ಆನಪಾನಸತಿ (ಪಾಳಿ) ಎಂದರೆ ಮನಸ್ಸಿನ ಎಚ್ಚರದ ಸ್ಥಿತಿಯಿಂದ ಉಸಿರಾಟವನ್ನು ಗಮನಿಸುವುದು ಎಂದರ್ಥ. ಆನಪಾನ ಎಂದರೆ ಉಸಿರಾಟ, ಸತಿ ಎಂದರೆ ಎಚ್ಚರದ ಸ್ಥಿತಿ ಎಂದರ್ಥ. ಈ ಧ್ಯಾನವನ್ನು ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದು ಬೌದ್ಧ ಧರ್ಮದ ಧ್ಯಾನದ ಕ್ರಮವಾಗಿದೆ. ಇದನ್ನು ಬೌದ್ಧ ಧರ್ಮದ ಟಿಬೆಟ್ ನ ಬೌದ್ಧರು, ಜೆನ್, ತೈಂತೈ ಮತ್ತು ತೇರವಾಡ ಪಂಥಗಳಲ್ಲಿ ಅನುಸರಿಸುತ್ತಿದ್ದಾರೆ. ಸಂಪ್ರದಾಯದಂತೆ ಬುದ್ಧ ಆನಪಾನಸತಿ ಸೂತ್ತವೂ ಸೇರಿದಂತೆ ತನ್ನ ಅನೇಕ ಸೂತ್ರಗಳಲ್ಲಿ ಈ ಧ್ಯಾನದ ಕ್ರಮವನ್ನು ತಿಳಿಸಿಕೊಟ್ಟಿದ್ದಾನೆ. ಪಾಳಿ ಸಿದ್ಧಾಂತದಲ್ಲಿ ಒಂದು ಚತುರ್ಥ (ನಾಲ್ಕು ಸೂಚನೆಗಳು) ಅಥವಾ ನಾಲ್ಕು ಚತುರ್ಥ (೧೬ ಸೂಚನೆಗಳು) ಗಳಲ್ಲಿ ಅನಪಾನಸತಿಯ ಸೂಚನೆಗಳಿವೆ.ಅನಪಾನಸತಿ ಸೂತ್ತವು ನಾಲ್ಕು ಚತುರ್ಥಗಳ ಪ್ರಸಿದ್ಧ ವಿವರಣೆಯಾಗಿದೆ. ಆನಪಾನ ಸಂಯುತ್ತಾ ಮುಂತಾದ ಸಂಕಥನಗಳಲ್ಲಿ ನಾಲ್ಕು ಚತುರ್ಥಗಳ ಸಂಪೂರ್ಣ ವಿವರಣೆ ನೋಡಬಹುದು. ಕಾಯಗಾತ ಸತಿ ಸೂತ್ತದಲ್ಲಿ, ಮಹಾ ಸತಿಪತ್ತನ ಸೂತ್ತದಲ್ಲಿ ಆನಪಾನ ಸತಿಯ ಒಂದು ಚತುರ್ಥದ ಮೇಲೆ ಬೆಳಕು ಚೆಲ್ಲಲಾಗಿದೆ.