ಆಟಿ ಸೊಪ್ಪು ಎಂದರೆ ಆಟಿ ತಿಂಗಳಲ್ಲಿ ಉಪಯೋಗಿಸುವ ಸೊಪ್ಪು. ಇದ್ರಲ್ಲಿ ಹೇರಳವಾಗಿ ಮದ್ದಿನ ಅಂಶಗಳು ಇವೆ. ಈ ಸೊಪ್ಪು ಕೊಡಗುಕೊಡಗು, ಮಲೆನಾಡು ಆ ಕಡೆಗಳಲ್ಲಿ ಕಾಣ ಸಿಗುತ್ತವೆ.ಅಲ್ಲಿ ಎಲ್ಲಾ ಮನೆಗಳಲ್ಲಿ ಆಟಿ ಸೊಪ್ಪಿನ ಪಾಯಸದ್ದೆ ಘಮ. ಈ ಸೊಪ್ಪನ್ನು ಆಟಿ ತಿಂಗಳ ೧೮ ನೀ ದಿನ ಉಪಯೋಗಿಸುತ್ತಾರೆ. ಆ ದಿನ ಅದರಲ್ಲಿ ಮದ್ದಿನ ಅಂಶ ಸೇರಿ ಇರುತ್ತದೆ. ಈ ಸೊಪ್ಪನ್ನು ನೀರಲ್ಲಿ ಹಾಕಿ ಕಿವುಚ್ಚಿದರೆ ಕಡು ನೀಲಿ ಬಣ್ಣ ಬಿಡ್ತಾದೆ. ಈ ಸೊಪ್ಪಳ್ಳಿ ಆಟಿ ತಿಂಗಳ ಸುರುವಿನಿಂದ ಒಂದೊಂದು ರೀತಿಯ ಮದ್ದಿನ ಅಂಶ ಸೇರುತ್ತದೆ. ಅಂತ ಹಿರಿಯರ ಮಾತು.ಬಾಕಿ ಸಮಯದಲ್ಲಿ ಈ ಸೊಪ್ಪಿಗೆ ಯಾವುದೇ ರೀತಿಯ ಪರಿಮಳ ಹಾಗೂ ಕಿವುಚಿದರೆ ನೀಲಿ ಬಣ್ಣ ಅದೆಲ್ಲ ಇರುವುದಿಲ್ಲ. ಕರ್ಕಾಟಕ, ಕಕ್ಕಡ ಎಂದರೆ ಆಟಿಆಟಿ ತಿಂಗಳು.

ಆಟಿ ಸೊಪ್ಪು

ಆಟಿ ಸೊಪ್ಪಿನ ಉಪಯೋಗ

ಬದಲಾಯಿಸಿ

ಮೂರಡಿ ಏತ್ತರ ಬೆಳೆಯುವ ಈ ಗಿಡಕ್ಕೆ ಆಟಿ ತಿಂಗಳ ಸುರುವಿನಿಂದ ನಾನಾ ರೀತಿಯ ಮದ್ದಿನ ಅಂಶಗಳು ಸೀರುತ್ತವೆ. ಕೊಡಗಿನಲ್ಲಿ ಸಾಕಷ್ಟು ಮದ್ದಿನ ಗಿಡಗಳ ಪ್ರಬೇಧ ಗಳಿವೆ. ಆದರೇ ಅದರಲ್ಲಿ ಮುಖ್ಯ ವಾದುದು 'ಆಟಿ ಸೊಪ್ಪು '[]. ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಗಿಡ ಜಿಲ್ಲೆಗಳಲ್ಲಿ ಕಾಡಲ್ಲಿ, ಕಾಫೀ ತೋಟಗಳಲ್ಲಿ ಕಾಣ ಸಿಗುತ್ತವೆ. ಈ ಸೊಪ್ಪು ಆಟಿ ತಿಂಗಳ ೧೮ನೀ ದಿನದಂದು ಪರಿಮಳ ಬರುತ್ತದೆ.ಆ ಸಮಯದಲ್ಲಿ ಆ ಸೊಪ್ಪಿನಲ್ಲಿ ವಿವಿಧ ರೀತಿಯ ಖಾದ್ಯ ಗಳನ್ನು ಮಾಡುತ್ತಾರೆ. ಇದರ ರಸ ಕುಡಿದರೆ ಶರೀರದ ಎಲ್ಲಾ ರೋಗಗಳು ದೂರ ಆಗುತ್ತದೆ. ಎಂಬ ನಂಬಿಕೆ ಹಿರಿಯರದ್ದು. ಅದು ಈಗಲೂ ಆಚರಣೆಯಲ್ಲಿ ಇದೆ.

ಆಟಿ ಸೊಪ್ಪಿನ ಮದ್ದಿನ ಗುಣಗಳು

ಬದಲಾಯಿಸಿ

ಆಟಿ ಸೊಪ್ಪಿನ ರಸ ಕುಡಿದರೆ ಶೀತ, ಜ್ವರ, ಎಲ್ಲಾ ಕಡಿಮೆ ಆಗುತ್ತದೆ. ಕಾರಣ ಆಟಿ ತಿಂಗಳಲ್ಲಿ ಜೋರು ಮಳೆ ಬರುವ ಕಾರಣ ಜನರಿಗೆ ಹೆಚ್ಚಾಗಿ ಶರೀರದಲ್ಲಿ ಶೀತ ಅಗ್ತಾ ಇರುತ್ತದೆ. ಆ ಟೈಮಲ್ಲಿ ಗದ್ದೆಯಲ್ಲಿ ನಾಟಿ ಮಾಡಿ ಶರೀರದಲ್ಲಿ ಇರುವ ರೋಗ ನಿರೋದಕ ಶಕ್ತಿ ಕಡಿಮೆ ಆಗಿರುತ್ತದೆ. ಆಗ ಈ ಸೊಪ್ಪಿನ ರಸ ಕುಡಿದರೆ ರೋಗನಿರೋದಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ಶರೀರ ಬಿಸಿ ಆಗಲಿಕ್ಕೆ ಇದರ ಪಾಯಸ ಮಾಡಿ ಕುಡಿಯುತ್ತಾರೆ.

ಉಲ್ಲೇಖ

ಬದಲಾಯಿಸಿ
  1. https://kannada.boldsky.com/recipes/aati-18-aati-payasam-special-in-coorg-houses. {{cite web}}: Missing or empty |title= (help)