕಾವ್ಯಗುಣಗಳನ್ನುಳಿಸಿಕೊಂಡು ಅರಳಿದ ಸಾಹಿತ್ಯ ಕೃತಿಗಳು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆನೋಲೀಡ್&oldid=714906" ಇಂದ ಪಡೆಯಲ್ಪಟ್ಟಿದೆ