ಆಟಿಯ ಆಟಗಳು
ಆಟಿ ತಿಂಗಳೆಂದರೆ ಬಾರಿ ಮಳೆ ಬರುವ ಹೊತ್ತು. ಆ ಹೊತ್ತಲ್ಲಿ ಮನೆಯಿಂದ ಹೊರಗೆ ಹೋಗಿ ಕೆಲಸ ಕಾರ್ಯಗಳನ್ನು ಮಾಡಲು, ಮತ್ತು ಆಟಗಳನ್ನು ಆಡಲು ಆಗದ ಹೊತ್ತು. ಆ ಟೈಮಲ್ಲಿ ಮನೆಯ ಒಳಗೆ ಆಟ ಆಡಿತಿದ್ದರು. ಆ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು ನಡೆಯುತ್ತಿರಲಿಲ್ಲ.
ಆಟಿದ ಆಟಗಳು
ಬದಲಾಯಿಸಿ- ಚೆನ್ನೆಮಣೆ
- ಗಾದೆ ಹೇಳುವುದು
- ಒಗಟು ಹೇಳುವುದು
ಚೆನ್ನೆಮಣೆ
ಬದಲಾಯಿಸಿಚೆನ್ನೆಮಣೆ, ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾತ್ರ ಆಡುವಂತ ಆಟ. ಈ ಆಟವನ್ನು ೨ ಜನ ಆಡಬಹುದು. ಚೆನ್ನೆಮಣೆ ಯಲ್ಲಿ ಎರಡು ಬದಿ ಇದೆ. ಅದರಲ್ಲಿ ಒಂದೊಂದು ಬದಿಯಲ್ಲಿ ಏಳು ಏಳು ಗುಳಿ (ಮನೆ)ಗಳಿವೆ. ಒಂದು ನಿರ್ದಿಷ್ಟವಾದ ಕ್ರಮದಲ್ಲಿ ಚೆನ್ನೆಯ ಕಾಯಿಯನ್ನು ಆ ಗುಳಿಯಲ್ಲಿ ಹಾಕ್ತಾರೆ. ಮೊದಲು ಹೊಂಗೆ ಮರದ ಕಾಯಿಗಳನ್ನು ಉಪಯೋಗಿಸುತ್ತಿದ್ದರು. ಈಗ ಅದು ಸಿಗದ ಕಾರಣ, ಗುರುಗುಂಜಿ,ಪುಲಿಂಕಟೆ,ಮಂಜೊಟ್ಟಿ ಕಾಯಿಯನ್ನು ಉಪಯೋಗಿಸಿ ಆಡುತ್ತಾರೆ. ಇದರಲ್ಲಿ ಅನೇಕ ಬಗೆಯ ಆಟ ಗಳಿವೆ. ಈ ಆಟ ಚದುರಂಗ ಆಟದ ರೀತಿಯಲ್ಲೇ ಆಡುವುದು.ಈ ಆಟವನ್ನು ಆಡುವಾಗ ಚದುರಂಗ ಆಟದ ನೆನಪಾಗುತ್ತದೆ. [೧]
ಆಟದ ಬಗ್ಗೆ
ಬದಲಾಯಿಸಿಜಾನಪದ ಆಟಗಳಲ್ಲಿ ಒಂದು ವಿಶೇಷವಾದ ಸ್ಥಾನ ಇದೆ. ಅದರಲ್ಲೂ ತುಳುನಾಡಿನಲ್ಲಿ ಈ ತರದ ತುಂಬಾ ಆಟಗಳಿವೆ. ಇದರಲ್ಲಿ ಚೆನ್ನೆಮಣೆ ಯೂ ಒಂದು. ಚೆನ್ನೆಮಣೆ ತುಳುನಾಡಿನ ಜನಪ್ರಿಯವಾದ ಆಟ. ಈ ಆಟ ತುಳುನಾಡಿನಲ್ಲಿ ಮಾತ್ರವಲ್ಲದೆ ಈಗ ಆಫ್ರಿಕಾ, ಪಿಲಿಫೈನ್ಸ್, ದುಬೈ ಈ ರೀತಿ ಬೇರೆ ದೇಶಗಳಲ್ಲೂ ಜನಪ್ರಿಯ ಆಗಿದೆ. ಇದು ಒಳಗೆ ಕೂತು ಆಡುವ ಆಟ. ತುಳುನಾಡಿನ ಸಾಂಸ್ಕೃತಿಕ ಜೀವನದ ವಿವರಣೆ ಈ ಆಟದಲ್ಲಿ ಇದೆ.ಚೆನ್ನೆ ಎಂಬುದು ಒಂದು ವಿಶಿಷ್ಟ ವಾದ ಶಬ್ದ. ಕನ್ನಡ ದಲ್ಲಿ ಚೆನ್ನೆ ಎಂದರೆ ಸುಂದರ, ಮನೋಹರ, ಅಂತ ಅರ್ಥ. [೨]
ಗಾದೆ ಹೇಳುವುದು
ಬದಲಾಯಿಸಿಗಾದೆ ಎಂದರೆ ಜೇವನದ ಅನುಭವಗಳನ್ನು ಸಣ್ಣ ವಾಕ್ಯದಲ್ಲಿ ಹೇಳುವುದು. ಅದು ಹಿರಿಯರ ಬೇರೆ ಬೇರೆ ಅನುಭವದ ಮಾತು. ಗಾದೆಯನ್ನು ಓದುವುದಲ್ಲ; ಹೇಳುವುದು.ಹಾಗಾಗಿ ಗಾದೆಗೆ ಒಂದು ಎದುರುತ್ತರ ಹೇಳಬಹುದು. ಒಂದು ಒಳ್ಳೆ ಪದ ಕೂಡ ಗಾದೆ ಆಗಬಹುದು.ನೀತಿ ಪರ್ವಾದ ಮಾತುಗಳು ಗಾದೆ. ಗಾದೆಯಲ್ಲಿ ಮಾತುಗಳ ರಸವತ್ತಾದ ರೂಪ ಇರುತ್ತದೆ.
ಉಲ್ಲೇಖ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Chennemane - An Interesting Indoor Game Of Tulunadu Region". 5 July 2021. Retrieved 1 August 2022.
- ↑ M, Raghava (24 July 2012). "Chennemane is a symbol of Tulu culture and heritage". The Hindu (in Indian English). Retrieved 1 August 2022.