ಆನೆ ಝರಿ, ಕೊಲ್ಲೂರು

ಆನೆ ಝರಿ, ಕೊಲ್ಲೂರು

ಆನೆ ಝರಿ ಅರಣ್ಯ ಪ್ರದೇಶವೂ ಬೈಂದೂರು ಕೊಲ್ಲೂರು ಅಥವಾ ಕುಂದಾಪುರ ಕೊಲ್ಲೂರು ಮಾರ್ಗದ ಮಧ್ಯೆ ಸಿಗುವ ನೇಸರಧಾಮವಾಗಿದೆ.[೧] ಆನೆ ಝರಿಯು ಉಡುಪಿಯಿಂದ ೮೦ ಕಿಲೋಮೀಟರ್ ದೂರದಲ್ಲಿದೆ. ಈ ಆನೆಝರಿಯು ಸೌಪರ್ಣಿಕ ನದಿಯಿಂದ ಸುತ್ತುವರೆದಿದೆ. ಆನೆ ಝರಿ ಬಟರ್‌ ಫ್ಲೈ ಕ್ಯಾಂಪ್ ವನ್ಯಜೀವಿಗಳನ್ನು ಅನ್ವೇಷಿಸಲು ಸೂಕ್ತವಾದ ವಿಹಾರ ತಾಣವಾಗಿದೆ.

ಆನೆ ಝರಿ ಬಟರ್ ಫ್ಲೈ ಕ್ಯಾಂಪ್

ಬದಲಾಯಿಸಿ

ಆನೆ ಝರಿ ಬಟರ್ ಫ್ಲೈ ಕ್ಯಾಂಪು ಉಡುಪಿಯಿಂದ ೮೦ ಕಿಲೋಮೀಟರುಗಳ ದೂರದಲ್ಲಿರುವ ಕೊಲ್ಲೂರಿನ ಸಮೀಪ ಇರುವುದು. ಮರವಂತೆ ಮತ್ತು ಬೈಂದೂರು, ಇವು ಎರಡು ಕಡಲತೀರಗಳು ಕ್ಯಾಂಪಿನಿಂದ ಸುಮಾರು ೩೫ ಕಿಲೋಮೀಟರುಗಳ ದೂರದಲ್ಲಿದೆ.[೨] ಆನೆ ಝರಿ ಬಟರ್‌ಫ್ಲೈ ಕ್ಯಾಂಪ್ ಚಿಟ್ಟೆಗಳು ಮತ್ತು ಪಕ್ಷಿಗಳನ್ನು ವೀಕ್ಷಿಸಲು ಸೂಕ್ತವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಚಿಟ್ಟಿಗಳ ವೀಕ್ಷಣೆಯಲ್ಲಿ, ತಮಿಳು ಲೇಸ್ ವಿಂಗ್, ಪ್ಲೈನ್ ಪಫಿನ್, ಮಲಬಾರ್ ಟ್ರೀ ನಿಂಫ್, ಪ್ಯಾರೀಸ್ ನವಿಲು ಗ್ರೇ ಕೌಂಟ್, ರೆಡ್ ಹೆಲೆನ್ ಹಾಗೂ ಬ್ಲ್ಯೂ ಓಕ್ ಲೀಫ್, ಇವುಗಳನ್ನು ಒಳಗೊಂಡಂತೆ ವಿವಿಧ ಬಣ್ಣಗಳ ಚಿಟ್ಟಿಗಳನ್ನು ವೀಕ್ಷಿಸಬಹುದು. ಅಕ್ಟೋಬರ್-ಡಿಸೆಂಬರ್ ಚಿಟ್ಟೆಗಳನ್ನು ವೀಕ್ಷಿಸಲು ಸೂಕ್ತವಾದ ಸಮಯವಾಗಿದೆ. ಮಲಬಾರ್ ದೈತ್ಯ ಅಳಿಲು, ಸ್ಯಾಂಬರ್ ಜಿಂಕೆ, ಕಾಡು ಹಂದಿ, ಭಾರತೀಯ ಕಾಡೆತ್ತು/ವನವೃಷಭ, ನವಿಲುಗಳು, ಬೊಗಳುವ ಜಿಂಕೆಗಳು ಹಾಗೂ ಇತರೆ ವನ್ಯ ಪ್ರಾಣಿಗಳನ್ನು ವೀಕ್ಷಿಸಬಹುದು. ಮಲಬಾರ್ ಪೈಡ್ ಹಾರ್ನ್ ಬಿಲ್ಲುಗಳು, ಮಲಬಾರ್ ಗ್ರೇ ಹಾರ್ನ್ ಬಿಲ್ಲುಗಳು, ಸಣ್ಣ ನೀಲಿ ಕಿಂಗ್ ಫಿಷರ್ ಗಳು, ಸ್ಟಾರ್ಕ್ ಬಿಲ್ಲ್ ಡ್ ಕಿಂಗ್ ಫಿಷರ್ ಮತ್ತು ಏಷಿಯನ್ ಪ್ಯಾರಾಡೈಸ್ ಫ್ಲೈ ಕ್ಯಾಚರ್ ಗಳನ್ನು ಒಳಗೊಂಡಂತೆ ಹಕ್ಕಿಗಳನ್ನು ಕ್ಯಾಂಪಿನಲ್ಲಿ ಕಾಣಬಹುದು.[೩] ಕ್ಯಾಂಪಿನ ಒಳಗೆ ಮಕ್ಕಳು ಆಟ ಆಡುವ ಸ್ಥಳವೂ ಇದೆ.

ಕ್ಯಾಂಪ್‍ನಲ್ಲಿ ಉಳಿಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಪ್ರವೇಶ ಶುಲ್ಕಗಳನ್ನು ನೀಡಲಾಗುತ್ತದೆ.[೪] ಆನೆ ಝರಿ ಬಟರ್ಫ್ಲೈ ಕ್ಯಾಂಪ್ ವೈದ್ಯಕೀಯ ಸೇವೆಗಳು, ಪಾರ್ಕಿಂಗ್ ಸೌಲಭ್ಯ ಮತ್ತು ಕೊಠಡಿ ಸೇವೆಯನ್ನು ಒಳಗೊಂಡಿರುವ ವಿವಿಧ ಅನುಕೂಲಗಳನ್ನು ಒದಗಿಸುತ್ತದೆ. ಕೊಠಡಿಗಳು ಉಚಿತ ಶೌಚಾಲಯಗಳು, ವಾರ್ಡ್ರೋಬ್/ಕ್ಲೋಸೆಟ್ ಮತ್ತು ವೇಕ್-ಅಪ್‍ನಂತಹ ಕೆಲವು ಸೌಕರ್ಯಗಳನ್ನು ಒಳಗೊಂಡಿವೆ.

ಉಲ್ಲೇಖಗಳು

ಬದಲಾಯಿಸಿ
  1. https://aranya.gov.in/downloads/Kollur_MgmtPlan.pdf
  2. https://www.tripadvisor.in/Hotel_Review-g1071659-d7617021-Reviews-Anejari_Nature_Camp-Kollur_Udupi_District_Karnataka.html
  3. https://www.justdial.com/Udupi/Anejhari-Butterfly-Camp/0820PX820-X820-171231072907-T9T1_BZDET/photos[ಶಾಶ್ವತವಾಗಿ ಮಡಿದ ಕೊಂಡಿ]
  4. https://trailroot.in/JLR/JLRAnejhari.aspx