ಆಕ್ಸಿಡೆಂಟ್ (ಚಲನಚಿತ್ರ)
ಶಂಕರ್ ನಾಗ್ ನಿರ್ದೇಶನದ ಕನ್ನಡ ಚಲನಚಿತ್ರ
ಆಕ್ಸಿಡೆಂಟ್ ಚಲನಚಿತ್ರ (೧೯೮೫) ಶಂಕರ್ ನಾಗ್ ನಿರ್ದೇಶನದ ಕನ್ನಡ ಚಿತ್ರ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತನ್ನ ಹಿರಿಯ ಸಹೋದರ ಅನಂತ್ ನಾಗ್ ಮತ್ತು ಪತ್ನಿ ಅರುಂಧತಿ ನಾಗ್ ನಟಿಸಿದರು. ಇದು ಕನ್ನಡ ಸಿನೆಮಾದಲ್ಲಿ ಒಂದು ಮೈಲಿಗಲ್ಲಿನ ಚಿತ್ರ ಎಂದು ಪರಿಗಣಿಸಲಾಗಿತ್ತು.
ಆಕ್ಸಿಡೆಂಟ್ (ಚಲನಚಿತ್ರ) | |
---|---|
ಆಕ್ಸಿಡೆಂಟ್ | |
ನಿರ್ದೇಶನ | ಶಂಕರನಾಗ್ |
ನಿರ್ಮಾಪಕ | ಸಂಕೇತ್ |
ಪಾತ್ರವರ್ಗ | ಶಂಕರನಾಗ್ ರಮೇಶ್ ಭಟ್, ಅನಂತನಾಗ್, ಅರುಂಧತಿನಾಗ್, ನಾಗಾಭರಣ |
ಸಂಗೀತ | ಇಳಯರಾಜ |
ಛಾಯಾಗ್ರಹಣ | ಶಂಕರ್ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಸಂಕೇತ್ |
ಚಿತ್ರವು ಮೇಲಿನ ವರ್ಗದ ಶ್ರೀಮಂತ ಮತ್ತು ಪ್ರಬಲ ಜೀವನ ಶೈಲಿಯನ್ನು ಚಿತ್ರಿಸುತ್ತದೆ. ಮನೆ , ತೋಟಗಳು , ತಮ್ಮ ಸ್ನೇಹಿತರು , ತಮ್ಮ ಸೇವಕರ ನಡವಳಿಕೆ, ಇತರ ಜನರೊಂದಿಗೆ ತಮ್ಮ ಅಂತರ ಕ್ರಮ , ತಮ್ಮ ಭಾಷೆಯನ್ನು ಚಿತ್ರಿಸಲಾಗಿದೆ.