ಆಡುಬೆಣೆ
ಆಡುಬೆಣೆಯು (ಕೊಂತ) ಆಡು ಎಂಜಿನುಗಳು, ಆಡು ಪಂಪುಗಳು, ಅನಿಲ ಸಂಪೀಡಕ ಮತ್ತು ವಾಯುಚಾಲಿತ ಸಿಲಿಂಡರುಗಳು ಮತ್ತು ಇತರ ಯಂತ್ರಸಾಧನಗಳ ಘಟಕವಾಗಿದೆ. ಇದು ಸಿಲಿಂಡರಿನಲ್ಲಿರುವ ಚಲಿಸುವ ಘಟಕವಾಗಿದೆ ಮತ್ತು ಇದರಲ್ಲಿ ದುಂಡುಪಟ್ಟಿಗಳನ್ನು ಬಳಸಿ ಅನಿಲ ತೂರದಂತೆ ಮಾಡಲಾಗಿರುತ್ತದೆ. ಒಂದು ಎಂಜಿನ್ನಿನಲ್ಲಿ, ಸಿಲಿಂಡರಿನಲ್ಲಿ ಹಿಗ್ಗುತ್ತಿರುವ ಅನಿಲದಿಂದ ಉತ್ಪತ್ತಿಯಾಗುವ ಬಲವನ್ನು ಆಡುಬೆಣೆ ದಂಡ ಹಾಗೂ/ಅಥವಾ ಸಂಪರ್ಕ ಕಲ್ಪಿಸುವ ದಂಡದ ಮೂಲಕ ವಂಕದಂಡಕ್ಕೆ ವರ್ಗಾಯಿಸುವುದು ಇದರ ಉದ್ದೇಶವಾಗಿದೆ. ಒಂದು ಪಂಪಿನಲ್ಲಿ, ಇದರ ಕ್ರಿಯೆಯು ವಿರುದ್ಧವಾಗಿರುತ್ತದೆ ಮತ್ತು ಸಿಲಿಂಡರಿನಲ್ಲಿನ ದ್ರವವನ್ನು ಸಂಕೋಚನಗೊಳಿಸುವ ಅಥವಾ ಹೊರದೂಡುವ ಉದ್ದೇಶಕ್ಕಾಗಿ ಬಲವು ವಂಕದಂಡದಿಂದ ಆಡುಬೆಣೆಗೆ ವರ್ಗಾವಣೆಯಾಗುತ್ತದೆ. ಕೆಲವು ಎಂಜಿನ್ನುಗಳಲ್ಲಿ, ಆಡುಬೆಣೆಯು ಸಿಲಿಂಡರಿನಲ್ಲಿನ ಕಂಡಿಗಳನ್ನು ಮುಚ್ಚುವ ಮತ್ತು ತೆಗೆಯುವ ಮೂಲಕ ಕವಾಟವಾಗಿ ಕೂಡ ಕಾರ್ಯನಿರ್ವಹಿಸುತ್ತದೆ.