ಆಕಳಿಕೆ

(ಆಗುಳಿ ಇಂದ ಪುನರ್ನಿರ್ದೇಶಿತ)

ಆಕಳಿಕೆ ಒಂದು ನಿರಿಚ್ಛಾ ಪ್ರತಿಕ್ರಿಯೆಯಾಗಿದೆ ಮತ್ತು ಇದರಲ್ಲಿ ಏಕಕಾಲಿಕವಾಗಿ ಗಾಳಿಯ ಉಚ್ಛ್ವಾಸ ಮತ್ತು ಕಿವಿಪೊರೆಗಳ ಹಿಗ್ಗುವಿಕೆ ನಡೆಯುತ್ತದೆ, ಇವುಗಳ ನಂತರ ಉಸಿರಿನ ನಿಶ್ವಾಸ ಆಗುತ್ತದೆ.

ಆಕಳಿಕೆಯು ವಯಸ್ಕರಲ್ಲಿ ಬಹುತೇಕವೇಳೆ ನಿದ್ದೆಗೆ ಮೊದಲು ಮತ್ತು ನಿದ್ದೆಯ ನಂತರ, ಬಳಲಿಸುವ ಚಟುವಟಿಕೆಗಳ ಅವಧಿಯಲ್ಲಿ, ಮತ್ತು ಅದರ ಸಾಂಕ್ರಾಮಿಕ ಗುಣದ ಪರಿಣಾಮವಾಗಿ ಉಂಟಾಗುತ್ತದೆ.[] ಇದು ಸಾಮಾನ್ಯವಾಗಿ ಆಯಾಸ, ಒತ್ತಡ, ಮಂಪರು, ಅಥವಾ ಬೇಸರ ಹಾಗೂ ಹಸಿವಿಗೂ ಸಂಬಂಧಿತವಾಗಿದೆ. ಮಾನವರಲ್ಲಿ, ಆಕಳಿಕೆಯು ಹಲವುವೇಳೆ ಇತರರು ಆಕಳಿಸುವುದರಿಂದ ಪ್ರಚೋದಿತವಾಗುತ್ತದೆ (ಉದಾ. ಆಕಳಿಸುತ್ತಿರುವ ವ್ಯಕ್ತಿಯನ್ನು ನೋಡಿ, ಫ಼ೋನಿನಲ್ಲಿ ಆಕಳಿಸುತ್ತಿರುವವರೊಂದಿಗೆ ಮಾತನಾಡುತ್ತಿರುವಾಗ) ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯ ವಿಶಿಷ್ಟ ಉದಾಹರಣೆಯಾಗಿದೆ. ಈ ಸಾಂಕ್ರಾಮಿಕ ಆಕಳಿಸುವಿಕೆಯು ಚಿಂಪಾಂಜಿಗಳು, ನಾಯಿಗಳು, ಬೆಕ್ಕುಗಳು, ಪಕ್ಷಿಗಳು ಮತ್ತು ಸರಿಸೃಪಗಳಲ್ಲೂ ಗಮನಿಸಲಾಗಿದೆ ಮತ್ತು ಪ್ರಜಾತಿಗಳಾದ್ಯಂತ ಸಂಭವಿಸಬಹುದು. ವಿದ್ವಾಂಸರು ಆಕಳಿಕೆಗೆ ಸರಿಸುಮಾರು ೨೦ ಮಾನಸಿಕ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ, ಆದರೆ ಅದರ ಮುಖ್ಯ ಕಾರ್ಯಗಳ ಬಗ್ಗೆ ಸ್ವಲ್ಪವೇ ಒಮ್ಮತವಿದೆ.

ಆಕಳಿಕೆಯ ಅವಧಿಯಲ್ಲಿ, ಕಿವಿಯ ಮಧ್ಯಭಾಗದಲ್ಲಿನ ಟೆನ್ಸರ್ ಟಿಂಪನಿ ಸ್ನಾಯು ಸಂಕೋಚನಗೊಂಡು ತಲೆಯ ಒಳಗಿಂದ ಗಡಗಡ ಸದ್ದು ಸೃಷ್ಟಿಯಾಗುತ್ತದೆ. ಮಾನವರು ಮತ್ತು ಪ್ರಾಣಿಗಳು ಎರಡರಲ್ಲೂ, ಆಕಳಿಕೆಯ ಜೊತೆಗೆ ಕೆಲವೊಮ್ಮೆ ತೋಳುಗಳು, ಕುತ್ತಿಗೆ, ಭುಜಗಳು ಮತ್ತು ಬೆನ್ನು ಸೇರಿದಂತೆ ಶರೀರದ ಹಲವು ಭಾಗಗಳನ್ನು ಚಾಚುವ ಸಹಜ ಕ್ರಿಯೆ ನಡೆಯುತ್ತದೆ.

ಮಾನವರು ಮತ್ತು ಇತರ ಪ್ರಾಣಿಗಳು ಏಕೆ ಆಕಳಿಸುತ್ತವೆ ಎಂದು ಅನೇಕ ಸಿದ್ಧಾಂತಗಳು ವಿವರಿಸಲು ಪ್ರಯತ್ನಿಸುತ್ತವೆ. ಈ ವರ್ತನೆಗೆ ಅನೇಕ ಸರಣಿಕ್ರಿಯಾಕಾರಿಗಳಿರುವ ಸಾಧ್ಯತೆ ಇದೆ. ಆದರೆ, ಆಕಳಿಕೆಗೆ ಪ್ರಾಥಮಿಕ ವಿಕಸನೀಯ ಕಾರಣವನ್ನು ವಿವರಿಸಲು ಪ್ರಯತ್ನಿಸುವ ತುಲನಾತ್ಮಕವಾಗಿ ಕಡಿಮೆ ಸಿದ್ಧಾಂತಗಳಿವೆ. ಒಬ್ಬರ ರಕ್ತವು ಹೆಚ್ಚಿನ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಹೊಂದಿದ್ದಾಗ ಆಕಳಿಕೆಯು ಉಂಟಾಗುತ್ತದೆ ಎಂದು ಒಂದು ಅಧ್ಯಯನ ಹೇಳುತ್ತದೆ. ಹೀಗಾದಾಗ, ಆಮ್ಲಜನಕದ ಒಳಹರಿವು (ಅಥವಾ ಇಂಗಾಲದ ಡೈಆಕ್ಸೈಡ್‍ನ ಹೊರಹರಿವು) ಅಗತ್ಯವಾಗುತ್ತದೆ. ಆಕಳಿಕೆಯು ಇದನ್ನು ಒದಗಿಸುತ್ತದೆ. ವಾಸ್ತವಿಕವಾಗಿ ಆಕಳಿಕೆಯು ಮಾಮೂಲಿನ ಉಸಿರಾಟಕ್ಕೆ ಹೋಲಿಸಿದರೆ ಆಮ್ಲಜನಕದ ಒಳಹರಿವನ್ನು ಕಡಿಮೆಮಾಡಬಹುದು. ಆದರೆ, ಗಾಳಿಯಲ್ಲಿ ಹೆಚ್ಚು ಆಮ್ಲಜನಕ ಒದಗಿಸಿದ್ದು ಅಥವಾ ಇಂಗಾಲದ ಡೈಆಕ್ಸೈಡ್ ಕಡಿಮೆಮಾಡಿದ್ದು ಎರಡೂ ಆಕಳಿಕೆಯನ್ನು ಕಡಿಮೆಮಾಡಲಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. Anderson, James R.; Meno, Pauline (2003). "Psychological Influences on Yawning in Children". Current Psychology Letters. 2 (11).
"https://kn.wikipedia.org/w/index.php?title=ಆಕಳಿಕೆ&oldid=815019" ಇಂದ ಪಡೆಯಲ್ಪಟ್ಟಿದೆ