ಆಂತರಿಕ ವ್ಯಾಪಾರ
ಮಾರಾಟದಲ್ಲಿ ಪ್ರಾಥಮಿಕ ಧ್ಯೇಯವೆಂದರೆ ಸರಕನ್ನು ಲಾಭಕ್ಕೆ ಮಾರುವುದು. ಮಾರಾಟದ ವೆಚ್ಚಗಳ ಜೊತೆಗೆ ಸೂಕ್ತ ಲಾಭ ಗಳಿಸಲು ಅಗತ್ಯವಾದ ಆದಾಯದ ಮೂಲ ಮಾರಾಟ. ಸರಕು ಉತ್ಪಾದನೆಯಾದಾಗ ಅಥವಾ ಮಾರಾಟಕ್ಕೆ ತಂದಾಗ, ಕೊಳ್ಳುವವರನ್ನು ಕಂಡುಕೊಳ್ಳುವುದು ಮತ್ತು ಸರಕನ್ನು ಮಾರುವುದು ಅತ್ಯಂತ ಅವಶ್ಯಕ. ಮಾರಾಟದ ವ್ಯವಸ್ಥೆಯಲ್ಲಿ ಮಾರುವ ಕಾರ್ಯದಲ್ಲಿ ತೊಡಗಿರುವವರ ಪ್ರಯತ್ನದ ಮೂಲಕ ಸರಕಿನ ಮಾಲೀಕತ್ವ ಬಳಕೆದಾರರಿಗೆ ವರ್ಗಾವಣೆಯಾಗಿರುತ್ತದೆ. ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ ಉತ್ಪಾದಕ ಅಥವಾ ತಯಾರಕ ತನ್ನ ಸರಕಿನ ಶೀಘ್ರವಾದ ಮತ್ತು ಪರಿಣಾಮಕಾರಿ ವಿತರಣೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಗತ್ಯ. ಮಾರಾಟದ ವ್ಯವಸ್ಥೆಯ ಮಾರುವ ಕಾರ್ಯ ನಮ್ಮ ಬಯಕೆಗಳನ್ನು ಸೃಷ್ಠಿಸುವ ಅಥವಾ ಕೆರಳಿಸುವ ಮೂಲಕ, ಬೇಡಿಕೆಯ ನಿರೀಕ್ಷೆಯಲ್ಲಿ ಉತ್ಪನ್ನವಾದ ಉತ್ಪನ್ನವಾದ ಸೃಷ್ಠಿಸುತ್ತದೆ. ಹೀಗೆ, ಮಾರಾಟದ ಆರ್ಥಿಕ ಮತ್ತು ಸಾಮಾಜಿಕ ಜಡತೆಯನ್ನು ನಿವಾರಿಸುತ್ತದೆ.
ಆಂತರಿಕ ವ್ಯಾಪಾರದ ಅರ್ಥ
ಬದಲಾಯಿಸಿಇದನ್ನು ಗೃಹ ವ್ಯಾಪಾರ ಅಥವಾ ಸ್ಥಳೀಯ ವ್ಯಾಪಾರವೆಂದೂ ಕರೆಯಲಾಗುತ್ತದೆ. ಅಂದರೆ, ಒಂದು ದೇಶದ ಭೌಗೋಳಿಕ ಗಡಿಗಳ ಒಳಗೇ ಸರಕು ಮತ್ತು ಸೇವೆಗಳ ವಿನಿಮಯವಾಗುವುದು. ಕೊಳ್ಳುವವನು ಮತ್ತು ಮಾರುವವನು, ಇಬ್ಬರು ಒಂದೇ ಪ್ರದೇಶದ ಗಡಿಗಳಿಗೆ ಸೇರಿರುತ್ತಾರೆ. ಉದಾಹರಣೆಗೆ ಬೆಂಗಳೂರು ಮತ್ತು ಚೆನ್ನೈ ನಡುವಿನದು ಆಂತರಿಕ ವ್ಯಾಪಾರ , ಹಣ ಸ್ವೀಕಾರ ಮತ್ತು ಪಾವತಿ ಸ್ಥಳೀಯ ನಾಣ್ಯದ ಮೂಲಕ ನಡೆಯುತ್ತದೆ.
ಆಂತರಿಕ ವ್ಯಾಪಾರದ ಗುಣಲಕ್ಷಣ
ಬದಲಾಯಿಸಿ- ಆಂತರಿಕ ವ್ಯಾಪಾರ ಒಂದು ದೇಶದ ಗಡಿಗಳ ಒಳಗೇ ನಡೆಯುತ್ತದೆ.
- ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕನ್ನು ರಸ್ತೆ ಮತ್ತು ರೈಲುಗಳ ಮೂಲಕ ಸಾಗಿಸಲಾಗುತ್ತದೆ.
- ಕೊಡು ಕೊಳ್ಳುವ ಹಣದ ಚಲಾವಣೆ ಸ್ಥಳೀಯ ನಾಣ್ಯದ ಮೂಲಕ ನಡೆಯುತ್ತದೆ.
- ಆಂತರಿಕ ವ್ಯಾಪಾರದಲ್ಲಿ ಸರಕಿನ ವ್ಯಾಪಕ ಆಯ್ಕೆ ಅವಕಾಶವಿರುತ್ತದೆ.
- ಹಣಪಾವತಿ ನಗದು, ಚೆಕ್ ಮತ್ತು ಡ್ರಾಫ್ಟ್ ಮೂಲಕ ಮಾಡಬಹುದು
- ಸಾಮಾನ್ಯವಾಗಿ ಪರವಾನಗಿ ಪಡೆಯಬೇಕಾದ ಅಗತ್ಯವಿಲ್ಲ, ಆದರೆ ವಿದೇಶಿ ವ್ಯಾಪಾರದಲ್ಲಿ ಅದು ಇರಲೇಬೇಕು.
- ಸ್ಥಳೀಯ ನಿಯಮ, ನಿಬಂಧನೆಗಳನ್ನು ಅನುಸರಿಸಬೇಕು.
ಆಂತರಿಕ ವ್ಯಾಪಾರದವಿಧ
ಬದಲಾಯಿಸಿಆಂತರಿಕ ವ್ಯಾಪಾರವನ್ನು ಎರಡು ವಿಧವಾಗಿ ವಿಭಾಗಿಸಬಹುದು.
- ಸಗಟು ವ್ಯಾಪಾರ: ಅಂದರೆ ಸರಕನ್ನು ಭಾರಿ ಪ್ರಮಾಣದಲ್ಲಿ ಕೊಳ್ಳುವುದು ಮತ್ತು ಮಾರುವುದು. ಸರಕನ್ನು ಔದ್ಯಮಿಕ ಬಳಕೆದಾರರು ಅಥವಾ ಸಾಂಸ್ಥಿಕ ಕೊಳ್ಳಗರಿಗೆ ಮಾರಾಟ ಮಾಡಲಾಗುತ್ತದೆ. ಸಗಟು ವ್ಯಾಪಾರಿ ಉತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಸರಕನ್ನು ಕೊಂಡು, ಅವನ್ನು ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಮಾರುತ್ತಾನೆ. ಅವನು ಒಂದೇ ಬಗೆಯ ವ್ಯಾಪಾರದಲ್ಲಿ ಅಥವಾ ಸೀಮಿತವಾದ ಹಲವು ಬಗೆಯ ವ್ಯಾಪಾರದಲ್ಲಿ ತಜ್ಞನಾಗಿರುತ್ತಾನೆ. ಅವನು ಭಾರಿ ಪ್ರಮಾಣದ ದಾಸ್ತಾನು ಇರಿಸಿರಬೇಕು. ಆದ್ದರಿಂದ ಅವನು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರಬೇಕು.
- ಚಿಲ್ಲರೆ ವ್ಯಾಪಾರ: ಅಂದರೆ, ಸಗಟು ವ್ಯಾಪಾರಿಯಿಂದ ಸಣ್ಣ ಪ್ರಮಾಣದಲ್ಲಿ ಕೊಳ್ಳುವುದು ಮತ್ತು ಸಣ್ಣ ಪ್ರಮಾಣದಲ್ಲಿ ಬಳಕೆದಾರರಿಗೆ ಮಾರುವುದು. ಚಿಲ್ಲರೆ ವ್ಯಾಪಾರಿಗಳಿಂದ ಅಥವಾ ಉತ್ಪಾದಕರಿಂದ ಸರಕನ್ನು ಕೊಂಡು ಬಳಕೆದಾರರಿಗೆ ಮಾರುತ್ತಾರೆ. ಚಿಲ್ಲರೆ ವ್ಯಾಪಾರಿ, , ಸಗಟು ವ್ಯಾಪಾರಿಗಳು ಮತ್ತು ಬಳಕೆದಾರರ ನಡುವಿನ ಸಂಪರ್ಕ ಸೇತುವಾಗಿ ವರ್ತಿಸುತ್ತಾರೆ. ಅವನು ಒಂದೇ ಬಗೆಯ ಸರಕಿನಲ್ಲಿ ಪರಿಣತಿ ಸಾಧಿಸದಿರುವುದರಿಂದ ವ್ಯಾಪಕವಾದ ವೈವಿಧ್ಯಮಯ ಸರಕನ್ನು ನಿರ್ವಹಿಸುತ್ತಾನೆ. ಚಿಲ್ಲರೆ ವ್ಯಾಪಾರ ವಿತರಣೆಯ ಅಂತಿಮ ಹಂತವಾಗಿರುತ್ತದೆ.