ಆಟಿಯ ಅಗೆಲು

ಆಟಿ ತಿಂಗಳು

ಬದಲಾಯಿಸಿ

ಆಟಿ ತಿಂಗಳು ತುಳುನಾಡಿನವರಿಗೆ ತುಂಬಾ ಕಷ್ಟಕರವಾದ ಕಾಲವಾಗಿತ್ತು. ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿ, ತುಳುನಾಡು ಈಗ ತುಂಬಾ ಬದಲಾಗಿದೆ. ಆದರೂ ಹಿರಿಯೆರು ಪ್ರಾರಂಭಿಸಿದ ಆಟಿ ತಿಂಗಳ ಕೆಲವು ಕ್ರಮಗಳು ಈಗ ಕೂಡಾ ತುಳುಜನರು ಪಾಲನೆ ಮಾಡುತ್ತಾ ಇದ್ದಾರೆ. ಅದರಲ್ಲಿ ಒಂದು ಆಟಿಯ ಅಗೆಲು. ಅಂದರೆ ಸತ್ತವರಿಗೆ ಬಡಿಸುವ ಒಂದು ಕ್ರಮ.

ಅಗೆಲು ಅಂದರೇನು

ಬದಲಾಯಿಸಿ

ಗತಿಸಿ ಹೋದ ಕುಟುಂಬದ ಹಿರಿಯ ಆತ್ಮಗಳನ್ನು ನೆನಪಿಸಿಕೊಳ್ಳುವ ಮತ್ತು ಅವರನ್ನು ಸಂತೋಷ ಪಡಿಸುವ ಒಂದು ಹಬ್ಬ. ತುಳುನಾಡಿನ ಪ್ರತಿಯೊಂದು ಕುಟುಂಬದಲ್ಲಿ ಕುಟುಂಬದಲ್ಲಿ ಸತ್ತು ಹೋದ ಹಿರಿಯ ಕುಟುಂಬದ ಸದಸ್ಯರಿಗೆ 16 ಬಾಳೆಯ ಎಲೆಯ ಮೇಲೆ ಅನ್ನ, ಪಲ್ಯ, ಕೊಲ್ಲತರು ಮೀನಿನ ಸಾರು, ಕೋಳಿಯ ಪದಾರ್ಥಗಳನ್ನು ಮಾಡಿ ಬಡಿಸುವ ಒಂದು ಕ್ರಮ. [] ತುಳುವಿನಲ್ಲಿ ಅಗೆಲು ಬಡಿಸುವುದಕ್ಕೆ , ಇಡೆ ಬಲಸುನೆ, ಪಸಾರ್ನೆ/ಪಸರ್ನೆ ಬಲಸುನೆ ಅಂತಾ ಕೂಡಾ ಕರೆಯುತ್ತಾರೆ.

ಸತ್ತವರಿಗೆ ಆಟಿಯ ಪರ್ವ/ ಆಟಿಯಲ್ಲಿ ಸತ್ತವರಿಗೆ ಬಡಿಸುವ ಕ್ರಮ

ಬದಲಾಯಿಸಿ

ಆಟಿಯಲ್ಲಿ ಸತ್ತವರಿಗೆ ಬಡಿಸಲು, ಮೊದಲಾಗಿ ಒಂದು ಕೋಳಿಯನ್ನು ಕೊಂದು ಪದಾರ್ಥ ಮಾಡಬೇಕು. ಒಂದು ಸೇರಿನ ಅಕ್ಕಿಯ ಅನ್ನ ಮಾಡಬೇಕು .ಒಣ ಕೊಲ್ಲತರು ಮೀನಿನ ಗಸಿ ಮಾಡಬೇಕು. ಆ ಮೇಲೆ ಹದಿನಾಲ್ಕು ಬಾಳೆಯ ಎಲೆಯನ್ನು ಹಾಕಬೇಕು, ನಡುವೆ ಒಂದು ಮಣೆ ಇಟ್ಟು ಅದರ ಮೇಲೆ ಒಂದು ಚೆಂಬು ನೀರು ಇಟ್ಟು, ಶುದ್ಧವಾದ ಬಿಳಿಯ ವಿಸ್ತೀರ್ಣ ಇಡುತ್ತಾರೆ. ಆ ಮೇಲೆ ಬಾಳೆಯ ಎಲೆಯನ್ನು ಹಾಕಿ ಮಾಡಿದ ಆಹಾರವನ್ನು ಬಡಿಸಬೇಕು, ಮೊದಲಾಗಿ ಒಣ ಮೀನಿನ ಗಸಿಯನ್ನು ಎಲೆಯ ತುದಿಯಲ್ಲಿ ಬಡಿಸಬೇಕು ಆ ಬಳಿಕ ಕೋಳಿಯ ಪದಾರ್ಥಗಳನ್ನು ಬಡಿಸಬೇಕು. ಅಲ್ಲದೆ ಒಂದು ಲೋಟದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಧ್ಯ ಕೂಡಾ ಇಡುತ್ತಾರೆ. ಆಮೇಲೆ ವೀಳ್ಯದೆಲೆ ಇಟ್ಟು. ಬಾಗಿಲು ಎಳೆದು, ಎಲ್ಲರೂ ಹೊರಗೆ ಹೋಗಬೇಕು. ಸ್ವಲ್ಪ ಸಮಯದ ನಂತರ ಒಳಗೆ ಹೋಗಿ, ಮಣೆಯಲ್ಲಿ ಇಟ್ಟ ನೀರನ್ನು ಹೊರಗೆ ತಂದು ಚೆಲ್ಲಬೇಕು. ಮತ್ತೆ, ಅಕ್ಕಿಯನ್ನು ಹಾರಿಸಬೇಕು. ಮತ್ತೆ ಕುಟುಂಬದ ಹಿರಿಯ ಆತ್ಮಗಳಿಗೆ ಕೈ ಮುಗಿದು, ಇದು ಆಟಿಯ ಪರ್ವ ಹಾಗಾಗಿ ಈ ಸಮಯದಲ್ಲಿ ನಿಮಗೆ ನಾವು ಬಡಿಸಿದ ಅಗೆಲು, ಇದನ್ನು ಸಂತೋಷದಿಂದ ಸ್ವೀಕರಿಸಿ ಬೇರೆ ಎಲ್ಲಿಗೂ ಹೋಗದೆ ಇಲ್ಲಿಯೇ ಇದ್ದು ಬಿಡಿ ಎಂದು ಕುಟುಂಬದ ಎಲ್ಲರೂ ಸೇರಿ ಪ್ರಾರ್ಥಿಸುತ್ತಾರೆ. []

ಸತ್ತು ಹೋದ ಹಿರಿಯರನ್ನು ನೆನಪಿಸಿ, ಅವರ ಆದರ್ಶಗಳನ್ನು ಪಾಲಿಸಿಕೊಂಡು ಮುಂದಿನ ಜನಾಂಗವು ಸಂತೋಷದಿಂದ ಬದುಕಲಿ ಎನ್ನುವ ಆಶಯ ತುಳುನಾಡಿನ ಹಿರಿಯರದ್ದು ಇರಬಹುದು.

ಉಲ್ಲೇಖಗಳು

ಬದಲಾಯಿಸಿ
  1. "Tulu World : Online Tulu Dictionary". tuludictionary.in.
  2. "Agel Balasunu - A Tuluva Tradition of Honoring the Dead". 20 September 2020.