ಆಝಾದ್ ಮೈದಾನ್, ಮುಂಬಯಿ

(ಆಝಾದ್ ಮೈದಾನ್, ಮುಂಬೈ ಇಂದ ಪುನರ್ನಿರ್ದೇಶಿತ)

ಆಝಾದ್ ಮೈದಾನ್[] ಒಂದು ತ್ರಿಕೋಣಾಕಾರದ ದಕ್ಷಿಣ ಬೊಂಬಾಯಿನಲ್ಲಿ ಸ್ಥಾಪಿಸಿರುವ ಅತಿ ಹಳೆಯ ಆಟದ ಮೈದಾನಗಳಲ್ಲೊಂದು.(ಇದನ್ನು ಹಿಂದೆ ಬಾಂಬೆ ಜಮ್ಖಾನದ ಮೈದಾನ ಎಂಬ ಹೆಸರಿನಿಂದ ಕರೆಯುತ್ತಿದ್ದರು.) ಈ ಮೈದಾನವು ಇಂಟರ್ ಸ್ಕೂಲ್ ಕ್ರಿಕೆಟ್ ಪಂದ್ಯಗಳಿಗೆ ಮೀಸಲಾಗಿತ್ತು. ಪರ್ಶಿಯನ್ ಭಾಷೆಯಲ್ಲಿ 'ಆಝಾದ್' ಎಂದರೆ ಸ್ವಾತಂತ್ರ್ಯ ಎನ್ನುವ ಅರ್ಥ. ಈ ಮೈದಾನದ ಕ್ರಿಕೆಟ್ ಪಿಚ್ ಯಾವುದೇ ಪಂಗಡದ ಆಟಕ್ಕೆ ಬಹಳ ಅಚ್ಚುಕಟ್ಟಾಗಿ ಹೊಂದಿಕೆಯಾಗುತ್ತಿತ್ತು. ಕ್ರಿಕೆಟ್ ಅಲ್ಲದೆ,ಕಾರ್ಮಿಕರ ಮುಷ್ಕರಗಳನ್ನು ಆಯೋಜಿಸಲು, ರ್‍ಯಾಲಿಗಳನ್ನು ನಡೆಸಲು, ಆಝಾದ್ ಮೈದಾನವನ್ನು ಹೆಚ್ಚಾಗಿ ಬಳಸುತ್ತಿದ್ದರು. 'ಬಾಂಬೆ ಜಮ್ಖಾನ ಕ್ಲಬ್ ಹೌಸ್' ನ್ನು ಸನ್. ೧೮೭೫ ರಲ್ಲಿ ಆಝಾದ್ ಮೈದಾನದ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿತ್ತು.

ಅಜಾದ್ ಮೈದಾನದಲ್ಲಿ ನೆಟ್ ಪ್ರಾಕ್ಟೀಸ್ ನಿರತರಾಗಿರುವುದು

ಎಸ್ಪ್ಲನೇಡ್

ಬದಲಾಯಿಸಿ
  • 'ಎಸ್ಪ್ಲನೇಡ್ ಎಂದು ಹೆಸರಿಸಲಾದ ಭಾರಿ ಮೈದಾನದ ಭಾಗವನ್ನು
  • 'ಒವಲ್ ಮೈದಾನ್ ',
  • 'ಆಝಾದ್ ಮೈದಾನ್'
  • 'ಕೊಪರೇಜ್ ಮೈದಾನ್'
  • 'ಕ್ರಾಸ್ ಮೈದಾನ'ಗಳು ಆಕ್ರಮಿಸಿಕೊಂಡಿದ್ದವು.

ಎಲ್ಲಕ್ಕೂ ತಕ್ಕ ಮೈದಾನ

ಬದಲಾಯಿಸಿ

೨೦ ನೆಯ ಶತಮಾನದ ಪೂರ್ವಾರ್ಧದವರೆವಿಗೂ, ಈ ಮೈದಾನ ಹಲವಾರು ಕಾರ್ಯಕ್ರಮಗಳಿಗೆ ತಕ್ಕ ಸ್ಥಳವಾಗಿತ್ತು. ನಮ್ಮ ರಾಷ್ಟ್ರದ ಮಹಾನ್ ಸ್ವತಂತ್ರ್ಯ ಸೇನಾನಿ, ಮಹಾತ್ಮಾ ಗಾಂಧಿಯವರು ಕ್ರಾಸ್ ಮೈದಾನದಲ್ಲಿ ಸನ್. ೧೯೩೧ ರ ಡಿಸೆಂಬರ್ ಲ್ಲಿ ಭಾರಿ ಸಭೆಯನ್ನು ಉದ್ದ್ಯೇಶಿಸಿ ಭಾಷಣ ಮಾಡಿದ್ದರು. ಇಷ್ಟು ಜನರಿದ್ದ ಮಹಾಸಭೆ ಅಪರೂಪದ್ದಾಗಿತ್ತು.

ಕ್ರಿಕೆಟ್ ಆಟಕ್ಕಾಗಿಯೇ ಹೆಚ್ಚು ಬಳಕೆ

ಬದಲಾಯಿಸಿ

೨೨ ಕ್ರಿಕೆಟ್ ಪಿಚ್ ಗಳಲ್ಲಿ ಮ್ಯಾಚ್ ಆಡುವ ವ್ಯವಸ್ಥೆ ಕಲ್ಪಿಸಿಕೊಂಡಿರುವ ಈ ಮೈದಾನದಲ್ಲಿ ಕ್ರಿಕೆಟ್ ಆಟದಲ್ಲಿ ನಿಷ್ಣಾತರಾದ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಹಲವರಿದ್ದಾರೆ. ಸನ್. ೧೯೮೭, ರಲ್ಲಿ ಸಚಿನ್ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಲಿ ತಮ್ಮ 'ಹ್ಯಾರಿಸ್ ಶೀಲ್ಡ್ ಕ್ರಿಕೆಟ್ ಪ್ರತಿಯೋಗಿತೆ'ಯ ಸಮಯದ ಆಟದಲ್ಲಿ ೬೬೪ ರನ್ ಗಳ ಭಾಗೀದಾರಿಕೆಯಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿದರು.

ಇವನ್ನೂ ಓದಿ

ಬದಲಾಯಿಸಿ

(ಇಂಗ್ಲೀಷ್ ವಿಕಿಪೀಡಿಯದ ಸೌಜನ್ಯ.) ^ Wadia, J. B. H. (1983). M.N. Roy, the man: an incomplete Royana. Popular Prakashan. p. 116. ISBN 81-7154-246-8. ^ "In cricket crazy Bombay". The Hindu. 27 December 2009. Retrieved 30 January 2012. ^ a b Bose, Mihir (2006). The magic of Indian cricket: cricket and society in India. Routledge. p. 124. ISBN 0-415-35691-1. ^ Mahadevia, Darshini (2008). Inside the transforming urban Asia: processes, policies and public actions. Concept Publishing Company. p. 572. ISBN 81-8069-574-3. ^ "No ground for Kanga matches". Daily News and Analysis. 27 September 2009. Retrieved 30 January 2012. ^ Sharada Dwivedi, Rahul Mehrotra (2001). Bombay: the cities within. Eminence Designs Pvt. Ltd. p. 112. ISBN 81-900602-6-0. ^ Kelly Shannon, Janina Gosseye (2009). Reclaiming (the urbanism of) Mumbai Volume 3 of Explorations in/of urbanism. SUN Academia. p. 125. ISBN 90-8506-694-8. ^ Haridas T. Muzumdar, Will Durant (2005). Gandhi Versus the Empire. Kessinger Publishing. p. 38. ISBN 1-4179-9043-0. ^ "Mumbai’s maidans may soon vanish". Gulf Times. 22 October 2010. Retrieved 28 February 2012. ^ "Tendulkar rewinds time at the Bombay Gymkhana". ESPNCricinfo. 9 March 2010. Retrieved 28 February 2012. Mid-Day.com Coordinates: 18°56′25″N 72°49′54″E

ಉಲ್ಲೇಖಗಳು

ಬದಲಾಯಿಸಿ
  1. 'Azad maidan, Wikipedia'