ಆಂಥೋನಿ ಪ್ರಭು ಗೋನ್ಸಾಲ್ವೆಸ್

(೧೯೨೮-೨೦೧೨) ಸನ್, ೧೯೭೭ ರಲ್ಲಿ ’ಮನಮೋಹನ್ ದೇಸಾಯ್’ನಿರ್ಮಿಸಿದ, ಅತ್ಯಂತ ಯಶಸ್ವಿಯಾಗಿ ನಡೆದ ಹಿಂದಿ ಚಿತ್ರ ’ಅಮರ್ ಅಕ್ಬರ್ ಆಂಥೊನಿ’ದಲ್ಲಿ, ಅಮಿತಾಬ್ ಬಚ್ಚನ್, ಅಮರ್, ಅಕ್ಬರ್, ನಂತರ, ಆಂಥೋನಿಯ ಪಾತ್ರವನ್ನು ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ, ’ಲಕ್ಷ್ಮೀಕಾಂತ್ ಪ್ಯಾರೆಲಾಲ್', ಸೋದರರಲ್ಲಿ ಒಬ್ಬರಾದ, 'ಪ್ಯಾರೇಲಾಲ್' ರವರು ಚಿತ್ರದಲ್ಲಿ ನಮೂದಿಸಿದ್ದ ’ಫರ್ನಾಂಡಿಸ್’ ಎಂಬ ಅಮಿತಾಬ್ ಬಚ್ಚನ್ ರವರ, ಪಾತ್ರದ ಹೆಸರನ್ನು 'ಆಂಥೋನಿ ಗೋನ್ಸಾಲ್ವೆಸ್' ಎಂದು ಬದಲಾಯಿಸಲು ’ಮನಮೋಹನ್ ದೇಸಾಯ್' ರವರಿಗೆ ಸಲಹೆ ನೀಡಿದ್ದರು. 'ಗೋನ್ಸಾಲ್ವೆಸ್ ರವರು, ಪಾಶ್ಚಿಮಾತ್ಯ ಸಂಗೀತವನ್ನು 'ಪ್ಯಾರೇಲಾಲ್' ರಿಗೆ, ಉಚಿತವಾಗಿ, ಕಲಿಸಿದ ಗುರುವಾಗಿದ್ದರು. 'ಪ್ಯಾರೇಲಾಲ್' ರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಕೊಡುಗೆಯನ್ನು ಕೊಟ್ಟ ಗುರುವಿಗೆ, ತಮ್ಮ ಕೃತಜ್ಞತೆಯನ್ನು ಸೂಚಿಸುವುದು ಅವರ ಇಂಗಿತವಾಗಿತ್ತು.

ಆಂಥೋನಿ ಪ್ರಭು ಗೋನ್ಸಾಲ್ವೆಸ್ ರವರ ಪರಿಚಯ

ಬದಲಾಯಿಸಿ

ಆಂಥೋನಿ ಪ್ರಭು ಗೋನ್ಸಾಲ್ವೆಸ್, ಹೆಸರಾಂತ ಹಿಂದಿ ಚಿತ್ರಗಳ ಸಂಗೀತಕಾರರಾಗಿದ್ದ, ನೌಷಾದ್ ರವರ 'ಆರ್ಕೆಸ್ಟ್ರಾ ವಲಯ'ದಲ್ಲಿ ಸನ್ ೧೯೪೩ ರಲ್ಲಿ ಇದ್ದ ಒಬ್ಬ ಗೋವಾ ಮೂಲದ ಸಂಗೀತಕಾರರು. ಪಾಶ್ಚಾತ್ಯ ಸಂಗೀತವನ್ನು ಚೆನ್ನಾಗಿ ಅರಿತ,ಹೆಚ್ಚು ಆಡಂಬರಗಳಿಲ್ಲದ ಒಬ್ಬ 'ವಯೊಲಿನ್ ವಾದಕ’ರಾಗಿದ್ದರು. ಅವರು ಮುಂದೆ ಹಿಂದಿ ಚಿತ್ರರಂಗದಲ್ಲಿ ದಿಗ್ಗಜರಾಗಿದ್ದ, ಅನಿಲ್ ಬಿಸ್ವಾಸ್, ಗುಲಾಮ್ ಹೈದರ್, ಶ್ಯಾಮ್ ಸುಂದರ್, ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್, ಶಂಕರ್ ಜೈಕಿಶನ್, ಖಯ್ಯಾಂ, ಮತ್ತು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಮುಂತಾದ ಸಂಗೀತಕಾರರ ಜೊತೆಯಲ್ಲಿ ಕೆಲಸಮಾಡಲಾರಂಭಿಸಿದರು. ಅವರು ನುಡಿಸಿದ ವಯೊಲಿನ್ ವಾದ್ಯದ ಸುಂದರ ಎಳೆಗಳನ್ನು ನಾವು, ಸುಪ್ರಸಿದ್ಧ ಚಿತ್ರಗಳಾದ, ಮಹಲ್,ನಯಾದೌರ್, ದಿಲ್ಲಗಿ, ಪ್ಯಾಸ,’ಧೋಲಕ್’, ಮುಂತಾದವುಗಳಲ್ಲಿ ಕೇಳಿ,ಆನಂದಿಸಬಹುದು. ಸನ್ ೧೯೫೮ ರಲ್ಲಿ, 'ಆಂಥೋನಿ ಗೋನ್ಸಾಲ್ವೆಸ್' ರವರು, ’೧೧೦ ವಾದ್ಯಗಳ, ಇಂಡಿಯನ್ ಸಿಂಫೊನಿ ಆರ್ಕೆಸ್ಟ್ರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಖ್ಯಾತ ತೆರೆಮರೆಯ ಗಾಯಕಿ, ’ಲತಾಮಂಗೇಶ್ಕರ್’, ಮತ್ತು ಸುಪ್ರಸಿದ್ಧ ಗಾಯಕ,ಮನ್ನಾಡೆ' ಆ ಗುಂಪಿನಲ್ಲಿ 'ಸೋಲೋ ಹಾಡುಗಾರ'ರಾಗಿದ್ದರು. 'ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ ಧ್ರುಪದ್ ವರಸೆಯ ಗಾಯಕ', ಕೌಶಲ್ ಗೋಪಾಲಿಕರ ಜೊತೆ ಸೇರಿ ಸುಮಾರು ೫ ಸಾವಿರಕ್ಕೂ ಮಿಗಿಲಾದ ಗೀತೆಗಳಿಗೆ ವಯೊಲಿನ್ ಮತ್ತು ಆರ್ಕೆಸ್ಟ್ರಾದ ನೆರವು (ಬ್ರಾಸ್, ಪರ್ಕ್ಯುಶನ್, ಸ್ಟ್ರಿಂಗ್ಸ್, ಟ್ರಂ ಫೇಟ್, ಫ್ರೆಂಚ್ ಹಾರ್ನ್ಸ್, ಫ್ಳುಟ್, ಸೆಕ್ಸಾಫೋನ್, ಒರ್ಗನ್, ಮುಂತಾದ ಒಟ್ಟು ೧೧೦ ವಾದ್ಯಗಳ ನೆರವು) ಕೊಟ್ಟರು. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ರವರು, ನಾಟಕೀಯವಾಗಿ ಕೆಳಗೆ ಕಾಣಿಸಿರುವ ಮಾತುಗಳನ್ನು ಅತ್ಯಂತ ಮನೋಜ್ಞವಾಗಿ ಹೇಳಿ ಅಭಿನಯಿಸಿದ ದೃಶ್ಯ ಭಾರತೀಯ ಚಿತ್ರ ರಸಿಕರ ಮನಸ್ಸನ್ನು ತೃಪ್ತಿ ಗೊಳಿಸಿತು. ಆ ಸಾಲುಗಳು ಹೀಗಿವೆ : we want a wonderful wow wait wait you see the whole country of the system is just opposition by the dev glowing because you are sapasticared by ralaration intaav seekeseshan by the tumesher are they what my name is anthony gonsalves main duniya mein akela hoon dil bhi hai khaali ghar bhi hai khaali ismein rahegi koi kismat wali haay jise meri yaad aaye jab chaahe chali aaye (2) roopanagar premagali kholi nambar chaar sau bees my name is ... you see such experiment sasamstas for the extra bangle abhi-abhi isi jagah pe ik ladaki dekhi hai are dekhi hai aji dekhi hai abhi-abhi isi jagah pe ... jo mujhe ishaare karti hai par kisi se shaayad darti hai are darti hai aaha darti hai uf pyaar karegi kya darane wali meri banegi koi himmat wali to jise meri yaad aaye ... you se the quiet piscent of the lending is inject opposition by the glowing ermeshpiyarik prisoner is the country today bade-bade log yahaan hain lekin ye yaad rahe are yaad rahe aji yaad rahe bade-bade log yahaan ... sachha pyaar gareebon ka baaki hai khel naseebon ka (2) dil ki ye baaten jag se niraali ye kya samajhegi koi daulat wali to jise meri yaad aaye ... no sebatian no rAm prasAd pyArElAl, hakIkat, o goldy the anthony gonsalves yeah Anthony ತಮ್ಮ ಅಮೂಲ್ಯ ಸಂಗೀತ ರಚನೆಯ ಬಗ್ಗೆ ಅವರ ನಂಬಿಕೆ ಹಾಗೂ ವ್ಯಾಖ್ಯಾನ ಹೀಗಿತ್ತು : ‘A raga isn’t like a ladder, on which you take one step at time,’ he told me. ‘It’s like a path up the mountain. It winds more and there are unusual intervals between stages.’ ಅವರ ಎಲ್ಲ ರಚನಾತ್ಮಕ ಕೃತಿಗಳಿಗೂ ಒಂದು ಸೂಕ್ತವಾದ ಶೀರ್ಷಿಕೆಯನ್ನು ಕೊಟ್ಟಿದ್ದರು. ಉದಾಹರಣೆಗೆ :

  • 'Sonatina Indiana',
  • 'Concerto in Raag Sarang'
  • 'Concerto for Violin'
  • 'Orchestra in Todi Taat'.

’ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್’ನಲ್ಲಿ

ಬದಲಾಯಿಸಿ

ಸನ್,೨೦೧೦ ರಲ್ಲಿ ಜರುಗಿದ ’ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್’ ನಲ್ಲಿ (IFFI) ೫೮ ನಿಮಿಷಗಳ ಒಂದು ವ್ಯಕ್ತಿ ಚಿತ್ರವನ್ನು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಇದು 'ಆಂಥೋನಿ ಗೋನ್ಸಾಲ್ವೆಸ್' ರವರ ಬಗ್ಗೆ ಚಿತ್ರ ನಿರ್ಮಾಪಕರ, ನಿರ್ದೇಶಕರ ಹಾಗೂ ಚಿತ್ರದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರ ಗೌರವವನ್ನು ಸೂಚಿಸುತ್ತದೆ.

'ಆಂಥೋನಿ ಗೋನ್ಸಾಲ್ವೆಸ್'ಪ್ಯಾರೇಲಾಲ್ ರವರ ಬಾಲ್ಯದ ಗುರುಗಳು'

ಬದಲಾಯಿಸಿ

ಸನ್ ೧೯೬೫ ರಲ್ಲಿ ಬಾಲಿವುಡ್ ಪರಿಸರದಿಂದ ಬಹುದೂರ ಹೊರಟು, ಅಮೆರಿಕಕ್ಕೆ ಪ್ರಯಾಣಮಾಡಿದರು.ಅಮೆರಿಕದ ನ್ಯೂಯಾರ್ಕ್ ನ ಸಿರಾಕಸ್ ವಿಶ್ವವಿದ್ಯಾಲಯದ ಸ್ಕಾಲರ್ ಶಿಪ್ ನೆರವಿನಿಂದ ಅಲ್ಲಿ ಅಮೆರಿಕನ್ ಸೊಸೈಟಿ ಅಫ್ ಕಂಪೋಸರ್ಸ್, ಪಬ್ಲಿಷರ್ಸ್,ಮತ್ತು ಆಥರ್ಸ್ ಕಂ.ಯ ಸದಸ್ಯ ರಾದರು. ವಾಪಸ್ ಭಾರತಕ್ಕೆ ಮರಳಿ ಗೊವದ ಬಳಿ ತಮ್ಮ ಪೂರ್ವಜರು ಕಟ್ಟಿದ ಮನೆಯಲ್ಲಿ ವಾಸಮಾಡತೊಡಗಿದರು. ಮತ್ತೆ ಹಿಂದಿ ಚಿತ್ರರಂಗದ ಕಡೆ ನೋಡಲಿಲ್ಲ.

ಬೊಂಬಾಯಿಗೆ ಪಾದಾರ್ಪಣೆ

ಬದಲಾಯಿಸಿ

ಸ್ವಾತಂತ್ರ್ಯ ಪೂರ್ವದಲ್ಲಿ ಯಶಸ್ವಿ ಚಿತ್ರಸಂಗೀತ ನಿರ್ದೇಶಕರಾಗಿದ್ದ, 'ನೌಶಾದ್ ಆಲಿ'ಯವರ ಸಮಯದಲ್ಲಿ ಬೊಂಬಾಯಿಗೆ ಬಂದು 'ಬಾಂಬೆ ಟಾಕೀಸ್' ಸಿನಿಮಾವಲಯಕ್ಕೆ ಪ್ರವೇಶಿಸಿದರು. ತಮ್ಮ ೧೩ ನೆಯ ವರ್ಷದಲ್ಲಿ ತಂದೆಯವರ ಜೊತೆ 'ಚರ್ಚ್ ನ ಚಾಯರ್' ನಲ್ಲಿ ಸೇವೆಮಾಡುತ್ತಿದ್ದರು.ಸುಮಾರು ೧೦೦ ಮ್ಯೂಸಿಕಲ್ ಸಿಂಫೋನಿಗಳನ್ನು ರಚಿಸಿ ಯಶಸ್ವಿ ಸಂಗೀತಕಾರರಾದವರು. ಪ್ರಖ್ಯಾತ ಹಿಂದುಸ್ತಾನಿ ಸಂಗೀತಕಾರರಾದ ಪಂ. ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್,ಉಸ್ತಾದ್ ಅಲ್ಲಾ ರಾಖ, ಕೌಶಲ್ ಗೋಪಾಲಿಕ ಮುಂತಾದವರ ಬಳಿ ಸಂಗೀತಾಭ್ಯಾಸ ಮಾಡಿದರು. ತಮ್ಮ ೨೩ ವರ್ಷಗಳ ಕಾರ್ಯಕಾಲದಲ್ಲಿ ಹಿಂದೂಸ್ತಾನಿ ಹಾಗೂ ಪಾಶ್ಚಿಮಾತ್ಯ ಸಂಗೀತಗಳನ್ನು ಬೆರೆಸಿ ನಿರ್ಮಿಸಿದ ಹಲವಾರು ಗೀತೆಗಳು ಇಂದಿಗೂ ಚಿತ್ರರಸಿಕರ ಬಾಯಿನಲ್ಲಿ ಗುನುಗುನಿಸುತ್ತಿವೆ.

  • 'ಪ್ಯಾಸ' ಚಿತ್ರದ 'ಹಮ್ ಆಪ್ ಕಿ ಆಂಖೋಮೆ',
  • 'ಮಹಲ್ (೧೯೪೯) ಚಿತ್ರದ 'ಆಯೆಗಾ ಆನೆವಾಲ'
  • ಖಯ್ಯಾಂರವರ ನಿರ್ದೇಶನದ, 'ಶಾಮ್ ಎ ಗಮ್ ಕಿ ಕಸಮ್,
  • ರಾಜ್ ಕಪೂರ್ ರವರ, 'ಘರ್ ಆಯಾ ಮೆರಾ ಪರದೇಸಿ',
  • ಹೇಮಂತ್ ಕುಮಾರ್ ರವರ ಜಾಲ್ ಚಿತ್ರ, ದ ಗೀತೆ, 'ಏ ರಾತ್ ಏ ಚಾಂದನಿ... ಫಿರ್ ಕಹಾ'
  • ಟ್ಯಾಕ್ಸಿ ಡ್ರೈವರ್, ಚಿತ್ರದ,'ಜಾಯೆ ತೊ ಜಾಯೆ ಕಹಾ'
  • ಪೆಹಲಿ ನಜರ್ ನಲ್ಲಿ 'ದಿಲ್ ಜಲ್ತಾ ಹೈತೊ ಜಲನೆ ದೊ'

'ಆನಂದ್ ಬಕ್ಷಿ'ಯವರು 'ಅಮರ ಅಕ್ಬರ್ ಆಂತೋನಿ ಚಿತ್ರಕ್ಕೆಂದೇ ಬರೆದ ಗೀತೆಯನ್ನು ಸನ್ನಿವೇಶಕ್ಕೆ ಅಳವಡಿಸಿ ದ್ವನಿಮುದ್ರಿಸುವಾಗ ಸ್ಟುಡಿಯೊದಲ್ಲಿದ್ದವರು, ಕೇವಲ 'ಅಮಿತಾಬ್ ಬಚ್ಚನ್', 'ಕಿಶೋರ್ ಕುಮಾರ್', 'ಪ್ಯಾರೇಲಾಲ್ ಶರ್ಮಾ' ಮತ್ತು ರೆಕಾರ್ಡಿಂಗ್ ಸ್ಟಾಫ್. ನಿಜಕ್ಕೂ ಎಲ್ಲರಿಗೂ ಮುದಕೊಟ್ಟ ಕ್ಷಣಗಳೆಂದು 'ಪ್ಯಾರೇಲಾಲ್' ನೆನೆಯುತ್ತಾರೆ.'ಲಕ್ಷ್ಮೀಕಾಂತ್ ಪ್ಯಾರೆಲಾಲ್' ಬ್ಯಾನರ್ ನ, ಪ್ರಮುಖ ರುವಾರಿ, ಪ್ಯಾರೇಲಾಲ್,ಗೆ ಬಾಲ್ಯದಿಂದಲೂ ಸಂಗೀತದ ಮೇಲೆ ಅತಿಯಾದ ವ್ಯಾಮೋಹ. ಅವರ ತಂದೆ ಸಂಗೀತಗಾರರಾಗಿದ್ದರು. ಇದು ಬಾಲಕ, ಪ್ಯಾರೇಲಾಲ್ ರವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ೧೪ ನೆಯ ವಯಸ್ಸಿನಲ್ಲಿ ಪಾಶ್ಚಿಮಾತ್ಯ ಸಂಗೀತವನ್ನು ಕಲಿಯಲು ಆಂಥೋನಿ ಗೋನ್ಸಾಲ್ವೆಸ್ ರವರ ಹತ್ತಿರ ಹೋಗುತ್ತಿದ್ದರು. ಗೋನ್ಸಾಲ್ವೆಸ್ ರವರು ಆಗಾಗಲೇ ಸಿನಿಮಾವಲಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಗಳಿಸಿದ್ದರು. ಗೋನ್ಸಾಲ್ವೆಸ್ ರವರು ತಮ್ಮ, ೧೯೪೩-೧೯೬೫ ರ ವರೆಗಿನ ವೃತ್ತಿಜೀವನದಲ್ಲಿ ಒಟ್ಟು ೪೦೦ ಚಿತ್ರಗಳಿಗೆ ಸಂಗೀತ ಒದಗಿಸಿದ್ದರು, ಸುಮಾರು ೨,೦೦೦ ಹಾಡುಗಳಿಗೆ ತಮ್ಮ 'ವಯೊಲಿನ್ ವಾದ್ಯದ ಸವಿ-ಲೇಪತೋರಿಸಿದ್ದರು'.

೮೪ ವರ್ಷ ವಯಸ್ಸಿನ, ಗೋನ್ಸಾಲ್ವೆಸ್ ರವರು, ’ಗೋವಾ ಮೆಡಿಕಲ್ ಕಾಲೇಜ್ ಹಾಸ್ಪಿಟಲ್’ ನಲ್ಲಿ ಬುಧವಾರ ರಾತ್ರಿ,೧೮, ಜನವರಿ, ೨೦೧೨ ರಂದು, ನಿಧನರಾದರು. ಅವರು ಸುಮಾರು ಸಮಯದಿಂದ 'ನ್ಯೂಮೋನಿಯ,' ಹಾಗೂ ರಕ್ತದೊತ್ತಡದಿಂದ ನರಳುತ್ತಿದ್ದರು. ಸನ್, ೨೦೧೨ ರ, ಜನವರಿ ೧೯, ಗುರುವಾರದಂದು ದಕ್ಷಿಣ ಗೋವಾದ ’ಮಜೋರ್ಡ’ ಮನೆಯಲ್ಲಿ, ಅಂತಿಮ ಸಂಸ್ಕಾರವಿತ್ತು. 'ಗೋನ್ಸಾಲ್ವೆಸ್' ರವರು, ಒಬ್ಬ ಮಗ, ಕಿರನ್, ಒಬ್ಬ ಮಗಳು ಚಿತ್ರಗಾತಿ,ಲಕ್ಷಿ, ಹಾಗೂ ಪತ್ನಿ,ಮೆಲಿಟಾ ರವರನ್ನು ಅಗಲಿದ್ದಾರೆ.

ಬಾಹ್ಯ ಸಂಪರ್ಕ: ಕೃಪೆ

ಬದಲಾಯಿಸಿ