ಆಟಿ ಕುಳಿತುಕೊಳ್ಳುವುದು
ಆಟಿದ ಕುಳಿತುಕೊಳ್ಳುವುದು ಸೌರಮಾನೊದ ನಾಲ್ಕನೆ ತಿಂಗಳು ಆಟಿಯಲ್ಲಿ ಈ ಕ್ರಮ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ ಕಳೆದು ದಕ್ಷಿಣಾಯನದ ಈ ಆಟಿ ತಿಂಗಳಲ್ಲಿ ಜೋರು ಮಳೆ ಬರುತ್ತದೆ . ಈ ಮಳೆಗೆ ಭೂಮಿ ಎಲ್ಲಾ ನೆನೆದು ತಂಪಾಗಿರುತ್ತದೆ.ಆ ಸಮಯದಲ್ಲಿ ನಂಬಿಕೆಗೆ ಅನುಸಾರವಾಗಿ ಕೆಲವು ಆಚರಣೆಗಳು ನಡೆಯುತ್ತದೆ .[೧] ಮದುವೆ ಆಗಿ ಗಂಡನ ಮನೆಗೆ ಬಂದ ಹೆಣ್ಣು ಸುರುವಿನ ಆಟಿ ತಿಂಗಳನ್ನು ತವರು ಮನೆಯಲ್ಲಿ ಕಳೆಯುವುದು ಹಿಂದಿನ ಕಾಲದ ಸಂಪ್ರದಾಯ ಇದನ್ನು ಆಟಿ ಕುಳಿತುಕೊಳ್ಳುವುದು ಎಂದು ಹೇಳುತ್ತಾರೆ[೨]
ಹಿನ್ನೆಲೆ
ಬದಲಾಯಿಸಿಆಟಿ ತಿಂಗಳಿನಲ್ಲಿ ಹೊಸ ಮದುಮಗ ಮತ್ತು ಮದುಮಗಳು ದೈಹಿಕ ಸಂಪರ್ಕ ಮಾಡಬಾರದೆಂಬ ನಂಬಿಕೆ. ಹಾಗಾಗಿ ಅವರನ್ನು ಬೇರ್ಪಡಿಸುವುವ ಸಲುವಾಗಿ ಈ ಸಂಪ್ರದಾಯವನ್ನು ಮಾಡಲಾಗಿದೆ
ಆಟಿಯಲ್ಲಿ ಕರೆದುಕೊಂಡು ಹೋಗುವ ಕ್ರಮ
ಬದಲಾಯಿಸಿಹೊಸ ಮದುಮಗಳನ್ನು ಸುರುವಿನ ಆಟಿಗೆ ತವರು ಮನೆಯವರು ಹೋಗಿ ಕರೆದು ಕೊಂಡು ಬರುವ ಕ್ರಮ. ಆಮೇಲೆ ಸ್ವಲ್ಪ ದಿವಸದ ನಂತರ ಗಂಡನ ಮನೆಯವರು ಬಂದು ಕರೆದುಕೊಂಡು ಹೋಗುತ್ತಾರೆ.
ಆಟಿ ಸಮ್ಮನ
ಬದಲಾಯಿಸಿಆಟಿ ಕುಳಿತುಕೊಳ್ಳಲು ಬಂದ ಮಗಳನ್ನು ಗಂಡನ ಮನೆಗೆ ಕರೆದುಕೊಂಡು ಹೋಗುಲು ಬಂದ ನೆಂಟರಿಗೆ ಜೋರಾಗಿ ಔತಣ ನಡೆಯುತ್ತದೆ. ತುಳುವಿನ ಕಬಿತೆಗಳಲ್ಲಿ ಹೀಗೊಂದು ಮಾತಿದೆ , ಬರಾಂದಿ ಬಿನ್ನೆರ್ ಬತ್ತೆರ್ ಮಗ ಸೇಸೊ ಕೊರಾಂದಿ ಸಮ್ಮನೊ ಕೊರೊಡಾಂಡೆ.
ಆಟಿಯ ನಂಬಿಕೆಗಳು
ಬದಲಾಯಿಸಿಆಟಿಯಲ್ಲಿ ಹೆಣ್ಣು ಮಗಳು ಮೈನೆರೆದರೆ ಅನಿಷ್ಠ ಎಂಬ ನಂಬೊಲಿಕೆ ಇದೆ. ಆಟಿಯಲ್ಲಿ ಮೈನರೆದ ಹುಡುಗಿಗೆ, ಅನಾರೋಗ್ಯ್ದ ಮಕ್ಕಳಿಗೆ, ಗೊಡ್ಡು ಹಸುವಿಗೆ, ಫಲಕೊಡದಿರುವ ತೆಂಗಿನ ಮರಕ್ಕೆ ಮತ್ತು ಸಂತತಿ ಆಗದಿರುವ ಹೆಂಗಸಿಗೆ ಆಟಿ ಕಳೆಂಜನಲ್ಲಿ ತಲೆಗೆ ನೀರು ಹಾಕಿಸಿ ಕಳೆಂಜನಿಗೆ ದಾನ ಕೊಟ್ಟರೆ ಆ ಅನಿಷ್ಠ ಕಳೆಯುತ್ತದೆ ಮಕ್ಕಳಾಗುತ್ತದೆ ಸಮೃದ್ದಿಯಾಗುತ್ತದೆ ಎಂಬ ನಂಬಿಕೆಗಳ ವಿಷಯ ತುಳುನಾಡಿನ ಆಟಿಕಳೆಂಜ ಪಾಡ್ದಾನದಲ್ಲಿ ಉಲ್ಲೇಖಿತವಾಗಿದೆ .
ಆಟಿಯ ತುಳು ಗಾದೆಲು
ಬದಲಾಯಿಸಿ- ಆಟಿ ಅಡೋಣ್ತ್ ಪೋಪುಂಡು, ಸೋಣೊ ಸೋಡೋಣ್ತ್ ಪೋಪುಂಡು.[ಆಟಿತಿಂಗಳು ನಿಧಾನವಾಗಿ/ಅಲುಗಿಕೊಂಡು ಹೋಗುತ್ತದೆ. ಸೋಣ ತಿಂಗಳು ಬೇಗನೆ/ತೋಡಿಕೊಂಡು ಹೋಗುತ್ತದೆ][೩]
- ಆಟಿಗೊರ ಸೋಣೊಗೊರ [ಆಷಾಢಕ್ಕೊಮ್ಮೆ ಶ್ರಾವಣಕ್ಕೊಮ್ಮೆ]
- ಆಟಿಡ್ ಅಗೆಲ್ ಸೋಣೊಡ್ ಕೋಲ[ಆಟಿ ತಿಂಗಳಿನ ಅಗೆಲ್ ಎಂಬ ಆಚರಣೆ ಸೋಣ ತಿಂಗಳಿನಲ್ಲಾಗುವ ಕೋಲ ಎಂಬ ಆರಾಧನೆ]
- ಆಟಿತಿಂಗೊಲುಡು ಒರ್ಲ ದಡ್ಡ್ ಇತ್ತಿನಾಯೆ ಪಿದಾಯಿ ಪೋವಾಯೆ [ಆಟಿ ತಿಂಗಳಿನಲ್ಲಿ (ಜೋರಾದ ಮಳೆಯ ಕಾರಣ) ಒಂದ ಬಳ್ಳ ದಡ್ಡು ಭತ್ತ ಇದ್ದವನು ಮನೆ ಬಿಟ್ಟು ಹೊರ ಹೋಗಲಾರನು]
- ಆಟಿದ ದೊಂಬು ಆನೆದ ಬೆರಿ ಪುಡಾವು. [ಆಟಿಯ ಬಿಸಿಲಿಗೆ ಆನೆಯ ಬೆನ್ನೂ ಒಡೆದೀತು]
- ಮಾಯಿಡ್ದ್ ಬುಕ್ಕೊ ಮರಿಯಾಲ, ಆಟಿಡ್ದ್ ಬುಕ್ಕೊ ಅರೆಗಾಲ [ಕುಂಭ(ಸೌರಮಾನದ ಹನ್ನೊಂದನೆಯ ತಿಂಗಳು) ಮಾಸದ ಅನಂತರ ಮಳೆಗಾಲ.ಕರ್ಕಟಕ ಮಾಸದ ಅನಂತರ ಬೇಸಗೆ ಕಾಲ]
- ಮಾಯಿಡ್ ಬರ್ಸ ಬತ್ತ್ಂಡ ಮಲೆ ಬುಲೆವು [ಕುಂಭ ಮಾಸದಲ್ಲಿ ಮಳೆ ಬಂದರೆ ಕಾಡು ಬೆಳೆದೀತು]
- ಆಟಿದ ಪೆಲಕಾಯಿ ನಂಜಿ ಮಗ ಅಮ್ಮೆ ಬತ್ತೆನೊ ತೂಲ ಮಗ[ ಆಷಾಡ ಮಾಸದ ಹಲಸಿನ ಹಣ್ಣು ತಿನ್ನುವುದಕ್ಕೆ ಯೋಗ್ಯವಲ್ಲ ತಿನ್ನುವಾಗ ಏನಾದರೂ ತಂದೆ ಬಂದು ಬಿಟ್ಟರೆ ಬೈಯುತ್ತಾರೆ ಅದಕ್ಕೆ ತಾಯಿ ಹಲಸಿನ ಹಣ್ಣು ಕೊಯ್ಯುವಾಗ ನೋಡಿಕೊಳ್ಳಲು ಮಕ್ಕಳಿಗೆ ಹೇಳುತ್ತಾಳೆ]
ಉಲ್ಲೇಖಗಳು
ಬದಲಾಯಿಸಿ